ಜಾಗತಿಕವಾಗಿ Hyundai Inster ನ ಅನಾವರಣ, ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆ
ಹುಂಡೈ inster ಗಾಗಿ shreyash ಮೂಲಕ ಜುಲೈ 03, 2024 08:11 pm ರಂದು ಪ್ರಕಟಿಸಲಾಗಿದೆ
- 105 Views
- ಕಾಮೆಂಟ್ ಅನ್ನು ಬರೆಯಿರಿ
ಹ್ಯುಂಡೈನ ಈ ಸಣ್ಣ ಇವಿಯು 355 ಕಿಮೀ ರೇಂಜ್‌ನೊಂದಿಗೆ ಭಾರತದಲ್ಲಿ ಟಾಟಾ ಪಂಚ್ ಇವಿಗೆ ಪ್ರತಿಸ್ಪರ್ಧಿಯಾಗಲಿದೆ.
- ಕ್ಯಾಸ್ಪರ್‌ನಂತೆಯೇ ಹ್ಯುಂಡೈ ಇನ್‌ಸ್ಟರ್ ಸಹ ಅದೇ ವಿನ್ಯಾಸ ಶೈಲಿಯನ್ನು ಹೊಂದಿದೆ.
- ಇನ್‌ಸ್ಟರ್ ಪಿಕ್ಸೆಲ್ ತರಹದ ಎಲ್‌ಇಡಿ ಡಿಆರ್‌ಎಲ್‌ಗಳು ಮತ್ತು ಟೈಲ್ ಲೈಟ್‌ಗಳನ್ನು ಒಳಗೊಂಡಿದೆ.
- ಒಳಭಾಗದಲ್ಲಿ, ಇದು ಲೈಟ್ ಥೀಮ್ ಮತ್ತು ಸೆಮಿ-ಲೆಥೆರೆಟ್ ಕವರ್‌ನೊಂದಿಗೆ ಕನಿಷ್ಠ-ಕಾಣುವ ಕ್ಯಾಬಿನ್ ಅನ್ನು ಪಡೆಯುತ್ತದೆ.
- ಫೀಚರ್‌ನ ಹೈಲೈಟ್ಸ್‌ಗಳು 10.25-ಇಂಚಿನ ಟಚ್‌ಸ್ಕ್ರೀನ್, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಮತ್ತು ಸಿಂಗಲ್-ಪೇನ್ ಸನ್‌ರೂಫ್ ಅನ್ನು ಒಳಗೊಂಡಿವೆ.
- ಇದನ್ನು 42 ಕಿ.ವ್ಯಾಟ್ ಮತ್ತು 49 ಕಿ.ವ್ಯಾಟ್ (ಲಾಂಗ್ ರೇಂಜ್) ಎಂಬ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ.
- 12 ಲಕ್ಷ ರೂ.ನಿಂದ ಬೆಲೆಗಳು (ಎಕ್ಸ್ ಶೋ ರೂಂ) ಪ್ರಾರಂಭವಾಗಬಹುದೆಂದು ನಿರೀಕ್ಷಿಸಲಾಗಿದೆ.
ಹ್ಯುಂಡೈ ತನ್ನ ಇನ್‌ಸ್ಟರ್‌ನ ಟೀಸರ್ ಬಿಡುಗಡೆ ಮಾಡಿದ ಎರಡು ವಾರಗಳ ನಂತರ, 2024ರ ಬುಸಾನ್ ಇಂಟರ್‌ನ್ಯಾಷನಲ್ ಮೊಬಿಲಿಟಿ ಶೋನಲ್ಲಿ ಜಾಗತಿಕವಾಗಿ ಅನಾವರಣಗೊಳಿಸಲಾಯಿತು. ಇಲ್ಲಿಯವರೆಗೆ ಹ್ಯುಂಡೈನ ಚಿಕ್ಕ ಇವಿಯಾಗಿರುವ ಇನ್‌ಸ್ಟರ್, ಮೂಲತಃ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟವಾಗುವ ಕ್ಯಾಸ್ಪರ್ ಮೈಕ್ರೋ ಎಸ್‌ಯುವಿಯ ಸಂಪೂರ್ಣ-ಎಲೆಕ್ಟ್ರಿಕ್ ಆವೃತ್ತಿಯಾಗಿದೆ. ಇದು ಮೊದಲು ಕೊರಿಯಾದಲ್ಲಿ ಮಾರಾಟವಾಗಲಿದೆ, ನಂತರ ಇತರ ಜಾಗತಿಕ ಮಾರುಕಟ್ಟೆಗಳಲ್ಲಿ ಮಾರಾಟವಾಗಲಿದೆ ಮತ್ತು ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸುವ ನಿರೀಕ್ಷೆಯಿದೆ.
ಡಿಸೈನ್
ಇನ್‌ಸ್ಟರ್ ಇವಿಯು ಅದರ ICE (ಇಂಟರ್ನಲ್ ಕಂಬಸ್ಟಿನ್ ಎಂಜಿನ್) ಪ್ರತಿರೂಪವಾದ ಕ್ಯಾಸ್ಪರ್ ಅನ್ನು ಹೋಲುತ್ತದೆ. ಮುಂಭಾಗದಲ್ಲಿ, ಇದು ಎಲ್ಇಡಿ ಡಿಆರ್‌ಎಲ್‌ಗಳು ಮತ್ತು ದೊಡ್ಡ ಬಂಪರ್‌ನಿಂದ ಸುತ್ತುವರಿದ ವೃತ್ತಾಕಾರದ ಹೆಡ್‌ಲೈಟ್‌ಗಳೊಂದಿಗೆ ಒಂದೇ ರೀತಿಯ ವಿನ್ಯಾಸವನ್ನು ಹೊಂದಿದೆ. ಕ್ಯಾಸ್ಪರ್‌ನಿಂದ ಅದನ್ನು ಪ್ರತ್ಯೇಕಿಸುವುದು ಅದರ ಬಂಪರ್‌ನ ಮೇಲೆ ಇರಿಸಲಾಗಿರುವ ಹೊಸ ಪಿಕ್ಸೆಲ್ ತರಹದ ಎಲ್‌ಇಡಿ ಡಿಆರ್‌ಎಲ್‌ಗಳು ಮತ್ತು ಮಿಸ್ ಆಗಿರುವ ಕ್ರೋಮ್ ಅಂಶಗಳು. ಬದಿಯಿಂದ ನೀವು ಅದರ ಗಾತ್ರವನ್ನು ಗಮನಿಸಬಹುದು ಮತ್ತು ಹಿಂಭಾಗದ ಬಾಗಿಲುಗಳು ಸಿ-ಪಿಲ್ಲರ್ ಮೌಂಟೆಡ್ ಡೋರ್ ಹ್ಯಾಂಡಲ್‌ಗಳನ್ನು ಪಡೆಯುವುದನ್ನು ನೋಡಬಹುದು, ಇದು ಇವಿ ನಿರ್ದಿಷ್ಟ ಅಲಾಯ್ ವೀಲ್‌ಗಳನ್ನು ಸಹ ಪಡೆಯುತ್ತದೆ, ಇವುಗಳನ್ನು 15-ಇಂಚಿನ ಮತ್ತು 17-ಇಂಚಿನ ಎರಡು ಗಾತ್ರಗಳಲ್ಲಿ ನೀಡಲಾಗುತ್ತದೆ.
ಹಿಂಬದಿಯ ಬಗ್ಗೆ ಹೇಳುವುದಾದರೆ, ಇನ್‌ಸ್ಟರ್ ಅನ್ನು ಕ್ಯಾಸ್ಪರ್‌ನಿಂದ ಮತ್ತೊಮ್ಮೆ ಪ್ರತ್ಯೇಕಿಸುವುದು ಅದರ ಪಿಕ್ಸೆಲ್ ತರಹದ ಎಲ್‌ಇಡಿ ಟೈಲ್ ಲೈಟ್‌ಗಳು, ಆದರೆ ಉಳಿದ ವಿವರಗಳು ಬದಲಾಗದೆ ಉಳಿಯುತ್ತವೆ.
ಇನ್‌ಸ್ಟರ್ ಉದ್ದ ಮತ್ತು ಅಗಲ ಎರಡರಲ್ಲೂ ಕ್ಯಾಸ್ಪರ್‌ಗಿಂತ ಸ್ವಲ್ಪ ದೊಡ್ಡದಾಗಿದೆ. ಮಾಹಿತಿಗಾಗಿ, ಅವುಗಳ ಆಯಾಮಗಳ ಹೋಲಿಕೆ ಇಲ್ಲಿದೆ:
ಗಾತ್ರ |
ಹ್ಯುಂಡೈ ಇನ್‌ಸ್ಟರ್ |
ಹ್ಯುಂಡೈ ಕ್ಯಾಸ್ಪರ್ |
ಉದ್ದ |
3825 ಮಿ.ಮೀ |
3595 ಮಿ.ಮೀ |
ಅಗಲ |
1610 ಮಿ.ಮೀ |
1595 ಮಿ.ಮೀ |
ಎತ್ತರ |
1575 ಮಿ.ಮೀ |
1575 ಮಿ.ಮೀ |
ವೀಲ್‌ಬೇಸ್ |
2580 ಮಿ.ಮೀ |
2400 ಮಿ.ಮೀ |
ಇದನ್ನು ಸಹ ಪರಿಶೀಲಿಸಿ: ವೀಕ್ಷಿಸಿ: ಲೋಡ್ ಮಾಡಿದ ಇವಿ Vs ಲೋಡ್ ಇಲ್ಲದ ಇವಿ: ವಾಸ್ತವದಲ್ಲಿ ಯಾವ ಲಾಂಗ್ ರೇಂಜ್ Tata Nexon EV ಹೆಚ್ಚು ಮೈಲೇಜ್ ನೀಡುತ್ತದೆ ?
ಇಂಟಿರೀಯರ್ ಮತ್ತು ಫೀಚರ್‌ಗಳು
ಒಳಭಾಗದಲ್ಲಿ, ಇನ್‌ಸ್ಟರ್ ಡ್ಯುಯಲ್-ಟೋನ್ ಡ್ಯಾಶ್‌ಬೋರ್ಡ್ ಥೀಮ್ ಅನ್ನು ಹೊಂದಿದ್ದು, ಹ್ಯುಂಡೈ ಐಯೊನಿಕ್ 5 ನಲ್ಲಿ ನಾವು ನೋಡಿದಂತೆಯೇ ಹಾರ್ನ್ ಪ್ಯಾಡ್‌ನಲ್ಲಿ ಪಿಕ್ಸೆಲ್ ವಿವರಗಳೊಂದಿಗೆ 3-ಸ್ಪೋಕ್ ಸ್ಟೀರಿಂಗ್ ವೀಲ್ ಅನ್ನು ಒಳಗೊಂಡಿದೆ. ಕ್ಯಾಬಿನ್ ಲೈಟ್ ಕ್ರೀಮ್ ಥೀಮ್‌ನೊಂದಿಗೆ ಸೆಮಿ-ಲೆಥೆರೆಟ್ ಫ್ಯಾಬ್ರಿಕ್ ಮತ್ತು ಡ್ಯಾಶ್‌ಬೋರ್ಡ್‌ನಲ್ಲಿ ಎಂಬಿಯೆಂಟ್ ಲೈಟಿಂಗ್‌ನೊಂದಿಗೆ ಬರುತ್ತದೆ. ಮಧ್ಯಭಾಗದಲ್ಲಿ ಯಾವುದೇ ದ್ವಾರವನ್ನು ನೀಡಿಲ್ಲ, ಇದು ಚಾಲಕ ಮತ್ತು ಮುಂಭಾಗದ ಪ್ರಯಾಣಿಕರಿಗೆ ಹೆಚ್ಚಿನ ಜಾಗವನ್ನು ಸೃಷ್ಟಿಸುತ್ತದೆ ಮತ್ತು ಒಟ್ಟಾರೆ ವಿನ್ಯಾಸಕ್ಕೆ ಹೆಚ್ಚೇನು ಕೇಂದ್ರಿಕರಿಸಿಲ್ಲ.
ಹ್ಯುಂಡೈ ಇನ್‌ಸ್ಟರ್ ಅನ್ನು 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್, 10.25-ಇಂಚಿನ ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸಪ್ಲೇ, ಸಿಂಗಲ್-ಪೇನ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜರ್, 64-ಬಣ್ಣದ ಆಂಬಿಯೆಂಟ್ ಲೈಟಿಂಗ್ ಮತ್ತು V2L (ವಾಹನದಿಂದ ಲೋಡ್) ವ್ಯವಸ್ಥೆಗಳಂತಹ ಸೌಕರ್ಯಗಳೊಂದಿಗೆ ಸಜ್ಜುಗೊಳಿಸಿದೆ. ಇನ್‌ಸ್ಟರ್ ಬಿಸಿಯಾದ ಆಸನಗಳು ಮತ್ತು ಸ್ಟೀರಿಂಗ್ ಚಕ್ರವನ್ನು ಸಹ ಪಡೆಯುತ್ತದೆ .ಇದರ ಸುರಕ್ಷತಾ ಕಿಟ್ ಬಹು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ ಮತ್ತು ಲೇನ್ ಕೀಪ್ ಅಸಿಸ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಆಟೋಮ್ಯಾಟಿಕ್ ಎಮೆರ್ಜೆನ್ಸಿ ಬ್ರೇಕಿಂಗ್‌ನಂತಹ ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳ (ADAS) ಸಂಪೂರ್ಣ ಸೂಟ್ ಅನ್ನು ಒಳಗೊಂಡಿದೆ.
ಬ್ಯಾಟರಿ ಪ್ಯಾಕ್ & ರೇಂಜ್
ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಹ್ಯುಂಡೈಯು ಇನ್‌ಸ್ಟರ್ ಅನ್ನು 42 ಕಿ.ವ್ಯಾಟ್ ಮತ್ತು 49 ಕಿ.ವ್ಯಾಟ್ ಎಂಬ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ನೀಡುತ್ತದೆ. ಅದರ ವಿಶೇಷಣಗಳನ್ನು ಕೆಳಗಿನ ಕೋಷ್ಟಕದಲ್ಲಿ ವಿವರಿಸಲಾಗಿದೆ:
ಬ್ಯಾಟರಿ ಪ್ಯಾಕ್ |
42 ಕಿ.ವ್ಯಾಟ್ |
49 ಕಿವ್ಯಾಟ್ (ಲಾಂಗ್ ರೇಂಜ್) |
ಪವರ್ |
97 ಪಿಎಸ್ |
115 ಪಿಎಸ್ |
ಟಾರ್ಕ್ |
147 ಎನ್‌ಎಮ್ |
147 ಎನ್‌ಎಮ್ |
ಗರಿಷ್ಠ ಸ್ಪೀಡ್ |
140 kmph |
150 kmph |
ಅಂದಾಜು ಮೈಲೇಜ್ (WLTP) |
300 ಕಿ.ಮೀ.ಗಿಂತಲೂ ಹೆಚ್ಚು |
355 ಕಿ.ಮೀ.ವರೆಗೆ ( 15-ಇಂಚು ಚಕ್ರದಲ್ಲಿ) |
ಗಮನಿಸಿ: ಈ ವಿಶೇಷಣಗಳು ಇಂಡಿಯಾ-ಸ್ಪೆಕ್ ಮೊಡೆಲ್‌ಗೆ ಬದಲಾಗಬಹುದು
ಇನ್‌ಸ್ಟರ್ ಬಹು-ಚಾರ್ಜಿಂಗ್ ಆಯ್ಕೆಗಳನ್ನು ಬೆಂಬಲಿಸುತ್ತದೆ ಮತ್ತು ಸಮಯಗಳು ಈ ಕೆಳಗಿನಂತಿವೆ:
ಚಾರ್ಜರ್ |
ಚಾರ್ಜಿಂಗ್ ಸಮಯ |
120 ಕಿ.ವ್ಯಾಟ್ ಡಿಸಿ ಫಾಸ್ಟ್ ಚಾರ್ಜರ್ (10-80 ಪ್ರತಿಶತ) |
~ 30 ನಿಮಿಷಗಳು |
11 ಕಿ.ವ್ಯಾಟ್ ಎಸಿ ಚಾರ್ಜರ್ |
4 ಗಂಟೆಗಳು (42 ಕಿ.ವ್ಯಾಟ್) / 4 ಗಂಟೆಗಳು ಮತ್ತು 35 ನಿಮಿಷಗಳು (49 ಕಿ.ವ್ಯಾಟ್) |
ನಿರೀಕ್ಷಿತ ಬೆಲೆ ಮತ್ತು ಬಿಡುಗಡೆ
ಇನ್‌ಸ್ಟರ್ ಈ ಬೇಸಿಗೆಯಲ್ಲಿ ಕೊರಿಯಾದಲ್ಲಿ ಮೊದಲು ಮಾರಾಟವಾಗಲಿದೆ, ನಂತರ ಯುರೋಪ್, ಮಧ್ಯಪ್ರಾಚ್ಯ ಮತ್ತು ಏಷ್ಯಾ ಪೆಸಿಫಿಕ್ ಮಾರುಕಟ್ಟೆಗಳಲ್ಲಿ ಮಾರಾಟವಾಗಲಿದೆ. ಹ್ಯುಂಡೈ ಇನ್‌ಸ್ಟರ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಇನ್ನೂ ದೃಢಪಡಿಸಿಲ್ಲ, ಆದಾಗ್ಯೂ, ಅದು ಬಂದರೆ, ಅದರ ಬೆಲೆ 12 ಲಕ್ಷ ರೂ.ನಿಂದ (ಎಕ್ಸ್ ಶೋರೂಂ) ಪ್ರಾರಂಭವಾಗಬಹುದೆಂದು ನಿರೀಕ್ಷಿಸಲಾಗಿದೆ. ಇದು ಟಾಟಾ ಪಂಚ್ ಇವಿಗೆ ಪ್ರತಿಸ್ಪರ್ಧಿಯಾಗಲಿದೆ ಮತ್ತು ಟಾಟಾ ಟಿಯಾಗೊ ಇವಿ, ಸಿಟ್ರೊಯೆನ್ ಇಸಿ3 ಮತ್ತು ಎಂಜಿ ಕಾಮೆಟ್ ಇವಿಗಳಿಗೆ ಪರ್ಯಾಯವಾಗಿ ಕಾರ್ಯನಿರ್ವಹಿಸಬಹುದು.
ಹೆಚ್ಚಿನ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ