ಬಿಡುಗಡೆಗೊಂಡ ಒಂದು ತಿಂಗಳೊಳಗೆ Mahindra BE 6 ಮತ್ತು Mahindra XEV 9eಯ 3000 ಯುನಿಟ್‌ಗಳ ಮಾರಾಟ
ಏಪ್ರಿಲ್ 11, 2025 05:13 pm ರಂದು bikramjit ಮೂಲಕ ಪ್ರಕಟಿಸಲಾಗಿದೆ
- ಕಾಮೆಂಟ್ ಅನ್ನು ಬರೆಯಿರಿ
ಬುಕಿಂಗ್ ಟ್ರೆಂಡ್‌ಗಳ ಪ್ರಕಾರ, XEV 9e ಗೆ ಶೇ. 59 ರಷ್ಟು ಮತ್ತು BE 6 ಗೆ ಶೇ. 41 ರಷ್ಟು ಬೇಡಿಕೆಯಿದ್ದು, ಎರಡು ಮೊಡೆಲ್‌ಗಳು ಸುಮಾರು ಆರು ತಿಂಗಳ ವೈಟಿಂಗ್ ಪಿರೇಡ್‌ಅನ್ನು ಹೊಂದಿದೆ.
ಭಾರತದ ಜನಪ್ರೀಯ ಕಾರು ಬ್ರ್ಯಾಂಡ್‌ಗಳಲ್ಲಿ ಒಂದಾಗಿರುವ ಮಹೀಂದ್ರಾ ತಮ್ಮ ಇತ್ತೀಚಿನ ಎಲೆಕ್ಟ್ರಿಕ್ ಎಸ್‌ಯುವಿಗಳಾದ BE 6 ಮತ್ತು XEV 9e ಗಳ 3000 ಯೂನಿಟ್‌ಗಳನ್ನು ಒಟ್ಟಾಗಿ ಡೆಲಿವೆರಿ ನೀಡುವ ಮೈಲಿಗಲ್ಲು ಸಾಧಿಸಿರುವುದಾಗಿ ಘೋಷಿಸಿದೆ. ಅವುಗಳ ಡೆಲಿವೆರಿ ಪ್ರಾರಂಭವಾದ ಸುಮಾರು ಎರಡು ವಾರಗಳ ನಂತರ ಈ ಸುದ್ದಿ ಬಂದಿದೆ. ಆದರೂ, ಬುಕಿಂಗ್ ಟ್ರೆಂಡ್‌ಗಳ ಪ್ರಕಾರ ಗ್ರಾಹಕರ ನೆಚ್ಚಿನ ವಾಹನವಾಗಿ XEV 9e ಮುಂಚೂಣಿಯಲ್ಲಿದೆ ಎಂದು ಮಹೀಂದ್ರಾ ಹೇಳಿದೆ.
ಖರೀದಿದಾರರ ಆದ್ಯತೆಗಳು
ಮಹೀಂದ್ರಾ ಇವಿಗಳು ಭಾರತೀಯ ಮಾರುಕಟ್ಟೆಯಲ್ಲಿ ಪಾದಾರ್ಪಣೆ ಮಾಡಿದಾಗಿನಿಂದಲೂ ಜನಪ್ರಿಯತೆಯಲ್ಲಿವೆ, ಮತ್ತು ಕಡಿಮೆ ಅವಧಿಯಲ್ಲಿ 3000 ಯುನಿಟ್‌ಗಳು ಮಾರಾಟವಾಗಿ ಡೆಲಿವೆರಿ ನೀಡಲ್ಪಟ್ಟಿವೆ.
ಬುಕಿಂಗ್ ಟ್ರೆಂಡ್‌ಗಳ ಪ್ರಕಾರ, ಶೇ. 59 ರಷ್ಟು ಖರೀದಿದಾರರು XEV 9e ಗಾಗಿ ತಮ್ಮ ಹೆಸರುಗಳನ್ನು ನೊಂದಾಯಿಸಿದ್ದಾರೆ, ಮತ್ತು ಉಳಿದ ಶೇ. 41 ರಷ್ಟು ಜನರು BE 6 ಅನ್ನು ಆರಿಸಿಕೊಂಡಿದ್ದಾರೆ. ವಾಸ್ತವವಾಗಿ, ಎರಡೂ ಎಲೆಕ್ಟ್ರಿಕ್ ಎಸ್‌ಯುವಿಗಳಿಗೆ ಗ್ರಾಹಕರು ಹೆಚ್ಚಾಗಿ ಸಂಪೂರ್ಣವಾಗಿ ಲೋಡ್ ಮಾಡಲಾದ ಟಾಪ್-ಸ್ಪೆಕ್ ಪ್ಯಾಕ್ 3 ವೇರಿಯೆಂಟ್‌ಅನ್ನು ಆರಿಸಿಕೊಂಡಿದ್ದಾರೆ ಎಂದು ಬ್ರ್ಯಾಂಡ್ ಹೇಳಿದೆ. ಅಲ್ಲದೆ, ಎರಡೂ ಮೊಡೆಲ್‌ಗಳಿಗೆ ಸುಮಾರು ಆರು ತಿಂಗಳ ವೈಟಿಂಗ್ ಪಿರೇಡ್ ಇದ್ದು, ಗ್ರಾಹಕರಿಗೆ ಹೆಚ್ಚಿನ ಕಾರುಗಳನ್ನು ತ್ವರಿತವಾಗಿ ತಲುಪಿಸಲು ನೋಡುತ್ತಿದೆ ಎಂದು ಮಹೀಂದ್ರಾ ತಿಳಿಸಿದೆ.
ಮಹೀಂದ್ರಾ ಬಿಇ 6 ಅವಲೋಕನ
ಮಹೀಂದ್ರಾ BE 6 ಕ್ವಾರ್ಕಿ ಮತ್ತು ಅಸಾಂಪ್ರದಾಯಿಕ ವಿನ್ಯಾಸವನ್ನು ಹೊಂದಿದ್ದು, ಇದು ಭಾರತೀಯ ರಸ್ತೆಗಳಲ್ಲಿ ಹೆಚ್ಚು ಪರಿಚಿತವಾಗಿಲ್ಲ. ಇದು ಆಕ್ರಮಣಕಾರಿ ಮತ್ತು ದೂರದೃಷ್ಟಿಯುಳ್ಳ ಮೊಡೆಲ್ ಆಗಿದ್ದು, ಬಹಳಷ್ಟು ಕರ್ವ್ ಮತ್ತು ಏರಿಳಿತಗಳನ್ನು ಹೊಂದಿದೆ. ಇದು ಫ್ಲಶ್-ಟೈಪ್ ಡೋರ್ ಹ್ಯಾಂಡಲ್‌ಗಳು, ಎಲ್‌ಇಡಿ ಲೈಟಿಂಗ್ ಮತ್ತು 19-ಇಂಚಿನ ಡ್ಯುಯಲ್-ಟೋನ್ ಅಲಾಯ್‌ನಂತಹ ಆಧುನಿಕ ವಿನ್ಯಾಸ ಅಂಶಗಳನ್ನು ಹೊಂದಿದೆ. ಇದನ್ನು ಪ್ಯಾಕ್ ಒನ್, ಪ್ಯಾಕ್ ಒನ್ ಅಬೋವ್, ಪ್ಯಾಕ್ ಟು, ಪ್ಯಾಕ್ ಥ್ರೀ ಸೆಲೆಕ್ಟ್ ಮತ್ತು ಪ್ಯಾಕ್ ಥ್ರೀ ಎಂಬ ಐದು ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತದೆ.
BE 6 ವಿಮಾನ ಕಾಕ್‌ಪಿಟ್-ಪ್ರೇರಿತ ಇಂಟೀರಿಯರ್ ವಿನ್ಯಾಸವನ್ನು ಹೊಂದಿದ್ದು, ಇದು ಇನ್ಫೋಟೈನ್‌ಮೆಂಟ್ ಮತ್ತು ಇನ್ಸ್‌ಟ್ರುಮೆಂಟೇಶನ್‌ಗಾಗಿ ಡ್ಯುಯಲ್ 12.3-ಇಂಚಿನ ಡಿಜಿಟಲ್ ಡಿಸ್‌ಪ್ಲೇಗಳು, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ಡ್ಯುಯಲ್-ಜೋನ್ ಆಟೋ-ಎಸಿ, ಪ್ರಕಾಶದೊಂದಿಗೆ ಪನೋರಮಿಕ್ ಸನ್‌ರೂಫ್, 16-ಸ್ಪೀಕರ್ ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್, ಎರಡು ವೈರ್‌ಲೆಸ್ ಫೋನ್ ಚಾರ್ಜರ್‌ಗಳು, ಕೀಲೆಸ್ ಎಂಟ್ರಿ ಮತ್ತು ವರ್ಧಿತ ರಿಯಾಲಿಟಿ-ಆಧಾರಿತ ಹೆಡ್ಸ್-ಅಪ್ ಡಿಸ್‌ಪ್ಲೇ ಮುಂತಾದ ಫೀಚರ್‌ಗಳನ್ನು ಹೊಂದಿದೆ. ಇದರ ಸುರಕ್ಷತಾ ಫೀಚರ್‌ಗಳಲ್ಲಿ 7 ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಮ್ ಮತ್ತು ಲೆವೆಲ್-2 ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ (ADAS) ಸೇರಿವೆ.
ಮಹೀಂದ್ರಾ ಎಕ್ಸ್‌ಇವಿ 9e ಅವಲೋಕನ
ಮಹೀಂದ್ರಾ XEV 9e ಒಂದು ಎಲೆಕ್ಟ್ರಿಕ್ ಎಸ್‌ಯುವಿ ಕೂಪ್ ಆಗಿದ್ದು, ಇದು ಇಳಿಜಾರಾದ ರೂಫ್, ಕನೆಕ್ಟೆಡ್ ಎಲ್‌ಇಡಿ ಲೈಟಿಂಗ್ ಮತ್ತು ಅಂತಹುದೇ 19-ಇಂಚಿನ ಡ್ಯುಯಲ್ ಟೋನ್ ಅಲಾಯ್ ವೀಲ್‌ಗಳನ್ನು ಹೊಂದಿದೆ. ಇದನ್ನು ಪ್ಯಾಕ್ ಒನ್, ಪ್ಯಾಕ್ ಟು, ಪ್ಯಾಕ್ ಥ್ರೀ ಸೆಲೆಕ್ಟ್ ಮತ್ತು ಪ್ಯಾಕ್ ಥ್ರೀ ಎಂಬ ನಾಲ್ಕು ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತದೆ.
ಎಕ್ಸ್‌ಇವಿ 9ಇ ನಲ್ಲಿರುವ ಪ್ರಮುಖ ಫೀಚರ್‌ಗಳಲ್ಲಿ 12.3-ಇಂಚಿನ ಟ್ರಿಪಲ್ ಡಿಸ್‌ಪ್ಲೇಗಳು, ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, ಡ್ಯುಯಲ್ ವೈರ್‌ಲೆಸ್ ಫೋನ್ ಚಾರ್ಜರ್‌ಗಳು, ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್, ಇಲ್ಯುಮಿನೇಷನ್ ಹೊಂದಿರುವ ಪನೋರಮಿಕ್ ಗ್ಲಾಸ್ ರೂಫ್, ಮೆಮೊರಿ ಸೆಟ್ಟಿಂಗ್ ಹೊಂದಿರುವ ಚಾಲಿತ ಡ್ರೈವರ್ ಸೀಟ್ ಮತ್ತು 16-ಸ್ಪೀಕರ್ ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್ ಸೇರಿವೆ. ಸುರಕ್ಷತೆಗಾಗಿ, ಇದು ಏಳು ಏರ್‌ಬ್ಯಾಗ್‌ಗಳು, ಇಬಿಡಿ ಜೊತೆಗೆ ಎಬಿಎಸ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಆಟೋ ಹೋಲ್ಡ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಮತ್ತು ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್‌ನಂತಹ (ADAS) ಫೀಚರ್‌ಗಳನ್ನು ಪಡೆಯುತ್ತದೆ.
ಬ್ಯಾಟರಿ ಪ್ಯಾಕ್
ಮಹೀಂದ್ರಾ ಬಿಇ6 ಮತ್ತು ಎಕ್ಸ್‌ಇವಿ 9e ಎರಡೂ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳು ಮತ್ತು ರಿಯರ್ ವೀಲ್ ಡ್ರೈವ್ ಆಯ್ಕೆಯೊಂದಿಗೆ ಬರುತ್ತವೆ. ಇವುಗಳ ವಿಶೇಷಣಗಳನ್ನು ಕೆಳಗೆ ವಿವರಿಸಲಾಗಿದೆ.
ಮೊಡೆಲ್‌ಗಳು |
ಬಿಇ 6 |
ಎಕ್ಸ್‌ಇವಿ 9ಇ |
||
ಬ್ಯಾಟರಿ ಪ್ಯಾಕ್ |
59 ಕಿ.ವ್ಯಾಟ್ |
79 ಕಿ.ವ್ಯಾಟ್ |
59 ಕಿ.ವ್ಯಾಟ್ |
79 ಕಿ.ವ್ಯಾಟ್ |
ಕ್ಲೈಮ್ ಮಾಡಲಾದ ರೇಂಜ್ (MIDC ಪಾರ್ಟ್ 1+2) |
557 ಕಿ.ಮೀ. |
683 ಕಿ.ಮೀ. |
542 ಕಿ.ಮೀ. |
656 ಕಿ.ಮೀ. |
ಎಲೆಕ್ಟ್ರಿಕ್ ಮೋಟಾರ್ (ಗಳ) ಸಂಖ್ಯೆ |
1 |
1 |
1 |
1 |
ಪವರ್ |
231 ಪಿಎಸ್ |
286 ಪಿಎಸ್ |
231 ಪಿಎಸ್ |
286 ಪಿಎಸ್ |
ಟಾರ್ಕ್ |
380 Nm |
|||
ಡ್ರೈವ್‌ಟ್ರೈನ್ |
RWD* |
*RWD- ರಿಯರ್ ವೀಲ್ ಡ್ರೈವ್
ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಮಹೀಂದ್ರಾ ಬಿಇ 6 ಬೆಲೆ 18.90 ಲಕ್ಷ ರೂ.ಗಳಿಂದ 26.90 ಲಕ್ಷ ರೂ.ಗಳವರೆಗೆ ಇದ್ದರೆ, ಮಹೀಂದ್ರಾ ಎಕ್ಸ್‌ಇವಿ 9e ಬೆಲೆ 21.90 ಲಕ್ಷ ರೂ.ಗಳಿಂದ 30.50 ಲಕ್ಷ ರೂ.ಗಳವರೆಗೆ ಇದೆ (ಎಲ್ಲ ಬೆಲೆಗಳು ಎಕ್ಸ್ ಶೋ ರೂಂ, ಭಾರತಾದ್ಯಂತ).
ಬಿಇ 6 ಕಾರು ಟಾಟಾ ಕರ್ವ್ ಇವಿ, ಹುಂಡೈ ಕ್ರೆಟಾ ಎಲೆಕ್ಟ್ರಿಕ್, ಎಂಜಿ ಝಡ್ಎಸ್ ಇವಿ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿದ್ದು, ಮುಂಬರುವ ಮಾರುತಿ ಇ ವಿಟಾರಾ ಕಾರುಗಳಿಗೂ ಪ್ರತಿಸ್ಪರ್ಧಿಯಾಗಲಿದೆ. ಮತ್ತೊಂದೆಡೆ, XEV 9e ಅನ್ನು ಬಿವೈಡಿ ಆಟ್ಟೊ 3 ಮತ್ತು ಮುಂಬರುವ ಟಾಟಾ ಹ್ಯಾರಿಯರ್ ಇವಿಗೆ ಪರ್ಯಾಯವಾಗಿ ಪರಿಗಣಿಸಬಹುದು.
ಆಟೋಮೋಟಿವ್ ಜಗತ್ತಿನಿಂದ ತ್ವರಿತ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಲು ಮಿಸ್ ಮಾಡ್ಬೇಡಿ.