ಹುಂಡೈ ಕ್ರೆಟಾ ತನ್ನ ಕಿರೀಟವನ್ನು ಕಿಯಾ ಸೆಲ್ಟೋಸ್ ಗೆ ಬಿಟ್ಟುಕೊಟ್ಟಿದೆ.
published on sep 11, 2019 12:30 pm by dhruv ಕಿಯಾ ಸೆಲ್ಟೋಸ್ ಗೆ
- 28 ವೀಕ್ಷಣಿಗಳು
- ಕಾಮೆಂಟ್ ಅನ್ನು ಬರೆಯಿರಿ
ಭಾರತದ ಆಟೋ ಉದ್ಯಮದಲ್ಲಿ ಹಿನ್ನಡೆ ಉಂಟಾಗಿದ್ದರೂ ಸಹ , ಕಾಂಪ್ಯಾಕ್ಟ್ SUV ಗಳು ಆಗಸ್ಟ್ ತಿಂಗಳಲ್ಲಿ ಉತ್ತಮ ಬೇಡಿಕೆ ಪಡೆದಿದೆ.
- ಕಿಯಾ ಸೆಲ್ಟೋಸ್ ಶೇಕಡಾ 36 ಮಾರ್ಕೆಟ್ ಶೇರ್ ಅನ್ನು ಪಡೆದಿದೆ , ಬಿಡುಗಡೆಯಾದ ಒಂದು ತಿಂಗಳಿನಲ್ಲೇ.
- ಹುಂಡೈ ನವರು 6,000 ಯೂನಿಟ್ ಗಳಿಗಿಂತಲೂ ಹೆಚ್ಚಿನ ಕ್ರೆಟಾ ಗಳನ್ನು ಮಾರಾಟ ಮಾಡಿದೆ ಆದರೆ ಅದು ಆಶ್ಚರ್ಯಕರವಾಗಿ ಶೇಕಡಾ 30 ವರ್ಷದ ಮಾರ್ಕೆಟ್ ಶೇರ್ ಕಳೆದುಕೊಂಡಿದೆ.
- ಮಹಿಂದ್ರಾ ಸ್ಕಾರ್ಪಿಯೊ ತನ್ನ ಮಾರ್ಕೆಟ್ ಶೇರ್ ಅನ್ನು ಶೇಕಡಾ 17 ಒಂದಿಗೆ ಸ್ಥಿರವಾದ ಮಾರಾಟದ ಸಂಖ್ಯೆಗಳನ್ನು ಪಡೆದಿದೆ.
- ರೆನಾಲ್ಟ್ ಡಸ್ಟರ್ ಆಗಸ್ಟ್ 2019 ರಲ್ಲಿ ಮಾರುತಿ S-ಕ್ರಾಸ್ ಗಿಂತಲೂ ಮುನ್ನಡೆ ಸಾಧಿಸಿದೆ.
- ಒಟ್ಟಾರೆ, ನಿಸ್ಸಾನ್ ಕಿಕ್ಸ್ ಮತ್ತು ರೆನಾಲ್ಟ್ ಕ್ಯಾಪ್ಟರ್ ಸುಮಾರು 200 ಗಿಂತಲೂ ಸ್ವಲ್ಪ ಹೆಚ್ಚಾಗಿದ್ದು ಅತಿ ಕಡಿಮೆ ಮಾರಾಟ ಸಂಖ್ಯೆಗಳನ್ನು ಹೊಂದಿದೆ.
ಕಾಂಪ್ಯಾಕ್ಟ್ SUV ವಿಭಾಗ ಈಗ ಹೊಸ ಪ್ರತಿ ಸ್ಪರ್ದಿಯನ್ನು ಪಡೆದಿದೆ, ಕಿಯಾ ಸೇಲ್ಟೋಸ್ ರೂಪದಲ್ಲಿ. ಹೊಸ ಆಗಮನದೊಂದಿಗೆ ಏನೇನು ಬದಲಾವಣೆಗಳು ಕಂಡುಬಂದಿದೆ ಮತ್ತು ಆಟೋಮೊಬೈಲ್ ಉದ್ಯಮದಲ್ಲಿ ಹಿನ್ನಡತೆ ಉಂಟಾಗಿರುವುದು ಕಾಂಪ್ಯಾಕ್ಟ್ SUV ವಿಭಾಗದಲ್ಲಿ ಯಾವ ರೀತಿ ಪರಿಣಾಮ ಬೀರಿದೆ? ಉತ್ತರಕ್ಕಾಗಿ ನಾವು ಅಂಕೆ ಸಂಖ್ಯೆಗಳನ್ನು ಪರಿಶೀಲಿಸೋಣ.
ಕಾಂಪ್ಯಾಕ್ಟ್ SUV ಗಳು ಮತ್ತು ಕ್ರಾಸ್ ಓವರ್ ಗಳು |
|||||||
|
August 2019 |
July 2019 |
MoM Growth |
Market share current(%) |
Market share (% last year) |
YoY mkt share (%) |
Average sales (6 months) |
ಕಿಯಾ ಸೆಲ್ಟೋಸ್ |
6236 |
0 |
NA |
36.82 |
0 |
34.63 |
36.82 |
ಹುಂಡೈ ಕ್ರೆಟಾ |
6001 |
6585 |
-8.86 |
35.43 |
65.46 |
-30.03 |
9352 |
ಮಹಿಂದ್ರಾ ಸ್ಕಾರ್ಪಿಯೊ |
2862 |
2864 |
-0.06 |
16.89 |
22.71 |
-5.82 |
3870 |
ರೆನಾಲ್ಟ್ ಡಸ್ಟರ್ |
967 |
943 |
2.54 |
5.7 |
3.86 |
1.84 |
780 |
ಮಾರುತಿ ಸುಜುಕಿ S-ಕ್ರಾಸ್ |
666 |
654 |
1.83 |
3.93 |
5.75 |
-1.82 |
1713 |
ನಿಸ್ಸಾನ್ ಕಿಕ್ಸ್ |
172 |
132 |
30.3 |
1.01 |
0 |
1.01 |
325 |
ರೆನಾಲ್ಟ್ ಕ್ಯಾಪ್ಟರ್ |
32 |
24 |
33.33 |
0.18 |
2.19 |
-2.01 |
205 |
ಒಟ್ಟು |
16936 |
11178 |
51.51 |
99.96 |
|
|
|
ಕಿಯಾ ಸೆಲ್ಟೋಸ್ : ಕಿಯಾ SUV ಈ ವಿಭಾಗದ ಮೇಲೆ ತಕ್ಷಣದ ಪರಿಣಾಮ ಬೀರಿದೆ. ಹುಂಡೈ ಕ್ರೆಟಾ ನಿಂದ ಮೊದಲ ಸ್ಥಾನ ಪಡೆಯುವುದರೊಂದಿಗೆ. ಅದು ದೊಡ್ಡ ಸಾಧನೆ ಆಗಿದ್ದರು, ಅಷ್ಟೇನೂ ಆಶ್ಚರ್ಯ ಆಗುವುದಿಲ್ಲ. ಕಿಯಾ ಸೆಲ್ಟೋಸ್ ಗಾಗಿ ಬಿಡುಗಡೆ ಮುಂಚಿನಿಂದಲೂ ಬೇಡಿಕೆ ಹೂಎಚ್ಚು ಆಗಿತ್ತು. ಮತ್ತು ಕಿಯಾ ದವರು ಬೆಲೆ ಪಟ್ಟಿ ಬಹಿರಂಗ ಪಡಿಸಿದ ತಕ್ಷಣ , ಬಹಳಷ್ಟು ಹೊಸ SUV ಗ್ರಾಹಕರು ಸೆಲ್ಟೋಸ್ ಅನ್ನು ತಮ್ಮ ಗ್ಯಾರೇಜ್ ನಲ್ಲಿ ಹೊಂದಲು ಬಯಸಿದ್ದರು. ಈಗಿರುವ ಉತ್ತರಿಸಬೇಕಾಗಿರುವ ಪ್ರಶ್ನೆ ಎಂದರೆ, ಕಿಯಾ ಸೆಲ್ಟೋಸ್ ಅದೇ ಪಥವನ್ನು ಆಟೋಮೊಬೈಲ್ ಉದ್ಯಮ ಹಿನ್ನಡೆ ಹೊಂದಿರುವಾಗ ನಿಭಾಯಿಸಬಲ್ಲದೇ ಎಂದು.
ಹುಂಡೈ ಕ್ರೆಟಾ: ಕ್ರೆಟಾ ಒಂದು ನಿರ್ವಿವಾದ ವಾಗಿ ಈ ವಿಭಾಗದ ರಾಜನಂತೆ ಇತ್ತು ಬಹಳಷ್ಟು ಸಮಯದಿಂದ, ಈಗ ಸೆಲ್ಟೋಸ್ ಪ್ರವೇಶ ನಂತರ ಹುಂಡೈ ಶೇಕಡಾ 30 ಮಾರ್ಕೆಟ್ ಶೇರ್ ಕಳೆದುಕೊಂಡಿದೆ. ಕ್ರೆಟಾ ಈಗಾಗಲೇ ನಾಲ್ಕು ವರ್ಷಗಳಿಂದ ಮಾರ್ಕೆಟ್ ನಲ್ಲಿ ಲಭ್ಯವಿದ್ದು ಅದು 6,000 ಯೂನಿಟ್ ಮಾರಾಟವಾಗಲು ನಿಭಾಯಿಸಿದೆ. ಹುಂಡೈ ನವರು ಎರೆಡನೆ ಜೆಂ ಕ್ರೆಟಾ ವನ್ನು ಮುಂಬಾಯುವ 2020 ಆಟೋ ಎಕ್ಸ್ಪೋ ಫೆಬ್ರವರಿ ಯಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ನಿಜವಾದ ಪ್ರತಿಸ್ಪರ್ಧೆ ಅವಾಗ ಪ್ರಾರಂಭವಾಗುತ್ತದೆ. ಅದೇ ಸಮಯದಲ್ಲಿ, ಸೇಲ್ಟೋಸ್ ಟೇಬಲ್ ನ ಅಗ್ರ ಸ್ಥಾನದಲ್ಲಿ ಮುಂದುವರೆಯುವ ಸಾಧ್ಯತೆ ಕಾಣುತ್ತಿದೆ.
ಮಹಿಂದ್ರಾ ಸ್ಕಾರ್ಪಿಯೊ: ಆಧುನಿಕ SUV ಗಳಿಂದ ಪ್ರಾಬಲ್ಯ ಹೊಂದಿದ ಸಮಯದಲ್ಲಿ, ವಿಶೇಷವಾಗಿ ಕ್ರೆಟಾ ,ಅತ್ತಿ ಸೆಲ್ಟೋಸ್ , ಮಹಿಂದ್ರಾ ಸ್ಕಾರ್ಪಿಯೊ ಉತ್ತಮ ಸಂಖ್ಯೆ ಪಡೆಯಲು ಯಶಸ್ವಿಯಾಗಿದೆ. ಮಹಿಂದ್ರಾ ದವರು ಹುಂಡೈ ಕ್ರೆಟಾ ಗೆ ಹೋಲಿಸಿದಾಗ ಅರ್ಧದಷ್ಟು ಸಂಖ್ಯೆಗಳ ಸ್ಕಾರ್ಪಿಯೊ ಮಾರಾಟ ಮಾಡಲು ಯಶಸ್ವಿಯಾಗಿದೆ. ಅದು ಒಂದು ಪ್ರಭಾವಶಾಲಿ ಸಾಧನೆಯಾಗಿದೆ ಈ SUV ಯ ವರ್ಷಗಳು ಮತ್ತು ಆಟೋಮೊಬೈಲ್ ಉದ್ಯಮದ ಸ್ಥಿತಿಗತಿ ಗಳನ್ನು ಪರಿಗಣಿಸಿದಾಗ.
ರೆನಾಲ್ಟ್ ಡಸ್ಟರ್: ಡಸ್ಟರ್ ಇತ್ತೀಚಿಗೆ ಫೇಸ್ ಲಿಫ್ಟ್ ಪಡೆಯುತು ಆದರೆ ಅದು ಮಾರಾಟದ ಸಂಖ್ಯೆಗಳ ಮೇಲೆ ಹೆಚ್ಚು ಪ್ರಭಾವ ಬೀರಿಲ್ಲ. ಕಳೆದ ಆರು ತಿಂಗಳ ಮಾರಾಟಕ್ಕೆ ಹೋಲಿಸಿದಾಗ ಡಸ್ಟರ್ ಮಾರಾಟ ಒಂದು ಗುಣಾತ್ಮಕ ಸೂಚನೆ ಪಡೆದಿದೆ. ಆದರೆ, ಅದು ಈಗಲೂ 1,000 ಯೂನಿಟ್ ಮಟ್ಟವನ್ನು ಮೀರಲು ಸಾಧ್ಯವಾಗಿಲ್ಲ.
ಮಾರುತಿ ಸುಜುಕಿ S-ಕ್ರಾಸ್: ಆಟೋಮೊಬೈಲ್ ಉದ್ಯಮ ಹಿನ್ನಡತೆ ಮಾರುತಿ ಮೇಲೆ ಹೆಚ್ಚು ಪರಿಣಾಮ ಬೀರಿದೆ ಮತ್ತು ಅದಕ್ಕೆ S-ಕ್ರಾಸ್ ಒಂದು ಮುಖ್ಯ ಉದಾಹರಣೆ. ಅದು ಮಾರುತಿ ಯ ಹೆಚ್ಚು ಪ್ರಖ್ಯಾತ ಮಾಡೆಲ್ ಗಳಲ್ಲಿ ಒಂದಾಗಿಲ್ಲದಿದ್ದರು ಸಹ, ಕೇವಲ 666 ಯೂನಿಟ್ ಮಾರಾಟ ವನ್ನು ಹಿಂದಿನ ತಿಂಗಳಿನಲ್ಲಿ ಸಾಧಿಸಿತು. ಇದನ್ನು S-ಕ್ರಾಸ್ ನ ಕಳೆದ ಆರು ತಿಂಗಳ ಮಾರಾಟಕ್ಕೆ (1,700 ಯೂನಿಟ್ ಗಳು) ಹೋಲಿಸಿರಿ ನಿಮಗೆ S-ಕ್ರಾಸ್ ನ ಬೇಡಿಕೆಯಲ್ಲಿ ಎಷ್ಟು ಕಡಿತ ಉಂಟಾಗಿದೆ ಎಂದು ತಿಳಿಯುತ್ತದೆ.
ನಿಸ್ಸಾನ್ ಕಿಕ್ಸ್: ಕಿಕ್ಸ್ ಹಿಂದಿನ ತಿಂಗಳಿಗಿಂತ ಹೆಚ್ಚು ಮಾರಾಟ ಪಡೆಯಲು ಚೆನ್ನಾಗಿ ನಿರ್ವಹಿಸಿದೆ. ಅದರ ಮಾರಾಟ 132 ಯೂನಿಟ್ ಗಳಿಂದ 172 ಯೂನಿಟ್ ಗಳಿಗೆ ಏರಿಕೆ ಕಂಡಿದೆ ಹಿಂದಿನ ತಿಂಗಳು. ಅದು ಒಂದು ಉತ್ತಮ ಬೆಳವಣಿಗೆ ಆಗಿದ್ದರು ಸಹ. ಅದು ಕಳೆದ ಆರು ತಿಂಗಳಿನ ಒಟ್ಟಾರೆ ಮಾರಾಟಕ್ಕೆ ಹೋಲಿಸಿದಾಗ ಕಡಿಮೆ ಆಗಿದೆ.
ರೆನಾಲ್ಟ್ ಕ್ಯಾಪ್ಟರ್ : ಇದು 100 ಯೂನಿಟ್ ಗಳಿಗಿಂತಲೂ ಹೆಚ್ಚು ಮಾರಾಟವಾದ ಕೇವಲ ಒಂದು ಕಾರ್ ಆಗಿದೆ. ನೀವು ಆರು ತಿಂಗಳಿನ ಒಟ್ಟಾರೆ ಮಾರಾಟಕ್ಕೆ ಹೋಲಿಸಿದಾಗ, ಆಟೋಮೊಬೈಲ್ ಉದ್ಯಮದ ಹಿನ್ನಡತೆ ಒಂದು ಮುಖ್ಯ ಕಾರಣವಾಗಿದೆ ಎಂದು ತಿಳಿಯುತ್ತದೆ.
ಒಟ್ಟು: ಕಿಯಾ ಸೆಲ್ಟೋಸ್ ಅನ್ನು ಈ ವಿಭಾಗದಲ್ಲಿ ಸೇರಿಸಲಾಗಿರುವುದು ಒಟ್ಟಾರೆ ಸಂಖ್ಯೆಗಳು ಹೆಚ್ಚುವುದಕ್ಕೆ ಅನುಕೂಲವಾಗಿದೆ. ಆದರೆ, ಬೆಳೆಯುತ್ತಿರುವ ಕಾಂಪ್ಯಾಕ್ಟ್ SUV ವಿಭಾಗ ಉದ್ಯಮದಲ್ಲಿನ ಹಿನ್ನಡತೆಯನ್ನು ನಿಭಾಯಿಸಬಲ್ಲದೇ?
- Renew Kia Seltos Car Insurance - Save Upto 75%* with Best Insurance Plans - (InsuranceDekho.com)
- Loan Against Car - Get upto ₹25 Lakhs in cash
0 out of 0 found this helpful