Honda Elevateನ ಹೊಸ ಬ್ಲಾಕ್ ಎಡಿಷನ್ ಬಿಡುಗಡೆ, ಬೆಲೆಗಳು 15.51 ಲಕ್ಷ ರೂ.ನಿಗದಿ
ಹೋಂಡಾ ಎಲಿವೇಟ್‌ನ ಬ್ಲ್ಯಾಕ್ ಮತ್ತು ಸಿಗ್ನೇಚರ್ ಬ್ಲ್ಯಾಕ್ ಎಡಿಷನ್‌ಗಳು ಟಾಪ್-ಸ್ಪೆಕ್ ZX ವೇರಿಯೆಂಟ್ ಅನ್ನು ಆಧರಿಸಿವೆ
-
ಎಲಿವೇಟ್‌ನ ಈ ಹೊಸ ಬ್ಲಾಕ್ ಎಡಿಷನ್‌ಗಳ ಬುಕಿಂಗ್‌ಗಳು ಈಗಾಗಲೇ ಪ್ರಾರಂಭವಾಗಿವೆ.
-
ಸಿವಿಟಿ ಆಟೋಮ್ಯಾಟಿಕ್ ವೇರಿಯೆಂಟ್‌ಗಳ ಡೆಲಿವೆರಿಗಳು ಜನವರಿಯಿಂದ ಪ್ರಾರಂಭವಾಗಲಿದ್ದು, ಮ್ಯಾನ್ಯುವಲ್ ಟ್ರಿಮ್‌ಗಳಿಗೆ ಇದು ಫೆಬ್ರವರಿಯಿಂದ ಪ್ರಾರಂಭವಾಗಲಿದೆ.
-
ಬ್ಲಾಕ್ ಎಡಿಷನ್ ಬೆಲೆಗಳು ರೆಗ್ಯುಲರ್ ಜೆಡ್‌ಎಕ್ಸ್ ಟ್ರಿಮ್ ಗಿಂತ 10,000 ರೂ.ಗಳಷ್ಟು ಹೆಚ್ಚಾಗಿದೆ, ಆದರೆ ಬ್ಲಾಕ್ ಸಿಗ್ನೇಚರ್ ಎಡಿಷನ್‌ನ ಬೆಲೆಗಳು 30,000 ರೂ.ಗಳಷ್ಟು ಹೆಚ್ಚಾಗಿದೆ.
-
ಈ ಎರಡೂ ಬ್ಲ್ಯಾಕ್ ಎಡಿಷನ್‌ಗಳು ಹೊಸ ಕ್ರಿಸ್ಟಲ್ ಬ್ಲ್ಯಾಕ್ ಪರ್ಲ್ ಬಾಡಿ ಕಲರ್‌ನಲ್ಲಿ ಬರುತ್ತವೆ.
-
ಅವುಗಳು ಸಂಪೂರ್ಣ ಕಪ್ಪು ಬಣ್ಣದ ಇಂಟೀರಿಯರ್ ಅನ್ನು ಸಹ ಪಡೆಯುತ್ತವೆ, ಮತ್ತು ಬ್ಲ್ಯಾಕ್ ಸಿಗ್ನೇಚರ್ ಎಡಿಷನ್ ಹೆಚ್ಚುವರಿಯಾಗಿ 7-ಬಣ್ಣಗಳ ಆಂಬಿಯೆಂಟ್ ಲೈಟಿಂಗ್ ಅನ್ನು ಪಡೆಯುತ್ತದೆ.
-
ಎರಡೂ ವಿಶೇಷ ಸ್ಪೇಷಲ್ ಎಡಿಷನ್‌ಗಳು ಎಸ್‌ಯುವಿಯ ಅದೇ 1.5-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಮುಂದುವರಿಯುತ್ತವೆ.
ಹೋಂಡಾ ಎಲಿವೇಟ್ ಮೊಡೆಲ್ ಇಯರ್‌ನ ಆಪ್‌ಡೇಟ್‌ಗಳ ಸಾಲಿಗೆ ಸೇರುತ್ತದೆ ಮತ್ತು ಬ್ಲ್ಯಾಕ್ ಮತ್ತು ಸಿಗ್ನೇಚರ್ ಬ್ಲ್ಯಾಕ್ ಎಂಬ ಎರಡು ಹೊಸ ಬ್ಲ್ಯಾಕ್ ಎಡಿಷನ್ ಅನ್ನು ಪರಿಚಯಿಸುತ್ತಿದೆ. ಈ ಎರಡೂ ಎಡಿಷನ್‌ಗಳು ಹೊಸ ಕ್ರಿಸ್ಟಲ್ ಬ್ಲ್ಯಾಕ್ ಪರ್ಲ್ ಬಾಡಿ ಕಲರ್‌ನಲ್ಲಿ ಬರುತ್ತವೆ ಮತ್ತು ಟಾಪ್-ಸ್ಪೆಕ್ ZX ವೇರಿಯೆಂಟ್ ಅನ್ನು ಆಧರಿಸಿವೆ ಮತ್ತು ಮ್ಯಾನ್ಯುವಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನ ಆಯ್ಕೆಗಳೊಂದಿಗೆ ಲಭ್ಯವಿದೆ. ಈ ಎಸ್‌ಯುವಿಯ ಬ್ಲ್ಯಾಕ್ ಎಡಿಷನ್‌ಗಳ ಬುಕಿಂಗ್‌ಗಳು ಇಂದು ಪ್ರಾರಂಭವಾಗಿವೆ, ಹಾಗೆಯೇ ಸಿವಿಟಿ ವೇರಿಯೆಂಟ್‌ಗಳ ಡೆಲಿವೆರಿಗಳು ಜನವರಿಯಲ್ಲಿ ಪ್ರಾರಂಭವಾಗುತ್ತವೆ, ಆದರೆ ಮ್ಯಾನ್ಯುವಲ್ ವೇರಿಯೆಂಟ್‌ಗಳ ಡೆಲಿವೆರಿಗಳು ಫೆಬ್ರವರಿಯಲ್ಲಿ ಪ್ರಾರಂಭವಾಗುತ್ತವೆ.
ಹೆಚ್ಚಿನ ವಿವರಗಳನ್ನು ತಿಳಿಯುವ ಮೊದಲು, ಅವುಗಳ ಬೆಲೆಗಳನ್ನು ನೋಡೋಣ:
ಹೋಂಡಾ ಎಲಿವೇಟ್ ಬ್ಲ್ಯಾಕ್ ಎಡಿಷನ್ |
|||
ವೇರಿಯೆಂಟ್ |
ರೆಗ್ಯುಲರ್ ಬೆಲೆ |
ಬ್ಲ್ಯಾಕ್ ಎಡಿಷನ್ ಬೆಲೆ |
ವ್ಯತ್ಯಾಸ |
ಝೆಡ್‌ಎಕ್ಸ್ ಮ್ಯಾನ್ಯುವಲ್ |
15.41 ಲಕ್ಷ ರೂ. |
15.51 ಲಕ್ಷ ರೂ. |
|
ಝೆಡ್‌ಎಕ್ಸ್ ಸಿವಿಟಿ |
16.63 ಲಕ್ಷ ರೂ. |
16.73 ಲಕ್ಷ ರೂ. |
+ 10,000 ರೂ. |
ಹೋಂಡಾ ಎಲಿವೇಟ್ ಬ್ಲ್ಯಾಕ್ ಸಿಗ್ನೇಚರ್ ಎಡಿಷನ್ |
|||
ಝೆಡ್‌ಎಕ್ಸ್ ಮ್ಯಾನ್ಯುವಲ್ |
15.41 ಲಕ್ಷ ರೂ. |
15.71 ಲಕ್ಷ ರೂ. |
+ 30,000 ರೂ. |
ಝೆಡ್‌ಎಕ್ಸ್ ಸಿವಿಟಿ |
16.63 ಲಕ್ಷ ರೂ. |
16.93 ಲಕ್ಷ ರೂ. |
+ 30,000 ರೂ. |
ರೆಗ್ಯುಲರ್ ZX ವೇರಿಯೆಂಟ್‌ಗಿಂತ ಬ್ಲಾಕ್ ಎಡಿಷನ್ 10,000 ರೂ.ಗಳಷ್ಟು ಹೆಚ್ಚಿನ ಬೆಲೆಯನ್ನು ಹೊಂದಿದೆ, ಹಾಗೆಯೇ ಬ್ಲಾಕ್ ಸಿಗ್ನೇಚರ್ ಎಡಿಷನ್ ರೆಗ್ಯುಲರ್ ಸಾಮಾನ್ಯ ZX ವೇರಿಯೆಂಟ್‌ಗಿಂತ 30,000 ರೂ.ಗಳಷ್ಟು ಹೆಚ್ಚು ಬೆಲೆಯನ್ನು ಹೊಂದಿದೆ.
ಇದನ್ನೂ ಓದಿ: 2024ರ ಹೆಚ್ಚು ಮಾರಾಟವಾದ ಕಾರುಗಳಲ್ಲಿ Tata Punchಗೆ ಮೊದಲ ಸ್ಥಾನ..! ಮಾರುತಿಯ 40 ವರ್ಷಗಳ ಪ್ರಾಬಲ್ಯವನ್ನು ಮುರಿದ ಟಾಟಾ..
ಹೋಂಡಾ ಎಲಿವೇಟ್ ಬ್ಲ್ಯಾಕ್ ಎಡಿಷನ್
ಹೋಂಡಾ ಎಲಿವೇಟ್‌ನ ರೆಗ್ಯುಲರ್ ಬ್ಲ್ಯಾಕ್ ಎಡಿಷನ್ ಸಣ್ಣ ಕಾಸ್ಮೆಟಿಕ್ ಮಾರ್ಪಾಡುಗಳನ್ನು ಕಪ್ಪು ಬಣ್ಣಕ್ಕೆ ತಿರುಗಿಸಿದ ಅಲಾಯ್ ಚಕ್ರಗಳು ಮತ್ತು ನಟ್‌ಗಳನ್ನು ಹಾಗೂ ಟೈಲ್‌ಗೇಟ್‌ನಲ್ಲಿ 'ಬ್ಲ್ಯಾಕ್ ಎಡಿಷನ್' ಬ್ಯಾಡ್ಜ್ ಅನ್ನು ಒಳಗೊಂಡಿದೆ. ಮೇಲಿನ ಗ್ರಿಲ್‌ನಲ್ಲಿ ಕ್ರೋಮ್ ಗಾರ್ನಿಶ್, ಸಿಲ್ವರ್‌ನಲ್ಲಿ ಫಿನಿಶ್ ಮಾಡಿದ ಸ್ಕಿಡ್ ಪ್ಲೇಟ್‌ಗಳು, ಸಿಲ್ವರ್‌ನ ರೂಫ್ ರೇಲ್ಸ್ ಮತ್ತು ಬಾಗಿಲುಗಳ ಮೇಲಿನ ಸಿಲ್ವರ್ ಗಾರ್ನಿಶ್‌ನಂತಹ ಉಳಿದ ವಿವರಗಳು ಒಂದೇ ಆಗಿವೆ. ಒಳಭಾಗದಲ್ಲಿ, ಇದು ಕಪ್ಪು ಬಣ್ಣದ ಕ್ಯಾಬಿನ್ ಅನ್ನು ಕಪ್ಪು ಲೆದರೆಟ್ ಸೀಟ್ ಕವರ್‌ನೊಂದಿಗೆ ಹೊಂದಿದೆ, ಜೊತೆಗೆ ಡೋರ್ ಪ್ಯಾಡ್‌ಗಳು, ಆರ್ಮ್‌ರೆಸ್ಟ್ ಮತ್ತು ಇನ್ಸ್‌ಟ್ರುಮೆಂಟ್ ಕ್ಲಸ್ಟರ್ ಸುತ್ತಲೂ ಬ್ಲ್ಯಾಕ್ ಆಕ್ಸೆಂಟ್‌ಗಳನ್ನು ಹೊಂದಿದೆ.
ಹೋಂಡಾ ಎಲಿವೇಟ್ ಸಿಗ್ನೇಚರ್ ಬ್ಲ್ಯಾಕ್ ಎಡಿಷನ್
ರೆಗ್ಯುಲರ್ ಬ್ಲ್ಯಾಕ್ ಎಡಿಷನ್‌ಗೆ ಹೋಲಿಸಿದರೆ, ಸಿಗ್ನೇಚರ್ ಬ್ಲ್ಯಾಕ್ ಸಂಪೂರ್ಣ ಕಪ್ಪು ಬಣ್ಣದ ಗ್ರಿಲ್, ಸ್ಕಿಡ್ ಪ್ಲೇಟ್‌ಗಳು, ಬಾಗಿಲುಗಳ ಮೇಲೆ ಕಪ್ಪು ಗಾರ್ನಿಶ್, ಕಪ್ಪು ರೂಫ್ ರೇಲ್ಸ್‌ಗಳು ಮತ್ತು ಫೆಂಡರ್‌ನಲ್ಲಿ 'ಸಿಗ್ನೇಚರ್' ಆವೃತ್ತಿಯ ಬ್ಯಾಡ್ಜ್ ಅನ್ನು ಒಳಗೊಂಡಿದೆ, ಜೊತೆಗೆ ಟೈಲ್‌ಗೇಟ್‌ನಲ್ಲಿ ʼಬ್ಲ್ಯಾಕ್ ಎಡಿಷನ್' ಬ್ಯಾಡ್ಜ್ ಅನ್ನು ಹೊಂದಿದೆ. ಒಳಭಾಗವು ರೆಗ್ಯಲರ್ ಬ್ಲ್ಯಾಕ್ ಎಡಿಷನ್‌ನಂತೆಯೇ ಇದೆ, ಆದರೆ ಸಿಗ್ನೇಚರ್ ಬ್ಲ್ಯಾಕ್ 7-ಬಣ್ಣದ ಆಂಬಿಯೆಂಟ್ ಲೈಟಿಂಗ್ ಅನ್ನು ಹೊಂದಿದೆ.
ಫೀಚರ್‌ಗಳ ಪಟ್ಟಿಯಲ್ಲಿ ಯಾವುದೇ ಬದಲಾವಣೆಗಳಿಲ್ಲ
ಹೋಂಡಾ ಎಲಿವೇಟ್‌ನ ಫೀಚರ್‌ಗಳ ಪಟ್ಟಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ ಮತ್ತು ಇದು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಹೊಂದಿರುವ 10.25-ಇಂಚಿನ ಟಚ್‌ಸ್ಕ್ರೀನ್ ಮತ್ತು 7-ಇಂಚಿನ ಸೆಮಿ-ಡಿಜಿಟಲ್ ಡ್ರೈವರ್ ಡಿಸ್‌ಪ್ಲೇಯಂತಹ ಸೌಲಭ್ಯಗಳೊಂದಿಗೆ ಬರುತ್ತದೆ. ಇದು ಆಟೋಮ್ಯಾಟಿಕ್ ಎಸಿ, ವೈರ್‌ಲೆಸ್ ಫೋನ್ ಚಾರ್ಜರ್, ಸಿಂಗಲ್-ಪೇನ್ ಸನ್‌ರೂಫ್ ಮತ್ತು ಪುಶ್-ಬಟನ್ ಸ್ಟಾರ್ಟ್/ಸ್ಟಾಪ್ ಅನ್ನು ಸಹ ಪಡೆಯುತ್ತದೆ.
ಸುರಕ್ಷತಾ ಫೀಚರ್‌ಗಳಲ್ಲಿ ಆರು ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್ ಆಗಿ), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಹಿಲ್ ಸ್ಟಾರ್ಟ್ ಅಸಿಸ್ಟ್, ಲೇನ್‌ವಾಚ್ ಕ್ಯಾಮೆರಾ, ವೆಹಿಕಲ್ ಸ್ಟೆಬಿಲಿಟಿ ಅಸಿಸ್ಟ್, ರಿಯರ್ ಪಾರ್ಕಿಂಗ್ ಕ್ಯಾಮೆರಾ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್-ಕೀಪಿಂಗ್ ಅಸಿಸ್ಟ್, ಆಟೋಮೆಟೆಡ್ ಎಮೆರ್ಜೆನ್ಸಿ ಬ್ರೇಕಿಂಗ್ ಮತ್ತು ಆಟೋಮ್ಯಾಟಿಕ್ ಹೈ-ಬೀಮ್ ಅಸಿಸ್ಟ್‌ನಂತಹ ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳು (ADAS) ಸೇರಿವೆ.
ಪೆಟ್ರೋಲ್ ಎಂಜಿನ್ ಮಾತ್ರ ಲಭ್ಯ
ಎಲಿವೇಟ್ ಅನ್ನು 1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್‌ನೊಂದಿಗೆ ಮಾತ್ರ ನೀಡಲಾಗುತ್ತಿದೆ:
ಎಂಜಿನ್ |
1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ |
ಪವರ್ |
121 ಪಿಎಸ್ |
ಟಾರ್ಕ್ |
145 ಎನ್‌ಎಮ್ |
ಗೇರ್‌ಬಾಕ್ಸ್ |
6-ಸ್ಪೀಡ್ ಮ್ಯಾನ್ಯುವಲ್, 7-ಸ್ಟೆಪ್ ಸಿವಿಟಿ |
ಕ್ಲೈಮ್ ಮಾಡಲಾದ ಮೈಲೇಜ್ |
ಪ್ರತಿ ಲೀ.ಗೆ 15.31 ಕಿಮೀ(ಮ್ಯಾನ್ಯುವಲ್), ಪ್ರತಿ ಲೀ.ಗೆ 16.92 ಕಿ.ಮೀ(ಸಿವಿಟಿ) |
ಬೆಲೆ ರೇಂಜ್ ಮತ್ತು ಪ್ರತಿಸ್ಪರ್ಧಿಗಳು
ಹೋಂಡಾ ಎಲಿವೇಟ್‌ನ ಬೆಲೆ ಈಗ 11.69 ಲಕ್ಷ ರೂ.ಗಳಿಂದ 16.93 ಲಕ್ಷ ರೂ.ಗಳವರೆಗೆ ಇದೆ (ಎಕ್ಸ್ ಶೋರೂಂ-ದೆಹಲಿ). ಇದು ಹ್ಯುಂಡೈ ಕ್ರೆಟಾ ನೈಟ್ ಎಡಿಷನ್, ಕಿಯಾ ಸೆಲ್ಟೋಸ್ ಎಕ್ಸ್-ಲೈನ್ ನಂತಹ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿದ್ದು, ವೋಕ್ಸ್‌ವ್ಯಾಗನ್ ಟೈಗುನ್, ಮಾರುತಿ ಗ್ರ್ಯಾಂಡ್ ವಿಟಾರಾ ಮತ್ತು ಸ್ಕೋಡಾ ಕುಶಾಕ್‌ಗಳಿಗೆ ಪರ್ಯಾಯವಾಗಿಯೂ ಇದನ್ನು ಪರಿಗಣಿಸಬಹುದು.
ಕಾರುಗಳ ಲೋಕದ ನಿರಂತರ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ