• English
  • Login / Register

ಪರದೆಯೊಳಗಿನ ಹೊಚ್ಚ ಹೊಸ Mahindra BE.05 ದ ವಿಶೇಷತೆಯೇನು ?

ಮಹೀಂದ್ರ be 6 ಗಾಗಿ ansh ಮೂಲಕ ಆಗಸ್ಟ್‌ 22, 2023 04:09 pm ರಂದು ಮಾರ್ಪಡಿಸಲಾಗಿದೆ

  • 21 Views
  • ಕಾಮೆಂಟ್‌ ಅನ್ನು ಬರೆಯಿರಿ

BE.05 ಅಕ್ಟೋಬರ್ 2025ಕ್ಕೆ ಭಾರತದ ಮಾರುಕಟ್ಟೆ ಪ್ರವೇಶಿಸಲು ಸಿದ್ಧವಾಗಿದೆ

Mahindra BE.05

  •  ಒಟ್ಟಾರೆ ಡಿಸೈನ್ ಪರಿಕಲ್ಪನೆಯ ರೀತಿಯಲ್ಲೇ ಇದೆ.
  •  ಹೊಸತಾಗಿ ಸಿದ್ಧವಾದ ಆವೃತ್ತಿಯಲ್ಲಿ ಇದರ ಕ್ಯಾಬಿನ್ ಕನಿಷ್ಠ ಬದಲಾವಣೆ ಪಡೆಯುವ ನಿರೀಕ್ಷೆ ಇದೆ.
  •  INGLO ಪ್ಲಾಟ್‌ಫಾರ್ಮ್ ಆಧಾರಿತವಾಗಿದ್ದು ಸುಮಾರು 450km ರೇಂಜ್‌ ನೀಡುವ 60kWh ಬ್ಯಾಟರಿ ಪ್ಯಾಕ್ ಪಡೆಯಬಹುದು.
  •  ಅಕ್ಟೋಬರ್ 2025ಕ್ಕೆ ಬಿಡುಗಡೆ ನಿಗದಿಯಾಗಿದ್ದು, ಬೆಲೆಗಳು ರೂ 25 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭವಾಗುವ ನಿರೀಕ್ಷೆ ಇದೆ.

ಮಹೀಂದ್ರಾದ ಡಿಸೈನ್ ಮುಖ್ಯಸ್ಥರಾದ ಪ್ರತಾಪ್ ಬೋಸ್ ಅವರು ಇತ್ತೀಚೆಗೆ ಉತ್ಪಾದನೆಗೆ ಸಿದ್ಧಗೊಂಡ  ಮಹೀಂದ್ರಾ BE.05 ಇಲೆಕ್ಟ್ರಿಕ್ SUV ಆವೃತ್ತಿಯ ಕೆಲವು ಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ. ತೋರಿಸಲಾದ ಯೂನಿಟ್ ಮರೆಮಾಡಲಾಗಿದ್ದರೂ, 2022ರಲ್ಲಿ ಪ್ರದರ್ಶಿಸಲಾದ ಪರಿಕಲ್ಪನೆಯ ನಂತರ ಮಾಡಲಾದ ಬದಲಾವಣೆಗಳನ್ನು ತೋರಿಸುತ್ತದೆ. ಇತ್ತೀಚಿನ ಪ್ರಿವ್ಯೂ ಬಗ್ಗೆ ಇನ್ನಷ್ಟು ತಿಳಿಯೋಣ.

  

ಪರಿಕಲ್ಪನೆಗಿಂತ ಹೆಚ್ಚು ಭಿನ್ನವಾಗೇನೂ ಇಲ್ಲ

ಮಹೀಂದ್ರಾ ಈ ಪರಿಕಲ್ಪನೆಯ ಒಟ್ಟಾರೆ ಡಿಸೈನ್ ಲ್ಯಾಂಗ್ವೇಜ್ ಅನ್ನು ಹಾಗೆ ಇರಿಸಿಕೊಂಡಿದ್ದು, ಇದು BE.05 ಭವಿಷ್ಯದಲ್ಲಿ ತನ್ನ ಆಕರ್ಷಣೆಯನ್ನು ಉಳಿಸಿಕೊಳ್ಳುವಂತೆ ಮಾಡಿದೆ. ಮುಂಭಾಗವು ಮೊನಚಾದ ಬೋನೆಟ್, ಚೂಪಾದ ಮತ್ತು ನಯವಾಗಿ ಹೊಳೆಯುವ LED DRLಗಳು ಮತ್ತು ನೀಳವಾದ ಬಂಪರ್‌ನೊಂದಿಗೆ ಅದೇ ರೀತಿ ಕಾಣುತ್ತದೆ.

Mahindra BE.05
Mahindra BE.05

BE.05 ಅನ್ನು ನೈಜವಾಗಿಸಲು ಪ್ರೊಫೈಲ್‌ನಲ್ಲಿ ಇನ್ನೂ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಇದು ಈಗ ಹೆಚ್ಚು ನೈಜವಾಗಿ ಕಾಣುವ ಫೈವ್-ಸ್ಪೋಕ್ ಅಲಾಯ್ ವ್ಹೀಲ್‌ಗಳು ಮತ್ತು ಸೂಕ್ತ ORVMಗಳೊಂದಿಗೆ ಬದಲಾಯಿಸಲಾದ A-ಪಿಲ್ಲರ್‌ಗಳ ಮೇಲೆ ಮೌಂಟ್ ಮಾಡಲಾದ ಕ್ಯಾಮರಾಗಳನ್ನು ಪಡೆದಿದೆ. ವ್ಹೀಲ್ ಆರ್ಚ್‌ಗಳು ಯಾವುದೇ ಕ್ಲ್ಯಾಡಿಂಗ್ ಪಡೆದಿರುವಂತೆ ಕಾಣುವುದಿಲ್ಲ ಮತ್ತು B-ಪಿಲ್ಲರ್ ಎದ್ದು ಕಾಣುವಂತಿದೆ.

 ಇದನ್ನೂ ಓದಿ: ಬಿಡುಗಡೆಗೆ ಸಿದ್ಧವಾಗಿದೆ ನಾವು ನೋಡಿದ ಪ್ರತಿ ಮಹೀಂದ್ರಾ ಇಲೆಕ್ಟ್ರಿಕ್ SUV 

 ಈ ಉತ್ಪಾದನಾ-ಸ್ಪೆಕ್ ಡಿಸೈನ್‌ನ ಹಿಂಭಾಗದಲ್ಲಿ ಯಾವುದೇ ಬದಲಾವಣೆ ಮಾಡಿದಂತೆ ತೋರುವುದಿಲ್ಲ. ಮೇಲಿನಿಂದ ಸ್ಪ್ಲಿಟ್ ರಿಯರ್ ಸ್ಪಾಯ್ಲರ್ ಮತ್ತು ಚಾಚಿಕೊಂಡಿರುವ ಹಿಂಭಾಗವನ್ನು ಗುರುತಿಸಬಹುದು, ಇದು LED DRLಗಳನ್ನು ಅನುಸರಿಸುವ ನುಣುಪಾದ LED ಟೇಲ್‌ ಲ್ಯಾಂಪ್‌ಗಳು ಮತ್ತು ಬೃಹತ್ ಹಿಂಭಾಗದ ಬಂಪರ್ ಅನ್ನು ಹೊಂದಿದೆ.

Mahindra BE.05
Mahindra BE.05

BE.05 ನ ಒಟ್ಟಾರೆ ಡಿಸೈನ್ ಅದರ ಪರಿಕಲ್ಪನೆಯ ಆವೃತ್ತಿಯನ್ನೇ ಹೋಲುತ್ತದೆ ಎಂಬುದನ್ನು ವರದಿ ಮಾಡಲು ನಮಗೆ ಹೆಮ್ಮೆಯಾಗುತ್ತಿದೆ.

 

ಇಂಟೀರಿಯರ್ ಡಿಸೈನ್

ಕ್ಯಾಬಿನ್ ಕೂಡಾ ಪರಿಕಲ್ಪನೆಯನ್ನೇ ಹೋಲುವ ನಿರೀಕ್ಷೆ ಇದೆ. ಮಹೀಂದ್ರಾ ಎರಡು 12.3-ಇಂಚು ಡಿಸ್‌ಪ್ಲೇಗಳು, ಲೇಯರ್ಡ್ ಡ್ಯಾಶ್‌ಬೋಡ್ ಡಿಸೈನ್, ಸ್ಕ್ವಾರಿಶ್ ಸ್ಟೀರಿಂಗ್ ವ್ಹೀಲ್ ಮತ್ತು ಒಟ್ಟಾರೆ ಕಾಕ್‌ಪಿಟ್ ಡಿಸೈನ್ ಅನ್ನು ಪರಿಕಲ್ಪನೆಯಲ್ಲಿದ್ದಂತೆಯೇ ಇರಿಸಿದೆ.

Mahindra BE.05 Cabin

 ಕ್ಯಾಬಿನ್ ಬಣ್ಣದಲ್ಲಿ ಸಣ್ಣ ಮಟ್ಟಿಗಿನ ವ್ಯತ್ಯಾಸ ನಿರೀಕ್ಷಿಸಬಹುದಾಗಿದ್ದು, ಕಾಕ್‌ಪಿಟ್‌ನ ಭವಿಷ್ಯದ ಡಿಸೈನ್ ಅನ್ನು ತುಸು ಕಡಿಮೆ ಮಾಡಬಹುದು. ಈ BE 05 ನ ಇಂಟೀರಿಯರ್ ಅನ್ನು ಇನ್ನೂ ಸ್ಪೈ ಮಾಡಲಾಗಿಲ್ಲ, ಆದರೂ ವೇರಿಯೆಂಟ್ ಅನ್ನು ಆಧರಿಸಿ ಕೆಲವು ಬದಲಾವಣೆಗಳನ್ನು ನಿರೀಕ್ಷಿಸಬಹುದು.

 

ರೇಂಜ್ ಮತ್ತು ಪವರ್‌ಟ್ರೇನ್

Mahindra INGLO Platform

ಈ BE.05ಯು ಬ್ರ್ಯಾಂಡ್‌ನ ಮೊದಲನೇ EV ಆಫರಿಂಗ್ ಆಗಿದ್ದು ಮಹೀಂದ್ರದ INGLO ಪ್ಲಾಟ್‌ಫಾರ್ಮ್ ಆಧಾರಿತವಾಗಿದೆ. ಈ ಇಲೆಕ್ಟ್ರಿಕ್ SUV 60kWh ಬ್ಯಾಟರಿ ಪ್ಯಾಕ್ ಹೊಂದಿದ್ದು ಸುಮಾರು 450km ಕ್ಲೈಮ್ ಮಾಡಲಾದ ರೇಂಜ್ ಅನ್ನು ನೀಡುತ್ತದೆ. ಈ ನಿರ್ದಿಷ್ಟ ಇಲೆಕ್ಟ್ರಿಕ್ SUVಯಲ್ಲಿ, ಟೂ-ವ್ಹೀಲ್-ಡ್ರೈವ್ ಸಿಸ್ಟಮ್ ಅನ್ನು ಮಾತ್ರವೇ ನಿರೀಕ್ಷಿಸಬಹುದಾದರೂ, ಇದು ಆಲ್-ವ್ಹೀಲ್-ಡ್ರೈವ್ ಅನ್ನು ಬೆಂಬಲಿಸುತ್ತದೆ. ಹೊಸ ಮಹೀಂದ್ರಾ ಬ್ಯಾಟರಿ ತಂತ್ರಜ್ಞಾನವು ಕೇವಲ 30 ನಿಮಿಷಗಳಲ್ಲಿ 5-80 ಪ್ರತಿಶತ ಚಾರ್ಜಿಂಗ್‌ನೊಂದಿಗೆ 175kW ನಷ್ಟು ಫಾಸ್ಟ್ ಚಾರ್ಜಿಂಗ್‌ನೊಂದಿಗೆ ಹೊಂದಿಸಲಾಗಿದೆ.

 

ಬಿಡುಗಡೆ, ಬೆಲೆ ಮತ್ತು ಪ್ರತಿಸ್ಪರ್ಧಿಗಳು

First Spy Shots Of The Mahindra BE.05 Have Surfaced

 ಈ ಮಹೀಂದ್ರಾ BE.05 ಅಕ್ಟೋಬರ್ 2025 ರಲ್ಲಿ ಆಗಮಿಸಲಿದ್ದು, ಆರಂಭಿಕ ಬೆಲೆ ರೂ 25 ಲಕ್ಷ (ಎಕ್ಸ್-ಶೋರೂಂ) ಇರಬಹುದು ಎಂದು ನಿರೀಕ್ಷಿಸಲಾಗಿದೆ. ಇದು ಹ್ಯುಂಡೈ ಕ್ರೆಟಾ ಆಧಾರಿತ EV ಮತ್ತು ಟಾಟಾ ಕರ್ವ್ EVಗೆ ಪ್ರತಿಸ್ಪರ್ಧಿಯಾಗಲಿದೆ.

was this article helpful ?

Write your Comment on Mahindra be 6

explore ಇನ್ನಷ್ಟು on ಮಹೀಂದ್ರ be 6

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
  • ಹೊಸ ವೇರಿಯೆಂಟ್
    ಮಹೀಂದ್ರ be 6
    ಮಹೀಂದ್ರ be 6
    Rs.18.90 - 26.90 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಹೊಸ ವೇರಿಯೆಂಟ್
    ಮಹೀಂದ್ರ xev 9e
    ಮಹೀಂದ್ರ xev 9e
    Rs.21.90 - 30.50 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಆಡಿ ಕ್ಯೂ6 ಈ-ಟ್ರಾನ್
    ಆಡಿ ಕ್ಯೂ6 ಈ-ಟ್ರಾನ್
    Rs.1 ಸಿಆರ್ಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಮಹೀಂದ್ರ xev 4e
    ಮಹೀಂದ್ರ xev 4e
    Rs.13 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಮಾರುತಿ e vitara
    ಮಾರುತಿ e vitara
    Rs.17 - 22.50 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
×
We need your ನಗರ to customize your experience