Hyundai Creta Facelift ; ಭಾರತದಲ್ಲಿ ಯಾವಾಗ ಬಿಡುಗಡೆಯಾಲಿದೆ ಈ ಆಪ್‌ಡೇಟೆಡ್ ಎಸ್‌ಯುವಿ?
ಹುಂಡೈ ಕ್ರೆಟಾ ಗಾಗಿ rohit ಮೂಲಕ ಡಿಸೆಂಬರ್ 05, 2023 05:38 pm ರಂದು ಪ್ರಕಟಿಸಲಾಗಿದೆ
- 43 Views
- ಕಾಮೆಂಟ್ ಅನ್ನು ಬರೆಯಿರಿ
ಅದೇ ದಿನದಂದು ಹ್ಯುಂಡೈ ತನ್ನ ಫೇಸ್‌ಲಿಫ್ಟೆಡ್ ಕ್ರೆಟಾದ ಬೆಲೆಗಳನ್ನು ಪ್ರಕಟಿಸುವ ಸಾಧ್ಯತೆಯಿದೆ
- ಎರಡನೇ-ಜನರೇಶನ್‌ನ ಕ್ರೆಟಾವನ್ನು 2020 ರ ಆರಂಭದಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲಾಯಿತು ಮತ್ತು ಇದೀಗ ಅದು ಆಪ್‌ಡೇಟ್‌ಗೆ ಸಿದ್ಧವಾಗಿದೆ.
- ಹೊಸ ಗ್ರಿಲ್ ಪಡೆಯುವುದರೊಂದಿಗೆ ಇದು ದೊಡ್ಡದಾದ 18-ಇಂಚಿನ ಅಲಾಯ್ ವೀಲ್‌ಗಳನ್ನು ಮತ್ತು ಆಪ್‌ಡೇಟ್ ಆಗಿರುವ LED ಲೈಟಿಂಗ್‌ನ್ನು ಹೊಂದಿದೆ.
- ಇದರ ಕ್ಯಾಬಿನ್ ವಿಭಿನ್ನ ಡ್ಯಾಶ್‌ಬೋರ್ಡ್ ವಿನ್ಯಾಸ ಮತ್ತು ಸೀಟ್ ಅಪ್‌ಹೊಲ್ಸ್‌ಟೆರಿಯನ್ನು ಹೊಂದಿರುವ ಸಾಧ್ಯತೆ ಇದೆ.
- ಡಿಜಿಟಲ್ ಡ್ರೈವರ್ ಡಿಸ್ಪ್ಲೇ, 360-ಡಿಗ್ರಿ ಕ್ಯಾಮೆರಾ ಮತ್ತು ADAS ಅನ್ನು ಸಹ ಪಡೆಯಬಹುದು.
- ಪ್ರಸ್ತುತ ಪವರ್‌ಟ್ರೇನ್ ಆಯ್ಕೆಗಳಿಗೆ ಬದಲಾವಣೆ ತರುವ ಸಾಧ್ಯತೆ ಕಡಿಮೆ, ಆದರೆ ವೆರ್ನಾದ ಟರ್ಬೊ-ಪೆಟ್ರೋಲ್ ಎಂಜಿನ್ ಇದರಲ್ಲಿಯೂ ಪರಿಚಯಿಸಬಹುದು.
- ಇದರ ಎಕ್ಸ್ ಶೋರೂಂ ಬೆಲೆಗಳು 10.50 ಲಕ್ಷದಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ.
ಎರಡನೇ ತಲೆಮಾರಿನ ಹುಂಡೈ ಕ್ರೆಟಾ ಭಾರತದಲ್ಲಿ 2020 ರ ಆರಂಭದಲ್ಲಿ ಮಾರಾಟವಾಯಿತು ಮತ್ತು ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ 2023 ರ ಮಧ್ಯದಿಂದ ರೂಪುಗೊಂಡಿದೆ. ಆದರೆ ಈಗ ಫೇಸ್‌ಲಿಫ್ಟೆಡ್ ಎಸ್‌ಯುವಿ ಭಾರತದಲ್ಲಿ ಜನವರಿ 16 ರಂದು ಪಾದಾರ್ಪಣೆ ಮಾಡುವ ಸಾಧ್ಯತೆಯಿದೆ ಎಂದು ನಮಗೆ ಬಲ್ಲಮೂಲಗಳಿಂದ ತಿಳಿದುಬಂದಿದೆ.
ಈ ಫೇಸ್‌ಲಿಫ್ಟೆಡ್ ಕಾರಿನ ವಿಶೇಷತೆಯಲ್ಲಿ ಏನೆಲ್ಲಾ ಇರುತ್ತದೆ ಎಂಬುದರ ಕ್ವಿಕ್ ರೌಂಡಪ್ ಇಲ್ಲಿದೆ:
ನೂತನ ಲುಕ್‌ನ ಮುಂಭಾಗ
ಕೆಲವು ತಿಂಗಳಿನ ಹಿಂದೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆ ಮಾಡಲಾದ ನವೀಕರಿಸಿದ ಮೊಡೆಲ್‌ಗಿಂತ ಇದು ವಿಭಿನ್ನ ವಿನ್ಯಾಸವನ್ನು ಹೊಂದಿರಲಿದೆ. ಇತ್ತೀಚೆಗೆ ಪ್ರತ್ಯಕ್ಷವಾಗಿರುವ ಪರೀಕ್ಷಾ ಮೊಡೆಲ್ ಹೊಸ ಎಲ್ಇಡಿ ಹೆಡ್‌ಲೈಟ್‌ಗಳು ಮತ್ತು ಡಿಆರ್‌ಎಲ್‌ಗಳನ್ನು ದೊಡ್ಡದಾಗಿ ಮತ್ತು ಹೆಚ್ಚಾಗಿ ಸ್ಕ್ವೇರ್ ಆಕಾರವನ್ನು ಹೊಂದಿದೆ. ಹ್ಯುಂಡೈ ಇದರಲ್ಲಿ ಹೊಸ ಕ್ರೋಮ್ ಸ್ಟಡ್ಡಿಂಗ್ ಮತ್ತು ಬದಲಾವಣೆ ಮಾಡಿದ ಬಂಪರ್‌ಗಳೊಂದಿಗೆ ಮರುವಿನ್ಯಾಸಗೊಳಿಸಲಾದ ಮುಂಭಾಗದ ಗ್ರಿಲ್ ಅನ್ನು ಸಹ ಒದಗಿಸಬಹುದು.
2024ರ ಈ ಕ್ರೆಟಾದ ಪ್ರೊಫೈಲ್ ಪ್ರಸ್ತುತ ಮೊಡೆಲ್‌ನಲ್ಲಿ ಹಿಂಬದಿ ಡಿಸ್ಕ್ ಬ್ರೇಕ್‌ಗಳೊಂದಿಗೆ ದೊಡ್ಡ 18-ಇಂಚಿನ ಅಲಾಯ್ ವೀಲ್‌ಗಳನ್ನು ಸೇರಿಸುವುದನ್ನು ಹೊರತುಪಡಿಸಿ, ಬಹುತೇಕ ಎಲ್ಲಾ ಬದಲಾಗದೆ ಕಾಣುತ್ತದೆ. ಇದನ್ನು ಬಹುಶಃ ಹ್ಯುಂಡೈ ಅಲ್ಕಾಜರ್‌ನಿಂದ ಎರವಲು ಪಡೆಯಲಾಗಿದೆ. ಸ್ಪ್ಲಿಟ್ ಮತ್ತು ಕನೆಕ್ಟೆಡ್ ಎಲ್‌ಇಡಿ ಟೈಲ್‌ಲೈಟ್‌ಗಳು ಮತ್ತು ಡೈನಾಮಿಕ್ ಟರ್ನ್ ಇಂಡಿಕೇಟರ್‌ಗಳೊಂದಿಗೆ ನಾವು ಹೊಸ ಎಸ್‌ಯುವಿಯನ್ನು ನೋಡಬಹುದು.
ಇದರ ಕ್ಯಾಬಿನ್ ಮತ್ತು ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ..
ಹ್ಯುಂಡೈ ವಿಭಿನ್ನ ಡ್ಯಾಶ್‌ಬೋರ್ಡ್ ವಿನ್ಯಾಸ ಮತ್ತು ಹೊಸ ಸೀಟ್ ಅಪ್ಹೋಲ್‌ಸ್ಟರಿಯನ್ನು ಅಳವಡಿಸುವ ಮೂಲಕ ಇಂಟಿರೀಯರ್‌ನ ಸೌಕರ್ಯವನ್ನು ಸುಧಾರಿಸುವ ನಿರೀಕ್ಷೆಯಿದೆ.
ಸೌಕರ್ಯಗಳ ಅಂಶವನ್ನು ಗಮನಿಸುವಾಗ, ಫೇಸ್‌ಲಿಫ್ಟೆಡ್ ಕ್ರೆಟಾವು 360-ಡಿಗ್ರಿ ಕ್ಯಾಮೆರಾ, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ (ಬಹುಶಃ ಅಲ್ಕಾಜರ್‌ನಿಂದ 10.25-ಇಂಚಿನ ಸ್ಕ್ರೀನ್), ಬಿಸಿಯಾಗುವ ಸೌಕರ್ಯವಿರುವ ಮುಂಭಾಗದ ಸೀಟ್‌ಗಳು ಮತ್ತು ಡ್ಯಾಶ್‌ಕ್ಯಾಮ್ ಅನ್ನು ಸೇರಿಸುವ ಸಾಧ್ಯತೆಯಿದೆ. ಇದು ಪ್ರಸ್ತುತ ಮೊಡೆಲ್‌ನಂತೆ ಅದೇ 10.25-ಇಂಚಿನ ಟಚ್‌ಸ್ಕ್ರೀನ್, ಪೆನರೋಮಿಕ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜಿಂಗ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳೊಂದಿಗೆ ಸಜ್ಜುಗೊಳ್ಳುವುದನ್ನು ಮುಂದುವರಿಸುತ್ತದೆ.
ಆಪ್‌ಡೇಟ್ ಆಗಿರುವ ಹ್ಯುಂಡೈ ಕ್ರೆಟಾವು ಹೊಸ ಹ್ಯುಂಡೈ ವೆರ್ನಾದಲ್ಲಿ ಕಂಡುಬರುವಂತೆಯೇ ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳೊಂದಿಗೆ (ADAS) ನೀಡಲಾಗುವುದು ಎಂದು ನಿರೀಕ್ಷಿಸಲಾಗಿದೆ. ಇವುಗಳು ಲೇನ್-ಕೀಪ್ ಅಸಿಸ್ಟ್, ಆಟೋನೊಮಸ್ ಎಮೆರ್ಜೆನ್ಸಿ ಬ್ರೇಕಿಂಗ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಅನ್ನು ಒಳಗೊಂಡಿರಬಹುದು. ಇದು ಆರು ಏರ್‌ಬ್ಯಾಗ್‌ಗಳನ್ನು (ಬಹುಶಃ ಫೇಸ್‌ಲಿಫ್ಟ್‌ನೊಂದಿಗೆ ಸ್ಟ್ಯಾಂಡರ್ಡ್ ಆಗಿ), ISOFIX ಚೈಲ್ಡ್ ಸೀಟ್ ಆಂಕಾರೇಜ್‌ಗಳು ಮತ್ತು ರಿವರ್ಸಿಂಗ್ ಕ್ಯಾಮೆರಾವನ್ನು ಪಡೆಯುವುದನ್ನು ಮುಂದುವರಿಸುತ್ತದೆ.
ಟರ್ಬೊ-ಪೆಟ್ರೋಲ್ ಆಯ್ಕೆ
2024 ಹ್ಯುಂಡೈ ಕ್ರೆಟಾ ಹಲವಾರು ಪವರ್‌ಟ್ರೇನ್‌ಗಳೊಂದಿಗೆ ಲಭ್ಯವಿರುತ್ತದೆ, ಅವುಗಳು ಈ ಕೆಳಗಿನಂತಿವೆ:
ವಿಶೇಷತೆಗಳು |
1.5-ಲೀಟರ್ ಎನ್.ಎ. ಪೆಟ್ರೋಲ್ |
1.5-ಲೀಟರ್ ಟರ್ಬೊ-ಪೆಟ್ರೋಲ್ |
1.5-ಲೀಟರ್ ಡೀಸೆಲ್ |
ಪವರ್ |
115 ಪಿಎಸ್ |
160 ಪಿಎಸ್ |
116 ಪಿಎಸ್ |
ಟಾರ್ಕ್ |
144 ಎನ್‌ಎಮ್ |
253 ಎನ್‌ಎಮ್ |
250 ಎನ್ಎಂ |
ಟ್ರಾನ್ಸ್‌ಮಿಶನ್ |
6-ಸ್ಪೀಡ್ ಮ್ಯಾನುಯಲ್, CVT |
6-ಸ್ಪೀಡ್ ಮ್ಯಾನುಯಲ್/ 7-ಸ್ಪೀಡ್ DCT |
6-ಸ್ಪೀಡ್ ಮ್ಯಾನುಯಲ್/ 6-ಸ್ಪೀಡ್ ಆಟೋಮ್ಯಾಟಿಕ್ |
ಸ್ವಲ್ಪ ಸಮಯಗಳ ಹಿಂದೆ ಈಗಾಗಲೇ ಸ್ಥಗಿತಗೊಂಡಿರುವ ಕ್ರೆಟಾಗೆ 1.4-ಲೀಟರ್ ಟರ್ಬೊ-ಪೆಟ್ರೋಲ್ ಆಯ್ಕೆಯನ್ನು ಬದಲಿಗೆ ಈಗ-ಪರಿಚಿತವಾಗಿರುವ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನ ಸೇರ್ಪಡೆ ಮಾತ್ರ ಈಗಿನ ಬದಲಾವಣೆಯಾಗಿದೆ.
ಇದನ್ನೂ ಓದಿ: ಕ್ಯಾಲೆಂಡರ್ ವರ್ಷದ ಅಂತ್ಯದ ವೇಳೆಗೆ ಹೊಸ ಕಾರು ಖರೀದಿಸುವ ಎಲ್ಲಾ ಅನುಕೂಲಗಳು ಮತ್ತು ಅನಾನುಕೂಲಗಳು
ಬೆಲೆ ಮತ್ತು ಸ್ಪರ್ಧೆ
ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಆರಂಭಿಕ ಎಕ್ಸ್ ಶೋ ರೂಂ ಬೆಲೆ ರೂ 10.50 ಲಕ್ಷದಿಂದ ಪ್ರಾರಂಭವಾಗಬಹುದೆಂದು ಎಂದು ನಾವು ನಿರೀಕ್ಷಿಸುತ್ತೇವೆ. ಇದು ಮಾರುಕಟ್ಟೆಯಲ್ಲಿ ಮಾರುತಿ ಗ್ರ್ಯಾಂಡ್ ವಿಟಾರಾ, ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್, ಕಿಯಾ ಸೆಲ್ಟೋಸ್, ಹೋಂಡಾ ಎಲಿವೇಟ್, ವೋಕ್ಸ್‌ವ್ಯಾಗನ್ ಟೈಗನ್, ಸ್ಕೋಡಾ ಕುಶಾಕ್ ಮತ್ತು ಸಿಟ್ರೊಯೆನ್ C3 ಏರ್‌ಕ್ರಾಸ್‌ನೊಂದಿಗೆ ತನ್ನ ಪೈಪೋಟಿಯನ್ನು ಮುಂದುವರಿಸುತ್ತದೆ.
ಇನ್ನಷ್ಟು ಓದಿ: ಹುಂಡೈ ಕ್ರೆಟಾ ಆಟೋಮ್ಯಾಟಿಕ್