ಟೊಯೊಟಾ ಇನ್ನೋವಾ ಹೈಕ್ರಾಸ್-ಆಧಾರಿತ ಮಾರುತಿ ಎಂಗೇಜ್ MPVಯ ಮೊದಲ ನೋಟ
ಮಾರುತಿಯ ಮುಂಬರುವ MPV ಕಾರಿಗೆ 'ಎಂಗೇಜ್' ಎಂದು ಹೆಸರಿಸಲಾಗಿದೆ ಮತ್ತು ಜುಲೈ 5 ರಂದು ಈ ವಾಹನ ಅನಾವರಣಗೊಳ್ಳಲಿದೆ.
-
ಹೈಕ್ರಾಸ್‌ಗೆ ಹೋಲಿಸಿದರೆ ಮಾರುತಿ MPV ಕಾರಿನಲ್ಲಿ ಹಲವು ಸಣ್ಣಪುಟ್ಟ ಬದಲಾವಣೆಗಳನ್ನು ಕಾಣಬಹುದಾಗಿದೆ.
-
ಇದು ಹೊಸ ನೆಕ್ಸಾ ಪ್ರೇರಿತ ಗ್ರಿಲ್, ಹೊಸ ಅಲಾಯ್ ವ್ಹೀಲ್‌ಗಳು ಮತ್ತು ಎಲ್‌ಇಡಿ ಟೈಲ್‌ಲ್ಯಾಂಪ್‌ಗಳಲ್ಲಿ ಹೊಸ ಡಿಟೇಲಿಂಗ್ ಅನ್ನು ಪಡೆಯುತ್ತದೆ.
-
ಈ MPV ಕಾರಿನಲ್ಲಿ ವಿಹಂಗಮ ಸನ್‌ರೂಫ್, 10-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ವೆಂಟಿಲೇಟೆಡ್ ಫ್ರಂಟ್ ಸೀಟ್ ಮತ್ತು ಡ್ಯುಯಲ್-ಝೋನ್ ಎಸಿಯಂತಹ ಫೀಚರ್‌ಗಳನ್ನು ಒದಗಿಸಲಾಗುವುದು.
-
ರಾಡಾರ್ ಆಧಾರಿತ ADAS ತಂತ್ರಜ್ಞಾನವನ್ನು ಪಡೆಯುವ ಪ್ರಥಮ ಮಾರುತಿ ಕಾರು ಇದಾಗಿದೆ.
-
ಇನ್ನೋವಾ ಕಾರಿನೊಂದಿಗೆ 2-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ನೀಡಲಾಗುವುದು, ಇದರೊಂದಿಗೆ ಸ್ಟ್ರಾಂಗ್-ಹೈಬ್ರಿಡ್ ತಂತ್ರಜ್ಞಾನದ ಆಯ್ಕೆಯು ಲಭ್ಯವಿರುತ್ತದೆ.
ಮಾರುತಿ ತನ್ನ ಹೊಸ MPV ಕಾರನ್ನು ಜುಲೈ 5ರಂದು ಅನಾವರಣಗೊಳಿಸಲಿದೆ. ಆದರೆ, ಇದಕ್ಕೂ ಮುನ್ನ, ಬಿಡುಗಡೆಯಾಗಲಿರುವ ಈ ಕಾರಿನ ಹೊಸ ಚಿತ್ರಗಳು ಹೊರಬಂದಿವೆ, ಇದರಲ್ಲಿ ಈ ವಾಹನವು ಕವರ್ ಇಲ್ಲದೆ ಕಾಣುತ್ತದೆ. ಇದಕ್ಕೆ 'ಮಾರುತಿ ಎಂಗೇಜ್' ಎಂದು ಹೆಸರಿಸುವ ನಿರೀಕ್ಷೆಯಿದೆ. ಇದು ಟೊಯೊಟಾ ಇನ್ನೋವಾ ಹೈಕ್ರಾಸ್ ಕಾರಿನ ರೀಬ್ಯಾಡ್ಜ್ ಆವೃತ್ತಿಯಾಗಲಿದೆ.
ಸ್ಪೈ ಶಾಟ್‌ಗಳಲ್ಲಿ, ಹೈಕ್ರಾಸ್‌ಗೆ ಹೋಲಿಸಿದರೆ ಮಾರುತಿಯ ಈ ಎಂಪಿವಿ ಕಾರಿನಲ್ಲಿ ಅನೇಕ ಸಣ್ಣ ಬದಲಾವಣೆಗಳು ಗೋಚರಿಸುತ್ತವೆ. ಮುಂಭಾಗದಲ್ಲಿ, ಇದು ನೆಕ್ಸಾ-ಪ್ರೇರಿತ ಕ್ರೋಮ್ ಗ್ರಿಲ್ ಅನ್ನು ಪಡೆಯುತ್ತದೆ. ಇದರ ಮುಂಭಾಗದ ಪ್ರೊಫೈಲ್ (ಗ್ರಿಲ್ ಹೊರತುಪಡಿಸಿ) ಟೊಯೋಟಾ MPV ಯನ್ನು ಹೋಲುತ್ತದೆ.
ಸಂಬಂಧಿತ: ಸಿಡಿ ಸ್ಪೀಕ್: ಮಾರುತಿಯಿಂದ ಶೀಘ್ರದಲ್ಲೇ ಹೊಸ ಎಂಪಿವಿ ಕಾರು ಬಿಡುಗಡೆ, ಇದರ ಬೆಲೆ 30 ಲಕ್ಷಕ್ಕಿಂತ ಹೆಚ್ಚಿರುವ ಸಾಧ್ಯತೆ
ಮಾರುತಿ MPV ಯ ಹಲವಾರು ಚಿತ್ರಗಳು ಲಭ್ಯವಾಗಿವೆ, ಅದರಲ್ಲಿ ಒಂದರಲ್ಲಿ ಮಾಡೆಲ್ ಹೊಸದಾಗಿ ವಿನ್ಯಾಸಗೊಳಿಸಲಾದ ಅಲಾಯ್ ವ್ಹೀಲ್‌ಗಳನ್ನು ಹೊಂದಿರುವುದು ಕಂಡುಬರುತ್ತದೆ. ಬಿಡುಗಡೆಯಾಗಲಿರುವ ಈ ಕಾರಿನಲ್ಲಿ ಹೊಸ ವಿನ್ಯಾಸದ ಅಲಾಯ್ ವ್ಹೀಲ್‌ಗಳನ್ನು ನೀಡಬಹುದು ಎಂದು ಅಂದಾಜಿಸಲಾಗಿದೆ. ನೆಕ್ಸಾ-ಪ್ರೇರಿತ ಟೈಲ್‌ಲ್ಯಾಂಪ್ ವಿನ್ಯಾಸವನ್ನು ಹೊರತುಪಡಿಸಿ ವಾಹನದ ಸೈಡ್ ಮತ್ತು ರಿಯರ್ ಪ್ರೊಫೈಲ್ ಟೊಯೋಟಾ MPV ಯಂತೆಯೇ ಗೋಚರಿಸುತ್ತದೆ.
ಈ MPV ಕಾರಿನ ಇಂಟೀರಿಯರ್ ಸ್ಟೈಲಿಂಗ್ ಹೈಕ್ರಾಸ್ ಮಾದರಿಯಲ್ಲೇ ಇರಲಿದೆ. ಕ್ಯಾಬಿನ್ ಒಳಗೆ, ಇದು ಡ್ಯುಯಲ್-ಟೋನ್ ಶೇಡ್ ಅನ್ನು ಪಡೆಯುತ್ತದೆ ಮತ್ತು ಅದರ ಫೀಚರ್‌ಗಳು ಹೈಕ್ರಾಸ್‌ನಂತೆಯೇ ಇರಲಿವೆ. ಇದು ವಿಹಂಗಮ ಸನ್‌ರೂಫ್, 10-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಮತ್ತು ಎರಡನೇ ಸಾಲಿಗೆ ಚಾಲಿತ ಒಟ್ಟೋಮನ್ ಸೀಟುಗಳನ್ನು ಪಡೆಯುತ್ತದೆ. ಸುರಕ್ಷತೆಗಾಗಿ, ಇದು ಆರು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, TPMS ಮತ್ತು ADAS ನಂತಹ ಫೀಚರ್‌ಗಳನ್ನು ನೀಡಲಾಗಿದೆ.
ಇದು ಹೈಕ್ರಾಸ್‌ನ 2-ಲೀಟರ್ ಪೆಟ್ರೋಲ್ ಎಂಜಿನ್ ಅನ್ನೇ ಪಡೆದುಕೊಂಡಿದೆ, ಇದು ಸ್ಟ್ರಾಂಗ್-ಹೈಬ್ರಿಡ್ ತಂತ್ರಜ್ಞಾನವನ್ನು ಆಯ್ಕೆಯಾಗಿ ಪಡೆಯುತ್ತದೆ. MPV ಯ ಹೈಬ್ರಿಡ್ ಆವೃತ್ತಿಯ ಸಾಮರ್ಥ್ಯ 186PS ಆಗಿದೆ ಮತ್ತು ಇದು 23.24 km/l ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಟೊಯೊಟಾದ MPV ಕಾರು ಪೆಟ್ರೋಲ್ ಎಂಜಿನ್‌ನೊಂದಿಗೆ CVT ಗೇರ್‌ಬಾಕ್ಸ್ ಅನ್ನು ಪಡೆಯುತ್ತದೆ, ಆದರೆ e-CVT (ಸಿಂಗಲ್-ಸ್ಪೀಡ್ ಟ್ರಾನ್ಸ್‌ಮಿಷನ್) ಗೇರ್‌ಬಾಕ್ಸ್ ಹೈಬ್ರಿಡ್ ಎಂಜಿನ್‌ನೊಂದಿಗೆ ಲಭ್ಯವಿದೆ.
ಇದನ್ನೂ ಓದಿ: ಟೊಯೊಟಾ ಹಿಲಕ್ಸ್ ಆಫ್ ರೋಡ್ ಎಕ್ಸ್‌ಪೆಡಿಶನ್: ಕಾರ್ಯಕ್ಷಮತೆ ಹೇಗಿತ್ತು, ಇಲ್ಲಿ ತಿಳಿಯಿರಿ!
ಭಾರತದಲ್ಲಿ ಟೊಯೊಟಾ ಇನ್ನೋವಾ ಹೈಕ್ರಾಸ್ ಬೆಲೆ 18.55 ಲಕ್ಷ ರೂ.ದಿಂದ 29.99 ಲಕ್ಷ ರೂ.ವರೆಗೆ(ಎಕ್ಸ್ ಶೋರೂಂ) ಇದೆ. ಮಾರುತಿಯ MPV ಕಾರು ಇದೇ ಬೆಲೆಯನ್ನು ಹೊಂದಿರುವ ನಿರೀಕ್ಷೆಯಿದೆ. ಟೊಯೋಟಾದಂತೆಯೇ, ಮಾರುತಿ MPV ಯಾವುದೇ ನೇರ ಪ್ರತಿಸ್ಪರ್ಧಿಗಳನ್ನು ಹೊಂದಿರುವುದಿಲ್ಲ ಆದರೆ ಕಿಯಾ ಕಾರೆನ್ಸ್‌ಗೆ ಪ್ರೀಮಿಯಂ ಪರ್ಯಾಯವಾಗಿದೆ.
Write your Comment on Maruti ಇನ್ವಿಕ್ಟೊ
Maruti is already having a tough time keeping up with Toyota's 3 cylinder hybrid engine. Going for the bigger 4 cylinder units is asking for trouble.