ಡ್ಯುಯಲ್ CNG ಸಿಲಿಂಡರ್ ಆಯ್ಕೆಯೊಂದಿಗೆ ಬರುತ್ತಿದೆ Hyundai Grand i10 Nios, ಬೆಲೆ 7.75 ಲಕ್ಷ ರೂ.ನಿಂದ ಪ್ರಾರಂಭ
ಹುಂಡೈ ಗ್ರ್ಯಾಂಡ್ ಐ 10 ನಿಯೋಸ್ ಗಾಗಿ samarth ಮೂಲಕ ಆಗಸ್ಟ್ 05, 2024 04:28 pm ರಂದು ಪ್ರಕಟಿಸಲಾಗಿದೆ
- 38 Views
- ಕಾಮೆಂಟ್ ಅನ್ನು ಬರೆಯಿರಿ
ಡ್ಯುಯಲ್ ಸಿಲಿಂಡರ್ ಹೊಂದಿರುವ ಹುಂಡೈ ಗ್ರಾಂಡ್ i10 ನಿಯೋಸ್ CNG, ಸಿಂಗಲ್ ಸಿಲಿಂಡರ್ CNG ವರ್ಷನ್ ಗಿಂತ ₹7,000 ನಷ್ಟು ದುಬಾರಿಯಾಗಿದೆ
-
ಹುಂಡೈ ಗ್ರಾಂಡ್ i10 ನಿಯೋಸ್‌ನಲ್ಲಿನ ಡ್ಯುಯಲ್-ಸಿಲಿಂಡರ್ CNG ಸೆಟಪ್ ಎರಡು ಮಿಡ್-ಸ್ಪೆಕ್ ವೇರಿಯಂಟ್ ಗಳಾದ ಮ್ಯಾಗ್ನಾ ಮತ್ತು ಸ್ಪೋರ್ಟ್ಜ್ ನಲ್ಲಿ ಮಾತ್ರ ಲಭ್ಯವಿದೆ
-
ಎಕ್ಸೆಟರ್ ನಂತರ ಈ ಸ್ಪ್ಲಿಟ್-ಸಿಲಿಂಡರ್ CNG ತಂತ್ರಜ್ಞಾನವನ್ನು ಹೊಂದಿರುವ ಎರಡನೇ ಹುಂಡೈ ಮಾಡೆಲ್ ಆಗಿದೆ.
-
ಡ್ಯುಯಲ್-ಸಿಲಿಂಡರ್ CNG ಸಿಸ್ಟಮ್ ಮೂಲಕ ಡ್ರೈವಿಂಗ್ ಮಾಡುವಾಗ ಪೆಟ್ರೋಲ್ ಮತ್ತು CNG ನಡುವೆ ಸುಲಭವಾಗಿ ಸ್ವಿಚ್ ಮಾಡಬಹುದು.
-
ಇದು 69 PS 1.2-ಲೀಟರ್ ಪೆಟ್ರೋಲ್+CNG ಎಂಜಿನ್ ಹೊಂದಿದೆ ಮತ್ತು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಮಾತ್ರ ಲಭ್ಯವಿದೆ.
-
ಗ್ರಾಂಡ್ i10 ನಿಯೋಸ್ ನ ಬೆಲೆಯು ರೂ 5.92 ಲಕ್ಷದಿಂದ ರೂ 8.56 ಲಕ್ಷದವರೆಗೆ (ಎಕ್ಸ್ ಶೋರೂಂ ಪ್ಯಾನ್-ಇಂಡಿಯಾ) ಇದೆ.
ಎಕ್ಸ್‌ಟರ್ ನಂತರ ಹೊಸ ಡ್ಯುಯಲ್ ಸಿಲಿಂಡರ್ CNG ಆಯ್ಕೆಯನ್ನು ನೀಡುತ್ತಿರುವ ಎರಡನೇ ಕಾರು ಹುಂಡೈ ಗ್ರ್ಯಾಂಡ್ i10 ನಿಯೋಸ್ ಆಗಿದೆ. ಈ ಸ್ಪ್ಲಿಟ್-ಸಿಲಿಂಡರ್ ಸೆಟಪ್ ಹೆಚ್ಚು ಬೂಟ್ ಸ್ಪೇಸ್ ಅನ್ನು ನೀಡುತ್ತದೆ ಮತ್ತು ಇಂಟಿಗ್ರೇಟೆಡ್ ಎಲೆಕ್ಟ್ರಾನಿಕ್ ಕಂಟ್ರೋಲ್ ಯೂನಿಟ್ (ECU) ನೊಂದಿಗೆ, ಡ್ರೈವಿಂಗ್ ಮಾಡುವಾಗ ಸುಲಭವಾಗಿ ಪೆಟ್ರೋಲ್ ಮತ್ತು CNG ನಡುವೆ ಬದಲಾಯಿಸಬಹುದು. ಈ ತಂತ್ರಜ್ಞಾನವನ್ನು ಅದರ ಎರಡು ಮಿಡ್-ಸ್ಪೆಕ್ ವೇರಿಯಂಟ್ ಗಳಾದ ಮ್ಯಾಗ್ನಾ ಮತ್ತು ಸ್ಪೋರ್ಟ್ಜ್ ನಲ್ಲಿ ನೀಡಲಾಗಿದೆ. ಬನ್ನಿ, ಈ ಎರಡೂ ವೇರಿಯಂಟ್ ಗಳ ಬೆಲೆಗಳನ್ನು ನೋಡೋಣ:
ವೇರಿಯಂಟ್-ವಾರು ಬೆಲೆಗಳು
ವೇರಿಯಂಟ್ |
ಹಳೆಯ ಬೆಲೆ (ಒಂದೇ CNG ಸಿಲಿಂಡರ್‌ನೊಂದಿಗೆ) |
ಹೊಸ ಬೆಲೆ (ಡ್ಯುಯಲ್ CNG ಸಿಲಿಂಡರ್‌ಗಳೊಂದಿಗೆ) |
ವ್ಯತ್ಯಾಸ |
ಮ್ಯಾಗ್ನಾ |
ರೂ. 7.68 ಲಕ್ಷ |
ರೂ. 7.75 ಲಕ್ಷ |
+ರೂ. 7000 |
ಸ್ಪೋರ್ಟ್ಜ್ |
ರೂ. 8.23 ಲಕ್ಷ |
ರೂ. 8.30 ಲಕ್ಷ |
+ರೂ. 7000 |
ಗ್ರಾಂಡ್ i10 ನಿಯೋಸ್ ನಲ್ಲಿ ಸ್ಪ್ಲಿಟ್-ಸಿಲಿಂಡರ್ ತಂತ್ರಜ್ಞಾನವನ್ನು ಪಡೆಯಲು ಗ್ರಾಹಕರು ಹೆಚ್ಚುವರಿ ₹7,000 ಪಾವತಿಸಬೇಕಾಗುತ್ತದೆ. ಎಕ್ಸ್‌ಟರ್ ಮೈಕ್ರೋ-SUVಯ ಡ್ಯುಯಲ್-ಸಿಲಿಂಡರ್ ವರ್ಷನ್ ಗಳಿಗೆ ಕೂಡ ಇದೇ ರೀತಿಯ ಬೆಲೆ ಏರಿಕೆಯನ್ನು ಗಮನಿಸಲಾಗಿದೆ.
ಇದರ ಜೊತೆಗೆ, ಹುಂಡೈ ಗ್ರಾಂಡ್ i10 ನಿಯೋಸ್‌ನ CNG ವರ್ಷನ್ ಗಳಿಗೆ 3-ವರ್ಷದ ವಾರಂಟಿಯನ್ನು ಕೂಡ ನೀಡುತ್ತಿದೆ.
ಸಿಎನ್‌ಜಿ ಪವರ್‌ಟ್ರೇನ್
ಗ್ರಾಂಡ್ i10 ನಿಯೋಸ್ CNG ಪವರ್‌ಟ್ರೇನ್ ಸ್ಪೆಸಿಫಿಕೇಷನ್ ಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಅದರ ತಾಂತ್ರಿಕ ಸ್ಪೆಸಿಫಿಕೇಷನ್ ಗಳ ವಿವರ ಇಲ್ಲಿದೆ:
ಸ್ಪೆಸಿಫಿಕೇಷನ್ |
ಗ್ರಾಂಡ್ i10 ನಿಯೋಸ್ CNG |
ಇಂಜಿನ್ |
1.2-ಲೀಟರ್ ಪೆಟ್ರೋಲ್+CNG |
ಪವರ್ |
69 PS |
ಟಾರ್ಕ್ |
95 Nm |
ಟ್ರಾನ್ಸ್‌ಮಿಷನ್ |
5-ಸ್ಪೀಡ್ MT |
ರೆಗ್ಯುಲರ್ ಪೆಟ್ರೋಲ್ ವರ್ಷನ್ 83 PS 1.2-ಲೀಟರ್ ಎಂಜಿನ್ ಅನ್ನು ಹೊಂದಿದೆ ಮತ್ತು 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಯನ್ನು ನೀಡುತ್ತದೆ.
ಇದನ್ನು ಕೂಡ ಓದಿ: ಹುಂಡೈ ಎಕ್ಸ್‌ಟರ್ ಲಾಂಚ್ ಆಗಿದೆ ಟಾಟಾ ಪಂಚ್ ತರಹದ ಡ್ಯುಯಲ್ CNG ಸಿಲಿಂಡರ್‌ಗಳೊಂದಿಗೆ, ಬೆಲೆಯು ರೂ 8.50 ಲಕ್ಷದಿಂದ ಪ್ರಾರಂಭ
ಫೀಚರ್ ಗಳು ಮತ್ತು ಸುರಕ್ಷತೆ
CNG ವೇರಿಯಂಟ್ ಮ್ಯಾಗ್ನಾ ಮತ್ತು ಸ್ಪೋರ್ಟ್ಜ್ ಟ್ರಿಮ್‌ಗಳಲ್ಲಿ ಬರುತ್ತದೆ, ಮತ್ತು ಇದರಲ್ಲಿ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಜೊತೆಗೆ 8-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಹಿಂಬದಿಯ ವೆಂಟ್ ಗಳೊಂದಿಗೆ ಮ್ಯಾನುಯಲ್ AC, ಕೀಲೆಸ್ ಎಂಟ್ರಿ ಮತ್ತು ಸೆಮಿ-ಡಿಜಿಟಲ್ ಡ್ರೈವರ್ ಡಿಸ್ಪ್ಲೇಯಂತಹ ಫೀಚರ್ ಗಳನ್ನು ನೀಡಲಾಗಿದೆ.
ಸುರಕ್ಷತೆಗಾಗಿ ಈ ವೇರಿಯಂಟ್ ಗಳಲ್ಲಿ ಆರು ಏರ್‌ಬ್ಯಾಗ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ ಗಳು ಇವೆ.
ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಹುಂಡೈ ಗ್ರಾಂಡ್ i10 ನಿಯೋಸ್ ಬೆಲೆಯು ರೂ 5.92 ಲಕ್ಷ ಮತ್ತು ರೂ 8.56 ಲಕ್ಷದ (ಎಕ್ಸ್ ಶೋ ರೂಂ, ದೆಹಲಿ) ನಡುವೆ ಇದೆ ಮತ್ತು ಇದು ಮಾರುತಿ ಸ್ವಿಫ್ಟ್‌ಗೆ ಪ್ರತಿಸ್ಪರ್ಧಿಯಾಗಿದೆ. ಇದು ಹುಂಡೈ ಎಕ್ಸ್‌ಟರ್ CNGಗೆ ಹೋಲಿಸಿದರೆ ಕೈಗೆಟುಕುವ ಬೆಲೆಯ ಪರ್ಯಾಯ ಆಯ್ಕೆಯಾಗಿದೆ.
ಇತ್ತೀಚಿನ ನಿರಂತರ ಆಟೋಮೋಟಿವ್ ಅಪ್ಡೇಟ್ ಗಳಿಗಾಗಿ ಕಾರ್ದೇಖೋ ಅವರ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ
ಇನ್ನಷ್ಟು ಓದಿ: ಹುಂಡೈ ಗ್ರಾಂಡ್ i10 ನಿಯೋಸ್ AMT