ಫೇಸ್‌ಲಿಫ್ಟ್ ಆಗಿರುವ ಕಿಯಾ ಸೋನೆಟ್ HTK ವೇರಿಯಂಟ್ ಅನ್ನು ಚಿತ್ರಗಳಲ್ಲಿ ನೋಡಿ
ಟಾಟಾ ಪಂಚ್ ಇವಿ ಗಾಗಿ rohit ಮೂಲಕ ಜನವರಿ 16, 2024 07:57 pm ರಂದು ಪ್ರಕಟಿಸಲಾಗಿದೆ
- 256 Views
- ಕಾಮೆಂಟ್ ಅನ್ನು ಬರೆಯಿರಿ
ಬೇಸ್ ವೇರಿಯಂಟ್ ಗಿಂತ ಒಂದು ಮಟ್ಟ ಮೇಲಿರುವ ಸೋನೆಟ್ HTK ಕೆಲವು ಪ್ರಮುಖ ಸೌಕರ್ಯ ಮತ್ತು ಅನುಕೂಲತೆಯ ಫೀಚರ್ ಗಳನ್ನು ಪಡೆದಿದೆ, ಜೊತೆಗೆ ಬಲಿಷ್ಠವಾದ ಸುರಕ್ಷತಾ ಕಿಟ್ ಅನ್ನು ಕೂಡ ಪಡೆದಿದೆ
ಫೇಸ್‌ಲಿಫ್ಟ್ ಆಗಿರುವ ಕಿಯಾ ಸೋನೆಟ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ, ಇದರ ಬೆಲೆಯು ರೂ 7.99 ಲಕ್ಷದಿಂದ ಪ್ರಾರಂಭವಾಗುತ್ತದೆ (ಇದು ಪರಿಚಯಾತ್ಮಕ ಎಕ್ಸ್-ಶೋರೂಮ್ ಪ್ಯಾನ್-ಇಂಡಿಯಾ ಬೆಲೆಯಾಗಿದೆ). ನಾವು ಈ ಹಿಂದೆ ಸೋನೆಟ್‌ನ ಟಾಪ್-ಸ್ಪೆಕ್ GTX+ ಮತ್ತು X-ಲೈನ್ ವೇರಿಯಂಟ್ ಗಳನ್ನು ವಿವರವಾದ ಚಿತ್ರಗಳಲ್ಲಿ ಅದರ ಬಿಡುಗಡೆಗಿಂತ ಮುಂಚೆ ನಿಮಗೆ ತೋರಿಸಿದ್ದೇವೆ, ಈಗ ಅದರ ಬೇಸ್ ಗಿಂತ ಒಂದು ಮಟ್ಟ ಮೇಲಿರುವ HTK ವೇರಿಯಂಟ್ ನ ಚಿತ್ರಗಳನ್ನು ನಾವು ಪಡೆದಿದ್ದೇವೆ.
ಹೊರಭಾಗ
ಮುಂಭಾಗದಲ್ಲಿ, ಫೇಸ್‌ಲಿಫ್ಟ್ ಆಗಿರುವ SUV ಯ HTK ವೇರಿಯಂಟ್ ಕ್ರೋಮ್ ಸರೌಂಡ್‌ನೊಂದಿಗೆ ಹೊಸದಾಗಿ ಡಿಸೈನ್ ಗೊಳಿಸಲಾದ ಗ್ರಿಲ್ ಅನ್ನು ಪಡೆಯುತ್ತದೆ. ಕಿಯಾ ಈ ವೇರಿಯಂಟ್ ಗಾಗಿ LED ಗಳ ಬದಲಿಗೆ ಹ್ಯಾಲೊಜೆನ್ ಹೆಡ್‌ಲೈಟ್‌ಗಳನ್ನು ಬಳಸಿದೆ ಮತ್ತು LED DRL ಗಳನ್ನು ಒದಗಿಸುತ್ತಿಲ್ಲ (ಆದರೂ ಔಟ್‌ಲೈನ್ ಇನ್ನೂ ಕೂಡ ಹಾಗೆಯೇ ಇದೆ). ಬಂಪರ್ ಅನ್ನು ನೋಡುವುದಾದರೆ, ನೀವು ರಿವೈಸ್ ಆಗಿರುವ ಏರ್ ಡ್ಯಾಮ್ ಮತ್ತು ಮುಂಭಾಗದ ಪಾರ್ಕಿಂಗ್ ಸೆನ್ಸರ್ ಗಳನ್ನು ಕೂಡ ಗಮನಿಸಬಹುದು.
HTK ಯ ಕೆಳಮಟ್ಟದ-ಸ್ಪೆಕ್ ನ ಪ್ರಮುಖ ಕೊಡುಗೆಗಳೆಂದರೆ ಬಾಡಿ-ಕಲರ್ಡ್ ಡೋರ್ ಹ್ಯಾಂಡಲ್‌ಗಳು, ORVM ಗಳ ಬದಲಿಗೆ ಮುಂಭಾಗದ ಫೆಂಡರ್‌ಗಳಲ್ಲಿ ಟರ್ನ್ ಇಂಡಿಕೇಟರ್ ಗಳು ಮತ್ತು 16-ಇಂಚಿನ ವೀಲ್ ಗಳಿಗೆ ಸ್ಟೈಲ್ ಮಾಡಲಾಗಿರುವ ವೀಲ್ ಕ್ಯಾಪ್‌ಗಳು.
ಹಿಂಭಾಗದಲ್ಲಿ, ಇದು ಕನೆಕ್ಟ್ ಆಗಿರುವ ಟೈಲ್ ಲ್ಯಾಂಪ್ ಸೆಟಪ್ ಅನ್ನು ಹೊಂದಿದೆ ಆದರೆ ಇದು ಮಧ್ಯ ಭಾಗವನ್ನು ಸಂಪೂರ್ಣವಾಗಿ ಬೆಳಗಿಸುವುದಿಲ್ಲ. ಇಲ್ಲಿ ನೀವು ದಪ್ಪವಾದ ಸಿಲ್ವರ್ ಸ್ಕಿಡ್ ಪ್ಲೇಟ್‌ನೊಂದಿಗೆ ಟ್ವೀಕ್ ಮಾಡಿದ ಬಂಪರ್ ಅನ್ನು ಗಮನಿಸಬಹುದು.
-
ನಿಮ್ಮ ಬಾಕಿ ಇರುವ ಚಲನ್ ಪರಿಶೀಲಿಸಿ
-
ಉಪಯೋಗಿಸಿದ ಕಾರಿನ ಮೌಲ್ಯಮಾಪನ
ಒಳಭಾಗ
ಇದರ ಕ್ಯಾಬಿನ್ ಗ್ರೇ ಫ್ಯಾಬ್ರಿಕ್ ಅಪ್ಹೋಲ್ಸ್ಟರಿ ಮತ್ತು ಸ್ಟೀರಿಂಗ್ ವೀಲ್, ಡೋರ್‌ಗಳು ಮತ್ತು ಎಸಿ ವೆಂಟ್‌ಗಳ ಸುತ್ತಲಿನ ಸ್ಥಳಗಳಲ್ಲಿ ಸಿಲ್ವರ್ ಬಿಟ್‌ಗಳೊಂದಿಗೆ ಆಲ್-ಬ್ಲಾಕ್ ಥೀಮ್ ಅನ್ನು ಹೊಂದಿದೆ. ಸೋನೆಟ್ HTK ಹಿಂಭಾಗದ ಸೀಟಿನ ನಡುವಿನಲ್ಲಿ ಕುಳಿತುಕೊಳ್ಳುವ ಪ್ರಯಾಣಿಕರಿಗೆ ಹೆಡ್‌ರೆಸ್ಟ್ ಅನ್ನು ನೀಡಿಲ್ಲ ಮತ್ತು ಹಿಂದಿನ ಸೀಟಿಗೆ ಸಿಂಗಲ್-ಪೀಸ್ ಬೆಂಚ್ ಅನ್ನು ನೀಡಿದೆ ಮತ್ತು ಹಿಂಭಾಗದ ಆರ್ಮ್‌ರೆಸ್ಟ್ ಅನ್ನು ಕೂಡ ತೆಗೆದುಹಾಕಲಾಗಿದೆ. ಆದರೆ, ಇದು ಒಟ್ಟು ಮೂರು ಟೈಪ್-C ಚಾರ್ಜಿಂಗ್ ಪೋರ್ಟ್‌ಗಳೊಂದಿಗೆ ಬರುತ್ತದೆ (ಮುಂಭಾಗದಲ್ಲಿ 1 ಮತ್ತು ಹಿಂಭಾಗದಲ್ಲಿ 2).
ಫೀಚರ್ ಗಳು ಮತ್ತು ಸುರಕ್ಷತಾ ತಂತ್ರಜ್ಞಾನ
ಇದು ಕೆಳಮಟ್ಟದ-ಸ್ಪೆಕ್ ವೇರಿಯಂಟ್ ಆಗಿದ್ದರೂ ಕೂಡ, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ಮ್ಯಾನುಯಲ್ ಎಸಿ, ಸೆಮಿ-ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು 6-ಸ್ಪೀಕರ್ ಮ್ಯೂಸಿಕ್ ಸಿಸ್ಟಂನೊಂದಿಗೆ 8-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್ ಅನ್ನು ಸೋನೆಟ್ ನೀಡಿದೆ. ಸೋನೆಟ್ HTK ರಿಯರ್ ಸನ್‌ಶೇಡ್‌ಗಳು, ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್‌ಗಳು ಮತ್ತು ಎಲ್ಲಾ ನಾಲ್ಕು ಪವರ್ ವಿಂಡೋಗಳನ್ನು ಕೂಡ ಪಡೆಯುತ್ತದೆ.
ಸುರಕ್ಷತಾ ಫೀಚರ್ ಗಳನ್ನು ನೋಡುವುದಾದರೆ, ಸೋನೆಟ್ HTK ಆರು ಏರ್‌ಬ್ಯಾಗ್‌ಗಳು, ರಿವರ್ಸಿಂಗ್ ಕ್ಯಾಮೆರಾ, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಮತ್ತು ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್‌ಮೆಂಟ್ (VSM) ಅನ್ನು ಕೂಡ ಹೊಂದಿದೆ.
ಸಂಬಂಧಿತ ಲೇಖನ: ಡಿಕೋಡಿಂಗ್ ದಿ ಡಿಫರೆನ್ಸ್: ಹೊಸ ಮತ್ತು ಹಳೆಯ ಕಿಯಾ ಸೋನೆಟ್
ಯಾವ ಯಾವ ಪವರ್‌ಟ್ರೇನ್ ಆಯ್ಕೆಗಳಿವೆ?
ಕಿಯಾ ತನ್ನ ಸೋನೆಟ್ HTK ಅನ್ನು ಕೇವಲ ಎರಡು ಪವರ್‌ಟ್ರೇನ್ ಆಯ್ಕೆಗಳೊಂದಿಗೆ ನೀಡುತ್ತಿದೆ: 1.2-ಲೀಟರ್ ಪೆಟ್ರೋಲ್ (83 PS/ 115 Nm) ಜೊತೆಗೆ 5-ಸ್ಪೀಡ್ MT, ಮತ್ತು 1.5-ಲೀಟರ್ ಡೀಸೆಲ್ (116 PS/ 250 Nm) ಜೊತೆಗೆ 6-ಸ್ಪೀಡ್ MT.
ನಿಮಗೆ ಸೂಕ್ತವಾದ ಮತ್ತು ಸರಿಯಾದ ವೇರಿಯಂಟ್ ಅನ್ನು ಆಯ್ಕೆ ಮಾಡುವುದಕ್ಕೆ ನಿಮಗೆ ಸಹಾಯ ಮಾಡಲು ಸೋನೆಟ್‌ನ ಇತರ ವೇರಿಯಂಟ್-ವಾರು ಎಂಜಿನ್-ಗೇರ್‌ಬಾಕ್ಸ್ ಆಯ್ಕೆಗಳ ಬಗ್ಗೆ ನಾವು ವಿವರವಾದ ಲೇಖನವನ್ನು ಈಗಾಗಲೇ ಬರೆದಿದ್ದೇವೆ.
ಬೆಲೆಗಳು ಮತ್ತು ಪ್ರತಿಸ್ಪರ್ಧಿಗಳು
ಹೊಸ ಕಿಯಾ ಸೋನೆಟ್ ಬೆಲೆಯು ರೂ 7.99 ಲಕ್ಷದಿಂದ ಶುರುವಾಗಿ ರೂ 15.69 ಲಕ್ಷದವರೆಗೆ ಇದೆ, ಆದರೆ ಈಗಾಗಲೇ ಮಾರುಕಟ್ಟೆಯಲ್ಲಿ ಇರುವ ಸೋನೆಟ್ HTK ಬೆಲೆಯು ರೂ 8.79 ಲಕ್ಷದಿಂದ ರೂ 10.39 ಲಕ್ಷದವರೆಗೆ ಇದೆ (ಎಲ್ಲಾ ಬೆಲೆಗಳು ಪರಿಚಯಾತ್ಮಕ ಎಕ್ಸ್-ಶೋರೂಮ್ ಭಾರತದಾದ್ಯಂತ). ಇದು ಮಾರುತಿ ಬ್ರೆಝಾ, ಹ್ಯುಂಡೈ ವೆನ್ಯೂ, ಮಹೀಂದ್ರಾ XUV300, ಟಾಟಾ ನೆಕ್ಸನ್, ರೆನಾಲ್ಟ್ ಕಿಗರ್, ನಿಸ್ಸಾನ್ ಮ್ಯಾಗ್ನೈಟ್ ಮತ್ತು ಮಾರುತಿ ಫ್ರಾಂಕ್ಸ್ ಸಬ್-4m ಕ್ರಾಸ್ಒವರ್ SUV ಜೊತೆಗೆ ಸ್ಪರ್ಧಿಸುತ್ತದೆ.
ಇನ್ನಷ್ಟು ಓದಿ: ಸೋನೆಟ್ ಆನ್ ರೋಡ್ ಬೆಲೆ