• English
  • Login / Register

ಈ ಫೆಬ್ರವರಿಯಲ್ಲಿ ಹೋಂಡಾ ಕಾರುಗಳ ಮೇಲೆ ಬಾಚಿಕೊಳ್ಳಿ ರೂ. 72,000 ಗಳ ಡೀಲ್‌ಗಳು

ಹೋಂಡಾ ಸಿಟಿ 4 ನೇ ತಲೆಮಾರು ಗಾಗಿ shreyash ಮೂಲಕ ಫೆಬ್ರವಾರಿ 06, 2023 10:12 am ರಂದು ಪ್ರಕಟಿಸಲಾಗಿದೆ

  • 26 Views
  • ಕಾಮೆಂಟ್‌ ಅನ್ನು ಬರೆಯಿರಿ

ಅಮೇಜ್‌ನ ಕಳೆದ ವರ್ಷದ ಯೂನಿಟ್‌ಗಳಲ್ಲಿಯೂ ಹೋಂಡಾ ಪ್ರಯೋಜನಗಳನ್ನು ನೀಡುತ್ತಿದೆ.

Honda City, WR-V and Amaze

  • ಫಿಫ್ತ್-ಜನರೇಷನ್ ಹೋಂಡಾ ಸಿಟಿಯಲ್ಲಿ ರೂ.72,493 ವರೆಗಿನ ಗರಿಷ್ಠ ಪ್ರಯೋಜನಗಳನ್ನು ನೀಡಲಾಗುತ್ತಿದೆ.

  • ಹೋಂಡಾ ಡಬ್ಲ್ಯೂಆರ್-ವಿ ಮೇಲೆ ರೂ. 72,039 ಗಳವರೆಗೆ ಉಳಿಸಿ.

  • ಹೋಂಡಾ ಅಮೇಜ್ ಮೇಲೆ ರೂ. 33,296 ಗಳವರೆಗೆ ರಿಯಾಯಿತಿ ಪಡೆಯಿರಿ.

  • ಹೋಂಡಾ ಜಾಝ್‌ ಮೇಲೆ ರೂ. 15,000 ಗಳವರೆಗೆ ಉಳಿತಾಯ ಲಭ್ಯವಿದೆ.

  • ಫೋರ್ಥ್ ಜನರೇಷನ್ ಹೋಂಡಾ ಸಿಟಿಯನ್ನು ರೂ. 5,000 ಲಾಯಲ್ಟಿ ಬೋನಸ್‌ನೊಂದಿಗೆ ಮಾತ್ರ ಪಡೆಯಬಹುದು.

  • ಹೈಬ್ರಿಡ್ ಅಥವಾ ಡಿಸೇಲ್ ಮಾಡೆಲ್‌ಗಳಿಗೆ ಯಾವುದೇ ಪ್ರಯೋಜನಗಳನ್ನು ನೀಡಲಾಗಿಲ್ಲ.

  • ಈ ಆಫರ್‌ಗಳು 2023ರ ಫೆಬ್ರವರಿ ತಿಂಗಳುದ್ದಕ್ಕೂ ಮಾನ್ಯವಾಗಿರುತ್ತವೆ.

ಹೋಂಡಾ ಫೆಬ್ರವರಿ 2023 ಕ್ಕೆ ತನ್ನ ಹೆಚ್ಚಿನ ಮಾಡೆಲ್‌ಗಳಲ್ಲಿ ಹೊಸ ಕೊಡುಗೆಗಳನ್ನು ತೆಗೆದುಕೊಂಡು ಮರಳಿ ಬಂದಿದೆ. ಇದರ ಡಬ್ಲ್ಯೂಆರ್-ವಿ ಮಾಡೆಲ್‌ನಂತೆಯೇ ಫಿಫ್ತ್-ಜನರೇಷನ್ ಸಿಟಿ ಸಹ ಹೆಚ್ಚಿನ ಪ್ರಯೋಜನಗಳೊಂದಿಗೆ ಬಂದಿದೆ. ಸಿಟಿ ಹೈಬ್ರಿಡ್ ಅನ್ನು ಹೊರತುಪಡಿಸಿ, ಈ ತಿಂಗಳಲ್ಲಿ ನೀಡಲಾಗುವ ಈ ಪ್ರಯೋಜನಗಳನ್ನು ಪ್ರತಿ ಕಾರಿನ ಪೆಟ್ರೋಲ್ ವೇರಿಯೆಂಟ್‌ಗಳ ಮೇಲೆ ಮಾತ್ರ ನೀಡಲಾಗುತ್ತಿದೆ.

ಮಾಡೆಲ್-ಪ್ರಕಾರ ನೀಡಲಾಗುವ ಕೊಡುಗೆಯ ವಿವರಗಳನ್ನು ಈ ಕೆಳಗೆ ನೋಡೋಣ:

ಫಿಫ್ತ್- ಜನರೇಷನ್ ಸಿಟಿ

Fifth-generation Honda City

ಕೊಡುಗೆಗಳು

ಮೊತ್ತ

MT

CVT

ನಗದು ರಿಯಾಯಿತಿ

ರೂ. 30,000 ಗಳವರೆಗೆ

ರೂ. 20,000 ಗಳವರೆಗೆ

ಉಚಿತ ಆ್ಯಕ್ಸೆಸರಿಗಳು (ಐಚ್ಛಿಕ)

ರೂ. 32,493 ಗಳವರೆಗೆ

ರೂ. 21,643 ಗಳವರೆಗೆ

ಎಕ್ಸ್‌ಚೇಂಜ್ ಬೋನಸ್

ರೂ. 20,000

ರೂ. 20,000

ಲಾಯಲ್ಟಿ ಬೋನಸ್

ರೂ. 5,000

ರೂ. 5,000

ಹೋಂಡಾ ಕಾರ್ ಎಕ್ಸ್‌ಚೇಂಜ್ ರಿಯಾಯಿತಿ

ರೂ. 7,000

ರೂ. 7,000

ಕಾರ್ಪೊರೇಟ್ ರಿಯಾಯಿತಿ

ರೂ. 8,000

ರೂ. 8,000

ಒಟ್ಟು ಪ್ರಯೋಜನಗಳು

ರೂ. 72,493 ಗಳವರೆಗೆ

ರೂ. 61,643 ಗಳವರೆಗೆ

  • ಫಿಫ್ತ್-ಜನರೇಷನ್ ಸಿಟಿಯ ಮ್ಯಾನ್ಯುವಲ್ ಟ್ರಿಮ್‌ಗಳು ಹೆಚ್ಚಿನ ನಗದು ಪ್ರಯೋಜನಗಳನ್ನು ಪಡೆಯುತ್ತಿವೆ, ಅಥವಾ ಐಚ್ಛಿಕ ಉಚಿತ ಆ್ಯಕ್ಸೆಸರಿಗಳು ಆಟೋಮ್ಯಾಟಿಕ್ ವೇರಿಯೆಂಟ್‌ಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿರುತ್ತವೆ.

  • ಮ್ಯಾನ್ಯುವಲ್ ಮತ್ತು ಆಟೋಮ್ಯಾಟಿಕ್ ಎರಡೂ ಟ್ರಿಮ್‌ಗಳಲ್ಲಿ ಉಳಿದ ಪ್ರಯೋಜನಗಳು ಒಂದೇ ರೀತಿಯಾಗಿವೆ.

  • ಹೈಬ್ರಿಡ್ ಅಥವಾ ಡಿಸೇಲ್ ಮಾಡೆಲ್‌ಗಳಿಗೆ ಯಾವುದೇ ಪ್ರಯೋಜನಗಳನ್ನು ನೀಡಲಾಗಿಲ್ಲ.

  • ಫಿಫ್ತ್-ಜನರೇಷನ್ ಸಿಟಿ ಗೆ ರೂ.11.87 ಲಕ್ಷದಿಂದ ರೂ. 15.62 ಲಕ್ಷಗಳವರೆಗೆ ಬೆಲೆ ನಿಗದಿಪಡಿಸಲಾಗಿದೆ.

ಇದನ್ನೂ ಓದಿ: 2023 ರ ಬಜೆಟ್‌ನಲ್ಲಿ ಆಯವ್ಯಯವನ್ನು ಘೋಷಿಸಿದ ರಾಷ್ಟ್ರೀಯ ಗ್ರೀನ್ ಹೈಡ್ರೋಜನ್ ಮಿಷನ್; ಇದಕ್ಕೆ ಟೊಯೋಟಾ ನೀಡಿದೆ ಬೆಂಬಲ

ಡಬ್ಲ್ಯೂಆರ್-ವಿ

Honda WR-V

ಕೊಡುಗೆ

ಮೊತ್ತ

SV MT

VX MT

ನಗದು ರಿಯಾಯಿತಿ

ರೂ. 30,000 ಗಳವರೆಗೆ

ರೂ 20,000 ಗಳವರೆಗೆ

ಉಚಿತ ಆ್ಯಕ್ಸೆಸರಿಗಳು (ಐಚ್ಛಿಕ)

ರೂ. 35,039 ಗಳವರೆಗೆ

ರೂ 23,792 ಗಳವರೆಗೆ

ಎಕ್ಸ್‌ಚೇಂಜ್ ಬೋನಸ್

ರೂ 20,000

ರೂ 10,000

ಲಾಯಲ್ಟಿ ಬೋನಸ್

ರೂ 5,000

ರೂ 5,000

ಹೋಂಡಾ ಕಾರ್ ಎಕ್ಸ್‌ಚೇಂಜ್ ರಿಯಾಯಿತಿ

ರೂ 7,000

ರೂ 7,000

ಕಾರ್ಪೊರೇಟ್ ರಿಯಾಯಿತಿ

ರೂ 5,000

ರೂ 5,000

ಒಟ್ಟು ಪ್ರಯೋಜನಗಳು

ರೂ 72,039 ಗಳವರೆಗೆ

50,792 ಗಳವರೆಗೆ

  • VX ಟ್ರಿಮ್‌ಗೆ ಹೋಲಿಸಿದರೆ ಕಡಿಮೆ SV ಟ್ರಿಮ್ ಅನ್ನು ಹೆಚ್ಚು ನಗದು ರಿಯಾಯಿತಿ ಮತ್ತು ಹೋಂಡಾ ಕಾರು ಎಕ್ಸ್‌ಚೇಂಜ್ ರಿಯಾಯಿತಿಯೊಂದಿಗೆ ನೀಡಲಾಗುತ್ತಿದೆ.

  • ಮೇಲೆ ಉಲ್ಲೇಖಿಸಲಾದ ಕೊಡುಗೆಗಳು ಕೇವಲ ಪೆಟ್ರೋಲ್ ಗ್ರೇಡ್‌ಗಳ ಮೇಲೆ ಮಾತ್ರ ಮಾನ್ಯವಾಗಿದೆ.

  • ಹೋಂಡಾ ಮುಂಬರುವ ತಿಂಗಳುಗಳಲ್ಲಿ ಸಬ್‌ಕಾಂಪ್ಯಾಕ್ಟ್ ಕ್ರಾಸ್ಓವರ್ ಅನ್ನು ಸ್ಥಗಿತಗೊಳಿಸಬಹುದು.

  • ಪ್ರಸ್ತುತ ಡಬ್ಲ್ಯೂಆರ್‌ವಿ ಯು ರೂ. 9.11 ಲಕ್ಷದಿಂದ 12.31 ಲಕ್ಷಗಳವರೆಗೆ ಮಾರಾಟವಾಗುತ್ತಿದೆ.

ಇದನ್ನೂ ಓದಿ: ಈಗ ಎಲ್ಲಾ ಕಾರುಗಳಿಗೂ ಲಭ್ಯವಿರುವ ಹೊಸ ಆ್ಯಂಡ್ರಾಯ್ಡ್ ಆಟೋ ಬಗ್ಗೆ ನೀವು ತಿಳಿದುಕೊಳ್ಳಬೇಕಾದ 7 ವಿಷಯಗಳು  

ಅಮೇಜ್

Honda Amaze

ಕೊಡುಗೆಗಳು

ಮೊತ್ತ

MY 2022

MY 2023

ನಗದು ರಿಯಾಯಿತಿ

ರೂ. 10,000 ಗಳವರೆಗೆ

ರೂ 5,000 ಗಳವರೆಗೆ

ಉಚಿತ ಆ್ಯಕ್ಸೆಸರಿಗಳು (ಐಚ್ಛಿಕ)

ರೂ 12,296 ಗಳವರೆಗೆ

ರೂ 6,198 ಗಳವರೆಗೆ

ಎಕ್ಸ್‌ಚೇಂಜ್ ಬೋನಸ್

ರೂ 10,000

ರೂ 10,000

ಲಾಯಲ್ಟಿ ಬೋನಸ್

ರೂ 5,000

ರೂ 5,000

ಹೋಂಡಾ ಕಾರ್ ಎಕ್ಸ್‌ಚೇಂಜ್ ರಿಯಾಯಿತಿ

N.A.

N.A.

ಕಾರ್ಪೊರೇಟ್ ರಿಯಾಯಿತಿ

ರೂ 6,000

ರೂ 6,000

ಒಟ್ಟು ಪ್ರಯೋಜನಗಳು

ರೂ 33,296 ಗಳವರೆಗೆ

ರೂ 27,198 ಗಳವರೆಗೆ

ಹಕ್ಕುತ್ಯಾಗ: 2022 ರಲ್ಲಿ ತಯಾರಿಸಿದ ಕಾರುಗಳನ್ನು ಖರೀದಿಸುವುದು MY23 ಮಾಡೆಲ್‌ಗಿಂತ ಕಡಿಮೆ ಮರುಮಾರಾಟ ಮೌಲ್ಯವನ್ನು ಹೊಂದಿರಬಹುದು.

ಜಾಝ್

Honda Jazz

ಕೊಡುಗೆಗಳು

ಮೊತ್ತ

ಲಾಯಲ್ಟಿ ಬೋನಸ್

ರೂ. 5,000

ಹೋಂಡಾ ಕಾರ್ ಎಕ್ಸ್‌ಚೇಂಜ್ ಬೋನಸ್

ರೂ, 7,000

ಕಾರ್ಪೊರೇಟ್ ರಿಯಾಯಿತಿ

ರೂ. 3,000

ಒಟ್ಟು ಪ್ರಯೋಜನಗಳು

ರೂ. 15,000 ಗಳವರೆಗೆ

  • ಹೋಂಡಾ ಪ್ರೀಮಿಯಂ ಹ್ಯಾಚ್‌ಬ್ಯಾಕ್ ನಗದು ರಿಯಾಯಿತಿ ಅಥವಾ ಉಚಿತ ಆ್ಯಕ್ಸೆಸರಿಗಳ ಆಯ್ಕೆಯನ್ನು ಕಳೆದುಕೊಂಡಿದ್ದು ಮಾತ್ರವಲ್ಲದೆ, ಎಕ್ಸ್‌ಚೇಂಜ್ ಬೋನಸ್ ಅನ್ನು ಸಹ ಹೊಂದಿಲ್ಲ.

  • ಇದು ಎಲ್ಲಾ ರೇಂಜ್‌ಗಳಿಗೂ ಮಾನ್ಯವಾಗಿರುವ ಲಾಯಲ್ಟಿ ಬೋನಸ್, ಹೋಂಡಾ ಕಾರ್ ಎಕ್ಸ್‌ಚೇಂಜ್ ಬೋನಸ್ ಮತ್ತು ಕಾರ್ಪೊರೇಟ್ ರಿಯಾಯಿತಿಯನ್ನು ಮಾತ್ರ ಹೊಂದಿದೆ.

  • ಹೋಂಡಾ ಜಾಝ್ ನ ಬೆಲೆಯನ್ನು ರೂ.8.01 ಲಕ್ಷದಿಂದ ರೂ. 10.32 ಲಕ್ಷಗಳವರೆಗೆ ನಿಗದಿಪಡಿಸಿಲಾಗಿದೆ.

ಫೋರ್ಥ್-ಜನರೇಷನ್ ಸಿಟಿ

Fourth-Gen Honda City

ಕೊಡುಗೆಗಳು

ಮೊತ್ತ

ಲಾಯಲ್ಟಿ ಬೋನಸ್

ರೂ. 5,000

ಒಟ್ಟು ಪ್ರಯೋಜನಗಳು

ರೂ. 5,000

  • ಫೋರ್ಥ್-ಜನರೇಷನ್ ಸಿಟಿ ಯು ರೂ. 5,000 ಗಳಷ್ಟು ಲಾಯಲ್ಟಿ ಬೋನಸ್ ಅನ್ನು ಮಾತ್ರ ಹೊಂದಿದೆ. ಇದು ಲಿಸ್ಟ್‌ನಲ್ಲಿ ಕನಿಷ್ಠ ಉಳಿತಾಯವನ್ನು ನೀಡುತ್ತದೆ.

  • ಇದು ಫೈವ್-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ಗೆ ಜೊತೆಯಾದ 1.5-ಲೀಟರ್ ಪೆಟ್ರೋಲ್ ಇಂಜಿನ್ (119PS/145Nm ಹೊರಹಾಕುವ) ಅನ್ನು ಹೊಂದಿದೆ.

  • SV ಮತ್ತು V ಎಂಬ ಎರಡು ಟ್ರಿಮ್‌ಗಳು ಲಭ್ಯವಿದೆ.

  • ಸೆಡಾನ್‌ನ ಈ ಜನರೇಷನ್ ಮುಂಬರುವ ತಿಂಗಳುಗಳಲ್ಲಿ ಸ್ಥಗಿತಗೊಳ್ಳಲಿದೆ.

  • ಪ್ರಸ್ತುತ ಇದರ ಬೆಲೆಯನ್ನು ರೂ.9.50 ಲಕ್ಷದಿಂದ ರೂ. 10 ಲಕ್ಷಗಳವರೆಗೆ ನಿಗದಿಪಡಿಸಲಾಗಿದೆ.

ಸೂಚನೆ

  • ಮೇಲೆ ಉಲ್ಲೇಖಿಸಲಾದ ಕೊಡುಗೆಗಳು ರಾಜ್ಯ ಅಥವಾ ನಗರವನ್ನು ಆಧರಿಸಿ ಬದಲಾಗಬಹುದು, ಆದ್ದರಿಂದ ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಿಮ್ಮ ಹತ್ತಿರದ ಹೋಂಡಾ ಡೀಲರ್‌ಶಿಪ್ ಅನ್ನು ಸಂಪರ್ಕಿಸಿ

  • ಎಲ್ಲಾ ಬೆಲೆಗಳು ಎಕ್ಸ್-ಶೋರೂಮ್ ದೆಹಲಿ

ಇನ್ನೂ ಹೆಚ್ಚಿನದನ್ನು ಇಲ್ಲಿ ಓದಿ :  ಸಿಟಿ 4ನೇ ಜನರೇಷನ್ ಆನ್ ರೋಡ್ ಬೆಲೆ 

was this article helpful ?

Write your Comment on Honda ಸಿಟಿ 4 ನೇ ತಲೆಮಾರು

explore similar ಕಾರುಗಳು

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಸೆಡಾನ್‌ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience