Login or Register ಅತ್ಯುತ್ತಮ CarDekho experience ಗೆ
Login

ಬಿಡುಗಡೆಗೂ ಮುನ್ನವೇ Hyundai Creta EV ಯ ಕ್ಯಾಬಿನ್‌ನ ಪೋಟೋಗಳು ಲೀಕ್, ಹೊಸ ಸ್ಟೀರಿಂಗ್ ಮತ್ತು ಡ್ರೈವ್ ಸೆಲೆಕ್ಟರ್ ಸೇರ್ಪಡೆ

published on ಏಪ್ರಿಲ್ 12, 2024 10:35 am by ansh for ಹುಂಡೈ ಕ್ರೆಟಾ ev

ಕ್ರೆಟಾ EV (ಟೆಸ್ಟ್ ಕಾರ್) ಯ ಹೊರಭಾಗದ ಡಿಸೈನ್ ಕ್ರೆಟಾದ ICE ವರ್ಷನ್ ನಂತೆಯೇ ಕನೆಕ್ಟೆಡ್ ಲೈಟಿಂಗ್ ಸೆಟಪ್ ಅನ್ನು ಹೊಂದಿದೆ.

  • ಕ್ರೆಟಾಗೆ ಹೋಲಿಸಿದರೆ ಇದು ಹಿಂದೆ ಇನ್ಸ್ಟಾಲ್ ಮಾಡಲಾದ ಗೇರ್ ಸೆಲೆಕ್ಟರ್‌ನೊಂದಿಗೆ ಹೊಸ ಸ್ಟೀರಿಂಗ್ ವೀಲ್ ಅನ್ನು ಪಡೆಯುತ್ತದೆ.
  • ಅಲಾಯ್ ವೀಲ್ ಗಳು ಮತ್ತು ಕ್ಲೋಸ್ಡ್-ಆಫ್ ಗ್ರಿಲ್ ಹೊರತುಪಡಿಸಿ ಹೊರಗಿನ ಲುಕ್ ಹೆಚ್ಚು ಕಡಿಮೆ ಒಂದೇ ರೀತಿ ಇದೆ.
  • ಇದು ಕ್ರೆಟಾದ ಎಲ್ಲಾ ಸಾಮಾನ್ಯ ಫೀಚರ್ ಗಳನ್ನು ಮತ್ತು EV ನಿರ್ದಿಷ್ಟ ಕೆಲವು ಹೆಚ್ಚುವರಿ ಫೀಚರ್ ಗಳನ್ನು ಪಡೆಯುವ ನಿರೀಕ್ಷಿಯಿದೆ.
  • ಬೆಲೆಯು 20 ಲಕ್ಷದಿಂದ (ಎಕ್ಸ್ ಶೋರೂಂ) ಶುರುವಾಗುವ ನಿರೀಕ್ಷೆಯಿದೆ.

ಹ್ಯುಂಡೈ ಕ್ರೆಟಾ EV ಯು ಭಾರತದಲ್ಲಿ ಹುಂಡೈ ತಯಾರಿಸಿದ ಮುಂದಿನ ಎಲೆಕ್ಟ್ರಿಕ್ ಕಾರ್ ಕೊಡುಗೆಯಾಗಿದೆ ಮತ್ತು ಈ ಕೊರಿಯನ್ ಕಾರು ತಯಾರಕರು ಪ್ರಸ್ತುತ ಅದನ್ನು ಭಾರತದ ರಸ್ತೆಗಳಲ್ಲಿ ಪರೀಕ್ಷಿಸುತ್ತಿದ್ದಾರೆ. ಪ್ರತಿ ಬಾರಿ ಈ ಎಲೆಕ್ಟ್ರಿಕ್ SUV ಯ ಟೆಸ್ಟ್ ವರ್ಷನ್ ಅನ್ನು ನೋಡಿದಾಗ, ನಾವು ಅದರ ಬಗ್ಗೆ ಇನ್ನಷ್ಟು ವಿವರಗಳನ್ನು ಪಡೆಯುತ್ತಿದ್ದೇವೆ. ಇತ್ತೀಚಿನ ಸ್ಪೈ ಫೋಟೋಗಳು ಅದರ ಕ್ಯಾಬಿನ್‌ನ ವಿವರವಾದ ನೋಟವನ್ನು ನೀಡಿವೆ. ಎಲೆಕ್ಟ್ರಿಕ್ ಕ್ರೆಟಾ ದಲ್ಲಿ ಏನೇನಿವೆ ಎಂಬುದನ್ನು ತಿಳಿಯಲು ಮುಂದೆ ಓದಿ.

ಕ್ಯಾಬಿನ್‌ನಲ್ಲಿ ಹೊಸ ಅಪ್ಡೇಟ್ ಗಳು

ಸ್ಪೈ ಶಾಟ್‌ಗಳನ್ನು ನೋಡಿದರೆ, ಕ್ರೆಟಾ EV ಹೆಚ್ಚು ಕಡಿಮೆ ಅದರ ICE (ಇಂಟರ್ನಲ್ ಕಮ್ಬಾಷನ್ ಎಂಜಿನ್) ವರ್ಷನ್ ನಲ್ಲಿರುವ ಅದೇ ಕ್ಯಾಬಿನ್ ಡಿಸೈನ್ ಅನ್ನು ಪಡೆಯಲಿದೆ ಎಂಬುದು ಸ್ಪಷ್ಟವಾಗಿದೆ. ಇದು ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯೂನಿಟ್ ಮತ್ತು ಡಿಜಿಟಲ್ ಡ್ರೈವರ್ ಡಿಸ್‌ಪ್ಲೇಗಾಗಿ ಈಗಾಗಲೇ ಇರುವ ಡ್ಯುಯಲ್-ಇಂಟಿಗ್ರೇಟೆಡ್ ಸ್ಕ್ರೀನ್ ಸೆಟಪ್‌ನೊಂದಿಗೆ ಅದೇ ವೈಟ್ ಮತ್ತು ಬ್ಲಾಕ್ ಕ್ಯಾಬಿನ್ ಥೀಮ್ ಅನ್ನು ಹೊಂದಿದೆ.

ಆದರೆ, ಇದು ಹ್ಯುಂಡೈ ಲೋಗೋವನ್ನು ಹೊಂದಿರದ ವಿಭಿನ್ನ ಸ್ಟೀರಿಂಗ್ ವೀಲ್ ಅನ್ನು ಪಡೆಯುತ್ತದೆ. ಬದಲಾಗಿ, ಇದು ಸಣ್ಣ ಕ್ರೋಮ್ ಪ್ಲೇಟ್ ಅನ್ನು ಹೊಂದಿರುವ ವೃತ್ತಾಕಾರದ ಕ್ರೋಮ್ ರಿಂಗ್ ಅನ್ನು ಪಡೆದಿದೆ. ಇದು ಕಾರಿನ ಹೆಸರು ಅಥವಾ ಪ್ರಪಂಚದಾದ್ಯಂತದ ಇತರ ಹೊಸ ಹ್ಯುಂಡೈ ಎಲೆಕ್ಟ್ರಿಕ್ ವಾಹನಗಳಲ್ಲಿ ಕಂಡುಬರುವ ಕೆಲವು ಚುಕ್ಕೆಗಳನ್ನು ಹೊಂದಿರಬಹುದು. ಅಲ್ಲದೆ, IONIQ 5 ನಲ್ಲಿ ಇರುವಂತೆ, ಕ್ರೆಟಾ EV ಯಲ್ಲಿ ಕೂಡ ಸೆಂಟರ್ ಕನ್ಸೋಲ್‌ನ ಬದಲಾಗಿ ಸ್ಟೀರಿಂಗ್ ವೀಲ್ ನ ಹಿಂದೆ ಡ್ರೈವ್ ಸೆಲೆಕ್ಟರ್ ಅನ್ನು ನೀಡಲಾಗಿದೆ.

ಹೊರಭಾಗದ ಡಿಸೈನ್ ನಲ್ಲಿ ಯಾವುದೇ ಬದಲಾವಣೆಯಿಲ್ಲ

ನೋಡಲಾಗಿರುವ ಟೆಸ್ಟ್ ಗಾಡಿಯನ್ನು ಸಂಪೂರ್ಣವಾಗಿ ಕೆಮಫ್ಲೇಜ್ ಮಾಡಲಾಗಿತ್ತು ಆದರೆ ಲೈಟಿಂಗ್ ಸೆಟಪ್‌ನಂತಹ ಕೆಲವು ಎಲೆಕ್ಟ್ರಿಕ್ SUV ಯ ಫೀಚರ್ ಗಳು ನಮಗೆ ಕಾಣಿಸಿವೆ. ಕ್ರೆಟಾ EV ಕೂಡ ಕ್ರೆಟಾದಂತೆಯೇ ಅದೇ ಕನೆಕ್ಟೆಡ್ LED DRL ಗಳನ್ನು ಮತ್ತು ಟೈಲ್ ಲೈಟ್ ಸೆಟಪ್ ಅನ್ನು ಪಡೆಯುತ್ತದೆ.

ಆದರೆ, EV ಸೆಗ್ಮೆಂಟ್ ಆಗಿರುವುದರಿಂದ ಇಲ್ಲಿ ವಿಭಿನ್ನವಾದ, ಹೆಚ್ಚು ಏರೋಡೈನಾಮಿಕ್ ಆಗಿರುವ ಅಲೊಯ್ ವೀಲ್ಸ್ ಅನ್ನು ನೀಡಲಾಗಿದೆ. ಇದರ ಜೊತೆಗೆ ಕ್ರೆಟಾ EV ಕ್ಲೋಸ್ಡ್-ಆಫ್ ಗ್ರಿಲ್ ಅನ್ನು ಕೂಡ ಪಡೆಯುತ್ತದೆ, ಆದರೆ ಇದು ನಿಮಗೆ ಇಲ್ಲಿ ಕಾಣಿಸುವುದಿಲ್ಲ.

ಫೀಚರ್ ಗಳು ಮತ್ತು ಸುರಕ್ಷತೆ

ಹುಂಡೈ ಕ್ರೆಟಾದ ಕ್ಯಾಬಿನ್ ಚಿತ್ರವನ್ನು ರೆಫರೆನ್ಸ್ ಗಾಗಿ ಬಳಸಲಾಗಿದೆ

ಕ್ರೆಟಾ EV ಯ ಫೀಚರ್ ಗಳ ಕುರಿತು ನಮಗೆ ಇನ್ನೂ ಎಲ್ಲಾ ವಿವರಗಳು ತಿಳಿದಿಲ್ಲ, ಆದರೆ ಇದು ಕ್ರೆಟಾದ ICE ವರ್ಷನ್ ನಲ್ಲಿರುವ ಅದೇ ಫೀಚರ್ ಗಳನ್ನು ಪಡೆಯುವ ಸಾಧ್ಯತೆಯಿದೆ. ಇದು ಡ್ಯುಯಲ್ 10.25-ಇಂಚಿನ ಡಿಸ್ಪ್ಲೇಗಳು (ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಮತ್ತು ಡಿಜಿಟಲ್ ಡ್ರೈವರ್ ಡಿಸ್ಪ್ಲೇ), ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, ವೆಂಟಿಲೇಟೆಡ್ ಫ್ರಂಟ್ ಸೀಟ್ ಗಳು, ವೈರ್ಲೆಸ್ ಫೋನ್ ಚಾರ್ಜರ್ ಮತ್ತು ಪನೋರಮಿಕ್ ಸನ್‌ರೂಫ್‌ ಅನ್ನು ಪಡೆಯುತ್ತದೆ. ಇದು EV ಆಗಿರುವುದರಿಂದ, ವೆಹಿಕಲ್-ಟು-ವೆಹಿಕಲ್ (V2V) ಮತ್ತು ವೆಹಿಕಲ್-ಟು-ಲೋಡ್ (V2L) ಸಾಮರ್ಥ್ಯಗಳೊಂದಿಗೆ ಮಲ್ಟಿ-ಲೆವೆಲ್ ರೀಜನರೇಟಿವ್ ಬ್ರೇಕಿಂಗ್ ಅನ್ನು ಕೂಡ ಪಡೆಯಬಹುದು.

ಇದನ್ನು ಕೂಡ ಓದಿ: ಹುಂಡೈ-ಕಿಯಾ EV ಬ್ಯಾಟರಿಯನ್ನು ಭಾರತದಲ್ಲೇ ತಯಾರಿಸಲಿದೆ, ಎಕ್ಸೈಡ್ ಎನರ್ಜಿ ಜೊತೆ ಪಾಲುದಾರಿಕೆ

ಸುರಕ್ಷತೆಯ ವಿಷಯದಲ್ಲಿ, ಇದು 6 ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), 360-ಡಿಗ್ರಿ ಕ್ಯಾಮೆರಾ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಕೀಪ್ ಅಸಿಸ್ಟ್, ಹೈ ಬೀಮ್ ಅಸಿಸ್ಟ್, ಮತ್ತು ಆಟೊನೊಮಸ್ ಎಮರ್ಜೆನ್ಸಿ ಬ್ರೇಕಿಂಗ್ ನಂತಹ ADAS ಫೀಚರ್ ಗಳನ್ನು ಪಡೆಯಬಹುದು.

ಬ್ಯಾಟರಿ ಪ್ಯಾಕ್ ಮತ್ತು ರೇಂಜ್

ಸದ್ಯಕ್ಕೆ, ಕ್ರೆಟಾ EV ಯ ಬ್ಯಾಟರಿ ಪ್ಯಾಕ್ ಮತ್ತು ಎಲೆಕ್ಟ್ರಿಕ್ ಮೋಟಾರ್ ಬಗ್ಗೆ ವಿವರಗಳು ನಮಗೆ ತಿಳಿದಿಲ್ಲ, ಆದರೆ ಅದರ ಬೆಲೆ ಮತ್ತು ಮಾರುಕಟ್ಟೆಯಲ್ಲಿರುವ ಪ್ರತಿಸ್ಪರ್ಧಿಗಳನ್ನು ನೋಡಿದರೆ, ಇದು 400 ಕಿ.ಮೀ ಗಿಂತ ಹೆಚ್ಚು ಕ್ಲೈಮ್ ಮಾಡಲಾದ ರೇಂಜ್ ಅನ್ನು ನೀಡುವ ಸಾಕಷ್ಟು ದೊಡ್ಡ ಬ್ಯಾಟರಿ ಪ್ಯಾಕ್‌ನೊಂದಿಗೆ ಬರುವ ನಿರೀಕ್ಷೆಯಿದೆ. ಇದು DC ಫಾಸ್ಟ್ ಚಾರ್ಜಿಂಗ್ ಅನ್ನು ಕೂಡ ಸಪೋರ್ಟ್ ಮಾಡಬಹುದು.

ನಿರೀಕ್ಷಿಸಲಾಗಿರುವ ಬೆಲೆ ಮತ್ತು ಪ್ರತಿಸ್ಪರ್ಧಿಗಳು

ಹ್ಯುಂಡೈ ಕ್ರೆಟಾ EV ಬೆಲೆಯು ರೂ. 20 ಲಕ್ಷ ಗಳಿಂದ (ಎಕ್ಸ್ ಶೋರೂಂ) ಶುರುವಾಗಬಹುದು ಮತ್ತು 2025 ರಲ್ಲಿ ಮಾರುಕಟ್ಟೆಗೆ ಬರಬಹುದು. ಇದು MG ZS EV ಮತ್ತು ಟಾಟಾ ಕರ್ವ್ EV ಗೆ ಪ್ರತಿಸ್ಪರ್ಧಿಯಾಗಲಿದೆ.

ಮೂಲ

ಇನ್ನಷ್ಟು ಓದಿ: ಹ್ಯುಂಡೈ ಕ್ರೆಟಾ ಆನ್ ರೋಡ್ ಬೆಲೆ

a
ಅವರಿಂದ ಪ್ರಕಟಿಸಲಾಗಿದೆ

ansh

  • 25 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಹುಂಡೈ ಕ್ರೆಟಾ EV

Read Full News

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
Rs.10.99 - 15.49 ಲಕ್ಷ*
Rs.7.99 - 11.89 ಲಕ್ಷ*
Rs.6.99 - 9.40 ಲಕ್ಷ*
Rs.60.95 - 65.95 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ