• English
  • Login / Register

ಉತ್ತರಪ್ರದೇಶದಲ್ಲಿ ಸ್ಟ್ರಾಂಗ್‌ ಹೈಬ್ರಿಡ್‌ ಕಾರುಗಳ ಬೆಲೆಯನ್ನು ಕಡಿಮೆ ಮಾಡಿದ ಯೋಗಿ ಸರ್ಕಾರ; ಯಾವ ಕಾರುಗಳ ಬೆಲೆಯಲ್ಲಿ ಕಡಿತ ?

ಮಾರುತಿ ಗ್ರಾಂಡ್ ವಿಟರಾ ಗಾಗಿ ansh ಮೂಲಕ ಜುಲೈ 12, 2024 05:15 pm ರಂದು ಪ್ರಕಟಿಸಲಾಗಿದೆ

  • 46 Views
  • ಕಾಮೆಂಟ್‌ ಅನ್ನು ಬರೆಯಿರಿ

ಸ್ಟ್ರಾಂಗ್‌-ಹೈಬ್ರಿಡ್ ಕಾರುಗಳ ಮೇಲಿನ RTO ತೆರಿಗೆಯನ್ನು ಮನ್ನಾ ಮಾಡಿದ ಭಾರತದ ಮೊದಲ ರಾಜ್ಯ ಉತ್ತರಪ್ರದೇಶವಾಗಿದೆ

Uttar Pradesh Waives Off RTO Tax For Strong-hybrid Cars

ಭಾರತ ಸರ್ಕಾರದಿಂದ ಎಲೆಕ್ಟ್ರಿಕ್ ವೆಹಿಕಲ್ಸ್ (EVಗಳು)ಗಳಿಗಾಗಿ ನೀಡುವಂತಹ ಯಾವುದೇ ಉತ್ತೇಜನವನ್ನು ಸ್ಟ್ರಾಂಗ್‌ ಹೈಬ್ರಿಡ್‌ ಕಾರುಗಳು ಹೊಂದಿಲ್ಲದಿದ್ದರೂ ಇವುಗಳು ಭಾರತದಲ್ಲಿ ಮಾರುಕಟ್ಟೆ ಪಾಲನ್ನು ಸ್ಥಿರವಾಗಿ ಗಳಿಸುತ್ತಿವೆ. ಆದರೆ, ಉತ್ತರ ಪ್ರದೇಶ ಸರ್ಕಾರವು ಅವುಗಳ ಮಾರಾಟವನ್ನು ಹೆಚ್ಚಿಸಲು ಮಹತ್ತರವಾದ ಹೆಜ್ಜೆಯನ್ನೊಂದು ತೆಗೆದುಕೊಂಡಿದೆ ಮತ್ತು ಪ್ರಬಲ-ಹೈಬ್ರಿಡ್ ಮತ್ತು ಪ್ಲಗ್-ಇನ್ ಹೈಬ್ರಿಡ್ ವಾಹನಗಳಿಗಿರುವ RTO ತೆರಿಗೆಯನ್ನು ಮನ್ನಾ ಮಾಡಿದೆ. 10 ಲಕ್ಷಕ್ಕಿಂತ ಹೆಚ್ಚಿನ ಬೆಲೆಯ ಕಾರುಗಳು (ಎಕ್ಸ್ ಶೋರೂಂ) ಶೇಕಡಾ 10ರಷ್ಟು RTO ತೆರಿಗೆಯನ್ನು ಹೊಂದಿದ್ದು, ಆದರೆ ಉತ್ತರ ಪ್ರದೇಶದಲ್ಲಿ ಈ ವಾಹನಗಳ ಖರೀದಿದಾರರು ಇದನ್ನು  ಪಾವತಿಸಬೇಕಾಗಿಲ್ಲ.

ಇದನ್ನೂ ಓದಿ: ಕಂಪನಿ ಅಳವಡಿಸಿದ CNG ಆಯ್ಕೆಯೊಂದಿಗೆ ಲಭ್ಯವಿರುವ ಟಾಪ್ 10 ಅತ್ಯಂತ ಕೈಗೆಟುಕುವ ಕಾರುಗಳು

ಸಮೂಹ ಮಾರುಕಟ್ಟೆಯಲ್ಲಿ, 5 ಸ್ಟ್ರಾಂಗ್-ಹೈಬ್ರಿಡ್ ಕಾರುಗಳಿದ್ದು, ಇವುಗಳ ಬೆಲೆ 10 ಲಕ್ಷಕ್ಕಿಂತ ಹೆಚ್ಚು ಇದ್ದು (ಎಕ್ಸ್ ಶೋರೂಂ), ಮತ್ತು ನೀವು ಈ ಕಾರುಗಳಲ್ಲಿ ಒಂದನ್ನು ಖರೀದಿಸಲು ಯೋಜಿಸುತ್ತಿದ್ದರೆ, ನೀವು ಉತ್ತರ ಪ್ರದೇಶದಲ್ಲಿ 3.1 ಲಕ್ಷದವರೆಗೆ ಉಳಿಸಬಹುದು.

ಗಮನಿಸಿ: ಈ ಯೋಜನೆಯು ಭಾರತದಾದ್ಯಂತ ಲಭ್ಯವಿಲ್ಲ, ಆದರೆ ಉತ್ತರ ಪ್ರದೇಶದ ಜನರು 600 ಮತ್ತು 1,500 ರೂಪಾಯಿಗಳ ನೋಂದಣಿ ಮತ್ತು ಹೈಪೋಥೆಕೇಶನ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಟೊಯೋಟಾ ಹೈರೈಡರ್‌

Toyota Hyryder

ಲಕ್ನೋದಲ್ಲಿ ಸ್ಟ್ರಾಂಗ್‌ ಹೈಬ್ರಿಡ್‌ ಆವೃತ್ತಿಗಳ ಆನ್-ರೋಡ್ ಬೆಲೆಗಳು

ಆವೃತ್ತಿಗಳು

ಹಳೆಯ ಬೆಲೆ

ಆರ್‌ಟಿಓ

ಹೊಸಬೆಲೆ

ಎಸ್‌-ಹೈಬ್ರಿಡ್‌

19.21 ಲಕ್ಷ ರೂ.

1.66 ಲಕ್ಷ ರೂ.

17.55 ಲಕ್ಷ ರೂ.

ಜಿ ಹೈಬ್ರಿಡ್‌

21.51 ಲಕ್ಷ ರೂ.

1.87 ಲಕ್ಷ ರೂ.

19.64 ಲಕ್ಷ ರೂ.

ವಿ-ಹೈಬ್ರಿಡ್‌

23.22 ಲಕ್ಷ ರೂ.

2.02 ಲಕ್ಷ ರೂ.

21.2 ಲಕ್ಷ ರೂ.

ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಕಾಂಪ್ಯಾಕ್ಟ್ ಎಸ್‌ಯುವಿ ಸೆಗ್ಮೆಂಟ್‌ನಲ್ಲಿದೆ ಮತ್ತು 1.5-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಸ್ಟ್ರಾಂಗ್‌-ಹೈಬ್ರಿಡ್ ಸೆಟಪ್ ಅನ್ನು ಪಡೆಯುತ್ತದೆ. ಇದು 27.97 ಕಿ.ಮೀ ನಷ್ಟು ಮೈಲೇಜ್ ಅನ್ನು ಹೊಂದಿದೆ ಮತ್ತು ನಗರದಲ್ಲಿ ಪ್ಯೂರ್‌ ಇವಿ ಮೋಡ್‌ನಲ್ಲಿ ಸಹ ಚಾಲನೆ ಮಾಡಬಹುದು. ಇದು 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ವೈರ್‌ಲೆಸ್ ಫೋನ್ ಚಾರ್ಜರ್, ಪನೋರಮಿಕ್ ಸನ್‌ರೂಫ್, ಹೆಡ್ಸ್-ಅಪ್ ಡಿಸ್‌ಪ್ಲೇ, 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಮತ್ತು 360-ಡಿಗ್ರಿ ಕ್ಯಾಮೆರಾ ಮುಂತಾದ ವೈಶಿಷ್ಟ್ಯಗಳನ್ನು ಹೊಂದಿದೆ.

ಮಾರುತಿ ಗ್ರ್ಯಾಂಡ್‌ ವಿಟಾರಾ

Maruti Grand Vitara

ಲಕ್ನೋದಲ್ಲಿ ಸ್ಟ್ರಾಂಗ್‌ ಹೈಬ್ರಿಡ್‌ ಆವೃತ್ತಿಗಳ ಆನ್-ರೋಡ್ ಬೆಲೆಗಳು

ಆವೃತ್ತಿಗಳು

ಹಳೆಯ ಬೆಲೆ

ಆರ್‌ಟಿಓ

ಹೊಸಬೆಲೆ

ಝೀಟಾ ಪ್ಲಸ್

20.92 ಲಕ್ಷ ರೂ.

1.84 ಲಕ್ಷ ರೂ.

19.08 ಲಕ್ಷ ರೂ.

ಆಲ್ಫಾ ಪ್ಲಸ್

22.61 ಲಕ್ಷ ರೂ.

1.99 ಲಕ್ಷ ರೂ.

20.62 ಲಕ್ಷ ರೂ.

*ಡ್ಯುಯಲ್-ಟೋನ್ ಆವೃತ್ತಿಗಳಿಗಾಗಿ 18000 ರೂ.ವರೆಗೆ ಹೆಚ್ಚುವರಿಯಾಗಿ ಪಾವತಿಸಬೇಕಾಗುತ್ತದೆ

ಮಾರುತಿ ಗ್ರ್ಯಾಂಡ್ ವಿಟಾರಾವು ಹೈರೈಡರ್‌ನ ಮರುಬ್ಯಾಡ್ಜ್ ಆವೃತ್ತಿಯಾಗಿದೆ ಮತ್ತು ಇದು ವಿಭಿನ್ನ ಕ್ಯಾಬಿನ್ ಥೀಮ್‌ನೊಂದಿಗೆ ಮುಂಭಾಗ ಮತ್ತು ಹಿಂಭಾಗದಲ್ಲಿ ಕೆಲವು ವಿನ್ಯಾಸ ಬದಲಾವಣೆಗಳನ್ನು ಪಡೆಯುತ್ತದೆ. ಆದರೆ, ಕಾಸ್ಮೆಟಿಕ್ ವ್ಯತ್ಯಾಸಗಳ ಹೊರತಾಗಿ, ಪವರ್‌ಟ್ರೇನ್, ಇಂಧನ ದಕ್ಷತೆ, ವೈಶಿಷ್ಟ್ಯಗಳು ಮತ್ತು ಸುರಕ್ಷತಾ ಕಿಟ್ ಸೇರಿದಂತೆ ಎಲ್ಲವೂ ಒಂದೇ ಆಗಿರುತ್ತದೆ.

ಹೋಂಡಾ ಸಿಟಿ ಹೈಬ್ರಿಡ್

Honda City Hybrid

ಲಕ್ನೋದಲ್ಲಿ ಸ್ಟ್ರಾಂಗ್‌ ಹೈಬ್ರಿಡ್‌ ಆವೃತ್ತಿಗಳ ಆನ್-ರೋಡ್ ಬೆಲೆಗಳು

ಆವೃತ್ತಿಗಳು

ಹಳೆಯ ಬೆಲೆ

ಆರ್‌ಟಿಓ

ಹೊಸಬೆಲೆ

ವಿ

21.90 ಲಕ್ಷ ರೂ.

1.90 ಲಕ್ಷ ರೂ.

20 ಲಕ್ಷ ರೂ.

ಝಡ್ಎಕ್ಸ್

23.67 ಲಕ್ಷ ರೂ.

2.05 ಲಕ್ಷ ರೂ.

21.62 ಲಕ್ಷ ರೂ.

ಹೋಂಡಾ ಸಿಟಿಯು ಮಾಸ್‌ ಮಾರ್ಕೆಟ್‌ ಸೆಗ್ಮೆಂಟ್‌ನಲ್ಲಿ ಲಭ್ಯವಿರುವ ಪ್ರಬಲ-ಹೈಬ್ರಿಡ್ ಸೆಟಪ್ ಹೊಂದಿರುವ ಏಕೈಕ ಸೆಡಾನ್ ಆಗಿದೆ. ಇದರ 1.5-ಲೀಟರ್ ಸ್ಟ್ರಾಂಗ್-ಹೈಬ್ರಿಡ್ ಪೆಟ್ರೋಲ್ ಎಂಜಿನ್ ಅನ್ನು e-CVT ಯೊಂದಿಗೆ ಜೋಡಿಸಲಾಗಿದೆ ಮತ್ತು ಪ್ರತಿ ಲೀ.ಗೆ 26.5 ಕಿ,ಮೀ ನಷ್ಟು ಮೈಲೇಜ್ ಹೊಂದಿದೆ. ಇದರ ಫೀಚರ್‌ಗಳ ಪಟ್ಟಿಯು 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಟೋಮ್ಯಾಟಿಕ್‌ ಕ್ಲೈಮೇಟ್‌ ಕಂಟ್ರೋಲ್‌, ಸಿಂಗಲ್ ಪೇನ್ ಸನ್‌ರೂಫ್, 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಮತ್ತು ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳು (ADAS) ಲೇನ್ ಕೀಪ್ ಅಸಿಸ್ಟ್, ಹೈ ಬೀಮ್ ಅಸಿಸ್ಟ್, ಆಟೋನೊಮಸ್‌ ಎಮೆರ್ಜೆನ್ಸಿ ಬ್ರೇಕಿಂಗ್ ಮತ್ತು ಆಡಾಪ್ಟಿವ್‌ ಕ್ರೂಸ್ ಕಂಟ್ರೋಲ್‌ಅನ್ನು ಹೊಂದಿದೆ.

ಟೊಯೋಟಾ ಇನ್ನೋವಾ ಹೈಕ್ರಾಸ್‌

Toyota Innova Hycross

ಲಕ್ನೋದಲ್ಲಿ ಸ್ಟ್ರಾಂಗ್‌ ಹೈಬ್ರಿಡ್‌ ಆವೃತ್ತಿಗಳ ಆನ್-ರೋಡ್ ಬೆಲೆಗಳು

ಆವೃತ್ತಿಗಳು

ಹಳೆಯ ಬೆಲೆ

ಆರ್‌ಟಿಓ

ಹೊಸಬೆಲೆ

ವಿಎಕ್ಸ್ ಹೈಬ್ರಿಡ್ (6 ಸೀಟರ್)

30.27 ಲಕ್ಷ ರೂ.

2.59 ಲಕ್ಷ ರೂ.

27.68 ಲಕ್ಷ ರೂ.

ವಿಎಕ್ಸ್ ಹೈಬ್ರಿಡ್ (7 ಸೀಟರ್)

30.34 ಲಕ್ಷ ರೂ.

2.60 ಲಕ್ಷ ರೂ.

27.74 ಲಕ್ಷ ರೂ.

ವಿಎಕ್ಸ್ ಹೈಬ್ರಿಡ್ (6 ಸೀಟರ್)

32.53 ಲಕ್ಷ ರೂ.

2.79 ಲಕ್ಷ ರೂ.

29.74 ಲಕ್ಷ ರೂ.

ವಿಎಕ್ಸ್ ಹೈಬ್ರಿಡ್ (7 ಸೀಟರ್)

32.60 ಲಕ್ಷ ರೂ.

2.79 ಲಕ್ಷ ರೂ.

29.81 ಲಕ್ಷ ರೂ.

ಝಡ್ಎಕ್ಸ್ ಹೈಬ್ರಿಡ್

35.29 ಲಕ್ಷ ರೂ.

3.05 ಲಕ್ಷ ರೂ.

32.24 ಲಕ್ಷ ರೂ.

ಝಡ್ಎಕ್ಸ್ (ಒಪ್ಶನಲ್‌) ಹೈಬ್ರಿಡ್

36.03 ಲಕ್ಷ ರೂ.

3.09 ಲಕ್ಷ ರೂ.

32.94 ಲಕ್ಷ ರೂ.

ಟೊಯೊಟಾದ ಕಾರುಗಳ ಪಟ್ಟಿಯಲ್ಲಿ ಇನ್ನೋವಾ ಹೈಕ್ರಾಸ್ ಮತ್ತೊಂದು ಸ್ಟ್ರಾಂಗ್‌-ಹೈಬ್ರಿಡ್ ಆಗಿದೆ, ಇದು 6- ಮತ್ತು 7-ಸೀಟರ್‌ಗಳ ಆಯ್ಕೆಗಳಲ್ಲಿ ಬರುತ್ತದೆ ಮತ್ತು 2-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಸ್ಟ್ರಾಂಗ್‌-ಹೈಬ್ರಿಡ್ ಸೆಟಪ್ ಅನ್ನು ಪಡೆಯುತ್ತದೆ. ಸೆಟಪ್ ಅನ್ನು e-CVT ಯೊಂದಿಗೆ ಜೋಡಿಸಲಾಗಿದೆ ಮತ್ತು ಇದು 23.34 ಕಿ.ಮೀ ನಷ್ಟು ಇಂಧನ ದಕ್ಷತೆಯನ್ನು ಹೊಂದಿದೆ. ಈ ಎಮ್‌ಪಿವಿಯಲ್ಲಿನ (ಮಲ್ಟಿ-ಪರ್ಪಸ್‌ ವೆಹಿಕಲ್‌) ಫೀಚರ್‌ಗಳು 10.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7-ಇಂಚಿನ ಡಿಜಿಟಲ್ ಡ್ರೈವರ್ಸ್ ಡಿಸ್‌ಪ್ಲೇ, ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್, ಪನೋರಮಿಕ್ ಸನ್‌ರೂಫ್, 6 ಏರ್‌ಬ್ಯಾಗ್‌ಗಳು, ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್‌ಮೆಂಟ್ (VSM), 360-ಡಿಗ್ರಿ ಕ್ಯಾಮೆರಾ ಮತ್ತು ಲೇನ್‌ ಕೀಪ್‌ ಆಸಿಸ್ಟ್‌, ಆಟೋನೊಮಸ್‌ ಎಮೆರ್ಜೆನ್ಸಿ ಬ್ರೇಕಿಂಗ್‌ ಹಾಗು ಆಡಾಪ್ಟಿವ್‌ ಕ್ರೂಸ್‌ ಕಂಟ್ರೋಲ್‌ನಂತಹ ADAS ವೈಶಿಷ್ಟ್ಯಗಳನ್ನು ಒಳಗೊಂಡಿದೆ.  

ಮಾರುತಿ ಇನ್ವಿಕ್ಟೋ

Maruti Invicto

ಲಕ್ನೋದಲ್ಲಿ ಸ್ಟ್ರಾಂಗ್‌ ಹೈಬ್ರಿಡ್‌ ಆವೃತ್ತಿಗಳ ಆನ್-ರೋಡ್ ಬೆಲೆಗಳು

ಆವೃತ್ತಿಗಳು

ಹಳೆಯ ಬೆಲೆ

ಆರ್‌ಟಿಓ

ಹೊಸಬೆಲೆ

ಝೀಟಾ ಪ್ಲಸ್ (6 ಸೀಟರ್)

28.74 ಲಕ್ಷ ರೂ.

2.52 ಲಕ್ಷ ರೂ.

26.22 ಲಕ್ಷ ರೂ.

ಝೀಟಾ ಪ್ಲಸ್ (7 ಸೀಟರ್)

28.80 ಲಕ್ಷ ರೂ.

2.52 ಲಕ್ಷ ರೂ.

26.28 ಲಕ್ಷ ರೂ.

ಆಲ್ಫಾ ಪ್ಲಸ್ (6 ಸೀಟರ್)

32.92 ಲಕ್ಷ ರೂ.

2.89 ಲಕ್ಷ ರೂ.

30.03 ಲಕ್ಷ ರೂ.

ಗ್ರ್ಯಾಂಡ್ ವಿಟಾರಾ ಮತ್ತು ಹೈರೈಡರ್ ಜೋಡಿಯಂತೆಯೇ, ಮಾರುತಿ ಇನ್ವಿಕ್ಟೋ ಇನ್ನೋವಾ ಹೈಕ್ರಾಸ್‌ನ ಮರುಬ್ಯಾಡ್ಜ್ ಆವೃತ್ತಿಯಾಗಿದೆ. ಇದು ಒಂದೇ ರೀತಿಯ ಎಂಜಿನ್ ಮತ್ತು ಮೈಲೇಜ್ ಅನ್ನು ಪಡೆಯುತ್ತದೆ, ಆದರೆ ಸ್ವಲ್ಪ ವಿನ್ಯಾಸ ಬದಲಾವಣೆಗಳು ಮತ್ತು ವಿಭಿನ್ನ ಕ್ಯಾಬಿನ್ ಥೀಮ್‌ಗಳ ಹೊರತಾಗಿ, ಇನ್ವಿಕ್ಟೋ ಎರಡನೇ ಸಾಲಿನ ಒಟ್ಟೋಮನ್ ಫಂಕ್ಷನ್‌ ಮತ್ತು ADAS ಟೆಕ್ ಸೇರಿದಂತೆ ಕೆಲವು ವೈಶಿಷ್ಟ್ಯಗಳನ್ನು ನೀಡುವುದಿಲ್ಲ. 

ಇದನ್ನೂ ಓದಿ: ಜುಲೈ 9 ರಿಂದ ಸ್ಟ್ಯಾಂಡರ್ಡ್ ವಾರಂಟಿ ಕವರೇಜ್ ಅನ್ನು ಹೆಚ್ಚಿಸಿದ Maruti

ಗಮನಿಸಿ:

  • ಆನ್-ರೋಡ್ ಬೆಲೆಗಳು ಇನ್ಶುರೆನ್ಸ್‌ ಮತ್ತು ಇತರ ತೆರಿಗೆಗಳನ್ನು ಒಳಗೊಂಡಿವೆ.

  • ನಿಮ್ಮ ನಗರವನ್ನು ಆಧರಿಸಿ ಮೇಲೆ ತಿಳಿಸಲಾದ ಬೆಲೆಗಳು ಬದಲಾಗಬಹುದು. ನೀವು ಈ ಯಾವುದೇ ಕಾರುಗಳನ್ನು ಖರೀದಿಸಲು ಯೋಜಿಸುತ್ತಿದ್ದರೆ, ನಿಖರವಾದ ಮಾಹಿತಿಯನ್ನು ಪಡೆಯಲು ನಿಮ್ಮ ಆದ್ಯತೆಯ ಮೊಡೆಲ್‌ನ ಹತ್ತಿರದ ಡೀಲರ್‌ಶಿಪ್ ಅನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ.

ಇದು ಉತ್ತರ ಪ್ರದೇಶದಲ್ಲಿನ ಸ್ಟ್ರಾಂಗ್‌ ಹೈಬ್ರಿಡ್‌ ಕಾರುಗಳ ಹೊಸ ಬೆಲೆಗಳಾಗಿವೆ. ದೇಶದ ಎಲ್ಲಾ ರಾಜ್ಯ ಸರ್ಕಾರಗಳು ಸ್ಟ್ರಾಂಗ್‌-ಹೈಬ್ರಿಡ್ ಕಾರುಗಳಿಗೆ RTO ತೆರಿಗೆಯನ್ನು ಮನ್ನಾ ಮಾಡಬೇಕು ಎಂದು ನೀವು ಭಾವಿಸುತ್ತೀರಾ? ಕಾಮೆಂಟ್‌ಗಳ ವಿಭಾಗದಲ್ಲಿ ನಿಮ್ಮ ಅಭಿಪ್ರಾಯಗಳನ್ನು ನಮಗೆ ತಿಳಿಸಿ. 

ಆಟೋಮೋಟಿವ್ ಉದ್ಯಮದ ಇತ್ತೀಚಿನ ಆಪ್‌ಡೇಟ್‌ಗಳನ್ನು ಪಡೆಯುವಲ್ಲಿ ಮೊದಲಿಗರಾಗಲು ಬಯಸುವಿರಾ? ಆದರೆ ಈ ಕೂಡಲೇ ಕಾರ್‌ದೇಖೋದ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ. 

ಇನ್ನಷ್ಟು ಓದಿ: ಮಾರುತಿ ಗ್ರಾಂಡ್ ವಿಟಾರಾ ಆನ್ ರೋಡ್ ಬೆಲೆ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Maruti ಗ್ರಾಂಡ್ ವಿಟರಾ

Read Full News

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience