• English
  • Login / Register

ಕಂಪನಿ ಅಳವಡಿಸಿದ CNG ಆಯ್ಕೆಯೊಂದಿಗೆ ಲಭ್ಯವಿರುವ ಟಾಪ್ 10 ಅತ್ಯಂತ ಕೈಗೆಟುಕುವ ಕಾರುಗಳು

ಮಾರುತಿ ಆಲ್ಟೊ ಕೆ10 ಗಾಗಿ samarth ಮೂಲಕ ಜುಲೈ 09, 2024 05:08 pm ರಂದು ಪ್ರಕಟಿಸಲಾಗಿದೆ

  • 26 Views
  • ಕಾಮೆಂಟ್‌ ಅನ್ನು ಬರೆಯಿರಿ

ಪಟ್ಟಿಯು ಮುಖ್ಯವಾಗಿ ಹ್ಯಾಚ್‌ಬ್ಯಾಕ್‌ಗಳಿಂದ ಪ್ರಾಬಲ್ಯ ಹೊಂದಿದೆ, ಆದರೆ ಒಂದೆರಡು ಸಬ್‌-ಕಾಂಪ್ಯಾಕ್ಟ್ ಸೆಡಾನ್‌ಗಳನ್ನು ಸಹ ಒಳಗೊಂಡಿದೆ

Top 10 Most Affordable CNG Cars In India

ಇತ್ತೀಚಿನ ವರ್ಷಗಳಲ್ಲಿ ಪೆಟ್ರೋಲ್ ಬೆಲೆಗಳು ವೇಗವಾಗಿ ಹೆಚ್ಚಾಗುತ್ತಿರುವುದರಿಂದ, ಇತ್ತೀಚಿನ ಟ್ರೆಂಡ್‌ಗಳು ಗ್ರಾಹಕರು ಸಿಎನ್‌ಜಿ ಮತ್ತು ಇವಿಗಳಂತಹ ತುಲನಾತ್ಮಕವಾಗಿ ಪರಿಸರ ಸ್ನೇಹಿ ಆಯ್ಕೆಗಳಿಗೆ ಬದಲಾಯಿಸುವ ಸುಳಿವು ನೀಡಿವೆ. ಪ್ರಸ್ತುತ, ಅತ್ಯಂತ ಜನಪ್ರಿಯ ಪರ್ಯಾಯ ಇಂಧನ ಆಯ್ಕೆಯೆಂದರೆ ಸಿಎನ್‌ಜಿ, ಇದು ಉತ್ತಮ ಮೈಲೇಜ್ ನೀಡುತ್ತದೆ ಮತ್ತು ತುಲನಾತ್ಮಕವಾಗಿ ಪರಿಸರ ಸ್ನೇಹಿಯಾಗಿದೆ. ನೀವು ಕಡಿಮೆ ಬಜೆಟ್‌ನ ಸಿಎನ್‌ಜಿ ಕಾರನ್ನು ಖರೀದಿಸಲು ಯೋಚಿಸುತ್ತಿದ್ದರೆ, ಕಂಪನಿ-ಅಳವಡಿಸಿರುವ ಸಿಎನ್‌ಜಿ ಹೊಂದಿರುವ ಟಾಪ್ 10 ಅತ್ಯಂತ ಕೈಗೆಟುಕುವ ಮಾದರಿಗಳ ಪಟ್ಟಿ ಇಲ್ಲಿದೆ.

ಮಾರುತಿ ಆಲ್ಟೊ ಕೆ10

 ಅತ್ಯಂತ ಕೈಗೆಟುಕುವ ಸಿಎನ್‌ಜಿ ಕಾರನ್ನು ನೀವು ಮನೆಗೆ ಕೊಂಡೊಯ್ಯಲು ಹುಡುಕುತ್ತಿದ್ದರೆ ಮಾರುತಿಯ ಎಂಟ್ರಿ ಲೆವೆಲ್ ಹ್ಯಾಚ್‌ಬ್ಯಾಕ್  ಆಲ್ಟೊ ಕೆ 10 ಉತ್ತಮ ಆಯ್ಕೆಯಾಗಿದೆ. 

  • ಇದನ್ನು Lxi ಮತ್ತು Vxi ಎಂಬ ಎರಡು ಮಿಡ್-ಸ್ಪೆಕ್ ಆವೃತ್ತಿಗಳಲ್ಲಿ ನೀಡಲಾಗುತ್ತದೆ,  1-ಲೀಟರ್ ಪೆಟ್ರೋಲ್-CNG ಎಂಜಿನ್ (ಸಿಎನ್‌ಜಿ ಮೋಡ್‌ನಲ್ಲಿ 57 ಪಿಎಸ್‌/82 ಎನ್‌ಎಮ್‌) 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ಗೆ ಮಾತ್ರ ಜೋಡಿಸಲಾಗಿದೆ.

  • ಆಲ್ಟೊ ಕೆ10 ಸಿಎನ್‌ಜಿಯ ಬೆಲೆಗಳು 5.74 ಲಕ್ಷ ರೂ.ಗಳಿಂದ 5.96 ಲಕ್ಷ ರೂ.ಗಳ ವರೆಗೆ ಇರಲಿದೆ. 

ಮಾರುತಿ ಎಸ್-ಪ್ರೆಸ್ಸೊ

Maruti Suzuki S-Presso Review: First Drive

  •  ಮಾರುತಿ ಎಸ್-ಪ್ರೆಸ್ಸೊವು ಅದರ ಎರಡು ಮಿಡ್‌-ಸ್ಪೆಕ್ ಆವೃತ್ತಿಗಳಾದ Lxi ಮತ್ತು Vxi ಗಳಲ್ಲಿ CNG ಆಯ್ಕೆಯನ್ನು ಪಡೆಯುತ್ತದೆ.

  • ಎಸ್‌-ಪ್ರೆಸ್ಸೊದ ಸಿಎನ್‌ಜಿ ಆವೃತ್ತಿಗಳು 1-ಲೀಟರ್ ಪೆಟ್ರೋಲ್-ಸಿಎನ್‌ಜಿ ಎಂಜಿನ್‌ನಿಂದ ಚಾಲಿತವಾಗಿದ್ದು, ಸಿಎನ್‌ಜಿ ಮೋಡ್‌ನಲ್ಲಿ 57 ಪಿಎಸ್‌ ಮತ್ತು 82 ಎನ್‌ಎಮ್‌ ಅನ್ನು ಉತ್ಪಾದಿಸುತ್ತದೆ ಮತ್ತು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಆಯ್ಕೆಯೊಂದಿಗೆ ಮಾತ್ರ ನೀಡಲಾಗುತ್ತದೆ.

  • ಮಾರುತಿಯು ತನ್ನ ಎಸ್-ಪ್ರೆಸ್ಸೊ ಸಿಎನ್‌ಜಿಯನ್ನು 5.92 ಲಕ್ಷ ರೂ.ನಿಂದ 6.12 ಲಕ್ಷದವರೆಗಿನ ಬೆಲೆಯಲ್ಲಿ ನೀಡುತ್ತದೆ.

ಮಾರುತಿ ವ್ಯಾಗನ್‌ ಆರ್‌ 

Maruti Wagon R

  • ಮಾರುತಿ ವ್ಯಾಗನ್ ಆರ್ ಸಿಎನ್‌ಜಿ ಪವರ್‌ಟ್ರೇನ್‌ನೊಂದಿಗೆ ಲಭ್ಯವಿರುವ ಮಾರುತಿಯ ಮತ್ತೊಂದು ಮೊಡೆಲ್‌ ಆಗಿದೆ.

  • ಕಾಂಪ್ಯಾಕ್ಟ್ ಹ್ಯಾಚ್‌ಬ್ಯಾಕ್‌ನ ಲೋವರ್‌-ಸ್ಪೆಕ್ ಎಲ್‌ಎಕ್ಸ್‌ಐ ಮತ್ತು ವಿಎಕ್ಸ್‌ಐ ವೇರಿಯೆಂಟ್‌ಗಳಲ್ಲಿ ಮಾರುತಿಯು ಒಪ್ಶನಲ್‌ ಸಿಎನ್‌ಜಿ ಕಿಟ್ ಅನ್ನು ನೀಡುತ್ತದೆ. ಇದು ವ್ಯಾಗನ್ ಆರ್‌ನ 1-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ (CNG ಮೋಡ್‌ನಲ್ಲಿ 57 ಪಿಎಸ್‌/ 82 ಎನ್‌ಎಮ್‌ ಔಟ್‌ಪುಟ್‌) 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಮಾತ್ರ ಲಭ್ಯವಿದೆ.

  • ಈ ಹ್ಯಾಚ್‌ಬ್ಯಾಕ್ 1.2-ಲೀಟರ್ ಪೆಟ್ರೋಲ್ ಪವರ್‌ಟ್ರೇನ್‌ನೊಂದಿಗೆ ಸಹ ಲಭ್ಯವಿದೆ, ಆದರೆ ಇದು ಅದರಲ್ಲಿ  ಸಿಎನ್‌ಜಿ ಆಯ್ಕೆಯನ್ನು ನೀಡುವುದಿಲ್ಲ.

  • ವ್ಯಾಗನ್ ಆರ್‌ನ ಸಿಎನ್‌ಜಿ ಆವೃತ್ತಿಗಳ ಬೆಲೆಗಳು 6.45 ಲಕ್ಷ ರೂ.ನಿಂದ 6.89 ಲಕ್ಷ ರೂ.ವರೆಗೆ ಇದೆ.

ಮಾರುತಿ ಈಕೋ

Maruti Eeco

  • ನಮ್ಮ ಮಾರುಕಟ್ಟೆಯಲ್ಲಿ ಜನರನ್ನು ಸಾಗಿಸುವ ಪ್ರಮುಖ ವಾಹನಗಳಲ್ಲಿ ಒಂದಾಗಿರುವ ಮಾರುತಿ ಇಕೋ, ಖಾಸಗಿ ಖರೀದಿದಾರರಿಗೆ ಲಭ್ಯವಿದೆ ಮತ್ತು ಮಾರುತಿಯ ಉತ್ತಮ ಮಾರಾಟದ ಕಾರುಗಳಲ್ಲಿ ಒಂದಾಗಿದೆ.

  • ಈಕೋ 5-ಸೀಟರ್ ಮತ್ತು 7-ಸೀಟರ್ ಕಾನ್ಫಿಗರೇಶನ್‌ಗಳಲ್ಲಿ ಲಭ್ಯವಿದೆ, ಆದರೆ ಸಿಎನ್‌ಜಿ ಆಯ್ಕೆಯು 5-ಸೀಟರ್‌ನ ಎಸಿ(ಒಪ್ಶನಲ್‌) ಆವೃತ್ತಿಯಲ್ಲಿ ಮಾತ್ರ ಲಭ್ಯವಿದೆ.

  • ಈಕೋವು 1.2-ಲೀಟರ್ ಪೆಟ್ರೋಲ್-CNG ಎಂಜಿನ್‌ನೊಂದಿಗೆ ಲಭ್ಯವಿದ್ದು, ಸಿಎನ್‌ಜಿ ಮೋಡ್‌ನಲ್ಲಿ 72 ಪಿಎಸ್‌ ಮತ್ತು 95 ಎನ್‌ಎಮ್‌ ಉತ್ಪಾದನೆಯನ್ನು ನೀಡುತ್ತದೆ. ಇದು 5-ಸ್ಪೀಡ್‌ ಮ್ಯಾನುಯಲ್‌ಯೊಂದಿಗೆ ಜೋಡಿಯಾಗಿ ಬರುತ್ತದೆ.

  • ಮಾರುತಿಯು ಇಕೋ ಸಿಎನ್‌ಜಿಯನ್ನು 6.58 ಲಕ್ಷ ರೂಪಾಯಿಗೆ ಮಾರಾಟ ಮಾಡುತ್ತಿದೆ.

ಇದನ್ನೂ ಸಹ ಓದಿ: ಈ ಜುಲೈನಲ್ಲಿ ಮಾರುತಿ ಅರೆನಾ ಮೊಡೆಲ್‌ಗಳ ಮೇಲೆ ಭರ್ಜರಿ 63,500 ರೂ.ವರೆಗೆ ಡಿಸ್ಕೌಂಟ್‌

ಟಾಟಾ ಟಿಯಾಗೋ

Tata Tiago CNG dual cylinders

  • ಟಾಟಾದ ಪ್ರವೇಶ ಮಟ್ಟದ ಹ್ಯಾಚ್‌ಬ್ಯಾಕ್ ಅನ್ನು ಅವಳಿ ಸಿಲಿಂಡರ್ ಸಿಎನ್‌ಜಿ ತಂತ್ರಜ್ಞಾನದೊಂದಿಗೆ ನೀಡಲಾಗುತ್ತದೆ, ಇದು ಬಳಸಬಹುದಾದ ಬೂಟ್ ಅನ್ನು ಹೊಂದಲು ಸಹಾಯ ಮಾಡುತ್ತದೆ.

  • ಇದು ಮಿಡ್-ಸ್ಪೆಕ್ XT(O) ಮತ್ತು XZO+ ಹೊರತುಪಡಿಸಿ ಅದರ ಉಳಿದ ಎಲ್ಲಾ ಆವೃತ್ತಿಗಳಲ್ಲಿ ಸಿಎನ್‌ಜಿ ಕಿಟ್‌ನ ಆಯ್ಕೆಯನ್ನು ಪಡೆಯುತ್ತದೆ.

  • ಇದು 1.2-ಲೀಟರ್ ಪೆಟ್ರೋಲ್-ಸಿಎನ್‌ಜಿ ಎಂಜಿನ್‌ನಿಂದ ಚಾಲಿತವಾಗಿದ್ದು, ಸಿಎನ್‌ಜಿಯಲ್ಲಿ ಚಾಲನೆಯಲ್ಲಿರುವಾಗ 73.5 ಪಿಎಸ್ ಮತ್ತು 95 ಎನ್‌ಎಂ ಉತ್ಪಾದಿಸುತ್ತದೆ. ಟಾಟಾವು ತನ್ನ ಟಿಯಾಗೋ ಸಿಎನ್‌ಜಿಯನ್ನು ಮ್ಯಾನುವಲ್ ಮತ್ತು ಎಎಮ್‌ಟಿ ಆಟೋಮ್ಯಾಟಿಕ್‌ ಗೇರ್‌ಬಾಕ್ಸ್ ಆಯ್ಕೆಗಳೊಂದಿಗೆ ನೀಡುತ್ತದೆ.

Tata Tiago CNG AMT

ಮಾರುತಿ ಸೆಲೆರಿಯೊ

  • ಮಾರುತಿ ಸೆಲೆರಿಯೊ ಸಿಎನ್‌ಜಿ ಆಯ್ಕೆಯೊಂದಿಗೆ ಮಿಡ್-ಸ್ಪೆಕ್ ವಿಎಕ್ಸ್‌ಐ ಟ್ರಿಮ್‌ನಲ್ಲಿ ಮಾತ್ರ ಲಭ್ಯವಿದೆ.

  • ಅದರ ಸಿಎನ್‌ಜಿ ಆವೃತ್ತಿಯಲ್ಲಿ, ಇದು 57 ಪಿಎಸ್ 1-ಲೀಟರ್ ಪೆಟ್ರೋಲ್-ಸಿಎನ್‌ಜಿ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ಗೆ ಮಾತ್ರ ಸಂಯೋಜಿಸುತ್ತದೆ.

  • ಸೆಲೆರಿಯೊ ವಿಎಕ್ಸ್‌ಐ ಸಿಎನ್‌ಜಿಯ ಬೆಲೆಯು 6.74 ಲಕ್ಷ ರೂ.ನಿಂದ ಪ್ರಾರಂಭವಾಗಲಿದೆ. 

ಟಾಟಾ ಆಲ್ಟ್ರೋಜ್‌

Tata Altroz iCNG

  • ಟಾಟಾ ಆಲ್ಟ್ರೊಜ್ ಈ ಪಟ್ಟಿಯಲ್ಲಿರುವ ಏಕೈಕ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಗಿದೆ ಮತ್ತು ಇದು ತನ್ನ ಎಂಟು ಆವೃತ್ತಿಗಳಲ್ಲಿ ಸಿಎನ್‌ಜಿ ಪವರ್‌ಟ್ರೇನ್ ಅನ್ನು ನೀಡುತ್ತದೆ, ಅವುಗಳೆಂದರೆ, XE, XM+, XM+S, XZ, XZ Lux, XZ+S, XZ+S Lux, ಮತ್ತು XZ+OS.

Tata Altroz iCNG

  • ಆಲ್ಟ್ರೋಜ್‌ ಸಿಎನ್‌ಜಿಯು ಟ್ವಿನ್-ಸಿಲಿಂಡರ್ ತಂತ್ರಜ್ಞಾನವನ್ನು ಹೊಂದಿದೆ, ಇದು 210 ಲೀಟರ್‌ನಷ್ಟು ಪ್ರಾಯೋಗಿಕ ಬೂಟ್ ಸ್ಪೇಸ್ ಅನ್ನು ಒದಗಿಸುತ್ತದೆ.

  • ಇದು 1.2-ಲೀಟರ್ 3-ಸಿಲಿಂಡರ್ ಪೆಟ್ರೋಲ್-ಸಿಎನ್‌ಜಿ ಎಂಜಿನ್‌ನೊಂದಿಗೆ ಬರುತ್ತದೆ, ಇದು ಸಿಎನ್‌ಜಿ ಮೋಡ್‌ನಲ್ಲಿ 73.5 ಪಿಎಸ್‌ ಮತ್ತು 103 ಎನ್‌ಎಮ್‌ ನಷ್ಟು ಔಟ್‌ಪುಟ್‌ಅನ್ನು ಉತ್ಪಾದಿಸುತ್ತದೆ, ಇದನ್ನು 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಮಾತ್ರ ಜೋಡಿಸಲಾಗಿದೆ.

  • ಬೆಲೆಗಳು 7.60 ಲಕ್ಷ ರೂ.ನಿಂದ 10.99 ಲಕ್ಷದವರೆಗೆ ಇರುತ್ತದೆ.

ಹ್ಯುಂಡೈ ⁠ಗ್ರ್ಯಾಂಡ್ ಐ10 ನಿಯೋಸ್

2023 Hyundai Grand i10 Nios

  • ಹ್ಯುಂಡೈ ⁠ಗ್ರ್ಯಾಂಡ್ ಐ10 ನಿಯೋಸ್‌ನ ಮ್ಯಾಗ್ನಾ ಮತ್ತು ಸ್ಪೋರ್ಟ್ಜ್ ಎಂಬ ಎರಡು ಮಿಡ್‌ ಸ್ಪೆಕ್‌ ಆವೃತ್ತಿಗಳಲ್ಲಿ   CNG ಪವರ್‌ಟ್ರೇನ್‌ ಲಭ್ಯವಿದೆ. 

  • ಹ್ಯುಂಡೈನ ಈ ಮಧ್ಯಮ ಗಾತ್ರದ ಹ್ಯಾಚ್‌ಬ್ಯಾಕ್ 1.2-ಲೀಟರ್ ಪೆಟ್ರೋಲ್-ಸಿಎನ್‌ಜಿ ಎಂಜಿನ್‌ನೊಂದಿಗೆ ಲಭ್ಯವಿದ್ದು, ಸಿಎನ್‌ಜಿ ಮೋಡ್‌ನಲ್ಲಿ ಚಾಲನೆ ಮಾಡುವಾಗ 69 ಪಿಎಸ್‌ ಮತ್ತು 95 ಎನ್‌ಎಮ್‌ನಷ್ಟು ಔಟ್‌ಪುಟ್‌ ಅನ್ನು ಉತ್ಪಾದಿಸುತ್ತದೆ. ಇದು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಮಾತ್ರ ಲಭ್ಯವಿದೆ.

  • ಹ್ಯುಂಡೈ ⁠ಗ್ರ್ಯಾಂಡ್ ಐ10 ನಿಯೋಸ್‌ನ ಸಿಎನ್‌ಜಿ ಆವೃತ್ತಿಗಳ ಬೆಲೆಗಳು 7.68 ಲಕ್ಷ ರೂ.ನಿಂದ 8.23 ಲಕ್ಷ ರೂ.ಗಳ ನಡುವೆ ಇರಲಿದೆ.

ಇದನ್ನು ಸಹ ಓದಿ: Maruti Celerio VXi CNG ವರ್ಸಸ್‌ Tata Tiago XM ಸಿಎನ್‌ಜಿ: ಸಂಪೂರ್ಣ ಹೋಲಿಕೆ

ಟಾಟಾ ಟಿಗೋರ್‌

  • ಟಿಯಾಗೊದಂತೆಯೇ, ಟಾಟಾ ಟಿಗೊರ್ ಸಹ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್‌ಗಳೊಂದಿಗೆ ಸಿಎನ್‌ಜಿ ಆಯ್ಕೆಯನ್ನು ಪಡೆಯುತ್ತದೆ.

  • ಇದರ ಬೇಸ್‌ ಮೊಡೆಲ್‌ಅನ್ನು ಹೊರತುಪಡಿಸಿ, ಉಳಿದ ಎಲ್ಲಾ ಮೂರು ಆವೃತ್ತಿಗಳಲ್ಲಿ (XM, XZ, ಮತ್ತು XZ+) ಸಿಎನ್‌ಜಿ ಆಯ್ಕೆಯನ್ನು ಪಡೆಯುತ್ತದೆ ಆದರೆ ನೀವು ಸಿಎನ್‌ಜಿ ಲೈನ್‌ಅಪ್‌ನಲ್ಲಿ ಎಂಟ್ರಿ-ಸ್ಪೆಕ್ XM ಟ್ರಿಮ್ ಅನ್ನು ಖರೀದಿಸಲು ಪರಿಗಣಿಸುತ್ತಿದ್ದರೆ, ನೀವು ಮ್ಯಾನುವಲ್ ಟ್ರಾನ್ಸ್‌ಮಿಷನ್ ಆಯ್ಕೆಯನ್ನು ಮಾತ್ರ ಪಡೆಯುತ್ತೀರಿ.

  • ಇದು ಟಿಯಾಗೋ ಮತ್ತು ಆಲ್ಟ್ರೋಜ್‌ ಸಿಎನ್‌ಜಿಯಲ್ಲಿ ​ ಕಂಡುಬರುವಂತೆ ಬಳಸಬಹುದಾದ ಬೂಟ್ ಅನ್ನು ಒದಗಿಸುವ ಅವಳಿ ಸಿಲಿಂಡರ್ ತಂತ್ರಜ್ಞಾನವನ್ನು ಪಡೆಯುತ್ತದೆ.

  • ಇದು 1.2-ಲೀಟರ್ ಪೆಟ್ರೋಲ್-ಸಿಎನ್‌ಜಿ ಎಂಜಿನ್‌ಅನ್ನು ಬಳಸುತ್ತಿದ್ದು, ಸಿಎನ್‌ಜಿ ಮೋಡ್‌ನಲ್ಲಿ 73.5 ಪಿಎಸ್‌ ಮತ್ತು 95 ಎನ್‌ಎಮ್‌ನಷ್ಟು ಔಟ್‌ಪುಟ್‌ ಅನ್ನು ಉತ್ಪಾದಿಸುತ್ತದೆ.

  • ಇದರ ಸಿಎನ್‌ಜಿ ಆವೃತ್ತಿಗಳ ಬೆಲೆಗಳು 7.75 ಲಕ್ಷ ರೂ.ನಿಂದ ಪ್ರಾರಂಭವಾಗಿ 9.55 ಲಕ್ಷ ರೂ.ವರೆಗೆ ಇದೆ. 

ಹ್ಯುಂಡೈ ಔರಾ

  • ಪಟ್ಟಿಯಲ್ಲಿರುವ ಮತ್ತೊಂದು ಸಬ್‌-ಕಾಂಪ್ಯಾಕ್ಟ್ ಸೆಡಾನ್ ಎಂದರೆ ಅದು ಹ್ಯುಂಡೈ ಔರಾ, ಅದರ ಮಿಡ್-ಸ್ಪೆಕ್ S ಮತ್ತು ಎಸ್‌ಎಕ್ಸ್‌ ಆವೃತ್ತಿಗಳಲ್ಲಿ ಸಿಎನ್‌ಜಿ ಇಂಧನ ಆಯ್ಕೆಯನ್ನು ಪಡೆಯುತ್ತದೆ.

  • ಇದು ಹ್ಯುಂಡೈ ⁠ಗ್ರ್ಯಾಂಡ್ ಐ10 ನಿಯೋಸ್‌ನ ಸಿಎನ್‌ಜಿಯಲ್ಲಿ ಇದ್ದ ಅದೇ 1.2-ಲೀಟರ್ ಪೆಟ್ರೋಲ್-CNG ಎಂಜಿನ್ ಅನ್ನು ಪಡೆಯುತ್ತದೆ, ಇದು CNG ಮೋಡ್‌ನಲ್ಲಿ 69 PS ಮತ್ತು 95 Nm ಅನ್ನು ಉತ್ಪಾದಿಸುತ್ತದೆ, ಇದನ್ನು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ಗೆ ಮಾತ್ರ ಜೋಡಿಸಲಾಗಿದೆ.

  • ಔರಾ ಸಿಎನ್‌ಜಿಯ ಬೆಲೆಗಳು 8.31 ಲಕ್ಷ ರೂ.ನಿಂದ 9.05 ಲಕ್ಷದವರೆಗೆ ಇದೆ.

ಇವುಗಳು ಭಾರತದಲ್ಲಿ ಫ್ಯಾಕ್ಟರಿ-ಅಳವಡಿಕೆಯ ಸಿಎನ್‌ಜಿ ಕಿಟ್ ಆಯ್ಕೆಯನ್ನು ಪಡೆಯುವ ಅತ್ಯಂತ ಕೈಗೆಟುಕುವ ಕಾರುಗಳಾಗಿವೆ. ಹಾಗೆಯೇ ಇತರ ಜನಪ್ರಿಯ ಸಮೂಹ-ಮಾರುಕಟ್ಟೆ ಸಿಎನ್‌ಜಿ ಕಾರುಗಳಾದ ಮಾರುತಿ ಬಲೆನೊ, ಮಾರುತಿ ಡಿಜೈರ್, ಟಾಟಾ ಪಂಚ್, ಹ್ಯುಂಡೈ ಎಕ್ಸ್‌ಟರ್ ಮತ್ತು ಟೊಯೋಟಾ ಟೈಸರ್‌ಗಳ ಬೆಲೆಗಳು ಹೆಚ್ಚಿರುವ ಕಾರಣದಿಂದಾಗಿ  ಈ ಪಟ್ಟಿಗೆ ಸೇರಿಸಿರುವುದಿಲ್ಲ. 

ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್ ಶೋರೂಂ ಆಗಿದೆ.

ಇತ್ತೀಚಿನ ಎಲ್ಲಾ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸಾಪ್‌ ಚಾನೆಲ್‌ ಅನ್ನು ಫಾಲೋ ಮಾಡಿ

ಇನ್ನಷ್ಟು ಓದಿ: ಮಾರುತಿ ಆಲ್ಟೊ ಕೆ10 ಆನ್‌ರೋಡ್‌ ಬೆಲೆ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Maruti ಆಲ್ಟೊ ಕೆ10

Read Full News

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience