Hyundai Creta EV 2025 ರಲ್ಲಿ ಮಾರುಕಟ್ಟೆಗೆ ಬರುವ ಸಾದ್ಯತೆ, ಇದಕ್ಕೆ ಕಾರಣಗಳು ಇಲ್ಲಿವೆ
ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಗಾಗಿ rohit ಮೂಲಕ ಏಪ್ರಿಲ್ 29, 2024 04:10 pm ರಂದು ಪ್ರಕಟಿಸಲಾಗಿದೆ
- 26 Views
- ಕಾಮೆಂಟ್ ಅನ್ನು ಬರೆಯಿರಿ
2024 ರ ಅಂತ್ಯದ ವೇಳೆಗೆ ಭಾರತಕ್ಕಾಗಿ ತನ್ನ ಅತ್ಯಂತ ಕೈಗೆಟುಕುವ ಬೆಲೆಯ ಎಲೆಕ್ಟ್ರಿಕ್ SUV ಅನ್ನು ತಯಾರಿಸಲು ಪ್ರಾರಂಭಿಸುವುದಾಗಿ ಹುಂಡೈ ಘೋಷಿಸಿದೆ.
- ಈ ಮೇಡ್-ಇನ್-ಇಂಡಿಯಾ ಎಲೆಕ್ಟ್ರಿಕ್ SUV ಅನ್ನು ಚೆನ್ನೈ ಘಟಕದಲ್ಲಿ ತಯಾರಿಸಲಾಗುವುದು.
- 2030 ರ ವೇಳೆಗೆ ಭಾರತದಲ್ಲಿ ಇನ್ನೂ ಐದು ಎಲೆಕ್ಟ್ರಿಕ್ ಕಾರು ಮಾಡೆಲ್ ಗಳನ್ನು ತಯಾರಿಸಲು ಹುಂಡೈ ನೋಡುತ್ತಿದೆ.
- ಕಾರು ತಯಾರಕರು 2021 ರಲ್ಲಿ ಮೊದಲ ಬಾರಿಗೆ ಭಾರತಕ್ಕೆ ಸ್ಥಳೀಯವಾಗಿ ಮತ್ತು ಕೈಗೆಟುಕುವ ಬೆಲೆಯ EV ತಯಾರಿಸುವ ಯೋಜನೆಗಳನ್ನು ಘೋಷಿಸಿದರು.
- ಈಗಾಗಲೇ ಹಲವು ಬಾರಿ ಫೋಟೋಗಳು ಲೀಕ್ ಆಗಿರುವ ಕಾರಣ ಇದು ಕ್ರೆಟಾ EV ಎಂದು ನಿರೀಕ್ಷಿಸಲಾಗಿದೆ.
- ಕ್ರೆಟಾ EV ಯ ಪವರ್‌ಟ್ರೇನ್ ವಿವರಗಳ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ, ಆದರೆ ಇದು 400 ಕಿಮೀಗಿಂತ ಹೆಚ್ಚಿನ ರೇಂಜ್ ಅನ್ನು ನೀಡುವ ಸಾಧ್ಯತೆಯಿದೆ.
- ಭಾರತದಲ್ಲಿ ಇದು 2025 ಕ್ಕೆ ಮಾರುಕಟ್ಟೆಗೆ ಬರಲಿದೆ ಮತ್ತು ಬೆಲೆಯು ರೂ. 20 ಲಕ್ಷದಿಂದ ಪ್ರಾರಂಭವಾಗಬಹುದು (ಎಕ್ಸ್ ಶೋರೂಂ).
ಕೊರಿಯಾದ ಹುಂಡೈನ ಮೇಲ್ಮಟ್ಟದ ಅಧಿಕಾರಿಗಳು ಭಾರತದಲ್ಲಿನ ತಮ್ಮ ಕಚೇರಿಗಳಿಗೆ ಇತ್ತೀಚೆಗೆ ಭೇಟಿ ನೀಡಿದ್ದಾರೆ. ಭಾರತದಲ್ಲಿ ಹ್ಯುಂಡೈ ಯಾವ ರೀತಿಯ ಕಾರುಗಳನ್ನು ನೀಡಲಿದೆ ಮತ್ತು ವಿಶೇಷವಾಗಿ ಎಲೆಕ್ಟ್ರಿಕ್ ಕಾರುಗಳ ಬಗ್ಗೆ ತಮ್ಮ ಯೋಜನೆಗಳನ್ನು ಹಂಚಿಕೊಂಡರು. 2024 ರ ಅಂತ್ಯದ ವೇಳೆಗೆ ಚೆನ್ನೈ ಪ್ಲಾಂಟ್ ನಲ್ಲಿ ತನ್ನ ಮೊದಲ ಭಾರತದಲ್ಲಿ ಸ್ಥಳೀಯವಾಗಿ ತಯಾರಿಸಲಾಗುವ ಎಲೆಕ್ಟ್ರಿಕ್ SUV ಅನ್ನು ತಯಾರಿಸಲು ಪ್ರಾರಂಭಿಸುವುದಾಗಿ ಕಾರ್ ಕಂಪನಿ ದೃಢಪಡಿಸಿದೆ. ಯಾವ ಮಾಡೆಲ್ ತಯಾರಿಸುತ್ತಿದೆ ಎಂದು ಹೇಳದಿದ್ದರೂ ಕೂಡ, ಇದು ಹುಂಡೈ ಕ್ರೆಟಾ EV ಆಗಿರಬಹುದು ಎಂದು ನಾವು ಭಾವಿಸುತ್ತೇವೆ. ಏಕೆಂದರೆ ಕಂಪನಿಯು ದಕ್ಷಿಣ ಕೊರಿಯಾದಲ್ಲಿ ಇದನ್ನು ಟೆಸ್ಟ್ ಮಾಡುತ್ತಿದೆ ಮತ್ತು ಕೆಲವು ಟೆಸ್ಟ್ ಕಾರುಗಳನ್ನು ಭಾರತದಲ್ಲಿ ಕೂಡ ನೋಡಲಾಗಿದೆ.
ಹ್ಯುಂಡೈನ ಮೊಟ್ಟ ಮೊದಲ ಭಾರತದಲ್ಲಿ ಸ್ಥಳೀಯವಾಗಿ ತಯಾರಿಸಿದ EV
ಹ್ಯುಂಡೈ 2019 ರಲ್ಲಿ ಕೋನಾ ಎಲೆಕ್ಟ್ರಿಕ್ ಅನ್ನು ಬಿಡುಗಡೆ ಮಾಡುವ ಮೂಲಕ ಭಾರತದಲ್ಲಿ ಒಂದು ಕೈಗೆಟಕುವ ಬೆಲೆಯ ಎಲೆಕ್ಟ್ರಿಕ್ SUV ಅನ್ನು ತಂದ ಮೊದಲ ದೊಡ್ಡ ಕಾರ್ ಬ್ರಾಂಡ್ ಆಗಿದೆ. ಆದರೆ ಇದು ಭಾಗಶಃ ಆಮದು ಮಾಡಿಕೊಂಡು ಸ್ಥಳೀಯವಾಗಿ ಮಾತ್ರ ಜೋಡಿಸಲ್ಪಟ್ಟಿದ್ದರಿಂದ, ಹೆಚ್ಚಿನ ಸಾಮಾನ್ಯ ಜನರಿಗೆ ಇದು ತುಂಬಾ ದುಬಾರಿ ಕಾರಾಗಿತ್ತು. ಟಾಟಾ ನೆಕ್ಸಾನ್ EV ಯ ಯಶಸ್ಸಿನ ನಂತರ, ಹ್ಯುಂಡೈ ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಎಲೆಕ್ಟ್ರಿಕ್ ಕಾರನ್ನು ತಯಾರಿಸಲು ನಿರ್ಧರಿಸಿತು. ಹ್ಯುಂಡೈ 2028 ರ ವೇಳೆಗೆ ಆರು EV ಗಳೊಂದಿಗೆ ಭಾರತದಲ್ಲಿ ಹೆಚ್ಚು ಸ್ಥಳೀಯವಾಗಿ EV ಯನ್ನು ತಯಾರಿಸುವ ಯೋಜನೆಯನ್ನು 2021 ರಲ್ಲಿ ತಿಳಿಸಿತು. ಬ್ರ್ಯಾಂಡ್‌ನ ಯಶಸ್ವಿ ICE ಮಾಡೆಲ್ ಗಳ ಜೊತೆಗೆ EV ಕಾರುಗಳು ಕೂಡ ಪಟ್ಟಿಯಲ್ಲಿ ಒಳಗೊಂಡಿರುತ್ತದೆ ಎಂದು ನಿರೀಕ್ಷಿಸಲಾಗಿತ್ತು.
ಕೈಗೆಟುಕುವ ಬೆಲೆಯ ಸಬ್-4m ಎಲೆಕ್ಟ್ರಿಕ್ SUV ಯೊಂದಿಗೆ ಟಾಟಾ ಯಶಸ್ಸನ್ನು ಸಾಧಿಸಿರುವ ಕಾರಣ, ಅದರೊಂದಿಗೆ ಸ್ಪರ್ಧಿಸಲು ಅದೇ ಬೆಲೆಯಲ್ಲಿ ಹ್ಯುಂಡೈ ತನ್ನ ವೆನ್ಯೂ EV ಅನ್ನು ಹೊರತರಬಹುದು ಎಂದು ನಾವು ನಿರೀಕ್ಷಿಸಿದ್ದೆವು. ಆದರೆ ಚಿಕ್ಕದಾದ ಎಲೆಕ್ಟ್ರಿಕ್ ಕಾರುಗಳಿಗೆ ತೆರಿಗೆ ಪ್ರಯೋಜನವಿಲ್ಲದ ಕಾರಣ, ಇಷ್ಟು ವರ್ಷಗಳಿಂದ ಯಶಸ್ವಿಯಾಗಿ ಮಾರಾಟ ಮಾಡಿರುವ ಸೆಗ್ಮೆಂಟ್ ಆಗಿರುವ ಕಾಂಪ್ಯಾಕ್ಟ್ SUV ಮೇಲೆ ಹ್ಯುಂಡೈ ಕೇಂದ್ರೀಕರಿಸುವುದು ಹೆಚ್ಚು ಸೂಕ್ತವಾಗಿತ್ತು.
ಎಲ್ಲರಿಗೂ ಈಗಾಗಲೇ ಗೊತ್ತಿರುವ ರಹಸ್ಯ: ಭಾರತಕ್ಕಾಗಿ ಕ್ರೆಟಾ ಎಲೆಕ್ಟ್ರಿಕ್ ಕಾರ್
ಭಾರತದಲ್ಲಿ ಹ್ಯುಂಡೈ ತನ್ನ ಎಲೆಕ್ಟ್ರಿಕ್ SUVಯನ್ನು ತಯಾರಿಸಲಿದೆ ಎಂದು ಖಚಿತಪಡಿಸಿದ್ದರೂ ಕೂಡ, ಅದು ಯಾವ ಮಾಡೆಲ್ ಎಂದು ಇನ್ನೂ ಬಹಿರಂಗಪಡಿಸಿಲ್ಲ. ಆದರೆ ಭಾರತ ಮತ್ತು ಕೊರಿಯಾದಲ್ಲಿ ಲೀಕ್ ಆಗಿರುವ ಫೋಟೋಗಳಿಂದ, ಇದು ಹ್ಯುಂಡೈ ಕ್ರೆಟಾದ ಎಲೆಕ್ಟ್ರಿಕ್ ವರ್ಷನ್ ಎಂದು ಬಹುತೇಕ ಖಚಿತವಾಗಿದೆ.
ಹ್ಯುಂಡೈ ವೆನ್ಯೂ ಬದಲಿಗೆ ಕ್ರೆಟಾವನ್ನು ತನ್ನ ಮೊದಲ ಎಲೆಕ್ಟ್ರಿಕ್ ಕಾರ್ ಆಗಿ ಆಯ್ಕೆ ಮಾಡಲು ಹಲವಾರು ಕಾರಣಗಳಿವೆ. ಮೊದಲನೆಯದಾಗಿ, ಇದು ವೆನ್ಯೂಗೆ ಹೋಲಿಸಿದರೆ ಹೆಚ್ಚು ದುಬಾರಿಯಾಗಿದ್ದರೂ ಕೂಡ ಹೆಚ್ಚಿನ ಜನರು ಕ್ರೆಟಾವನ್ನು ಇಷ್ಟಪಡುತ್ತಾರೆ ಮತ್ತು ಖರೀದಿಸುತ್ತಾರೆ. ಕ್ರೆಟಾ ಕಳೆದ ಸುಮಾರು ಹತ್ತು ವರ್ಷಗಳಿಂದ ಭಾರತದ ಮಾರುಕಟ್ಟೆಯಲ್ಲಿ ಓಡುತ್ತಿದೆ ಮತ್ತು ಒಂದು ಮಿಲಿಯನ್‌ಗಿಂತಲೂ ಹೆಚ್ಚು SUV ಗಳನ್ನು ಮಾರಾಟ ಮಾಡಲಾಗಿದೆ, ಹಾಗಾಗಿ ಇದು ಜನಪ್ರಿಯವಾಗಿದೆ.
ಟಾಟಾ ನೆಕ್ಸಾನ್ EV ಈಗಾಗಲೇ ರೂ 15 ಲಕ್ಷಕ್ಕಿಂತ ಕಡಿಮೆ ಬೆಲೆಯ ಎಲೆಕ್ಟ್ರಿಕ್ SUV ಗಳ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಹೊಂದಿರುವುದರಿಂದ, ಈ ಸ್ಪರ್ಧಾತ್ಮಕ ಬೆಲೆಯಲ್ಲಿ ತನ್ನದೇ ಆದ ಸಣ್ಣ ಎಲೆಕ್ಟ್ರಿಕ್ SUV ಅನ್ನು ಪರಿಚಯಿಸುವುದು ಹ್ಯುಂಡೈಗೆ ಹೆಚ್ಚು ಕಷ್ಟಕರವಾಗಿತ್ತು. ಆದರೆ ಕ್ರೆಟಾವನ್ನು ಎಲೆಕ್ಟ್ರಿಕ್ ಕಾಂಪ್ಯಾಕ್ಟ್ SUVಯನ್ನಾಗಿ ಮಾರುಕಟ್ಟೆಗೆ ತರುವ ಮೂಲಕ, ಹ್ಯುಂಡೈ ಆ ಸೆಗ್ಮೆಂಟ್ ನಲ್ಲಿ ಇತರ ಜನಪ್ರಿಯ ಬ್ರ್ಯಾಂಡ್‌ಗಳೊಂದಿಗೆ ನೇರವಾಗಿ ಸ್ಪರ್ಧಿಸಬಹುದು. ಈ ಸೆಗ್ಮೆಂಟ್ ಮುಂದಿನ ವರ್ಷದಲ್ಲಿ ಹೆಚ್ಚು ಜನಪ್ರಿಯವಾಗಲಿದೆ ಏಕೆಂದರೆ ಟಾಟಾ ಕರ್ವ್ EV ಮತ್ತು ಮಾರುತಿ eVX ನಂತಹ ಹೊಸ ಮಾಡೆಲ್ ಗಳು ಈ ವರ್ಷದ ಅಂತ್ಯದ ವೇಳೆಗೆ ಬರುವ ನಿರೀಕ್ಷೆಯಿದೆ. ಸಿಟ್ರೊಯೆನ್ ಕೂಡ ಇದೇ ಸಮಯದಲ್ಲಿ ತನ್ನ ಸಣ್ಣ ಎಲೆಕ್ಟ್ರಿಕ್ ಕಾರನ್ನು ಮಾರುಕಟ್ಟೆಗೆ ತರಲಿದೆ.
ಕ್ರೆಟಾ EV ಇಲ್ಲಿ ಉತ್ತಮ ಆಯ್ಕೆಯಾಗಲಿದೆ, ಏಕೆಂದರೆ ಕ್ರೆಟಾದ ಸಾಮಾನ್ಯ ವರ್ಷನ್ ಗೆ ಹೊಸ ಲುಕ್ ಮತ್ತು ಕೆಲವು ಫೀಚರ್ ಗಳನ್ನು ನೀಡುವ ಮೂಲಕ ಫೇಸ್ ಲಿಫ್ಟ್ ಮಾಡಲಾಗಿದೆ. ಆದ್ದರಿಂದ, ಖರೀದಿದಾರರಿಗೆ EV ಮಾಡೆಲ್ ಹೊಸತನವನ್ನು ನೀಡಲಿದೆ.
ಇದನ್ನು ಕೂಡ ಓದಿ: ಬಿಡುಗಡೆಗೆ ಮುಂಚೆಯೇ ಹ್ಯುಂಡೈ ಕ್ರೆಟಾ EV ಕ್ಯಾಬಿನ್ ವಿವರಗಳು ಲೀಕ್, ಹೊಸ ಸ್ಟೀರಿಂಗ್ ಮತ್ತು ಡ್ರೈವ್ ಸೆಲೆಕ್ಟರ್ ಸೇರ್ಪಡೆ
ನಿರೀಕ್ಷಿಸಲಾಗಿರುವ ಎಲೆಕ್ಟ್ರಿಕ್ ಪವರ್‌ಟ್ರೇನ್
ಕ್ರೆಟಾ EV ಯ ಬ್ಯಾಟರಿ ಮತ್ತು ಎಲೆಕ್ಟ್ರಿಕ್ ಮೋಟರ್ ಬಗ್ಗೆ ನಮಗೆ ಇನ್ನೂ ನಿಖರವಾದ ವಿವರಗಳು ತಿಳಿದಿಲ್ಲ, ಆದರೆ ಇದು ಒಂದು ಚಾರ್ಜ್‌ನಲ್ಲಿ 400 ಕಿಲೋಮೀಟರ್‌ಗಳಿಗಿಂತ ಹೆಚ್ಚು ಓಡುವ ಸಾಧ್ಯತೆಯಿದೆ ಎಂದು ನಾವು ಭಾವಿಸುತ್ತೇವೆ. ಪ್ರಪಂಚದಾದ್ಯಂತ ಇರುವ ಇತರ ಹ್ಯುಂಡೈ ಎಲೆಕ್ಟ್ರಿಕ್ ಕಾರುಗಳು ಮತ್ತು ಭಾರತದಲ್ಲಿನ ಅದರ ಕೆಲವು ಪ್ರತಿಸ್ಪರ್ಧಿಗಳಂತೆ ಇದು ವಿಭಿನ್ನ ಬ್ಯಾಟರಿ ಆಯ್ಕೆಗಳನ್ನು ಪಡೆಯಬಹುದು.
ಈ ಹ್ಯುಂಡೈ ಎಲೆಕ್ಟ್ರಿಕ್ ಕಾರು ಐಯೋನಿಕ್ 5 ನಂತಹ ಹ್ಯುಂಡೈನ ಇತರ ಹೊಸ ಎಲೆಕ್ಟ್ರಿಕ್ ಕಾರುಗಳಲ್ಲಿ ಈಗಾಗಲೇ ಇರುವ E-GMP ಪ್ಲಾಟ್‌ಫಾರ್ಮ್ ಅನ್ನು ಬಹುಶಃ ಬಳಸುವುದಿಲ್ಲ.
ಇದರ ನಿರೀಕ್ಷಿಸಲಾಗಿರುವ ಬೆಲೆ?
ಹುಂಡೈ ಕ್ರೆಟಾ EV ಬೆಲೆಯು ರೂ 20 ಲಕ್ಷದಿಂದ (ಎಕ್ಸ್ ಶೋರೂಂ) ಶುರುವಾಗಬಹುದು. ಕ್ರೆಟಾ EVಯು MG ZS EV ಗೆ ಪ್ರತಿಸ್ಪರ್ಧಿಯಾಗಲಿದೆ ಮತ್ತು ಟಾಟಾ ನೆಕ್ಸಾನ್ EV ಮತ್ತು ಮಹೀಂದ್ರ XUV400 ಗೆ ಪ್ರೀಮಿಯಂ ಆಗಿರುವ ಪರ್ಯಾಯ ಆಯ್ಕೆಯಾಗಲಿದೆ. ಕ್ರೆಟಾ EV ಯೊಂದಿಗೆ ಮಾರುಕಟ್ಟೆಯಲ್ಲಿ ಸ್ಪರ್ಧಿಸಲಿರುವ ಮುಂಬರುವ ಕಾರುಗಳಲ್ಲಿ ಟಾಟಾ ಕರ್ವ್ EV (2024 ರ ಮೊದಲ ಭಾಗದಲ್ಲಿ ಬರಲಿದೆ) ಮತ್ತು ಮಾರುತಿ eVX (2025 ರ ಆರಂಭದಲ್ಲಿ ಬರಲಿದೆ) ಸೇರಿವೆ.
ಕ್ರೆಟಾ EV ನಂತರ, ಹ್ಯುಂಡೈ ಭಾರತದಲ್ಲಿ ಇನ್ನಷ್ಟು ಎಲೆಕ್ಟ್ರಿಕ್ ಕಾರುಗಳನ್ನು ತಯಾರಿಸಲಿದೆ. 2030 ರ ವೇಳೆಗೆ ಭಾರತದಲ್ಲಿ 5 ಎಲೆಕ್ಟ್ರಿಕ್ ಮಾಡೆಲ್ ಗಳನ್ನು ಮಾರುಕಟ್ಟೆಗೆ ತರುವ ಯೋಜನೆಯನ್ನು ಕಂಪನಿ ಹೊಂದಿದೆ.
ಇನ್ನಷ್ಟು ಓದಿ: ಹ್ಯುಂಡೈ ಕ್ರೆಟಾ ಆನ್ ರೋಡ್ ಬೆಲೆ