ಟಾಟಾ ನೆಕ್ಸಾನ್ ಬಗ್ಗೆ ನಾವು ಇಷ್ಟಪಡುವ ಐದು ವಿಷಯಗಳು

published on ಮೇ 15, 2019 02:36 pm by jagdev for ಟಾಟಾ ನೆಕ್ಸ್ಂನ್‌ 2017-2020

ಟಾಟಾ ದ ಮೊದಲ ಸಬ್ -4m SUV ಯಲ್ಲಿ ಬಹಳಷ್ಟು ಮೆಚ್ಚುವ ವಿಷಯಗಳು ಇವೆ.  ನಮಗೆ ಇಷ್ಟವಾದ ಟಾಪ್  ಫೈವ್  ಗಳು ಹೀಗಿವೆ

Tata Nexon

ಟಾಟಾ ನೆಕ್ಸಾನ್ ಒಂದು ಪ್ರಭಾವಶಾಲಿ ಉತ್ಪನ್ನವಾಗಿದೆ ಮೊದಲನೇ ನೋಟದಲ್ಲಿ. ಎತ್ತರದ ಗ್ರೌಂಡ್ ಕ್ಲಿಯರೆನ್ಸ್ ಮತ್ತು ಅಗಲವಾದ ಬಾಡಿ ಇದಕ್ಕೆ ರಸ್ತೆಯಲ್ಲಿನ ಇರುವಿಕೆಯನ್ನು ಗಮನಿಸುವಂತೆ ಮಾಡುತ್ತದೆ. ಟಾಟಾ ಇದಕ್ಕೆ ಸ್ಪರ್ಧಾತ್ಮಕವಾದ ಬೆಲೆ ಪಟ್ಟಿ ನೀಡುವುದರಲ್ಲಿ ಯಶಸ್ವಿಯಾಗಿದೆ, ಮತ್ತು XM ವೇರಿಯೆಂಟ್ ಹೆಚ್ಚು ಮೌಲ್ಯ ಕೊಡುತ್ತದೆ ನಮ್ಮ ಅನಿಸಿಕೆಯಲ್ಲಿ. ನಮ್ಮ ಲೇಖನವನ್ನು ಓದಿ ನೆಕ್ಸಾನ್ ವೇರಿಯೆಂತ್ ಗಳಲ್ಲಿ ಏನೇನು ಕೊಡಲಾಗಿದೆ ಎಂಬ ವಿವರಗಳಿಗೆ.

ನಮಗೆ ಇಷ್ಟವಾದ ನೆಕ್ಸಾನ್ ನ್ ಐದು ವಿಷಯಗಳನ್ನು ಇಲ್ಲಿ ಕೊಟ್ಟಿದ್ದೇವೆ, ಮತ್ತು ಕುತುಹೂಲ ವಿಷಯವೆಂದರೆ ---ಇದರಲ್ಲಿ ನಾಲ್ಕು ಎಲ್ಲ ವೇರಿಯೆಂಟ್ ನಲ್ಲಿ  ಕೊಡಲಾಗಿದೆ.

 

ಡೈನಾಮಿಕ್ಸ್ ಗಳು

Tata Nexon

ಟಾಟಾ ನೆಕ್ಸಾನ್ ನಮಗೆ ಡ್ರೈವ್ ಮಾಡುವಾಗ ನೆಚ್ಚಿತು. ಇದರ ವೇಗವಾಗಿ ಹೋಗುವಾಗಿನ ಸ್ಥಿರತೆ ವಿಶ್ವಾಸ ಮೂಡಿಸುತ್ತದೆ, ಮತ್ತು ಹಗುರವಾದ ( ಡೀಸೆಲ್ ಗಿಂತ ) ಪೆಟ್ರೋಲ್ ವರ್ಷನ್ ವಿಶೇಷವಾಗಿ ತಿರುವುಗಳಲ್ಲಿ ದೃಢವಾಗಿರುತ್ತದೆ. ಇದರ ರೈಡ್ ಸಹ ಬಾಡಿ ರೋಲ್ ಇಲ್ಲದೆ ಅತುತ್ತಮವಾಗಿದೆ, ಇದರ ಅರ್ಥ ನೆಕ್ಸಾನ್ ದೂರದ ಪ್ರಯಾಣಕ್ಕೆ ಆರಾಮದಾಯಕವಾಗಿರುತ್ತದೆ. ಒತ್ತಿನ್ಲಲಿ ಇದರಲ್ಲಿರುವ ಡೈನಾಮಿಕ್ ಪ್ಯಾಕೇಜ್ ಚೆನ್ನಾಗಿದೆ ಹಾಗು ಹೆಚ್ಚು ವೇಗಗಳಲ್ಲಿಯೂ ಸಹ ತಡವರಿಸುವುದಿಲ್ಲ.

ಡೀಸೆಲ್ ಎಂಜಿನ್

ನೆಕ್ಸಾನ್ 1.5-  ಲೀಟರ್  ಟರ್ಬೊ ಚಾರ್ಜ್ ಇರುವ ಡೀಸೆಲ್ ಎಂಜಿನ್ ನಿಂದ ಪವರ್ ಪಡೆಯುತ್ತದೆ, ಇದರಲ್ಲಿ 110PS  ಗರಿಷ್ಟ ಪವರ್ ಹಾಗು 260Nm ಗರಿಷ್ಟ ಟಾರ್ಕ್ ಇದೆ. ನಾಮಗನ್ನಿಸುವ ಹಾಗೆ ಇದು ಒಂದು ಒತ್ತಮ ಡೀಸೆಲ್ ಎಂಜಿನ್ ಆಗಿದೆ ಈ ವ್ಯಾಪ್ತಿಯಲ್ಲಿ ಡ್ರೈವಬಿಲಿಟಿ ಯನ್ನು ಪರಿಗಣಿಸಿದಾಗ. ನೀವು ಪರಿಪೂರ್ಣವಾದ ಡ್ರೈವ್ ವರದಿಯನ್ನು ಓದಬಹುದು. ಅಂದು ಅತಿ ಮೆಚ್ಚಬಹುದಾದ ವಿಷಯವೆಂದರೆ ಕಡಿಮೆ ವೇಗಗಳಲ್ಲೂ ಸಹ ಎಂಜಿನ್ ಚೆನ್ನಾಗಿ ನಿರ್ವಹಿಸುತ್ತದೆ.

ಡ್ರೈವ್ ಮೋಡ್ ಗಳು

Tata Nexon drive modes

ಟಾಟಾ ನೆಕ್ಸಾನ್ ನಲ್ಲಿ ಮೂರು ಡ್ರೈವ್ ಮೋಡ್ ಗಳು ಇವೆ   – Eco, City ಮತ್ತು  Sport ಇವು ಬೇಸ್ ವೇರಿಯೆಂಟ್ ನಿಂದ್ ಮೇಲಿನ ವೇರಿಯೆಂಟ್ ಗಳಲ್ಲಿ ಸಿಗುತ್ತದೆ. ಇದರ ಡ್ರೈವ್ ಮೋಡ್ ಎಂಜಿನ್ ನ ಗುಣ  ಲಕ್ಷಣಗಳನ್ನು ಪರಿಣಾಮಕಾರಿಯಾಗಿ ಬದಲಾಯಿಸುತ್ತದೆ. ಏಕೋ ನಲ್ಲಿ ಎಂಜಿನ್ ನ್ ಡ್ರೈವ್ ವ್ಯಾಪ್ತಿ ಹೆಚ್ಚು ಸಿಗಿತ್ತದೆ, ಸಿಟಿ ಮೋಡ್ ನಿಮಗೆ ಬೇಗನೆ ಅಪ್ ಶಿಫ್ಟ್ ಆಗುವಂತೆ ಮಾಡುತ್ತದೆ , ಮತ್ತು ಸ್ಪೋರ್ಟ್ ನಿಮಗೆ ಎಂಜಿನ್ ನ  ಟಾಪ್ ಎಂಡ್  ಪವರ್ ಉಪಯೋಗಿಸಲು ಅನುಕೂಲ ಮಾಡಿಕೊಡುತ್ತದೆ. ಎಲ್ಲ ಡ್ರೈವ್ ಮೋಡ್ ಗಳು ನಿರ್ದಿಷ್ಟವಾಗಿ ಕೆಲಸ ಮಾಡುತ್ತವೆ ಹಾಗು ಉಪಯೋಗಕಾರಿ ಕೂಡ.

ಸ್ಥಳಾವಕಾಶ

Rear seat space in the Tata Nexon

ನೆಕ್ಸಾನ್ ಒಳಗೆ ಕುಳಿತುಕೊಳ್ಳಿ ನಿಮಗೆ ಇದು ನಾಲ್ಕು ಮೀಟರ್ ಒಳಗೆ ಇದೆ ಎಂದು ನಂಬಲು ಸಂಶಯವಾಗುತ್ತದೆ. ಮುಂಭಾಗದಲ್ಲಿ ಹಾಗು ಹಿಂಭಾಗದಲ್ಲಿ ಲೆಗ್ ರೂಮ್ ಹೆಚ್ಚಾಗಿದೆ ಹಾಗು ಸೀಟ್ ಗಳು ದೊಡ್ಡದಾಗಿದ್ದು ಮಾಧ್ಯಮದಿಂದ ಮೇಲ್ಪಟ್ಟ ಗಾತ್ರ ಇರುವ ಜನರೂ ಸಹ ಕುಳಿತುಕೊಳ್ಳಬಹುದು. ಹಿಂಬದಿಯ ಸೀಟ್ ಗಳು ಬಕೆಟ್ ಟೈಪ್ ಆಗಿವೆ ಹಾಗಾಗಿ ಇದರಲ್ಲಿ ಮೂರನೇ ಪ್ಯಾಸೆಂಜರ್ ಅಷ್ಟೇನೂ ಅರ್ಮಾದಾಯಕವಾಗಿ ಕುಳಿತುಕೊಳ್ಳಲು ಆಗದಿರಬಹುದು. ಆದರೆ ನಾಲ್ಕು ಜನಗಳಿಗೆ ನೆಕ್ಸಾನ್ ಒಂದು ಹೆಚ್ಚು ಅರಮಧ್ಯಕವಾಗಿರುವ  ಮಾರ್ಕೆಟ್ ನಲ್ಲಿ  ರೂ  10 ಲಕ್ಷ ಒಳಗೆ ಇರುವ ಕಾರ್ ಆಗಿದೆ.

ಇನ್ಫೋಟೈನ್ಮೆಂಟ್ ಸಿಸ್ಟಮ್

Tata Nexon's infotainment system

ಟಾಟಾ ದ ಹರ್ಮನ್ ಜೊತೆಗಿನ ಸಹಯೋಗ ಅದರ ಕಾರ್  ಗಳನ್ನು ಟಾಪ್ ನಲ್ಲಿ ಇರಿಸಿದೆ, ಅದರಲ್ಲೂ  ಆಡಿಯೋ ಗುಣ ಮಟ್ಟ ಈ ಮಾರ್ಕೆಟ್  ವಿಭಾಗದಲ್ಲಿ ಪ್ರಖ್ಯಾತಿಯಾಗಿದೆ. ಇತರ ಟಾಟಾ ಕಾರ್ ಗಳಂತೆ ಹರ್ಮನ್ ಪೋವೆರೆಡ್ ಸಿಸ್ಟಮ್ ಇರುವಂತಹುದು, 8-ಯೂನಿಟ್ ಕೇಳಲು ಅದ್ಭುತವಾಗಿದೆ ನಿಕ್ಸಾನ್ ನಲ್ಲಿ . ಆಡಿಯೋ ಕ್ವಾಲಿಟಿ ಬಿಟ್ಟು ಇದರಲ್ಲಿ ಇನ್ನೆರೆಡು ಎದ್ದು ಕಾಣುವಂತಹ ಫೀಚರ್ ಗಳಿವೆ ನೆಕ್ಸಾನ್ ನ ಇನ್ಫೋಟೈನ್ಮೆಂಟ್ ಸಿಸ್ಟಮ್ ನಲ್ಲಿ. ಮೊದಲನೆಯದು ಅದರ ಅಳವಡಿಕೆ ಜಾಗ (ಸ್ಕ್ರೀನ್ ನದ್ದು ) ಮತ್ತು ಎರಡನೆಯದು ಟಚ್ ಸ್ಕ್ರೀನ್ ನ ಕಂಟ್ರೋಲ್ ಕ್ನೋಬ್ ಗಳು.  ಡ್ಯಾಶ್ ಬೋರ್ಡ್ ಮೇಲಿರುವ ಫ್ಲೋಟಿಂಗ್ ಸ್ಕ್ರೀನ್ ನೋಡಲು ನವೀನವಾಗಿದೆ ಮತ್ತು ಕಂಟ್ರೋಲ್ ಕ್ನೋಬ್ ಗಳು ಕಣ್ಣು ಗಳನ್ನೂ ರಸ್ತೆ ಮೇಲಿನಿಂದ ತೆಗೆಯದೆ ಸಿಸ್ಟಮ್ ಉಪಯೋಗಿಸಲು ಸಹಕಾರಿಯಾಗಿದೆ.

ನೆಕ್ಸಾನ್ ನಲ್ಲಿ ಬಹಳಷ್ಟು ವಿಷಯಗಳು ಕುತುಹೂಲಕಾರಿಯಾಗಿದೆ, ಆದರೆ ಬಹಳಷ್ಟು ಮಿಸ್ ಆಗಿರುವ ವಿಷಯಗಳೂ ಇವೆ. ಇಲ್ಲಿ ಕ್ಲಿಕ್ ಮಾಡಿ ಟಾಟಾ ನೆಕ್ಸಾನ್ ನಲ್ಲಿ ಇರಬೇಕಾಗಿತ್ತ್ತು ಎಂದೆನಿಸಬಹುದಾದ ಐದು ವಿಷಯಗಳು.

.

Read More on : Tata Nexon on road price

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಟಾಟಾ ನೆಕ್ಸ್ಂನ್‌ 2017-2020

1 ಕಾಮೆಂಟ್
1
S
sheik madeena vali
Feb 8, 2022, 8:00:07 AM

any chance to Base model Sunfoof Adding For Order base ,& Price send me Ansar because I am interested for Nexon base Model low bujtet

Read More...
    ಪ್ರತ್ಯುತ್ತರ
    Write a Reply
    Read Full News

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trendingಎಸ್‌ಯುವಿ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience