Login or Register ಅತ್ಯುತ್ತಮ CarDekho experience ಗೆ
Login

ಉತ್ಪಾದನೆಗೆ ಸಿದ್ಧವಾಗಿರುವ ಮಹೀಂದ್ರಾ BE 05 ಯ ಪಕ್ಷಿನೋಟ ಇಲ್ಲಿದೆ

published on ಆಗಸ್ಟ್‌ 17, 2023 10:39 pm by tarun for ಮಹೀಂದ್ರ be 05

BE 05 ವಾಹನವು ಮಹೀಂದ್ರಾದ ಮೊದಲ ಬಾರ್ನ್ ಎಲೆಕ್ಟ್ರಿಕ್ SUV‌ ಎನಿಸಿದ್ದು ಯಾವುದೇ ICE ಎದುರಾಳಿಯನ್ನು ಹೊಂದಿಲ್ಲ. ಇದು 2025ರಲ್ಲಿ ಮಾರುಕಟ್ಟೆಗೆ ಬರಲಿದೆ.

  • ಉತ್ಪಾದನೆಗೆ ಸಿದ್ಧವಾಗಿರುವ ಮಹೀಂದ್ರಾದ BE 05 ಅವತಾರವು ತನ್ನ ಪರಿಕಲ್ಪನೆಯ ರೂಪದಲ್ಲಿ ಕೆಲವೊಂದು ಸಾಮ್ಯತೆಗಳನ್ನು ಹೊಂದಿದೆ.

  • ಫಿಕ್ಸ್ಡ್‌ ಗ್ಲಾಸ್‌ ರೂಫ್, ಫ್ಲಶ್‌ ಡೋರ್‌ ಹ್ಯಾಂಡಲ್‌ ಗಳು ಮತ್ತು ಸಂಪರ್ಕಿತ C ಆಕಾರದ LED ಟೇಲ್‌ ಲೈಟುಗಳನ್ನು ಇದು ಹೊಂದಿರಲಿದೆ.

  • ಅತ್ಯಂತ ನವೀನ ಒಳಾಂಗಣವು ಟಚ್‌ ಸ್ಕ್ರೀನ್‌ ವ್ಯವಸ್ಥೆ ಮತ್ತು ಚಾಲಕನ ಡಿಸ್ಪ್ಲೇಗಾಗಿ ಡ್ಯುವಲ್‌ ಇಂಟಗ್ರೇಟೆಡ್‌ ಸ್ಕ್ರೀನ್‌ ಗಳನ್ನು ಹೊಂದಿರಲಿದೆ.

  • ಸುಮಾರು 450 ಕಿಲೋಮೀಟರ್‌ ಶ್ರೇಣಿಯೊಂದಿಗೆ 60kWh ಬ್ಯಾಟರಿ ಪ್ಯಾಕ್‌ ನೊಂದಿಗೆ ಮಾರುಕಟ್ಟೆಗೆ ಬಿಡುಗಡೆಯಾಗುವ ನಿರೀಕ್ಷೆ ಇದೆ.

  • ಬೆಲೆಯು ಸುಮಾರು ರೂ. 25 ಲಕ್ಷ ಆಗಿರಲಿದ್ದು (ಎಕ್ಸ್-ಶೋರೂಂ); 2025ರ ಅಕ್ಟೋಬರ್‌ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ.

ಮಹೀಂದ್ರಾದ ಚೀಫ್‌ ಡಿಸೈನರ್‌ ಆಫಿಸರ್‌ ಆಗಿರುವ ಪ್ರತಾಪ್‌ ಬೋಸ್‌ ಅವರು ಉತ್ಪಾದನೆಗೆ ಸಿದ್ಧವಾಗಿರುವ ಮಹೀಂದ್ರಾ BE.05 ವಾಹನದ ರೂಪುರೇಷೆಯನ್ನು ಬಹಿರಂಗಪಡಿಸಿದ್ದಾರೆ. ಇದರ ಪರಿಕಲ್ಪನೆಯು 2022ರ ಆಗಸ್ಟ್‌ ತಿಂಗಳಿನಲ್ಲಿ ರೂಪುಗೊಂಡಿತ್ತು. ಅಲ್ಲದೆ ಇದು ಮಹೀಂದ್ರಾದ ಮೊದಲ ʻಬಾರ್ನ್‌ ಎಲೆಕ್ಟ್ರಿಕ್‌ʼ ಮಾದರಿ ಎನಿಸಲಿದೆ. ಇದು 2025ರ ಅಕ್ಟೋಬರ್‌ ತಿಂಗಳಿನಲ್ಲಿ ಮಾರಾಟಕ್ಕೆ ಸಿದ್ಧಗೊಳ್ಳಲಿದೆ.

ಟೀಸರ್‌ ಈ ಕುರಿತು ಯಾವ ಮಾಹಿತಿಯನ್ನು ನೀಡುತ್ತದೆ?

View this post on Instagram

A post shared by Pratap Bose (@pratapbose_)

ಇದರ ಚಿತ್ರವು ಟಾಪ್‌ ಆಂಗಲ್‌ ನಿಂದ BE 05 ಅನ್ನು ತೋರಿಸುತ್ತಿದ್ದು, ಮುಂದಿನ ಮತ್ತು ಹಿಂದಿನ ವಿನ್ಯಾಸದ ಸೀಮಿತ ವ್ಯೂ ಅನ್ನು ಮಾತ್ರವೇ ಇಲ್ಲಿ ಕಾಣಬಹುದು.

ಬಾನೆಟ್‌ ವಿನ್ಯಾಸವು, ಕಾನ್ಸೆಪ್ಟ್‌ ವರ್ಶನ್‌ ನಂತೆಯೇ, ಬೋಲ್ಡ್‌ ಕ್ರೀಸುಗಳೊಂದಿಗೆ ಅಪ್‌ ರೈಟ್‌ ಸ್ಟಾನ್ಸ್‌ ಅನ್ನು ಹೊಂದಿದೆ. ಇದು ದೊಡ್ಡದಾದ LED DRL ಗಳನ್ನು ಹೊಂದಿರಬಹುದಾದ ಫುಲ್‌ ಲೆಂಗ್ತ್‌ ಗ್ಲಾಸ್‌ ಬ್ಲ್ಯಾಕ್‌ ಅಪ್ಲಿಕೆಯನ್ನು ಹೊಂದಿದೆ.

ಮಹೀಂದ್ರಾದ ಫಿಕ್ಸ್ಡ್‌ ಗ್ಲಾಸ್‌ ರೂಫ್‌ ಹೊಂದಿರುವ ಮೊದಲ ವಾಹನ ಇದಾಗಿದ್ದು, ಕ್ಯಾಬಿನಿನ ಬಹುಪಾಲು ಸ್ಥಳವನ್ನು ಇದು ಆವರಿಸಲಿದೆ. XUV700 ಆವೃತ್ತಿಯಲ್ಲಿ ಇರುವಂತೆಯೇ BE 05 ನ ಬಾಗಿಲುಗಳು ಫ್ಲಶ್‌ ಡೋರ್‌ ಹ್ಯಾಂಡಲ್‌ ಗಳನ್ನು ಹೊಂದಿರಲಿವೆ. ಅಂತಿಮವಾಗಿ, ಸ್ಪಾಯ್ಲರ್‌ ಮತ್ತು C ಆಕಾರದ LED ಟೇಲ್‌ ಲೈಟುಗಳೊಂದಿಗೆ, ಈ ವಾಹನದ ಬೂಟ್‌ ಲಿಡ್‌, ಸದೃಢ ನೋಟವನ್ನು ಹೊಂದಿದೆ.

ಇದರ ಒಳಾಂಗಣವು ಸಹ ಡ್ಯುವಲ್‌ ಇಂಟಗ್ರೇಟೆಡ್‌ ಡಿಸ್ಪ್ಲೇ ಸ್ಕ್ರೀನ್‌ ಗಳ ಜೊತೆಗೆ ಸಾಕಷ್ಟು ಅತ್ಯಾಧುನಿಕ ಮತ್ತು ಪ್ರೀಮಿಯಂ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಉತ್ಪಾದನೆಗೆ ಸಿದ್ಧವಾಗಿರುವ BE 05 ಆವೃತ್ತಿಯ ಕ್ಯಾಬಿನ್‌ ಸಹ ಕಾನ್ಸೆಪ್ಟ್‌ ವರ್ಶನ್‌ ನಂತೆಯೇ ಕಾಣಿಸಿಕೊಳ್ಳುತ್ತದೆ.

ಇದನ್ನು ಸಹ ಓದಿರಿ: ಈ 15 ಚಿತ್ರಗಳ ಮೂಲಕ ಮಹೀಂದ್ರಾ ಥಾರ್‌ EV ವಾಹನದ ನೋಟವನ್ನು ಸವಿಯಿರಿ

ಇಲ್ಲಿಯತನಕ ನಮಗೇನು ತಿಳಿದಿದೆ...

ಮಹೀಂದ್ರಾ BE 05 ವಾಹನವು ಈ SUV ತಯಾರಕ ಸಂಸ್ಥೆಯ Ev-ಸ್ಪೆಸಿಫಿಕ್‌ INGLO ಪ್ಲಾಟ್‌ ಫಾರ್ಮ್‌ ಅನ್ನು ಆಧರಿಸಿದೆ. ಸುಮಾರು 450 ಕಿಲೋಮೀಟರ್‌ ಶ್ರೇಣಿಯೊಂದಿಗೆ 60kWh ಬ್ಯಾಟರಿ ಪ್ಯಾಕ್‌ ನೊಂದಿಗೆ ಮಾರುಕಟ್ಟೆಗೆ ಬಿಡುಗಡೆಯಾಗುವ ನಿರೀಕ್ಷೆ ಇದೆ. ಇದರಿಂದಾಗಿ 175 kW ತನಕ ವೇಗದ ಚಾರ್ಜಿಂಗ್‌ ಸಾಧ್ಯವಿದ್ದು, ಕೇವಲ 30 ನಿಮಿಷಗಳಲ್ಲಿ EV ಯನ್ನು 5 ರಿಂದ 80 ಶೇಕಡಾದ ತನಕ ಕೊಂಡೊಯ್ಯಲಿದೆ ಎಂದು ಮಹೀಂದ್ರಾ ಸಂಸ್ಥೆಯು ಹೇಳಿಕೊಂಡಿದೆ.

INGLO ಪ್ಲಾಟ್‌ ಫಾರ್ಮ್‌, ಫ್ರಂಟ್‌, ರಿಯರ್‌ ಮತ್ತು ಆಲ್-ವೀಲ್‌ ಡ್ರೈವ್‌ ಟ್ರೇನ್‌ ಗಳನ್ನು ಹೊಂದಿರುವ ಸಾಮರ್ಥ್ಯವನ್ನು ಹೊಂದಿದೆ. ಮಹೀಂದ್ರಾದ ಪ್ರಕಾರ, ರಿಯರ್‌ ವೀಲ್‌ ಡ್ರೈವ್‌ ಮಾದರಿಗಳು 285PS ತನಕ ಕಾರ್ಯಕ್ಷಮತೆಯನ್ನು ಒದಗಿಸಿದರೆ, AWD ಯು 394PS ತನಕ ಒದಗಿಸಬಲ್ಲದು.

ಇದನ್ನು ಸಹ ಓದಿರಿ: ಈ ಹತ್ತು ಚಿತ್ರಗಳ ಮೂಲಕ ಮಹೀಂದ್ರಾ ಗ್ಲೋಬಲ್‌ ಪಿಕಪ್‌ ವಾಹನವನ್ನು ಗಮನಿಸಿ

ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು

BE 05 ವಾಹನವು ಸುಮಾರು ರೂ. 25 ಲಕ್ಷಕ್ಕೆ (ಎಕ್ಸ್-ಶೋರೂಂ) ದೊರೆಯಲಿದ್ದು, MG ZS EV ಕಾರಿಗೆ ಪ್ರತಿಸ್ಪರ್ಧೆ ನೀಡಲಿದೆ ಎಂಬುದು ನಮ್ಮ ಅಂಬೋಣ. ಆದರೆ ಇದು ಮುಂಬರುವ ಹ್ಯುಂಡೈ ಕ್ರೆಟಾ EV ಮತ್ತು ಟಾಟಾ ಕರ್ವ್ Evಯಿಂದಲೂ ಸ್ಪರ್ಧೆ ಎದುರಿಸಲಿದೆ.

t
ಅವರಿಂದ ಪ್ರಕಟಿಸಲಾಗಿದೆ

tarun

  • 28 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಮಹೀಂದ್ರ BE 05

Read Full News

explore ಇನ್ನಷ್ಟು on ಮಹೀಂದ್ರ be 05

ಮಹೀಂದ್ರ be 05

Rs.24 ಲಕ್ಷ* Estimated Price
ಅಕ್ಟೋಬರ್ 15, 2025 Expected Launch
ಟ್ರಾನ್ಸ್ಮಿಷನ್ಆಟೋಮ್ಯಾಟಿಕ್‌
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
Rs.10.99 - 15.49 ಲಕ್ಷ*
Rs.60.95 - 65.95 ಲಕ್ಷ*
Rs.7.99 - 11.89 ಲಕ್ಷ*
Rs.6.99 - 9.40 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ