• English
  • Login / Register

ದಕ್ಷಿಣ ಕೊರಿಯಾದಲ್ಲಿ Hyundai Alcazar Faceliftನ ಸ್ಪೈ ಟೆಸ್ಟಿಂಗ್, ಈ ವರ್ಷ ಭಾರತೀಯ ಮಾರುಕಟ್ಟೆಗೆ ಬರುವ ಸಾಧ್ಯತೆ

ಹುಂಡೈ ಅಲ್ಕಝರ್ ಗಾಗಿ rohit ಮೂಲಕ ಏಪ್ರಿಲ್ 04, 2024 08:48 am ರಂದು ಮಾರ್ಪಡಿಸಲಾಗಿದೆ

  • 30 Views
  • ಕಾಮೆಂಟ್‌ ಅನ್ನು ಬರೆಯಿರಿ

ಫೇಸ್‌ಲಿಫ್ಟ್ ಆಗಿರುವ ಹ್ಯುಂಡೈ ಅಲ್ಕಾಜರ್ ಹೊಸ ಕ್ರೆಟಾದಿಂದ ವಿಭಿನ್ನವಾಗಿ ಕಾಣಲು ರೀಡಿಸೈನ್ ಗೊಳಿಸಲಾದ ಮುಂಭಾಗವನ್ನು ಹೊಂದಬಹುದು.

2024 Hyundai Alcazar spied

  •  ಹೊರಭಾಗದ ಬದಲಾವಣೆಗಳಲ್ಲಿ ಹೊಸ ಗ್ರಿಲ್ ಡಿಸೈನ್, ಹೊಚ್ಚ ಹೊಸ ಅಲೊಯ್ ವೀಲ್ಸ್ ಮತ್ತು ಲಂಬವಾಗಿ ಜೋಡಿಸಲಾದ LED ಟೈಲ್ ಲೈಟ್‌ಗಳು ಸೇರಿವೆ.
  •  ಇದು ಈಗಿರುವ ಮಾಡೆಲ್ ನಲ್ಲಿ ಇರುವ 6- ಮತ್ತು 7-ಸೀಟ್ ಲೇಔಟ್‌ಗಳಲ್ಲಿ ಬರಲಿವೆ ಎಂದು ನಿರೀಕ್ಷಿಸಲಾಗಿದೆ.
  •  ಕ್ಯಾಬಿನ್ ಅಪ್ಡೇಟ್ ಗಳಲ್ಲಿ ಡ್ಯುಯಲ್ ಡಿಜಿಟಲ್ ಡಿಸ್ಪ್ಲೇಗಳಿಗಾಗಿ ಇಂಟಿಗ್ರೇಟೆಡ್ ಸೆಟಪ್ ಅನ್ನು ನೀಡಿರಬಹುದು.
  •  ಇದು ಹೊಸ ಕ್ರೆಟಾದಲ್ಲಿ ಇರುವ ಡ್ಯುಯಲ್-ಜೋನ್ AC ಮತ್ತು ADAS ಸೂಟ್ ಅನ್ನು ಪಡೆಯಬಹುದು.
  •  ಇದು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಅಲ್ಕಾಜರ್‌ನಂತೆಯೇ ಅದೇ ಟರ್ಬೊ-ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳನ್ನು ಪಡೆಯುವ ಸಾಧ್ಯತೆಯಿದೆ.
  •  ಇದು 2024 ರ ಎರಡನೇ ಭಾಗದಲ್ಲಿ ಮಾರುಕಟ್ಟೆಗೆ ಬರಬಹುದು ಎಂದು ನಿರೀಕ್ಷಿಸಲಾಗಿದೆ; ಬೆಲೆಯು ರೂ 17 ಲಕ್ಷದಿಂದ ಪ್ರಾರಂಭವಾಗಬಹುದು (ಎಕ್ಸ್ ಶೋರೂಂ).

2024 ರ ಆರಂಭದಲ್ಲಿ ಫೇಸ್‌ಲಿಫ್ಟ್ ಆಗಿರುವ ಹ್ಯುಂಡೈ ಕ್ರೆಟಾವನ್ನು ಪರಿಚಯಿಸಿದ ನಂತರ, ಈ ಕೊರಿಯನ್ ಕಾರು ತಯಾರಕರು ಈಗ ಅಪ್ಡೇಟ್ ಆಗಿರುವ ಅಲ್ಕಾಜರ್ 3-ಸಾಲು SUV ಅನ್ನು ಭಾರತಕ್ಕೆ ಸಿದ್ಧಪಡಿಸುತ್ತಿದ್ದಾರೆ. ಅಪ್ಡೇಟ್ ಆಗಿರುವ ಹ್ಯುಂಡೈ ಅಲ್ಕಾಜರ್ ಅನ್ನು 2024 ರ ಅಂತ್ಯದ ವೇಳೆಗೆ ಭಾರತದಲ್ಲಿ ಲಾಂಚ್ ಮಾಡುವ ಮೊದಲು ಅದರ ತವರು ದೇಶವಾದ ದಕ್ಷಿಣ ಕೊರಿಯಾದಲ್ಲಿ ಟೆಸ್ಟ್ ಮಾಡಲಾಗಿದೆ.

 ಸ್ಪೈ ಶಾಟ್‌ಗಳಲ್ಲಿ ಸಿಕ್ಕಿದ ವಿವರಗಳು

 ಟೆಸ್ಟ್ ಗಾಡಿಯನ್ನು ಕೆಮೋಫ್ಲೇಜ್ ಮಾಡಲಾಗಿದ್ದರೂ ಕೂಡ, ಹೊಸ ಅಲ್ಕಾಜರ್‌ ಫೇಸ್‌ಲಿಫ್ಟ್ ಆಗಿರುವ ಕ್ರೆಟಾದ ಫೇಸಿಯವನ್ನು ಪಡೆಯುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಆದರೆ, ಇದು ಸ್ಪ್ಲಿಟ್ ಹೆಡ್‌ಲೈಟ್‌ಗಳಂತಹ ವಿಶಿಷ್ಟವಾದ ಹ್ಯುಂಡೈ ಡಿಸೈನ್ ಫೀಚರ್ ಗಳನ್ನು ಅಪ್ಡೇಟ್ ಆಗಿರುವ ಗ್ರಿಲ್‌ನ ಮೇಲೆ ಇರಿಸಲಾಗಿರುವ LED ಡೇಟೈಮ್ ರನ್ನಿಂಗ್ ಲೈಟ್‌ ಪಡೆಯುತ್ತದೆ. ಅಪ್ಡೇಟ್ ಆಗಿರುವ ಅಲ್ಕಾಜರ್‌ನ ಸೈಡ್ ಭಾಗವನ್ನು ನಾವು ಇನ್ನೂ ನೋಡಿಲ್ಲ, ಆದರೆ ಇದು ಹೊಸ ಅಲೊಯ್ ವೀಲ್ ಗಳೊಂದಿಗೆ ಬರುವ ನಿರೀಕ್ಷೆಯಿದೆ. ಫೇಸ್‌ಲಿಫ್ಟ್ ಆಗಿರುವ SUV ಯ ಹಿಂಭಾಗವು ಹೊಸ ಕ್ರೆಟಾದಿಂದ ಮತ್ತಷ್ಟು ವಿಭಿನ್ನವಾಗಿ ಕಾಣಲು ಲಂಬವಾಗಿ ಜೋಡಿಸಲಾದ LED ಟೈಲ್‌ಲೈಟ್‌ಗಳನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದು ಅಸ್ತಿತ್ವದಲ್ಲಿರುವ ಮಾಡೆಲ್ ನಂತೆಯೇ ಡ್ಯುಯಲ್-ಟಿಪ್ ಎಕ್ಸಾಸ್ಟ್ ಅನ್ನು ಪಡೆಯಬಹುದು.

 ನಿರೀಕ್ಷಿಸಲಾಗಿರುವ ಕ್ಯಾಬಿನ್ ಮತ್ತು ಫೀಚರ್ ಅಪ್ಡೇಟ್ ಗಳು

2024 Hyundai Creta cabin

ನಾವು ಇನ್ನೂ ಫೇಸ್‌ಲಿಫ್ಟ್ ಆಗಿರುವ ಅಲ್ಕಾಜರ್‌ನ ಒಳಭಾಗವನ್ನು ನೋಡಿಲ್ಲ, ಆದರೆ ಇದು ಹೊಸ ಕ್ರೆಟಾದ ಒಳಭಾಗದಂತೆ ಇರಬಹುದು, ಹಾಗಾಗಿ ಇಲ್ಲಿ ನಾವು ರೀಡಿಸೈನ್ ಗೊಳಿಸಲಾದ ಡ್ಯಾಶ್‌ಬೋರ್ಡ್ ಅನ್ನು ನಿರೀಕ್ಷಿಸಬಹುದು. ಇದನ್ನು ಕೂಡ 6- ಮತ್ತು 7-ಸೀಟ್ ಲೇಔಟ್‌ಗಳಲ್ಲಿ ನೀಡಲಾಗುತ್ತದೆ. ಹ್ಯುಂಡೈ ತನ್ನ 2024 ಅಲ್ಕಾಜರ್ ಅನ್ನು ಹೊಸ ಕ್ರೆಟಾದಲ್ಲಿರುವ ಎರಡು 10.25-ಇಂಚಿನ ಡಿಜಿಟಲ್ ಡಿಸ್ಪ್ಲೇ (ಒಂದು ಇನ್‌ಸ್ಟ್ರುಮೆಂಟೇಶನ್‌ಗಾಗಿ ಮತ್ತು ಇನ್ನೊಂದು ಇನ್ಫೋಟೈನ್‌ಮೆಂಟ್‌ಗಾಗಿ) ಮತ್ತು ಡ್ಯುಯಲ್-ಜೋನ್ ACಯನ್ನು ಕೂಡ ನೀಡಬಹುದು.

 ಸುರಕ್ಷತೆಯ ದೃಷ್ಟಿಯಿಂದ, ಈ 3-ಸಾಲಿನ ಹ್ಯುಂಡೈ SUV ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), 360-ಡಿಗ್ರಿ ಕ್ಯಾಮೆರಾ ಮತ್ತು ಕ್ರೆಟಾದ ಸುಧಾರಿತ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್ ಗಳ (ADAS) ಆಟೊನೊಮೌಸ್ ಕೊಲಿಷನ್ ಅವೈಡೆನ್ಸ್ ಮತ್ತು ಅಡಾಪ್ಟಿವ್ ಕ್ರೂಸ್‌ ಕಂಟ್ರೋಲ್ ನಂತಹ ಫೀಚರ್ ಗಳನ್ನು ಪಡೆಯಬಹುದು.

ಇದನ್ನು ಕೂಡ ನೋಡಿ: ವೀಕ್ಷಿಸಿ: ಹುಂಡೈ ಸ್ಟಾರ್‌ಗೇಜರ್ ಭಾರತದಲ್ಲಿ ಮಾರುತಿ ಎರ್ಟಿಗಾ ಪ್ರತಿಸ್ಪರ್ಧಿಯಾಗುವ ಸಾಧ್ಯತೆ

 ಅದೇ ಪವರ್‌ಟ್ರೇನ್ ಗಳು

 ಈಗ ಇರುವ ಮಾಡೆಲ್ ನಂತೆಯೇ ಅದೇ ಎಂಜಿನ್-ಗೇರ್‌ಬಾಕ್ಸ್ ಆಯ್ಕೆಗಳೊಂದಿಗೆ ಹ್ಯುಂಡೈ ಹೊಸ ಅಲ್ಕಾಜರ್ ಅನ್ನು ನೀಡುತ್ತಿದೆ:

 ಸ್ಪೆಸಿಫಿಕೇಷನ್

 1.5-ಲೀಟರ್ ಟರ್ಬೊ-ಪೆಟ್ರೋಲ್

 1.5-ಲೀಟರ್ ಡೀಸೆಲ್

 ಪವರ್

160 PS

116 PS

 ಟಾರ್ಕ್

253 Nm

250 Nm

 ಟ್ರಾನ್ಸ್‌ಮಿಷನ್‌

 6-ಸ್ಪೀಡ್ ಮ್ಯಾನುಯಲ್‌, 7-ಸ್ಪೀಡ್ DCT*

 6-ಸ್ಪೀಡ್  ಮ್ಯಾನುಯಲ್‌, 6-ಸ್ಪೀಡ್ AT

 * DCT- ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌  

 ಇದರ ಬೆಲೆ ಎಷ್ಟಿರಬಹುದು?

2024 Hyundai Alcazar rear spied

 ಫೇಸ್‌ಲಿಫ್ಟ್ ಆಗಿರುವ ಹ್ಯುಂಡೈ ಅಲ್ಕಾಜರ್ ಆರಂಭಿಕ ಬೆಲೆಯು ರೂ.17 ಲಕ್ಷದಿಂದ ಶುರುವಾಗಬಹುದು. ಏಕೆಂದರೆ, ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾಡೆಲ್ ಬೆಲೆಯು 16.77 ಲಕ್ಷದಿಂದ 21.28 ಲಕ್ಷದವರೆಗೆ ಇದೆ. ಅಪ್ಡೇಟ್ ಆಗಿರುವ ಈ 3-ಸಾಲು SUVಯು ಮಹೀಂದ್ರ XUV700, ಟಾಟಾ ಸಫಾರಿ ಮತ್ತು MG ಹೆಕ್ಟರ್ ಪ್ಲಸ್ ವಿರುದ್ಧ ಸ್ಪರ್ಧಿಸಲಿದೆ.

 ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್ ಶೋರೂಂ ಬೆಲೆಯಾಗಿದೆ

 ಚಿತ್ರದ ಮೂಲ

 ಇನ್ನಷ್ಟು ಓದಿ: ಹುಂಡೈ ಅಲ್ಕಾಜರ್ ಡೀಸೆಲ್

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Hyundai ಅಲ್ಕಝರ್

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience