Login or Register ಅತ್ಯುತ್ತಮ CarDekho experience ಗೆ
Login

ಇಲ್ಲಿದೆ ಮಾರುತಿ ಜಿಮ್ನಿಯ ಪ್ರತಿ ವೇರಿಯೆಂಟ್‌ನ ಮಾಹಿತಿ

ಮಾರುತಿ ಜಿಮ್ನಿ ಗಾಗಿ ansh ಮೂಲಕ ಜನವರಿ 19, 2023 04:39 pm ರಂದು ಪ್ರಕಟಿಸಲಾಗಿದೆ

ಈ ವಿವರವಾದ ವೇರಿಯೆಂಟ್-ವೈಸ್ ವೈಶಿಷ್ಟ್ಯಗಳು ನೀವು ಯಾವ ವೇರಿಂಯೆಂಟ್ ಅನ್ನು ಬುಕ್ ಮಾಡಬೇಕೆಂದು ಆಯ್ಕೆ ಮಾಡುವುದಕ್ಕೆ ಸಹಾಯ ಮಾಡುತ್ತದೆ.

ಆಟೋ ಎಕ್ಸ್‌ಪೋ 2023 ರಲ್ಲಿ, ಮಾರುತಿಯು ತನ್ನ ಆಫ್-ರೋಡರ್ ಅನ್ನು ಭಾರತದಲ್ಲಿ ಅನಾವರಣಗೊಳಿಸಿತು. ಬಹು-ನಿರೀಕ್ಷಿತ ಜಿಮ್ನಿಯು ದೇಶದಲ್ಲಿ ತನ್ನ ಫೈವ್-ಡೋರ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಮಾತ್ರವಲ್ಲದೇ ಬುಕಿಂಗ್‌ಗಳು ಈಗಾಗಲೇ ಪ್ರಾರಂಭವಾಗಿದೆ. ಜಿಮ್ನಿಯು ಎರಡು ಟ್ರಿಮ್‌ಗಳನ್ನು ಹೊಂದಿದೆ: ಝೆಟಾ ಮತ್ತು ಆಲ್ಫಾ. ಮತ್ತು ಇಲ್ಲಿ ಪ್ರತಿ ವೇರಿಯೆಂಟ್ ಏನನ್ನು ನೀಡುತ್ತಿದೆ ಮತ್ತು ಟಾಪ್-ಸ್ಪೆಕ್ ಟ್ರಿಮ್‌ಗೆ ವಿಶೇಷವಾದದ್ದೇನು ಎಂಬುದನ್ನು ಹೇಳುತ್ತೇವೆ.

ಝೆಟಾ

ಹೊರಭಾಗ

ಒಳಭಾಗ

ಇನ್‌ಫೊಟೈನ್‌ಮೆಂಟ್

ಸೌಕರ್ಯ/ಅನುಕೂಲತೆ

ಸುರಕ್ಷತೆ

  • 15-ಇಂಚಿನ ಸ್ಟೀಲ್ ವ್ಹೀಲ್‌ಗಳು

  • ಕ್ರೋಮ್ ಪ್ಲೆಟಿಂಗ್‌ನೊಂದಿಗೆ ಗನ್‌ಮೆಟಲ್ ಗ್ರೇ ಗ್ರಿಲ್

  • ಟೈಲ್‌ಗೇಟ್ ಮೌಂಟೆಡ್ ಸ್ಪೇರ್ ವ್ಹೀಲ್

  • ಹ್ಯಾಲೋಜನ್ ಹೆಡ್‌ಲ್ಯಾಂಪ್‌ಗಳು

  • ಕಪ್ಪು ಒಳಭಾಗ

  • 7-ಇಂಚಿನ ಟಚ್‌ಸ್ಕ್ರೀನ್ ಇನ್‌ಫೊಟೈನ್‌ಮೆಂಟ್ ಸಿಸ್ಟಮ್

  • ವೈರ್‌ಲೆಸ್ ಆ್ಯಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ

  • 4 ಸ್ಪೀಕರ್‌ಗಳು

  • ಮ್ಯಾನ್ಯುವಲ್ ಕ್ಲೈಮ್ಯಾಟ್ ಕಂಟ್ರೋಲ್

  • ಹೊಂದಿಸಬಹುದಾದ ಎಲೆಕ್ಟ್ರಿಕ್ ORVMಗಳು

  • ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್‌ಗಳು

  • ಎಲ್ಲಾ ಪವರ್ ವಿಂಡೋಗಳು

  • 6-ಏರ್‌ಬ್ಯಾಗ್‌ಗಳು

  • ಇಬಿಡಿಯೊಂದಿಗೆ ಇಬಿಎಸ್

  • ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೊಗ್ರಾಂ (ಇಎಸ್‌ಪಿ)

  • ಹಿಲ್ ಹೋಲ್ಡ್ ಮತ್ತು ಡಿಸೆಂಟ್ ಕಂಟ್ರೋಲ್

ಬೇಸ್-ಸ್ಪೆಕ್ ಝೆಟಾ ಟ್ರಿಮ್ ಅನ್ನು ಏಳು-ಇಂಚಿನ ಟಚ್‌ಸ್ಕ್ರೀನ್, ವೈರ್‌ಲೆಸ್ ಆ್ಯಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ, ಆರು ಏರ್‌ಬ್ಯಾಗ್‌ಗಳು, ಇಬಿಡಿಯೊಂದಿಗೆ ಎಬಿಎಸ್ ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ಇಎಸ್‌ಪಿ) ನಂತಹ ಎಲ್ಲಾ ವೈಶಿಷ್ಟ್ಯಗಳನ್ನು ಒಳಗೊಂಡು ಸಮರ್ಪಕವಾಗಿ ಸಜ್ಜುಗೊಳಿಸಲಾಗಿದೆ, ಆದರೆ ಇದರಲ್ಲಿ ಅಲೋಯ್ ವ್ಹೀಲ್‌ಗಳು, ಆಟೋ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಸ್ವಯಂಚಾಲಿತ ಕ್ಲೈಮೆಟ್ ಕಂಟ್ರೋಲ್‌ಗಳ ಕೊರತೆಯನ್ನು ಕಾಣಬಹುದಾಗಿದೆ.

ಸಂಬಂಧಿತ: ಈ 20 ಚಿತ್ರಗಳಲ್ಲಿ ಪಡೆಯಿರಿ ಮಾರುತಿ ಜಿಮ್ನಿಯ ವಿಸ್ತೃತ ನೋಟ

ಝೆಟಾ ಟ್ರಿಮ್‌ನಲ್ಲಿ ಟಾಪ್-ಸ್ಪೆಕ್ ಆಲ್ಫಾ ಏನನ್ನು ನೀಡುತ್ತಿದೆ ಎಂಬುದನ್ನು ಈಗ ನೋಡೋಣ:

ಆಲ್ಫಾ

ಹೊರಭಾಗ

ಒಳಭಾಗ

ಇನ್‌ಫೊಟೈನ್‌ಮೆಂಟ್

ಸೌಕರ್ಯ/ಅನುಕೂಲತೆ

ಸುರಕ್ಷತೆ

  • 15-ಇಂಚಿನ ಅಲೋಯ್ ವ್ಹೀಲ್‌ಗಳು

  • ಆಟೋ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು

  • ಬಾಡಿಯ ಬಣ್ಣದಂತಹ ಡೋರ್ ಹ್ಯಾಂಡಲ್‌ಗಳು

  • ಹೆಡ್‌ಲ್ಯಾಂಪ್ ವಾಶರ್

  • ಫಾಗ್ ಲ್ಯಾಂಪ್‌ಗಳು

  • ಲೆದರ್ ರ್‍ಯಾಪ್ಡ್ ಸ್ಟೀರಿಂಗ್ ವ್ಹೀಲ್

  • 9-ಇಂಚಿನ ಟಚ್‌ಸ್ಕ್ರೀನ್ ಇನ್‌ಫೊಟೈನ್‌ಮೆಂಟ್ ಸಿಸ್ಟಮ್

  • ವೈರ್‌ಲೆಸ್ ಆ್ಯಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ

  • 4 ಸ್ಪೀಕರ್‌ಗಳು ARKAMYS ಸೌಂಡ್ ಸಿಸ್ಟಮ್

  • ಸ್ವಯಂಚಾಲಿತ ಕ್ಲೈಮ್ಯಾಟ್ ಕಂಟ್ರೋಲ್

  • ಹೊಂದಿಸಬಹುದಾದ ಮತ್ತು ಮಡಿಚಬಹುದಾದ ಎಲೆಕ್ಟ್ರಿಕ್ ORVMಗಳು

  • ಕ್ರೂಸ್ ಕಂಟ್ರೋಲ್

  • ಪುಶ್ ಸ್ಟಾರ್ಟ್/ಸ್ಟಾಪ್

  • 6-ಏರ್‌ಬ್ಯಾಗ್‌ಗಳು

  • ಇಬಿಡಿಯೊಂದಿಗೆ ಎಬಿಎಸ್

  • ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ಇಎಸ್‌ಪಿ)

  • ಹಿಲ್ ಹೋಲ್ಡ್ ಮತ್ತು ಡಿಸೆಂಟ್ ಕಂಟ್ರೋಲ್

ದೊಡ್ಡದಾದ ಒಂಬತ್ತು-ಇಂಚಿನ ಟಚ್‌ಸ್ಕ್ರೀನ್, ಆಟೋ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, 15-ಇಂಚಿನ ಅಲೋಯ್ ವ್ಹೀಲ್‌ಗಳು ಮತ್ತು ARKAMYS-ಟ್ಯೂನ್ ಸೌಂಡ್ ಸಿಸ್ಟಮ್ ಮತ್ತು ಕ್ರೂಸ್ ಕಂಟ್ರೋಲ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿರುವುದರಿಂದ ಟಾಪ್-ಸ್ಪೆಕ್ ಆಲ್ಫಾ ಟ್ರಿಮ್ಅನ್ನು ಝೆಟಾ ಟ್ರಿಮ್‌ಗಿಂತ ಮೇಲ್ಪಂಕ್ತಿಯಲ್ಲಿರಿಸಬಹುದಾಗಿದೆ. ಸುರಕ್ಷತಾ ವೈಶಿಷ್ಟ್ಯಗಳು ಝೆಟಾ ಟ್ರಿಮ್‌ನಲ್ಲಿರುವಂತೆಯೇ ಇವೆ.

ಇದನ್ನೂ ಓದಿ: 5-ಡೋರ್ ಮಾರುತಿ ಜಿಮ್ನಿ ಮತ್ತು ಮಹೀಂದ್ರಾ ಥಾರ್ ನಡುವಿನ ಪ್ರಮುಖ 7 ವ್ಯತ್ಯಾಸಗಳು

ಎರಡೂ ಟ್ರಿಮ್‌ಗಳು ಒಂದೇ ರೀತಿಯ ಪವರ್‌ಟ್ರೇನ್ ಮತ್ತು ಆಫ್-ರೋಡಿಂಗ್ ಅಗತ್ಯತೆಗಳನ್ನು ಹೊಂದಿದ್ದು, ಅವುಗಳ ವಿವರಗಳನ್ನು ಕೆಳಗೆ ಉಲ್ಲೇಖಿಸಲಾಗಿದೆ:

ವಿಶೇಷತೆಗಳು

Zetaಝೆಟಾ

ಆಲ್ಫಾ

ಇಂಜಿನ್

1.5-ಲೀಟರ್ ಪೆಟ್ರೋಲ್ ಇಂಜಿನ್

ಟ್ರಾನ್ಸ್‌ಮಿಷನ್

5-ಸ್ಪೀಡ್ MT/4-ಸ್ಪೀಡ್ AT

ಪವರ್

105PS

ಟಾರ್ಕ್

134.2Nm

ವ್ಯತ್ಯಾಸ

ಬ್ರೇಕ್ ಲಿಮಿಟೆಡ್ ಸ್ಲಿಪ್ ವ್ಯತ್ಯಾಸ

ಜಿಮ್ನಿಯು ಫೈವ್-ಸ್ಪೀಡ್ ಮ್ಯಾನ್ಯುವಲ್ ಅಥವಾ ಫೋರ್-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ 1.5-ಲೀಟರ್ ಪೆಟ್ರೋಲ್ ಇಂಜಿನ್‌ ಅನ್ನು ಹೊಂದಿದೆ. ಈ ಆಫ್-ರೋಡರ್ 105PS ಮತ್ತು 134.2Nm ಅನ್ನು ಒದಗಿಸುತ್ತದೆ ಮತ್ತು ಫೋರ್-ವ್ಹೀಲ್ ಡ್ರೈವ್‌ಟ್ರೇನ್ ಅನ್ನು ಪಡೆದುಕೊಂಡಿದೆ.

ಮಾರುತಿ ಜಿಮ್ನಿಯ ಬುಕಿಂಗ್‌ಗಳು ತೆರೆದಿದ್ದು ರೂ.10 ಲಕ್ಷಗಳ ಆರಂಭಿಕ ಬೆಲೆಯಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಿದೆ. ಒಮ್ಮೆ ಬಿಡುಗಡೆಯಾದರೆ, ಇದು ಮಹೀಂದ್ರಾ ಥಾರ್ ಮತ್ತು ಫೋರ್ಸ್ ಗೂರ್ಖಾಗೆ ನೇರ ಪ್ರತಿಸ್ಪರ್ಧಿಯಾಗಲಿದೆ.

Share via

Write your Comment on Maruti ಜಿಮ್ನಿ

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಫೇಸ್ ಲಿಫ್ಟ್
Rs.1.03 ಸಿಆರ್*
ಹೊಸ ವೇರಿಯೆಂಟ್
Rs.11.11 - 20.42 ಲಕ್ಷ*
ಹೊಸ ವೇರಿಯೆಂಟ್
ಹೊಸ ವೇರಿಯೆಂಟ್
Rs.15.50 - 27.25 ಲಕ್ಷ*
ಹೊಸ ವೇರಿಯೆಂಟ್
Rs.15 - 26.50 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ