Hyundai Verna S ವರ್ಸಸ್ Honda City SV: ನೀವು ಯಾವ ಕಾಂಪ್ಯಾಕ್ಟ್ ಸೆಡಾನ್ ಖರೀದಿಸಬೇಕು?
ಹುಂ ಡೈ ವೆರ್ನಾ ಗಾಗಿ dipan ಮೂಲಕ ಜೂನ್ 03, 2024 12:35 pm ರಂದು ಪ್ರಕಟಿಸಲಾಗಿದೆ
- 24 Views
- ಕಾಮೆಂಟ್ ಅನ್ನು ಬರೆಯಿರಿ
ಈ ಎರಡು ಕಾಂಪ್ಯಾಕ್ಟ್ ಸೆಡಾನ್‌ಗಳು ಒಂದೇ ರೀತಿಯ ಬೆಲೆಯನ್ನು ಹೊಂದಿದ್ದರೂ ಕೂಡ, ವಿಭಿನ್ನ ರೀತಿಯ ಗ್ರಾಹಕರನ್ನು ಆಕರ್ಷಿಸುತ್ತವೆ. ಹಾಗಾದರೆ, ನೀವು ಯಾವುದನ್ನು ಆರಿಸಬೇಕು?
ಹೊಸ ಜನರೇಷನ್ ಹುಂಡೈ ವೆರ್ನಾ 2023 ರಲ್ಲಿ ಬಿಡುಗಡೆಯಾದಾಗ, ಇದು ಜನರನ್ನು ಆಕರ್ಷಿಸುವ ಹಲವಾರು ಫೀಚರ್ ಗಳನ್ನು ಹೊಂದಿತ್ತು. ಇದು ಸೆಡಾನ್ ಖರೀದಿದಾರರಿಗೆ ಜನಪ್ರಿಯ ಆಯ್ಕೆಯಾಗಿರುವ ಹೋಂಡಾ ಸಿಟಿಯೊಂದಿಗೆ ಇನ್ನೂ ಕೂಡ ಸ್ಪರ್ಧಿಸುತ್ತದೆ. ನಿಮ್ಮ ಬಜೆಟ್ ಸುಮಾರು 12 ಲಕ್ಷ ರೂ ಆಗಿದ್ದರೆ, ನೀವು ಬೇಸ್ ಮಾಡೆಲ್ ನಿಂದ ಎರಡು ವರ್ಷನ್ ಮೇಲೆ ಇರುವ ಹ್ಯುಂಡೈ ವೆರ್ನಾ S ಅಥವಾ ಎಂಟ್ರಿ ಲೆವೆಲ್ ಮಟ್ಟದ ಹೋಂಡಾ ಸಿಟಿ SV ಅನ್ನು ಆಯ್ಕೆ ಮಾಡಬೇಕೇ? ಬನ್ನಿ, ನೋಡೋಣ.
ಬೆಲೆ
ವೇರಿಯಂಟ್ |
ಹ್ಯುಂಡೈ ವೆರ್ನಾ S |
ಹೋಂಡಾ ಸಿಟಿ SV |
ಬೆಲೆ |
ರೂ. 11.99 ಲಕ್ಷ |
ರೂ. 12.08 ಲಕ್ಷ |
ಬೆಲೆಗಳು ಎಕ್ಸ್ ಶೋರೂಂ, ಪ್ಯಾನ್ ಇಂಡಿಯಾ ಆಗಿದೆ
ಹೋಂಡಾ ಸಿಟಿ ಬೇಸ್ ವೇರಿಯಂಟ್ ವೆರ್ನಾ ಸೆಕೆಂಡ್ ಫ್ರಮ್ ಬೇಸ್ S ವೇರಿಯಂಟ್ ಗಿಂತ ಸ್ವಲ್ಪ ಹೆಚ್ಚು ಬೆಲೆ ಹೊಂದಿದೆ.
ಪವರ್‌ಟ್ರೇನ್
ವೇರಿಯಂಟ್ |
ಹ್ಯುಂಡೈ ವೆರ್ನಾ S |
ಹೋಂಡಾ ಸಿಟಿ SV |
ಇಂಜಿನ್ |
1.5-ಲೀಟರ್ N/A ಪೆಟ್ರೋಲ್ l |
1.5-ಲೀಟರ್ N/A ಪೆಟ್ರೋಲ್ |
ಪವರ್ |
115 PS |
121 PS |
ಟಾರ್ಕ್ |
144 Nm |
145 Nm |
ಟ್ರಾನ್ಸ್‌ಮಿಷನ್ |
6 MT |
5 MT |
ಹ್ಯುಂಡೈ ವೆರ್ನಾದ S ವೇರಿಯಂಟ್ ಮತ್ತು ಹೋಂಡಾ ಸಿಟಿಯ SV ಎರಡೂ ಕೂಡ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾಗಿರುವ 1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಎಂಜಿನ್ ಅನ್ನು ಹೊಂದಿದೆ (ವೆರ್ನಾದಲ್ಲಿ 6-ಸ್ಪೀಡ್ ಯುನಿಟ್). ಈ ವೇರಿಯಂಟ್ ಗಳಲ್ಲಿ ಯಾವುದೇ ಆಟೋಮ್ಯಾಟಿಕ್ ಆಯ್ಕೆ ಲಭ್ಯವಿಲ್ಲ. ಆದರೆ, ಸಿಟಿಯ ಎಂಜಿನ್ ಹುಂಡೈ ಸೆಡಾನ್ ನ ಎಂಜಿನ್ ಗಿಂತ ಸ್ವಲ್ಪ ಹೆಚ್ಚು ಶಕ್ತಿಶಾಲಿಯಾಗಿದೆ.
ಫೀಚರ್ ಗಳು
ಫೀಚರ್ ಗಳು |
ಹುಂಡೈ ವೆರ್ನಾ S |
ಹೋಂಡಾ ಸಿಟಿ SV |
ಹೊರಭಾಗ |
|
|
ಒಳಭಾಗ |
|
|
ಇನ್ಫೋಟೈನ್ಮೆಂಟ್ |
|
|
ಆರಾಮ ಮತ್ತು ಅನುಕೂಲತೆ |
|
|
ಸುರಕ್ಷತೆ |
|
|
ಹುಂಡೈ ವೆರ್ನಾ S ಮತ್ತು ಹೋಂಡಾ ಸಿಟಿ SV, ಎರಡೂ ಅವುಗಳ ಬೆಲೆಗೆ ತಕ್ಕಂತೆ ಫೀಚರ್ ಗಳನ್ನು ಹೊಂದಿವೆ. ಆದರೆ, ಸಿಟಿಯು ಗೈಡ್ ಲೈನ್ಸ್ ಮತ್ತು ಎಲೆಕ್ಟ್ರಿಕ್ ಆಗಿ ಫೋಲ್ಡ್ ಮಾಡಬಹುದಾದ ORVM ಗಳು ಮತ್ತು PM 2.5 ಫಿಲ್ಟರ್‌ನೊಂದಿಗೆ ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾದ ರೂಪದಲ್ಲಿ ಕೆಲವು ಪ್ರಯೋಜನಗಳನ್ನು ಹೊಂದಿದೆ. ಮತ್ತೊಂದೆಡೆ ವೆರ್ನಾ S, ಆಟೋಮ್ಯಾಟಿಕ್ ಹೆಡ್‌ಲೈಟ್‌ಗಳು, ಕೂಲ್ಡ್ ಗ್ಲೋವ್‌ಬಾಕ್ಸ್, ಮುಂಭಾಗ ಮತ್ತು ಹಿಂಭಾಗದಲ್ಲಿ ಟೈಪ್-C USB ಚಾರ್ಜರ್‌ಗಳು ಮತ್ತು ಕ್ರೂಸ್ ಕಂಟ್ರೋಲ್ ಅನ್ನು ಹೊಂದಿದೆ, ಇವೆಲ್ಲವೂ ಸಿಟಿ SV ಯಲ್ಲಿ ಲಭ್ಯವಿಲ್ಲ.
ತೀರ್ಪು
ಹೋಂಡಾ ಸಿಟಿ SV ಹ್ಯುಂಡೈ ವೆರ್ನಾ Sಗಿಂತ ಸ್ವಲ್ಪ ದುಬಾರಿಯಾಗಿದೆ. ಫೀಚರ್ ಗಳು ಮತ್ತು ಸುರಕ್ಷತಾ ತಂತ್ರಜ್ಞಾನದ ವಿಷಯದಲ್ಲಿ ಎರಡೂ ವೇರಿಯಂಟ್ ಗಳು ಬಹುತೇಕ ಸಮಾನವಾಗಿವೆ. ಎರಡೂ ಮಾಡೆಲ್ ಗಳು ಒಂದೇ ರೀತಿಯ ಪವರ್‌ಟ್ರೇನ್‌ಗಳನ್ನು ಕೂಡ ಹೊಂದಿವೆ. ಸ್ವಲ್ಪ ಹೆಚ್ಚು ಶಕ್ತಿಶಾಲಿ ಎಂಜಿನ್ ಜೊತೆಗೆ ರಿವರ್ಸಿಂಗ್ ಕ್ಯಾಮೆರಾ ಮತ್ತು ಏರ್ ಫಿಲ್ಟರ್‌ನಂತಹ ಫೀಚರ್ ಗಳು ನಿಮಗೆ ಮುಖ್ಯವಾದರೆ ನೀವು ಸಿಟಿಯನ್ನು ಆಯ್ಕೆಮಾಡಿಕೊಳ್ಳಬಹುದು.
ಆದರೆ, ನೀವು ಹೆಚ್ಚು ಆರಾಮ ನೀಡುವ ಫೀಚರ್ ಗಳನ್ನು ಮತ್ತು 6-ಸ್ಪೀಡ್ ಟ್ರಾನ್ಸ್‌ಮಿಷನ್ ಬೇಕಾದರೆ, ವೆರ್ನಾ S ಹೆಚ್ಚು ಸೂಕ್ತವಾಗಿದೆ ಏಕೆಂದರೆ ಇದು ಕೂಲಿಂಗ್ ಗ್ಲೋವ್‌ಬಾಕ್ಸ್ ಮತ್ತು ಕ್ರೂಸ್ ಕಂಟ್ರೋಲ್ ಅನ್ನು ಒಳಗೊಂಡಿದೆ.
ಈ ಕಾಂಪ್ಯಾಕ್ಟ್ ಸೆಡಾನ್‌ಗಳಲ್ಲಿ ನೀವು ಯಾವುದನ್ನು ಆಯ್ಕೆ ಮಾಡಲು ಬಯಸುತ್ತೀರಿ? ಕೆಳಗೆ ಕಾಮೆಂಟ್ ಮಾಡಿ ನಮಗೆ ತಿಳಿಸಿ.
ಇನ್ನಷ್ಟು ಓದಿ: ವೆರ್ನಾ ಆನ್ ರೋಡ್ ಬೆಲೆ