ನಾಲ್ಕನೇ-ಪೀಳಿಗೆಯ 'ಸಿಟಿ'ಗೆ ಏಪ್ರಿಲ್‌ನಲ್ಲಿ ವಿದಾಯ ಹೇಳಲಿರುವ ಹೋಂಡಾ
ಹೋಂಡಾ ಸಿಟಿ 4 ನೇ ತಲೆಮಾರು ಗಾಗಿ rohit ಮೂಲಕ ಮಾರ್ಚ್ 06, 2023 03:31 pm ರಂದು ಪ್ರಕಟಿಸಲಾಗಿದೆ
- 21 Views
- ಕಾಮೆಂಟ್ ಅನ್ನು ಬರೆಯಿರಿ
ಹೊಸ ಸಿಟಿಗೆ ಹೋಲಿಸಿದರೆ ಈ ಹಳೆಯ ಕಾಂಪ್ಯಾಕ್ಟ್ ಸೆಡಾನ್ ಪ್ರಸ್ತುತ SV ಮತ್ತು V ಎಂಬ ಎರಡು ವೇರಿಯೆಂಟ್‌ಗಳಲ್ಲಿ ಮಾರಾಟ ಮಾಡಲಾಗುತ್ತಿದ್ದು ಕೈಗೆಟುಕುವ ಆಯ್ಕೆಯಾಗಿದೆ.
- ಇದರ ಸ್ಥಗಿತದ ಕುರಿತಾದ ವರದಿಯು ಆಗಸ್ಟ್ 2022 ರಂದು ಮೊದಲ ಬಾರಿಗೆ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿತು.
- ಈ ನಾಲ್ಕನೇ ಪೀಳಿಗೆ ಮಾಡೆಲ್ ಅನ್ನು 2014ರಲ್ಲಿ ಬಿಡುಗಡೆ ಮಾಡಲಾಯಿತು ಮತ್ತು 2017ರಲ್ಲಿ ಪ್ರಮುಖ ಮಧ್ಯಂತರ ನವೀಕರಣ ಮಾಡಲಾಯಿತು.
- ಇದರಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್‌ಗಳೆರಡೂ ಲಭ್ಯವಿದ್ದವು ಮತ್ತು ಮೊದಲನೆಯದು CVT ಆಯ್ಕೆಯನ್ನೂ ಹೊಂದಿತ್ತು.
- ಹೋಂಡಾ 2020 ರಲ್ಲಿ ಐದನೇ-ಪೀಳಿಗೆ ಮಾಡೆಲ್ ಅನ್ನು ಬಿಡುಗಡೆ ಮಾಡಿದ ನಂತರ ಹಿಂದಿನ ಪೀಳಿಗೆ ಸಿಟಿಯ ಪೆಟ್ರೋಲ್-CVT ಮತ್ತು ಡೀಸೆಲ್ ವೇರಿಯೆಂಟ್‌ಗಳನ್ನು ಸ್ಥಗಿತಗೊಳಿಸಿತು.
- ಏಳು-ಇಂಚಿನ ಟಚ್‌ಸ್ಕ್ರೀನ್, ಕ್ರ್ಯೂಸ್ ಕಂಟ್ರೋಲ್ ಮತ್ತು ಆಟೋ AC ಫೀಚರ್‌ಗಳನ್ನು ಇದು ಹೊಂದಿದೆ.
ನವೀಕೃತ ಐದನೇ-ಪೀಳಿಗೆ ಸಿಟಿಯ ಆಗಮನದ ಜೊತೆಯಲ್ಲೇ ಹೋಂಡಾ ಈ ಸೆಡಾನ್‌ನ ಹಳೆಯದಾಗುತ್ತಿರುವ ನಾಲ್ಕನೇ-ಪೀಳಿಗೆ ಮಾಡೆಲ್‌ಗೆ ಏಪ್ರಿಲ್‌ನಲ್ಲಿ ವಿದಾಯ ಹೇಳುವ ಬಗ್ಗೆ ದೃಢೀಕರಿಸಿದೆ. ಮೂಲತಃ 2022 ರ ಅಂತ್ಯದಲ್ಲೇ ಇದು ಸಂಭವಿಸುವ ನಿರೀಕ್ಷೆ ಇದ್ದರೂ, ಅದರ ಸ್ಥಗಿತದ ಬಗ್ಗೆ ಆಗಸ್ಟ್ 2022 ರ ಅದರ ವರದಿಯು ಇದನ್ನು ದೃಢೀಕರಿಸುತ್ತದೆ.
ಒಂದು ಸಂಕ್ಷಿಪ್ತ ಹಿನ್ನೋಟ
ಈ ನಾಲ್ಕನೇ-ಪೀಳಿಗೆ ಸಿಟಿಯನ್ನು ಭಾರತದಲ್ಲಿ 2014ರಲ್ಲಿ ಬಿಡುಗಡೆ ಮಾಡಲಾಗಿತ್ತು ಮತ್ತು 2017ರಲ್ಲಿ ಮಧ್ಯಂತರ ನವಿಕರಣವನ್ನು ಮಾಡಲಾಯಿತು. ಆದಾಗ್ಯೂ, ಇದರಲ್ಲಿ ಪೆಟ್ರೋಲ್-ಮ್ಯಾನುವಲ್ ಆಯ್ಕೆಯನ್ನು ಮಾತ್ರ ನೀಡಿ, ಪೆಟ್ರೋಲ್-CVT ಮತ್ತು ಡೀಸೆಲ್ ಆಯ್ಕೆಗಳನ್ನು ಸ್ಥಗಿತಗೊಳಿಸಲಾಗಿತ್ತು.
ಇದನ್ನೂ ನೋಡಿ: ಹೊಸ ಹೋಂಡಾ SUV ಟೆಸ್ಟಿಂಗ್ ಮತ್ತೊಮ್ಮೆ ಕಂಡುಬಂದಿದ್ದು, ADAS ಇರೋದು ಪಕ್ಕಾ
ಬೋನೆಟ್‌ನೊಳಗೆ ಏನಿದೆ?
ಪವರ್‌ಟ್ರೇನ್ ಬಗ್ಗೆ ಹೇಳುವುದಾದರೆ, ಈ ನಾಲ್ಕನೇ-ಪೀಳಿಗೆ ಸಿಟಿಗೆ 1.5-ಲೀಟರ್ ಪೆಟ್ರೋಲ್ ಇಂಜಿನ್ (119PS/145Nm) ನೀಡಲಾಗಿದ್ದು, ಇದು 1.5-ಲೀಟರ್ ಡೀಸೆಲ್ ಇಂಜಿನ್ ಅನ್ನೂ ಹೊಂದಿತ್ತು (100PS/200Nm), ಆದರೆ ಈಗ ಇದು ಸ್ಥಗಿತಗೊಂಡಿದೆ. ಫೈವ್ –ಸ್ಪೀಡ್ MT ಅನ್ನು ಸ್ಟಾಂಡರ್ಡ್ ಆಗಿ ನೀಡಲಾಗಿದ್ದು, ಪೆಟ್ರೋಲ್ CVT ಆಟೋಮ್ಯಾಟಿಕ್ ಆಯ್ಕೆಯನ್ನು ಹೊಂದಿತ್ತು. ಈಗ ಲಭ್ಯವಿರುವ ಪೆಟ್ರೋಲ್-MT ಹೊಂದಿರುವ ನಾಲ್ಕನೇ-ಪೀಳಿಗೆ ಸಿಟಿ 17.4kmpl ಮೈಲೇಜ್ ನೀಡುತ್ತದೆ.
ಹೊಂದಿರುವ ವೈಶಿಷ್ಟ್ಯಗಳು
ಈ ಹಳೆಯ ಕಾಂಪ್ಯಾಕ್ಟ್ ಸೆಡಾನ್‌ಗೆ ಹೋಂಡಾ ಆಟೋ ಕ್ಲೈಮೇಟ್ ಕಂಟ್ರೋಲ್, ಏಳು ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ಎತ್ತರ-ಹೊಂದಿಸಬಹುದಾದ ಡ್ರೈವರ್ ಸೀಟ್ ಮತ್ತು ಪುಶ್-ಬಟನ್ ಸ್ಟಾರ್ಟ್ /ಸ್ಟಾಪ್ ಅನ್ನು ನೀಡುತ್ತಿದೆ. ಈ ನಾಲ್ಕನೇ ಪೀಳಿಗೆ ಸಿಟಿ ನಾಲ್ಕು-ಸ್ಪೀಕರ್‌ನ ಮ್ಯೂಸಿಕ್ ಸಿಸ್ಟಮ್, ನಾಲ್ಕು ಟ್ವೀಟರ್‌ಗಳು, ಕ್ರ್ಯೂಸ್ ಕಂಟ್ರೋಲ್ ಮತ್ತು ಕೀರಹಿತ ಪ್ರವೇಶವನ್ನೂ ನೀಡುತ್ತಿದೆ.
ಪ್ರಯಾಣಿಕ ಸುರಕ್ಷತೆಯನ್ನು ಎರಡು ಮುಂಭಾಗದ ಏರ್‌ಬ್ಯಾಗ್‌ಗಳು, ISOFIX ಚೈಲ್ಡ್ ಸೀಟ್ ಆ್ಯಂಕೋರೇಜ್‌ಗಳೊಂದಿಗೆ ಖಾತ್ರಿಪಡಿಸಲಾಗಿದೆ, ABS ಜೊತೆಗೆ EBD, ಮತ್ತು ರಿಯರ್ ಪಾರ್ಕಿಂಗ್ ಸೆನ್ಸರ್‌ಗಳನ್ನು ಹೊಂದಿದೆ.
ವೇರಿಯೆಂಟ್‌ಗಳು, ಬೆಲೆಗಳು ಮತ್ತು ಪ್ರತಿಸ್ಪರ್ಧಿಗಳು
ಹೋಂಡಾ ಈ ಸೆಡಾನ್ ಅನ್ನು SV ಮತ್ತು V ಎಂಬ ಎರಡು ವೇರಿಯೆಂಟ್‌ಗಳಲ್ಲಿ ಮಾರುತ್ತಿದ್ದು ಇದರ ಬೆಲೆಯನ್ನು ರೂ 9.50 ಲಕ್ಷ ಮತ್ತು ರೂ 10 ಲಕ್ಷದ (ಎಕ್ಸ್-ಶೋರೂಂ ದೆಹಲಿ) ನಡುವೆ ನಿಗದಿಪಡಿಸಲಾಗಿದೆ. ಈ ನಾಲ್ಕನೇ ಪೀಳಿಗೆ ಸಿಟಿ ಮುಖ್ಯವಾಗಿ ಮಾರುತಿ ಸಿಯಾಝ್ ಮತ್ತು ಹ್ಯುಂಡೈ ವರ್ನಾಗೆ ಪ್ರತಿಸ್ಪರ್ಧಿಯಾಗಿದೆ.
ಇನ್ನಷ್ಟು ಓದಿ : ಸಿಟಿ 4ನೇ ಪೀಳಿಗೆ, ಆನ್‌ರೋಡ್ ಬೆಲೆ