Login or Register ಅತ್ಯುತ್ತಮ CarDekho experience ಗೆ
Login

Honda Elevateನ ನಿರೀಕ್ಷಿತ ಬೆಲೆಗಳು: ತನ್ನ ಪ್ರತಿಸ್ಪರ್ಧಿಗಳಿಗಿಂತ ಅಗ್ಗವಾಗಿದೆಯೇ?

published on ಆಗಸ್ಟ್‌ 30, 2023 04:56 pm by tarun for ಹೊಂಡಾ ಇಲೆವಟ್

ಹೋಂಡಾ ಎಲಿವೇಟ್ ಎಸ್‌ಯುವಿಯ ವೇರಿಯಂಟ್‌ಗಳು, ಫೀಚರ್‌ಗಳು ಮತ್ತು ನಿರ್ದಿಷ್ಟ ವಿಶೇಷಣಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಬಹಿರಂಗಪಡಿಸಲಾಗಿದೆ.

ಹೋಂಡಾ ಎಲಿವೇಟ್ ಶೀಘ್ರದಲ್ಲೇ ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗಕ್ಕೆ ಪ್ರವೇಶಿಸಲಿದೆ. ಕಾರು ತಯಾರಕರು ಈ ವಾಹನದ ಪವರ್‌ಟ್ರೇನ್, ಮೈಲೇಜ್ ಮತ್ತು ಫೀಚರ್‌ಗಳಿಗೆ ಸಂಬಂಧಿಸಿದಂತೆ ಕಂಪನಿಯು ಸಾಕಷ್ಟು ಮಾಹಿತಿಯನ್ನು ಹಂಚಿಕೊಂಡಿದೆ. ಈ ಕಾರಿನ ಬೆಲೆಗಳನ್ನು ಸೆಪ್ಟೆಂಬರ್ 4 ರಂದು ಘೋಷಿಸಲಾಗುವುದು. ಈಗಾಗಲೇ ಲಭ್ಯವಿರುವ ಎಲ್ಲಾ ಮಾಹಿತಿಯ ಆಧಾರದ ಮೇಲೆ, ನಾವು ಹೋಂಡಾ ಎಲಿವೇಟ್ ಎಸ್‌ಯುವಿಯ ವೇರಿಯಂಟ್-ವಾರು ಬೆಲೆಗಳನ್ನು ಅದರ ಬಿಡುಗಡೆಗೆ ಮುಂಚಿತವಾಗಿ ಅಂದಾಜು ಮಾಡಿದ್ದೇವೆ.

ಮೊದಲಿಗೆ, ಅದರ ಪವರ್‌ಟ್ರೇನ್ ಮತ್ತು ಫೀಚರ್‌ಗಳ ಬಗ್ಗೆ ಗಮನಹರಿಸೋಣ:

ಸ್ಪೆಕ್‌ಗಳು

ಹೋಂಡಾ ಎಲಿವೇಟ್

ಎಂಜಿನ್

1.5-ಲೀಟರ್ ಪೆಟ್ರೋಲ್

ಪವರ್

121PS

ಟಾರ್ಕ್

145Nm

ಟ್ರಾನ್ಸ್‌ಮಿಷನ್

6-ಸ್ಪೀಡ್ MT / CVT

ಮೈಲೇಜ್

15.31kmpl / 16.92kmpl

ಎಲಿವೇಟ್ ಸಿಟಿ ಸೆಡಾನ್‌ನಲ್ಲಿರುವಂತಹ 1.5-ಲೀಟರ್ ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದೆ. ಕಂಪನಿಯು ಅದರಲ್ಲಿ ಡೀಸೆಲ್ ಎಂಜಿನ್ ಮತ್ತು ಪೆಟ್ರೋಲ್-ಹೈಬ್ರಿಡ್ ಆಯ್ಕೆಯನ್ನು ನೀಡಿಲ್ಲ.

ಬಿಡುಗಡೆಯಾಗಲಿರುವ ಈ ಕಾರಿನಲ್ಲಿ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7-ಇಂಚಿನ ಡಿಜಿಟಲ್ ಡ್ರೈವರ್ಸ್ ಡಿಸ್‌ಪ್ಲೇ, ಎಲೆಕ್ಟ್ರಿಕ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಲೇನ್ ವಾಚ್ ಕ್ಯಾಮೆರಾದಂತಹ ಫೀಚರ್‌ಗಳನ್ನು ಒದಗಿಸಲಾಗಿದೆ. ಸುರಕ್ಷತೆಗಾಗಿ, ಇದು ಆರು ಏರ್‌ಬ್ಯಾಗ್‌ಗಳು, ರಿಯರ್ ಪಾರ್ಕಿಂಗ್ ಕ್ಯಾಮೆರಾ ಮತ್ತು ADAS (ಅಡ್ವಾನ್ಸ್‌ ಡ್ರೈವರ್ ಅಸಿಸ್ಟನ್ಸ್ ಸಿಸ್ಟಂ ) ನಂತಹ ಫೀಚರ್‌ಗಳನ್ನು ಪಡೆಯುತ್ತದೆ.

ಇದನ್ನೂ ಓದಿ: ಹೋಂಡಾ ಎಲಿವೇಟ್‌ನ ವೇರಿಯಂಟ್-ವಾರು ಫೀಚರ್‌ಗಳ ಬಗ್ಗೆ ಇಲ್ಲಿ ತಿಳಿಯಿರಿ

ಹೋಂಡಾ ಎಲಿವೇಟ್‌ನ ವೇರಿಯಂಟ್-ವಾರು ನಿರೀಕ್ಷಿತ ಬೆಲೆಗಳನ್ನು ಕೆಳಗೆ ನೀಡಲಾಗಿದೆ:

ಎಲಿವೇಟ್

MT

CVT

SV

ರೂ. 10.99 ಲಕ್ಷ

ಲಭ್ಯವಿಲ್ಲ.

V

ರೂ. 11.90 ಲಕ್ಷ

ರೂ.13.15 ಲಕ್ಷ

VX

ರೂ. 13 ಲಕ್ಷ

ರೂ. 14.25 ಲಕ್ಷ

ZX

ರೂ. 14.25 ಲಕ್ಷ

ರೂ. 15.50 ಲಕ್ಷ

ಪ್ರತಿಸ್ಪರ್ಧಿ ಕಾರುಗಳಂತೆಯೇ ಎಲಿವೇಟ್ ಕಾರಿನ ಬೆಲೆಯು ಸುಮಾರು 11 ಲಕ್ಷ ರೂಪಾಯಿಗಳಿಂದ (ಎಕ್ಸ್ ಶೋರೂಂ) ಪ್ರಾರಂಭವಾಗಬಹುದು. ಇದರ CVT ವೇರಿಯಂಟ್‌ಗಳ ಬೆಲೆ ಸುಮಾರು 1.25 ಲಕ್ಷ ರೂ. ಅಧಿಕವಾಗಿರಬಹುದು. ಅದರ ಎಲ್ಲಾ ವೇರಿಯಂಟ್‌ಗಳ ನಡುವಿನ ಬೆಲೆ ವ್ಯತ್ಯಾಸವು 1 ಲಕ್ಷಕ್ಕಿಂತ ಹೆಚ್ಚಾಗಿರುತ್ತದೆ.

ಎಲಿವೇಟ್ ಮತ್ತು ಅದರ ಪ್ರತಿಸ್ಪರ್ಧಿಗಳ ನಡುವಿನ ಬೆಲೆ ವ್ಯತ್ಯಾಸವನ್ನು ಕೆಳಗೆ ನೀಡಲಾಗಿದೆ:

ಹೋಂಡಾ ಎಲಿವೇಟ್(ನಿರೀಕ್ಷಿತ)

ಮಾರುತಿ ಗ್ರ್ಯಾಂಡ್ ವಿಟಾರಾ

ಟೊಯೋಟಾ ಹೈರೈಡರ್

ಹುಂಡೈ ಕ್ರೆಟಾ

ಕಿಯಾ ಸೆಲ್ಟೋಸ್

ಸ್ಕೋಡಾ ಕುಶಾಕ್

ಫೋಕ್ಸ್‌ವ್ಯಾಗನ್ ಟೈಗನ್

MG ಆಸ್ಟರ್

ರೂ.11 ಲಕ್ಷದಿಂದ ರೂ.15.50 ಲಕ್ಷ ರೂ.

ರೂ.10.70 ಲಕ್ಷದಿಂದ ರೂ.19.99 ಲಕ್ಷ ರೂ.

ರೂ. 10.86 ಲಕ್ಷದಿಂದ ರೂ. 19.99 ಲಕ್ಷ

ರೂ. 10.87 ಲಕ್ಷದಿಂದ ರೂ. 19.20 ಲಕ್ಷ

ರೂ. 10.90 ಲಕ್ಷದಿಂದ ರೂ. 20 ಲಕ್ಷ

ರೂ. 11.59 ಲಕ್ಷದಿಂದ ರೂ. 19.69 ಲಕ್ಷ

ರೂ. 11.62 ಲಕ್ಷದಿಂದ ರೂ. 19.46 ಲಕ್ಷ

ರೂ. 10.82 ಲಕ್ಷದಿಂದ ರೂ. 18.69 ಲಕ್ಷ

*ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಬೆಲೆಗಳಾಗಿವೆ

ಹೋಂಡಾ ಎಲಿವೇಟ್‌ನ ಟಾಪ್ ವೇರಿಯಂಟ್‌ಗಳ ಬೆಲೆ ಪ್ರತಿಸ್ಪರ್ಧಿ ಕಾರುಗಳ ಟಾಪ್ ಸ್ಪೆಕ್ ಟ್ರಿಮ್‌ಗಳಿಗಿಂತ ಕಡಿಮೆಯಾಗಿರಬಹುದು ಎಂದು ಅಂದಾಜಿಸಲಾಗಿದೆ. ಎಲಿವೇಟ್ ಒಂದೇ ಪೆಟ್ರೋಲ್ ಪವರ್‌ಟ್ರೇನ್ ಅನ್ನು ಪಡೆಯುತ್ತದೆ, ಆದರೆ ಅದರ ಪ್ರತಿಸ್ಪರ್ಧಿ ಕಾರುಗಳು ಎರಡು ಪವರ್‌ಟ್ರೇನ್ ಆಯ್ಕೆಗಳನ್ನು ಪಡೆಯುತ್ತವೆ. ಮಾರುತಿ-ಟೊಯೋಟಾ ಕಾರುಗಳಲ್ಲಿ ಹೈಬ್ರಿಡ್ ಪವರ್‌ಟ್ರೇನ್ ಆಯ್ಕೆಗಳನ್ನು ಸಹ ನೀಡಲಾಗಿದೆ.

ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಎಲಿವೇಟ್ ಕಾರು ವೆಂಟಿಲೇಟೆಡ್ ಸೀಟ್‌ಗಳು, ವಿಹಂಗಮ ಸನ್‌ರೂಫ್, 360-ಡಿಗ್ರಿ ಕ್ಯಾಮೆರಾ ಮತ್ತು ಪ್ರೀಮಿಯಂ ಸೌಂಡ್ ಸಿಸ್ಟಮ್ ಸೇರಿದಂತೆ ಹಲವಾರು ಪ್ರೀಮಿಯಂ ಫೀಚರ್‌ಗಳನ್ನು ಹೊಂದಿಲ್ಲ.

ಹೋಂಡಾ ಎಲಿವೇಟ್ ಕಾರಿನ ಬುಕ್ಕಿಂಗ್‌ಗಳು ತೆರೆದಿದ್ದು ಎಸ್‌ಯುವಿ ಡೀಲರ್‌ಶಿಪ್‌ಗಳನ್ನು ತಲುಪಲಾರಂಭಿಸಿದೆ.

t
ಅವರಿಂದ ಪ್ರಕಟಿಸಲಾಗಿದೆ

tarun

  • 38 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಹೋಂಡಾ ಇಲೆವಟ್

Read Full News

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಫೇಸ್ ಲಿಫ್ಟ್
Rs.86.92 - 97.84 ಲಕ್ಷ*
Rs.68.50 - 87.70 ಲಕ್ಷ*
ಫೇಸ್ ಲಿಫ್ಟ್
Rs.1.36 - 2 ಸಿಆರ್*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ