• English
  • Login / Register

ಇಲ್ಲಿವೆ 5-ಡೋರ್ ಮಾರುತಿ ಜಿಮ್ನಿ ಮತ್ತು ಮಹೀಂದ್ರಾ ಥಾರ್ ನಡುವಿನ 7 ಪ್ರಮುಖ ವ್ಯತ್ಯಾಸಗಳು

ಮಾರುತಿ ಜಿಮ್ನಿ ಗಾಗಿ tarun ಮೂಲಕ ಜನವರಿ 17, 2023 10:23 am ರಂದು ಪ್ರಕಟಿಸಲಾಗಿದೆ

  • 51 Views
  • ಕಾಮೆಂಟ್‌ ಅನ್ನು ಬರೆಯಿರಿ

ಇವೆರಡಲ್ಲಿ ಯಾವುದು ದೊಡ್ಡದು, ಹೆಚ್ಚು ಶಕ್ತಿಶಾಲಿ, ಸುಸಜ್ಜಿತ ಮತ್ತು ಹೆಚ್ಚು ಸಮರ್ಥ (ಪೇಪರ್ ಮೇಲೆ)? ಬನ್ನಿ ಕಂಡುಕೊಳ್ಳೋಣ

Maruti Jimny Vs Mahindra Thar

ವರ್ಷಗಳ ಕಾಯುವಿಕೆ ಮತ್ತು ನಿರೀಕ್ಷೆಯ ಬಳಿಕ, ಮಾರುತಿ ಕೊನೆಗೂ ಭಾರತದಲ್ಲಿ ಐದು-ಡೋರ್ ಜಿಮ್ನಿಯನ್ನು ಅನಾವರಣಗೊಳಿಸಿದೆ. ದೈತ್ಯ ಜಿಪ್ಸಿಯನ್ನು ಸ್ಥಗಿತಗೊಳಿಸಿದ ನಾಲ್ಕು ವರ್ಷಗಳ ಬಳಿಕ, ಮಾರುತಿ ತನ್ನ ದೀರ್ಘಕಾಲಿಕ ಪ್ರತಿಸ್ಪರ್ಧಿ ಮಹೀಂದ್ರಾ ಥಾರ್‌ಗೆ ಪ್ರತಿಯಾಗಿ ಹೊಸ ಆವೃತ್ತಿಯೊಂದಿಗೆ ಆಫ್-ರೋಡರ್ ಸೀನ್‌ಗೆ ಮರಳಿದೆ.

ಎರಡೂ ಕೂಡಾ ಆಫ್-ರೋಡರ್ಸ್‌ನ ಉದ್ದೇಶಕ್ಕಾಗಿ ನಿರ್ಮಿಸಲಾಗಿದೆ, ಆದರೆ ನೀವು ಯೋಚಿಸಿದಷ್ಟು ಒಂದೇ ತೆರನಾಗಿಲ್ಲ. ‘ನೈಜ ಎಸ್‌ಯುವಿ’ಗಳ ನಡುವಿನ ಏಳು ಪ್ರಮುಖ ವ್ಯತ್ಯಾಸಗಳು ಇಲ್ಲಿವೆ.

ಯಾವುದು ದೊಡ್ಡದು?

Maruti Jimny Vs Mahindra Thar

 

ವಿವರಣೆಗಳು

ಜಿಮ್ನಿ

ಥಾರ್

ವ್ಯತ್ಯಾಸ

ಉದ್ದ

3985 ಮಿಮೀ

3985 ಮಿಮೀ

-

-

ಅಗಲ

1645 ಮಿಮೀ

1820 ಮಿಮೀ

(-175ಮಿಮೀ)

ಎತ್ತರ

1720ಮಿಮೀ

1850ಮಿಮೀ

(-130ಮಿಮೀ)

ವ್ಹೀಲ್‌ಬೇಸ್

2590 ಮಿಮೀ

2450 ಮಿಮೀ

+140ಮಿಮೀ

ಗ್ರೌಂಡ್ ಕ್ಲಿಯರೆನ್ಸ್

210 ಮಿಮೀ

226 ಮಿಮೀ

(-16ಮಿಮೀ)

ಟೈರ್ ಗಾತ್ರ

15-ಇಂಚು ಅಲಾಯ್ಸ್

16-ಇಂಚು ಸ್ಟೀಲ್ ವ್ಹೀಲ್‌ಗಳು/ 18-ಇಂಚು ಅಲಾಯ್ಸ್

-

-

ಎರಡು ಹೆಚ್ಚುವರಿ ಡೋರ್‌ಗಳಿದ್ದಾಗ್ಯೂ, ಜಿಮ್ನಿ ಮತ್ತು ಥಾರ್ ಒಂದೇ ಉದ್ದವನ್ನು ಹೊಂದಿವೆ, ಆದರೆ ಸುಧಾರಿತ ಲೆಗ್‌ರೂಂಗಾಗಿ ಮಾರುತಿಯ ವ್ಹೀಲ್‌ಬೇಸ್ ಗಣನೀಯವಾಗಿ ಉದ್ದವಾಗಿದೆ. ಮಹೀಂದ್ರಾ ಎಸ್‌ಯುವಿ ಅಗಲವಾಗಿದೆ ಮತ್ತು ಎತ್ತರವಾಗಿದೆ, ಇದರಿಂದಾಗಿ ಈ ದಿಕ್ಕಿನಲ್ಲಿ ಕ್ಯಾಬಿನ್ ಸ್ಪೇಸ್ ಹೆಚ್ಚಿದೆ. ಥಾರ್‌ನ ಹೆಚ್ಚುವರಿ 16ಮಿಮೀ (ಸುಮಾರು ಅರ್ಧ ಇಂಚು) ಗ್ರೌಂಡ್‌ ಕ್ಲಿಯರೆನ್ಸ್ ಸಾಮಾನ್ಯ ಡ್ರೈವಿಂಗ್‌ಗೆ ಅಷ್ಟೊಂದು ಪರಿಣಾಮ ಬೀರಲಾರದು, ಆದರೆ ಕ್ಲಿಷ್ಟಕರ ಭೂಭಾಗಗಳನ್ನು ಏರುವ ನಿಟ್ಟಿನಲ್ಲಿ ಆಫ್-ರೋಡಿಂಗ್‌ ಕ್ಷೇತ್ರಕ್ಕೆ ಇದು ಗಮನಾರ್ಹವಾಗಿ ಅನುಕೂವಾಗಲಿದೆ.

Maruti Jimny Vs Mahindra Thar

ಮೂರು-ಡೋರ್ ಬದಲಾಗಿ ಐದು-ಡೋರ್ ಇರುವುದು ಸರಿಯಲ್ಲ ಎಂದು ನೀವು ಆಲೋಚಿಸುತ್ತಿದ್ದರೆ, ಥಾರ್ ದೊಡ್ಡನೆಯದಾಗಿದೆ, ಹೆಚ್ಚು ಪ್ರಾಕ್ಟಿಕಲ್ ಆಗಿದೆ ಎಂದು ಮನಸ್ಸಲ್ಲಿದ್ದರೆ, ಹೌದು. ಅದು ದೊಡ್ಡದಾಗಿದೆ ಮತ್ತು ತುಂಬಾ ದುಬಾರಿಯೂ ಆಗಿದೆ. ಇದೇ ವೇಳೆ, ಸಬ್-4 ಮೀಟರ್ ಆಫರಿಂಗ್ ಆಗಿ ಉಳಿಯುವ ಜಿಮ್ನಿಯು ಮೂರು ಡೋರ್ ಥಾರ್‌ಗಿಂತ ತುಂಬಾ ಕೈಗೆಟಕುವ ಬೆಲೆಯಲ್ಲಿದೆ.

 

ಹಿಂದಿನ ಸೀಟುಗಳಿಗೆ ಸುಲಭ ಪ್ರವೇಶ

Maruti Jimny Vs Mahindra Thar

Maruti Jimny Vs Mahindra Thar

ಎರಡೂ ಕೂಡಾ ನಾಲ್ಕು ಸೀಟುಗಳ ಎಸ್‌ಯುವಿಗಳಾಗಿವೆ. ಥಾರ್‌ನಲ್ಲಿ, ಹಿಂದಿನ ಸೀಟಿನ ಪ್ರಯಾಣಿಕರಿಗೆ ಡೋರ್‌ ಇಲ್ಲ. ಅವರು ಮುಂಭಾಗದ ಸೀಟನ್ನು ಹೊಂದಾಣಿಕೆ ಮಾಡಿಕೊಂಡು ಪ್ರವೇಶಿಸಬೇಕು. ಜಿಮ್ನಿಯು ಹಿಂಭಾಗಕ್ಕೆ ಅನುಕೂಲಕರ ಪ್ರವೇಶವಕ್ಕಾಗಿ ಡೋರ್ ಅನ್ನು ಒದಗಿಸುತ್ತದೆ. ಐದು ಡೋರ್‌ನ ಥಾರ್ ರಂಗಪ್ರವೇಶ ಮಾಡಿದರೆ ಈ ಚಿತ್ರಣ ಬದಲಾಗಲಿದೆ, ಐದು ಜನರಿಗೆ ಕುಳಿತುಕೊಳ್ಳಲು ಅನುಕೂಲವಾಗುವಂತೆ ಅದು ಇನ್ನೂ ಎರಡು ಡೋರ್‌ಗಳನ್ನು ಹೊಂದಲಿದೆ. 

 

ಸಾಫ್ಟ್ ಟಾಪ್ ಆಯ್ಕೆಯಿಲ್ಲ

Maruti Jimny Vs Mahindra Thar

Maruti Jimny Vs Mahindra Thar

ಮಾರುತಿ ಜಿಪ್ಸಿ ಮೆಟಲ್ ಮತ್ತು ಫ್ಯಾಬ್ರಿಕ್ ಟಾಪ್‌ಗಳ ಆಯ್ಕೆಯನ್ನು ಹೊಂದಿತ್ತು, ಆದರೆ ಈಗ ಜಿಮ್ನಿ ಫಿಕ್ಸೆಡ್ ಮೆಟಲ್ ಟಾಪ್‌ನೊಂದಿಗೆ ಮಾತ್ರ ಲಭ್ಯವಿದೆ. ಮಹೀಂದ್ರಾ ಥಾರ್ ಹೆಚ್ಚು ಲೈಫ್‌ಸ್ಟೈಲ್ ಅಪೀಲ್‍ನೊಂದಿಗೆ ಬದಲಾಯಿಸಬಹುದಾದ ಸಾಫ್ಟ್ ರೂಫ್‌ಟಾಪ್ ಅಥವಾ ಪ್ಲಾಸ್ಟಿಕ್ ಸಹಿತದ ಹಾರ್ಡ್ ಟಾಪ್‌ನ ಆಯ್ಕೆಯನ್ನು ಹೊಂದಿದೆ.

 

ಸ್ವಾಭಾವಿಕ ಮಹತ್ವಾಕಾಂಕ್ಷಿ ವರ್ಸಸ್ ಟರ್ಬೋಚಾರ್ಜ್‌

Maruti Jimny Vs Mahindra Thar

 

ವಿವರಣೆಗಳು

ಜಿಮ್ನಿ

ಪೆಟ್ರೋಲ್ ಥಾರ್

ಡೀಸೆಲ್ ಥಾರ್

ಡ್ರೈವ್‌ಟ್ರೈನ್

4X4

4X2 / 4X4

4X2

4X4

ಎಂಜಿನ್

1.5-ಲೀಟರ್ ಪೆಟ್ರೋಲ್

2-ಲೀಟರ್ ಟರ್ಬೋ-ಪೆಟ್ರೋಲ್

1.5-ಲೀಟರ್ ಡೀಸೆಲ್

2.2-ಲೀಟರ್ ಡೀಸೆಲ್

 

ಪವರ್

105PS

150PS

119PS

130PS

ಟಾರ್ಕ್

134.2Nm

Up to 320Nm

300Nm

300Nm

ಟ್ರಾನ್ಸ್‌ಮಿಶನ್‌ಗಳು

5-ಸ್ಪೀಡ್ MT / 4-ಸ್ಪೀಡ್ AT

6- ಸ್ಪೀಡ್ MT / 6- ಸ್ಪೀಡ್ AT

6- ಸ್ಪೀಡ್ MT

6- ಸ್ಪೀಡ್ MT / 6- ಸ್ಪೀಡ್ AT

ಜಿಮ್ನಿಯ ಪವರಿಂಗ್ ಸಾಮಾನ್ಯವಾದ 1.5 ಲೀಟರ್ ಪೆಟ್ರೋಲ್ ಎಂಜಿನ್‌ನಿಂದ ಕೂಡಿದೆ, ಇದು ಫೈವ್-ಸ್ಪೀಡ್ ಮ್ಯಾನುವಲ್ ಅಥವಾ ಮಾರುತಿಯ ಹಳೆ ಪ್ರಕಾರವಾದ ಫೋರ್-ಸ್ಪೀಡ್ ಆಟೊಮ್ಯಾಟಿಕ್‌ನವೊಂದಿಗೆ ಬರುತ್ತದೆ. ಸದ್ಯಕ್ಕೆ 4WD ಸ್ಟಾಂಡರ್ಡ್ ಆಗಿದೆ.

Maruti Jimny Vs Mahindra Thar

ಥಾರ್ ದೊಡ್ಡನೆಯ 2-ಲೀಟರ್ ಟರ್ಬೋ-ಪೆಟ್ರೋಲ್ ಎಂಜಿನ್‌ನೊಂದಿಗೆ ತುಂಬಾ ಪವರ್‌ಪುಲ್ ಆಗಿದ್ದು, ಇದು 45PS ಮತ್ತು ಮಾರುತಿಗಿಂತ 180Nm ತನಕ ಹೆಚ್ಚು ಅಭಿವೃದ್ಧಿಪಡಿಸುತ್ತದೆ. ಇಲ್ಲಿ, ನಿಮ್ಮ ಉದ್ದೇಶವನ್ನು ಅವಲಂಬಿಸಿಕೊಂಡು ನೀವು 4X4 ಮತ್ತು 4X2 ವೇರಿಯೆಂಟ್‌ಗಳ ನಡುವೆ ಆಯ್ಕೆ ಮಾಡಬಹುದು. ಅಲ್ಲದೆ, ಆಫ್-ರೋಡಿಂಗ್ ಉತ್ಸಾಹಿಗಳಿಗಾಗಿ ಕಾರ್ಯಕ್ಷಮತೆ ತೋರುವ ಟಾರ್ಕಿ ಡೀಸೆಲ್ ಎಂಜಿನ್‌ನ ಆಯ್ಕೆಯೂ ಇದೆ. ಆದರೆ ಮಾರುತಿ ಡೀಸೆಲ್‌ನೊಂದಿಗಿನ ಸಂಬಂಧವನ್ನು ಸಂಪೂರ್ಣ ಕಡಿದುಕೊಂಡಿದೆ. ಮಹೀಂದ್ರಾದ ಎಂಜಿನ್‌ಗಳು ಸಿಕ್ಸ್-ಸ್ಪೀಡ್ ಮ್ಯಾನುವಲ್ ಮತ್ತು ಆಟೊಮ್ಯಾಟಿಕ್ ಟ್ರಾನ್ಸ್‌ಮಿಶನ್‌ಗಳೊಂದಿಗೆ ಕೂಡಾ ಬರುತ್ತವೆ, ಇದು ಅವುಗಳನ್ನು ಹೈವೇ ಸವಾರಿಗೆ ಕೂಡಾ ಸೂಕ್ತವಾಗಿಸುತ್ತದೆ. 

 

ಆಫ್-ರೋಡ್ ತಂತ್ರಜ್ಞಾನ

Maruti Jimny Vs Mahindra Thar
Maruti Jimny Vs Mahindra Thar

ಎರಡೂ ಕೂಡಾ ಲೋ ರೇಂಜ್ ಟ್ರಾನ್ಸ್‌ಫರ್ ಕೇಸ್‌ನೊಂದಿಗೆ ಶಿಫ್ಟ್-ಆನ್-ಫ್ಲೈ 4WD ಪಡೆಯುತ್ತವೆ, ಇದು ಪ್ರಾಥಮಿಕವಾಗಿ ಸಾಗುತ್ತಿರುವಾಗ 4ಹೈ ಮತ್ತು 4ಲೋ ಮಧ್ಯೆ ನಿಮಗೆ ಶಿಫ್ಟ್ ಮಾಡಲು ಅವಕಾಶ ನೀಡುತ್ತದೆ. ಜಿಮ್ನಿ ಬ್ರೇಕ್-ಲಿಮಿಟೆಡ್ ಸ್ಲಿಪ್ ಡಿಫರೆನ್ಶಿಯಲ್‌ಗಳನ್ನು ಬಳಸುತ್ತದೆ. ಇದು ಯಾವ ವ್ಹೀಲ್‌ಗೆ ಸಾಕಷ್ಟು ಟ್ರಾಕ್ಷನ್ ಇಲ್ಲವೋ ಅದಕ್ಕೆ ಮತ್ತು ಸ್ಲಿಪೇಜ್ ಅನ್ನು ತಪ್ಪಿಸಲು ಎಲೆಕ್ಟ್ರಾನಿಕ್ ಆಗಿ ಬ್ರೇಕ್ ಅನ್ನು ಅನ್ವಯಿಸುವ ಮೂಲಕ ಹೆಚ್ಚು ಗ್ರಿಪ್ ಮತ್ತು ಟ್ರಾಕ್ಷನ್ ಅನ್ನು ನೀಡುತ್ತದೆ. 

ಇನ್ನೊಂದೆಡೆ, ಥಾರ್‌ನಲ್ಲಿ ಎಲೆಕ್ಟ್ರಾನಿಕ್ ಲಾಕಿಂಗ್ ಡಿಫರೆನ್ಶಿಯಲ್ ಇಧ್ದು, ಇದು ಆಫ್-ರೋಡ್‌ಗೆ ಹೆಚ್ಚು ಸಾಬೀತಾಗಿದ್ದು, ಯಾವುದಕ್ಕೆ ಹೆಚ್ಚು ಗ್ರಿಪ್ ಇದ್ದರೂ, ಎರಡೂ ವ್ಹೀಲ್‌ಗಳಿಗೆ ಸೀಮಿತ ಪವರ್ ಅನ್ನು ನೀಡುತ್ತದೆ. ಇದು ಮೆಕ್ಯಾನಿಕಲ್ ಬ್ರೇಕ್ ಲಾಕಿಂಗ್ ಡಿಫರೆನ್ಶಿಯಲ್‌ನಲ್ಲೂ ಇದು ಲಭ್ಯವಿದೆ, ಆದರೆ ಟಾಪ್-ಸ್ಪೆಕ್  LX ಡೀಸೆಲ್ ಟ್ರಿಮ್‌ನಲ್ಲಿ ಮಾತ್ರ.

ಥಾರ್‌ನ ಅಪ್ರೋಚ್ ಆಂಗಲ್ ಜಿಮ್ನಿಗಿಂತ ಉತ್ತಮವಾಗಿದೆ, ಆದರೆ ಜಿಮ್ನಿಯ ಶಾರ್ಟರ್ ರಿಯರ್ ಓವರ್‌ಹ್ಯಾಂಗ್ ಉತ್ತಮ ಡಿಪಾರ್ಚರ್ ಆಂಗಲ್ ಅನ್ನು ನೀಡುತ್ತದೆ.  ತುಲನಾತ್ಮಕವಾಗಿ ಥಾರ್‌ನ ಕಿರಿದಾದ ವ್ಹೀಲ್‌ಬೇಸ್ ಐದು ಡೋರ್ ಜಿಮ್ನಿಗಿಂತ ಹೆಚ್ಚಿನ ಬ್ರೇಕ್‍ಓವರ್ ಆಂಗಲ್‍ನ ಪ್ರಯೋಜನವನ್ನು ನೀಡುತ್ತದೆ, ಇದರ ಅಂಡರ್‌ಬಾಡಿಗಿದು ಶುಭ ಸುದ್ದಿ.  

 

ಫೀಚರ್‌ಭರಿತ ಕ್ಯಾಬಿನ್‌ಗಳು

Maruti Jimny Vs Mahindra Thar

 

ಸಾಮಾನ್ಯ ಫೀಚರ್‌ಗಳು

ಜಿಮ್ನಿ

ಥಾರ್

  • ಕ್ರೂಸ್ ಕಂಟ್ರೋಲ್
  • ಸ್ಟಿಯರಿಂಗ್-ಮೌಂಟೆಡ್ ಕಂಟ್ರೋಲ್‌ಗಳು
  • ಟಚ್‌ಸ್ಕ್ರೀನ್ ಇನ್ಫೊಟೈನ್‌ಮೆಂಟ್ ಸಿಸ್ಟಮ್
  • 4 ಸ್ಪೀಕರ್‌ಗಳು
  • ಟಿಲ್ಟ್ ಟೆಲಿಸ್ಕೋಪಿಕ್ ಸ್ಟಿಯರಿಂಗ್
  • ಡ್ಯುಯಲ್ ಪ್ರಂಟ್ ಏರ್‌ಬ್ಯಾಗ್‌ಗಳು​​​​​​​
  • ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು
  • ಹಿಲ್ ಹೋಲ್ಡ್/ ಡೀಸೆಂಟ್ ಕಂಟ್ರೋಲ್
  • ಇಎಸ್‌ಪಿ
  • 15-ಇಂಚು ಅಲಾಯ್‌ಗಳು
  • ಆಟೊಮ್ಯಾಟಿಕ್ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು​​​​​​​
  • ಹೆಡ್‌ಲ್ಯಾಂಪ್ ವಾಶರ್​​​​​​​
  • ಆಟೊ ಎಸಿ
  • ವೈರ್‌ಲೆಸ್ ಆಂಡ್ರಾಯ್ಡ್ ಆಟೊ ಮತ್ತು ಆಪಲ್ ಕಾರ್‌ಪ್ಲೇನೊಂದಿಗಿನ 9-ಇಂಚು ಯುನಿಟ್
  • ಪುಶ್ ಬಟನ್ ಸ್ಟಾರ್ಟ್-ಸ್ಟಾಪ್
  • ರಿಯರ್ ವ್ಯೂ ಕ್ಯಾಮೆರಾ
  • ಆರು ಏರ್‌ಬ್ಯಾಗ್‌ಗಳು
  • 16/18- ಇಂಚು ಅಲಾಯ್‌ಗಳು​​​​​​​
  • ಡ್ರೈವರ್ ಸೀಟಿಗೆ ಎತ್ತರ ಹೊಂದಾಣಿಕೆ 
  • ವೈರ್‌ಯುಕ್ತ ಆಂಡ್ರಾಯ್ಡ್ ಆಟೊ ಮತ್ತು ಆಪಲ್ ಕಾರ್‌ಪ್ಲೇನೊಂದಿಗಿನ 7-ಇಂಚು ಯುನಿಟ್
  • ರೂಫ್ ಮೌಂಟೆಡ್ ಸ್ಪೀಕರ್‌ಗಳು
  • ರಿಯಲ್ ಟೈಂ ಅಡ್ವೆಂಚರ್ ಸ್ಟಾಟಸ್ಟಿಕ್ಸ್
  • ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್

Maruti Jimny Vs Mahindra Thar

ಜಿಮ್ನಿ ಆಟೊ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಆಟೊ ಎಸಿ, ವೈರ್‌ಲೆಸ್ ಆಂಡ್ರಾಯ್ಡ್ ಆಟೊ ಮತ್ತು ಆಪಲ್ ಕಾರ್‌ಪ್ಲೇನೊಂದಿಗೆ ದೊಡ್ಡನೆಯ ಟಚ್‌ಸ್ಕ್ರೀನ್ ಸಿಸ್ಟಮ್ , ರಿಯರ್ ಕ್ಯಾಮೆರಾ ಮತ್ತು ಆರ್ ಏರ್‌ಬ್ಯಾಗ್‌ಗಳನ್ನು ಹೊಂದಿದ್ದು, ಥಾರ್‌ಗಿಂತ ಭಿನ್ನವಾಗಿದೆ. ಇನ್ನೊಂದೆಡೆ, ಡ್ರೈವರ್ ಸೀಟ್‌ನ ಎತ್ತರ ಹೊಂದಾಣಿಕೆ ಇದರಲ್ಲಿ ಇಲ್ಲ. ಟಿಪಿಎಂಎಸ್ ಮತ್ತು ರಿಯಲ್ ಟೈಂ ಅಡ್ವೆಂಚರ್ ಸ್ಟಾಟಸ್ಟಿಕ್ಸ್ ಫೀಚರ್ ಥಾರ್‌ನಲ್ಲಿದೆ.

 

ಬೆಲೆ ಸಮರ

Maruti Jimny Vs Mahindra Thar

ಈ ಮಾನದಂಡದಲ್ಲಿ ಜಿಮ್ನಿಯು ಥಾರ್‌ಗಿಂತ ಮೇಲುಗೈ ಸಾಧಿಸುತ್ತದೆ. ಮಾರುತಿ ಆಫ್-ರೋಡರ್‌ನ ಆರಂಭಿಕ ಬೆಲೆ ಸುಮಾರು ರೂ.10 ಲಕ್ಷ ಇರುವ ನಿರೀಕ್ಷೆಯಿದೆ, ಇದೇ ವೇಳೆ ಥಾರ್‌ನ ಪೆಟ್ರೋಲ್ 4WD ವೇರಿಯೆಂಟ್‌ನ ಬೆಲೆ ರೂ.13.59 ಲಕ್ಷ ಆಗಿದೆ. ಪರಾಮರ್ಶೆಗಾಗಿ, ಡೀಸೆಲ್ 4WD ವೇರಿಯೆಂಟ್‌ನ ಬೆಲೆ ರೂ.14.16 ಲಕ್ಷ. ಆದಾಗ್ಯೂ, ಥಾರ್‌ನ ರಿಯರ್ ವ್ಹೀಲ್ ಡ್ರೈವ್ ವೇರಿಯೆಂಟ್‌ಗಳ ಬೆಲೆ ರೂ.10 ಲಕ್ಷದಿಂದ ರೂ.13.49 ಲಕ್ಷ ತನಕ ಇದ್ದು, ಇದು ಪ್ರತಿಸ್ಪರ್ಧಿ ಐದು ಡೋರ್ ಜಿಮ್ನಿಯ ಬೆಲೆಗೆ ಸನಿಹದಲ್ಲಿದೆ.

 

(ಎಲ್ಲವೂ ಎಕ್ಸ್-ಶೋರೂಂ ಬೆಲೆಗಳಾಗಿವೆ)

ಈ ಕುರಿತು ಇನ್ನಷ್ಟು ಓದಿ : ಮಹೀಂದ್ರಾ ಥಾರ್ ಡೀಸೆಲ್

 

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Maruti ಜಿಮ್ನಿ

3 ಕಾಮೆಂಟ್ಗಳು
1
R
reva gowda
Feb 9, 2023, 7:47:39 PM

Maruti suzuki have any plan to diesel version in Jimny 4x4

Read More...
    ಪ್ರತ್ಯುತ್ತರ
    Write a Reply
    1
    K
    k d
    Jan 22, 2023, 10:32:46 PM

    A tractor making company can never make as much refined vehicles as a car making company which is globally known for its durability and refinement. Only a smart buyer can understand this .

    Read More...
    ಪ್ರತ್ಯುತ್ತರ
    Write a Reply
    2
    P
    pravin
    Jan 28, 2023, 6:58:41 PM

    For those too smart buyers, here is an update ..... Toyota initial business was automated handlooms... so better have some homework before barking... LOL

    Read More...
      ಪ್ರತ್ಯುತ್ತರ
      Write a Reply
      2
      P
      pravin
      Jan 28, 2023, 6:58:41 PM

      For those too smart buyers, here is an update ..... Toyota initial business was automated handlooms... so better have some homework before barking... LOL

      Read More...
      ಪ್ರತ್ಯುತ್ತರ
      Write a Reply
      3
      P
      pravin
      Jan 28, 2023, 7:00:34 PM

      Barking ?? oh sorry .. I meant talking... LOL

      Read More...
        ಪ್ರತ್ಯುತ್ತರ
        Write a Reply
        1
        P
        ponnala anilkumar
        Jan 14, 2023, 7:12:48 PM

        Diseel version available

        Read More...
          ಪ್ರತ್ಯುತ್ತರ
          Write a Reply
          Read Full News

          explore similar ಕಾರುಗಳು

          Similar cars to compare & consider

          ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

          ಕಾರು ಸುದ್ದಿ

          • ಟ್ರೆಂಡಿಂಗ್ ಸುದ್ದಿ
          • ಇತ್ತಿಚ್ಚಿನ ಸುದ್ದಿ

          trending ಎಸ್‌ಯುವಿ ಕಾರುಗಳು

          • ಲೇಟೆಸ್ಟ್
          • ಉಪಕಮಿಂಗ್
          • ಪಾಪ್ಯುಲರ್
          ×
          We need your ನಗರ to customize your experience