• English
  • Login / Register

ಜಪಾನಿನಲ್ಲಿ ಹೊಸ ‘WR-V’ ಆಗಿ Honda Elevate ಬಿಡುಗಡೆ

ಹೊಂಡಾ ಇಲೆವಟ್ ಗಾಗಿ rohit ಮೂಲಕ ನವೆಂಬರ್ 17, 2023 07:34 pm ರಂದು ಮಾರ್ಪಡಿಸಲಾಗಿದೆ

  • 36 Views
  • ಕಾಮೆಂಟ್‌ ಅನ್ನು ಬರೆಯಿರಿ

ಜಪಾನಿನಲ್ಲಿ ಕಾಣಿಸಿಕೊಳ್ಳಲಿರುವ WR-V ಯು ಭಾರತದ ರಸ್ತೆಗಳಲ್ಲಿರುವ ಹೋಂಡಾ ಎಲೆವೇಟ್‌ ನಂತೆ ಕಂಡರೂ ಕೆಲವೊಂದು ಪ್ರಮುಖ ವ್ಯತ್ಯಾಸಗಳನ್ನು ಹೊಂದಿದೆ

Honda Elevate as the WR-V in Japan

  • ಹೋಂಡಾ ಸಂಸ್ಥೆಯು ಎಲೆವೇಟ್‌ ಅನ್ನು ಭಾರತದಲ್ಲಿ 2023ರಲ್ಲಿ ಬಿಡುಗಡೆ ಮಾಡಿತ್ತು.
  • ಜಪಾನಿಗಾಗಿ ಅಭಿವೃದ್ಧಿಪಡಿಸಲಾಗಿರುವ ಹೊಸ WR-V ಯು ಹೊರಗಡೆಯಿಂದ ಎಲೆವೇಟ್‌ ನಂತೆ ಕಂಡರೂ ಕಪ್ಪು ಬಣ್ಣದ ಕ್ಯಾಬಿನ್‌ ಮತ್ತು ಅಫೋಲ್ಸ್ಟರಿಯನ್ನು ಪಡೆಯಲಿದೆ. 
  • ಇದು ಸನ್‌ ರೂಫ್‌ ಮತ್ತು ವೈರ್‌ ಲೆಸ್‌ ಫೋನ್‌ ಚಾರ್ಜಿಂಗ್‌ ನಂತಹ ಸೌಲಭ್ಯಗಳನ್ನು ಹೊಂದಿಲ್ಲ. ಅಲ್ಲದೆ ಟಚ್‌ ಸ್ಕ್ರೀನ್‌ ಘಟಕವು ಭಿನ್ನವಾಗಿದೆ.
  • ಭಾತರದ ಎಲೆವೇಟ್‌ ನಲ್ಲಿರುವಂತೆಯೇ ಲೇನ್‌ ವಾಚ್‌ ಕ್ಯಾಮರಾ ಮತ್ತು  ADAS ಸೂಟ್‌ ಸೇಫ್ಟಿ ಪ್ಯಾಕೇಜ್‌ ಅನ್ನು ಹೊಂದಿದೆ.
  • ಎಲೆವೇಟ್‌ ನಲ್ಲಿರುವ 1.5 ಲೀಟರ್‌ ಪೆಟ್ರೋಲ್‌ ಎಂಜಿನ್‌ ನಿಂದ ಚಲಿಸಲಿದೆ. ಅದರೆ  CVT ಅಟೋಮ್ಯಾಟಿಕ್‌ ಗೆ ಸೀಮಿತವಾಗಿದ್ದು ಮ್ಯಾನುವಲ್‌ ಆಯ್ಕೆಯನ್ನು ಹೊಂದಿಲ್ಲ.
  • ಭಾರತದ ಎಲೆವೇಟ್‌ ಕಾರು ರೂ. 11 ರಿಂದ ರೂ. 16.28 ಲಕ್ಷದ ವರೆಗಿನ ಬೆಲೆಯಲ್ಲಿ ಲಭ್ಯ (ಎಕ್ಸ್-‌ಶೋರೂಂ ದೆಹಲಿ).

ಹೋಂಡಾ ಎಲೆವೇಟ್ ವಾಹನವು ಈ ಕಾರು ತಯಾರಕ ಸಂಸ್ಥೆಯ ಅತ್ಯಂತ ನವೀನ SUV ಮಾದರಿಯಾಗಿದ್ದು ಭಾರತೀಯ ಕಾಂಪ್ಯಾಕ್ಟ್SUV ವಿಭಾಗದಲ್ಲಿ ಇದು 2023ರ ಸೆಪ್ಟೆಂಬರ್‌ ತಿಂಗಳಿನಲ್ಲಿ ರಸ್ತೆಗಿಳಿದಿತ್ತು. ಈ ಕಾರು ತಯಾರಕ ಸಂಸ್ಥೆಯು SUV ಯನ್ನು ತಾಯ್ನೆಲಕ್ಕೆ ಕೊಂಡೊಯ್ದಿದ್ದು ಅಲ್ಲಿ ಇದನ್ನು ‘WR-V’ ಎಂದು ನಾಮಕಾರಣ ಮಾಡಿದೆ. ನಿಮ್ಮ ಮಾಹಿತಿಗಾಗಿ, ಹೋಂಡಾ ಸಂಸ್ಥೆಯು WR-V ಹೆಸರನ್ನು ಭಾರತದಲ್ಲಿ ಜಾಝ್‌ ಆಧರಿತ ಸಬ್-4m‌ ಕ್ರಾಸ್‌ ಓವರ್‌ ಕಾರಿಗೆ ಬಳಸಿದ್ದು, ಇದರ ಮಾರಾಟವನ್ನು 2023ರ ಏಪ್ರಿಲ್‌ ತಿಂಗಳಿನಲ್ಲಿ ನಿಲ್ಲಿಸಲಾಯಿತು.

 

ಇದು ಹೇಗೆ ಭಿನ್ನವಾಗಿದೆ?

Japan-spec Honda WR-V cabin

ಎಲೆವೇಟ್‌ ಆಧರಿತ ಜಪಾನೀಸ್ SUV (ಇದನ್ನು WR-V ಎಂದು ಕರೆಯಲಾಗುತ್ತದೆ) ಯು ಹೊರಗಿನಿಂದ ಇಲ್ಲಿ ಮಾರಾಟವಾಗುವ SUV ಯಂತೆ ಕಂಡರೂ ಒಳಗಡೆಗೆ ಕೆಲವೊಂದು ಬದಲಾವಣೆಗಳನ್ನು ಕಂಡಿದೆ. ಹೋಂಡಾ ಸಂಸ್ಥೆಯು ಎಲೆವೇಟ್‌ ನ ಈ ಆವೃತ್ತಿಯನ್ನು ಜಪಾನಿನಲ್ಲಿ ಸಂಪೂರ್ಣ ಕಪ್ಪು ಬಣ್ಣದ ಕ್ಯಾಬಿನ್‌ ಥೀಮ್ ಮತ್ತು ಭಿನ್ನವಾದ ಅಫೋಲ್ಸ್ಟರಿ‌ ಜೊತೆಗೆ ಒದಗಿಸುತ್ತಿದೆ. ಭಾರತದಲ್ಲಿ ಇದು ಕಂದು ಬಣ್ಣದ ಥೀಮ್‌ ಜೊತೆಗೆ ಮಾರಾಟವಾಗುತ್ತಿದೆ. 

ಜಪಾನಿನಲ್ಲಿ ಕಾಣಿಸಿಕೊಳ್ಳಲಿರುವ ಮಾದರಿಯು ಕೇವಲ ಐದು ಮೋನೋಟೋನ್‌ ಬಣ್ಣದ ಆಯ್ಕೆಗಳೊಂದಿಗೆ ಬಂದರೆ, ಭಾರತದಲ್ಲಿರುವ ಎಲೆವೇಟ್‌ ಕಾರು ಮೋನೋಟೋನ್‌ (7) ಮತ್ತು ಡ್ಯುವಲ್‌ ಟೋನ್‌ (3) ಛಾಯೆಗಳೆರಡರಲ್ಲೂ ಸಿಗುತ್ತಿದೆ.

 

ವೈಶಿಷ್ಟ್ಯಗಳಲ್ಲೂ ಪರಿಷ್ಕರಣೆ

Japan-spec Honda WR-V missing a sunroof

ಈ ಎರಡು SUV ಗಳಲ್ಲಿರುವ ವೈಶಿಷ್ಟ್ಯಗಳಲ್ಲೂ ಭಿನ್ನತೆ ಇದೆ. ಭಾರತದಲ್ಲಿರುವ ಎಲೆವೇಟ್‌ ಕಾರು 10 ಇಂಚಿನ ಟಚ್‌ ಸ್ಕ್ರೀನ್‌, ಸಿಂಗಲ್‌ ಪೇನ್‌ ರೂಫ್‌ ಮತ್ತು ವೈರ್‌ ಲೆಸ್‌ ಫೋನ್‌ ನಂತಹ ವಿಶೇಷತೆಗಳೊಂದಿಗೆ ಬಂದರೆ, ಹೋಂಡಾ ಸಂಸ್ಥೆಯು ಈ ಎಲ್ಲಾ ಸೌಲಭ್ಯಗಳನ್ನು ಜಪಾನಿನ WR-V ನಲ್ಲಿ ನೀಡಿಲ್ಲ. ಎರಡನೆಯದು ಟಚ್‌ ಸ್ಕ್ರೀನ್‌ ಘಟಕವನ್ನು ಪಡೆದರೂ ಇದು ಇಲ್ಲಿ ಮಾರಾಟವಾಗುತ್ತಿರುವ ಎಲೆವೇಟ್‌ ನಲ್ಲಿರುವ ಟಚ್‌ ಸ್ಕ್ರೀನ್‌ ಗಿಂತ ಭಿನ್ನವಾಗಿದೆ. ಏಕೆಂದರೆ ಇದು ಬಲ ತುದಿಯಲ್ಲಿ ಫಿಸಿಕಲ್‌ ಕಂಟ್ರೋಲ್‌ ಗಳನ್ನು ಹೊಂದಿದೆ.

ಎಲೆವೇಟ್‌ ಕಾರಿನ ಜಪಾನ್‌ ಮಾದರಿಯಲ್ಲಿರುವ ಸುರಕ್ಷತಾ ಕಿಟ್‌ ಕುರಿತು ಹೆಚ್ಚಿನ ಮಾಹಿತಿ ದೊರೆಯದಿದ್ದರೂ, ಎರಡೂ ವಾಹನಗಳು ಲೇನ್‌ ವಾಚ್‌ ಕ್ಯಾಮರಾ, ರಿವರ್ಸಿಂಗ್‌ ಕ್ಯಾಮರಾ, ಹಾಗೂ ಫಾರ್ವರ್ಡ್‌ ಕೊಲಿಶನ್‌ ವಾರ್ನಿಂಗ್‌ ಮತ್ತು ಅಡಾಪ್ಟಿವ್‌ ಕ್ರೂಸ್‌ ಕಂಟ್ರೋಲ್‌ ಸೇರಿದಂತೆ ಅನೇಕ ಅಡ್ವಾನ್ಸ್ಡ್‌ ಡ್ರೈವರ್‌ ಅಸಿಸ್ಟೆನ್ಸ್‌ ಸಿಸ್ಟಂ (ADAS) ಗಳನ್ನು ಹೊಂದಿರಲಿವೆ.

ಸಂಬಂಧಿತ: ಭಾರತದಲ್ಲಿ ಹೋಂಡಾ ಎಲೆವೇಟ್‌ ಜೊತೆಗೆ ಹೊಸ WR-V ಯನ್ನು ಸಹ ಮಾರಾಟ ಮಾಡಬೇಕೇ?

 

ಎಂಜಿನ್‌ ಹೇಗಿರಲಿದೆ?

 ಹೋಂಡಾ ಸಂಸ್ಥೆಯು ಜಪಾನೀಸ್‌ WR-V ಯ ಎಂಜಿನ್‌ ನಿಖರವಾದ ಔಟ್ಪುಟ್‌ ಮತ್ತು ಗೇರ್‌ ಬಾಕ್ಸ್‌ ಆಯ್ಕೆಯ ಕುರಿತು ಮಾಹಿತಿ ನೀಡದೆ ಇದ್ದರೂ, ಇದು ಭಾರತೀಯ ರಸ್ತೆಗಳಲ್ಲಿರುವ ಎಲೆವೇಟ್‌ ನಲ್ಲಿರುವಂತೆಯೇ 1.5 ಲೀಟರ್‌ ಪೆಟ್ರೋಲ್‌ ಯೂನಿಟ್‌ ಅನ್ನು ಪಡೆಯಲಿದೆ ಎಂದು ಮಾಹಿತಿ ನೀಡಿದೆ. ಇಲ್ಲಿ ಮಾರಾಟವಾಗುವ ಎಲೆವೇಟ್‌ ನ ಎಂಜಿನ್ 121 PS ಮತ್ತು 145 Nm ಶ್ರೇಣಿಯನ್ನು ಹೊಂದಿದ್ದು 6 ಸ್ಪೀಡ್‌ ಮ್ಯಾನುವಲ್‌ ಮತ್ತು CVT ಆಯ್ಕೆಗಳೊಂದಿಗೆ ಬರುತ್ತದೆ. ಜಪಾನೀಸ್‌ ಮಾದರಿಯು ಕೇವಲ CVT ಅಟೋಮ್ಯಾಟಿಕ್‌ ಅನ್ನು ಪಡೆಯಲಿದೆ.

ಅಲ್ಲದೆ ಜಪಾನಿನ ರಸ್ತೆಗಳಲ್ಲಿ ಕಾಣಿಸಿಕೊಳ್ಳಲಿರುವ ಎಲೆವೇಟ್‌ ಕಾರು ಭಾರತೀಯ ಮಾದರಿಯಲ್ಲಿರುವಂತೆ ಶಕ್ತಿಶಾಲಿ ಹೈಬ್ರೀಡ್‌ ವ್ಯವಸ್ಥೆಯನ್ನು ಹೊಂದಿರುವುದಿಲ್ಲ. ಹೋಂಡಾ ಸಂಸ್ಥೆಯು ಈ SUV ಯ EV ಮಾದರಿಯನ್ನು 2026ರ ಸುಮಾರಿಗೆ ಭಾರತದಲ್ಲಿ ಪರಿಚಯಿಸಲಿದೆ.

ಭಾರತದಲ್ಲಿ ಬೆಲೆ ಮತ್ತು ಪ್ರತಿಸ್ಪರ್ಧಿಗಳು

Honda Elevate as the WR-V in Japan

ಹೋಂಡಾ ಎಲೆವೇಟ್‌ ಕಾರು ಭಾರತದಲ್ಲಿ ರೂ. 11 ಲಕ್ಷದಿಂದ ರೂ. 16.28 ಲಕ್ಷದ ವರೆಗಿನ ಬೆಲೆಯಲ್ಲಿ ಲಭ್ಯ (ಎಕ್ಸ್-‌ಶೋರೂಂ ದೆಹಲಿ). ಈ ಕಾಂಪ್ಯಾಕ್ಟ್ SUV ಯು ಕಿಯಾ ಸೆಲ್ಟೋಸ್, ಮಾರುತಿ ಗ್ರಾಂಡ್‌ ವಿಟಾರ, ಟೊಯೊಟಾ ಅರ್ಬನ್‌ ಕ್ರೂಸರ್‌ ಹೈರೈಡರ್, ಹ್ಯುಂಡೈ ಕ್ರೆಟಾ, ಫೋಕ್ಸ್‌ ವ್ಯಾಗನ್‌ ಟೈಗುನ್, MG ಆಸ್ಟರ್, ಸ್ಕೋಡಾ ಕುಶಕ್, ‌ ಮತ್ತು ಸಿಟ್ರನ್‌ C3 ಏರ್‌ ಕ್ರಾಸ್‌ ಜೊತೆಗೆ ಸ್ಪರ್ಧಿಸಲಿದೆ.

ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಎಲೆವೇಟ್‌ ಆನ್‌ ರೋಡ್‌ ಬೆಲೆ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Honda ಇಲೆವಟ್

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience