Honda City ಅಪೆಕ್ಸ್ ಎಡಿಷನ್ ಬಿಡುಗಡೆ, ಬೆಲೆಗಳು 13.30 ಲಕ್ಷ ರೂ.ನಿಂದ ಆರಂಭ
ಹೋಂಡಾ ಸಿಟಿ ಗಾಗಿ dipan ಮೂಲಕ ಫೆಬ್ರವಾರಿ 01, 2025 10:47 pm ರಂದು ಪ್ರಕಟಿಸಲಾಗಿದೆ
- 2 Views
- ಕಾಮೆಂಟ್ ಅನ್ನು ಬರೆಯಿರಿ
ಸಿಟಿ ಸೆಡಾನ್‌ನ ಸೀಮಿತ ಸಂಖ್ಯೆಯ ಅಪೆಕ್ಸ್ ಎಡಿಷನ್ V ಮತ್ತು VX ವೇರಿಯೆಂಟ್‌ಗಳಲ್ಲಿ ಮಾತ್ರ ಲಭ್ಯವಿದೆ ಮತ್ತು ರೆಗ್ಯುಲರ್ ಮೊಡೆಲ್‌ಗಳಿಗಿಂತ 25,000 ರೂ.ನಷ್ಟು ಹೆಚ್ಚು ದುಬಾರಿಯಾಗಿದೆ
-
ಸಿಟಿ ಅಪೆಕ್ಸ್ ಎಡಿಷನ್ ಒಂದು ಆಕ್ಸಸ್ಸರಿ ಪ್ಯಾಕ್ ಆಗಿದ್ದು, ಮುಂಭಾಗದ ಫೆಂಡರ್‌ಗಳು, ಟೈಲ್ ಗೇಟ್ ಮತ್ತು ಸೀಟ್ ಬ್ಯಾಕ್‌ರೆಸ್ಟ್‌ಗಳಲ್ಲಿ ವಿಶೇಷ ಬ್ಯಾಡ್ಜ್‌ಗಳನ್ನು ಪರಿಚಯಿಸುತ್ತದೆ.
-
8-ಇಂಚಿನ ಟಚ್‌ಸ್ಕ್ರೀನ್ ಮತ್ತು ಸಿಂಗಲ್-ಪೇನ್ ಸನ್‌ರೂಫ್ ಸೇರಿದಂತೆ ಉಳಿದ ಫೀಚರ್‌ಗಳು ರೆಗ್ಯುಲರ್ ವೇರಿಯೆಂಟ್‌ನಂತೆಯೇ ಇರುತ್ತವೆ.
-
ಇದರ ಸುರಕ್ಷತಾ ಸೂಟ್ 6 ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್ ಆಗಿ), TPMS ಮತ್ತು ADAS ಅನ್ನು ಒಳಗೊಂಡಿದೆ.
-
ಅಪೆಕ್ಸ್ ಎಟಿಷನ್‌ನ ಬೆಲೆಗಳು 13.30 ಲಕ್ಷ ರೂ.ಗಳಿಂದ 15.62 ಲಕ್ಷ ರೂ.ಗಳವರೆಗೆ (ಎಕ್ಸ್ ಶೋ ರೂಂ, ಪ್ಯಾನ್-ಇಂಡಿಯಾ) ಇವೆ.
ಹೋಂಡಾ ಸಿಟಿ ಅಪೆಕ್ಸ್ ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ, ಇದರಲ್ಲಿ ಕೆಲವು ಸಣ್ಣಪುಟ್ಟ ಕಾಸ್ಮೆಟಿಕ್ ಬದಲಾವಣೆಗಳ ಜೊತೆಗೆ ಒಂದು ಫೀಚರ್‌ನ ಸೇರ್ಪಡೆಯಾಗಿದೆ. ಇದು ಲೋವರ್-ಸ್ಪೆಕ್ ವಿ ಮತ್ತು ವಿಎಕ್ಸ್ ವೇರಿಯೆಂಟ್‌ಗಳೊಂದಿಗೆ ಮಾತ್ರ ಲಭ್ಯವಿದೆ, ಜೊತೆಗೆ ಮ್ಯಾನ್ಯುವಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳು ಎರಡೂ ಇವೆ. ಹೋಂಡಾ ಸಿಟಿ ಅಪೆಕ್ಸ್ ಆವೃತ್ತಿಯಲ್ಲಿ ವಿಭಿನ್ನವಾಗಿರುವ ಎಲ್ಲವನ್ನೂ ವಿವರವಾಗಿ ನೋಡೋಣ:
ಹೋಂಡಾ ಸಿಟಿ ಅಪೆಕ್ಸ್ ಎಡಿಷನ್: ಬೆಲೆಗಳು
ಹೋಂಡಾ ಸಿಟಿ ಅಪೆಕ್ಸ್ ಎಡಿಷನ್ V ಮತ್ತು VX ಎಂಬ ಎರಡು ವೇರಿಯೆಂಟ್‌ಗಳಲ್ಲಿ ಹಾಗೂ ಮ್ಯಾನ್ಯುವಲ್ ಮತ್ತು ಆಟೋಮ್ಯಾಟಿಕ್ ಆಯ್ಕೆಗಳೊಂದಿಗೆ ಲಭ್ಯವಿದೆ. ಈ ವಿಶೇಷ ಆವೃತ್ತಿಯ ಟ್ರಿಮ್‌ನಲ್ಲಿ ಟಾಪ್-ಸ್ಪೆಕ್ ZX ವೇರಿಯೆಂಟ್ ಲಭ್ಯವಿಲ್ಲ. ಹೋಂಡಾ ಸಿಟಿ ಅಪೆಕ್ಸ್ ಎಡಿಷನ್‌ನ ವೇರಿಯಂಟ್-ವಾರು ಬೆಲೆಗಳು ಇಲ್ಲಿವೆ:
ವೇರಿಯೆಂಟ್ |
ರೆಗ್ಯುಲರ್ ವೇರಿಯೆಂಟ್ ಬೆಲೆ |
ಅಪೆಕ್ಸ್ ಎಡಿಷನ್ ಬೆಲೆ |
ವ್ಯತ್ಯಾಸ |
ವಿ ಮ್ಯಾನ್ಯುವಲ್ |
13.05 ಲಕ್ಷ ರೂ. |
13.30 ಲಕ್ಷ ರೂ. |
25000 ರೂ. |
ವಿ ಸಿವಿಟಿ |
14.30 ಲಕ್ಷ ರೂ. |
14.55 ಲಕ್ಷ ರೂ. |
25000 ರೂ. |
ವಿಎಕ್ಸ್ ಮ್ಯಾನ್ಯುವಲ್ |
14.12 ಲಕ್ಷ ರೂ. |
14.37 ಲಕ್ಷ ರೂ. |
25000 ರೂ. |
ವಿಎಕ್ಸ್ ಸಿವಿಟಿ |
15.37 ಲಕ್ಷ ರೂ. |
15.62 ಲಕ್ಷ ರೂ. |
25000 ರೂ. |
ಝಡ್ಎಕ್ಸ್ ಮ್ಯಾನ್ಯುವಲ್ |
15.30 ಲಕ್ಷ ರೂ. |
ಈ ವೇರಿಯೆಂಟ್‌ನಲ್ಲಿ ಲಭ್ಯವಿಲ್ಲ |
– |
ಝಡ್ಎಕ್ಸ್ ಸಿವಿಟಿ |
16.55 ಲಕ್ಷ ರೂ. |
ಈ ವೇರಿಯೆಂಟ್‌ನಲ್ಲಿ ಲಭ್ಯವಿಲ್ಲ |
– |
ಎಲ್ಲಾ ಬೆಲೆಗಳು ಭಾರತಾದ್ಯಂತದ ಎಕ್ಸ್-ಶೋರೂಮ್ ಆಗಿದೆ
ಏನು ಭಿನ್ನ?
ಹೋಂಡಾ ಸಿಟಿ ಅಪೆಕ್ಸ್ ಎಡಿಷನ್ ಸಾಮಾನ್ಯುವಾಗಿ V ಮತ್ತು VX ವೇರಿಯೆಂಟ್‌ಗಳನ್ನು ಆಧರಿಸಿದ ಆಕ್ಸಸ್ಸರಿ ಪ್ಯಾಕ್ ಆಗಿದೆ. ಹಾಗಾಗಿ, ಇದು ರೆಗ್ಯುಲರ್ ಮೊಡೆಲ್‌ನಿಂದ ಪ್ರತ್ಯೇಕಿಸಲು ಮುಂಭಾಗದ ಫೆಂಡರ್ ಮತ್ತು ಟೈಲ್‌ಗೇಟ್‌ನಲ್ಲಿ ವಿಶೇಷವಾದ 'ಅಪೆಕ್ಸ್ ಎಡಿಷನ್' ಬ್ಯಾಡ್ಜ್‌ನೊಂದಿಗೆ ಬರುತ್ತದೆ.
ಇದು ಹಿಂದಿನಂತೇ ಮರಳು ಬಣ್ಣದ ಇಂಟೀರಿಯರ್‌ನೊಂದಿಗೆ ಬಂದರೂ, ಸೀಟ್ ಬ್ಯಾಕ್‌ರೆಸ್ಟ್‌ನಲ್ಲಿ ಅಪೆಕ್ಸ್ ಎಡಿಷನ್ ಅನ್ನು ಎಂಬಾಸಿಂಗ್ ಜೊತೆಗೆ ಇದೇ ರೀತಿಯ ಬ್ರ್ಯಾಂಡಿಂಗ್ ಹೊಂದಿರುವ ಕುಶನ್‌ಗಳನ್ನು ಪಡೆಯುತ್ತದೆ. ಅಲ್ಲದೆ, ಈ ಆವೃತ್ತಿಯು ಡ್ಯಾಶ್‌ಬೋರ್ಡ್, ಡೋರ್ ಪ್ಯಾಡ್ ಮತ್ತು ಇನ್ಸ್‌ಟ್ರುಮೆಂಟ್ ಕ್ಲಸ್ಟರ್‌ನ ಮೇಲ್ಭಾಗದಲ್ಲಿ ಸಾಫ್ಟ್-ಟಚ್ ಫಿನಿಶ್ ಅನ್ನು ಪಡೆಯುತ್ತದೆ. ಕೊನೆಯದಾಗಿ, ಇದು ಬಹು-ಬಣ್ಣದ ಆಂಬಿಯೆಂಟ್ ಲೈಟಿಂಗ್ ಅನ್ನು ಸಹ ಪಡೆಯುತ್ತದೆ.
ಫೀಚರ್‌ಗಳು, ಸುರಕ್ಷತಾ ಸೂಟ್ ಮತ್ತು ಪವರ್‌ಟ್ರೇನ್ ಆಯ್ಕೆಗಳು ಸೇರಿದಂತೆ ಉಳಿದೆಲ್ಲವೂ ರೆಗ್ಯುಲರ್ ಮೊಡೆಲ್‌ನಂತೆಯೇ ಇರುತ್ತದೆ.
ಇದನ್ನೂ ಓದಿ Honda City, City Hybrid ಮತ್ತು Elevate ಕಾರುಗಳ ಬೆಲೆಯಲ್ಲಿ 20,000 ರೂ.ವರೆಗೆ ಏರಿಕೆ