• English
  • Login / Register

ಭಾರತಕ್ಕೆ 2024ರಲ್ಲಿ 5 ಕಾರುಗಳನ್ನು ತರಲಿರುವ Hyundai, ಅವುಗಳ ಮಾಹಿತಿ ಇಲ್ಲಿದೆ...

ಹುಂಡೈ ಕ್ರೆಟಾ ಗಾಗಿ ansh ಮೂಲಕ ಡಿಸೆಂಬರ್ 22, 2023 09:47 am ರಂದು ಪ್ರಕಟಿಸಲಾಗಿದೆ

  • 82 Views
  • ಕಾಮೆಂಟ್‌ ಅನ್ನು ಬರೆಯಿರಿ

ಇವುಗಳಲ್ಲಿ ಹೆಚ್ಚಿನವುಗಳು SUVಗಳಾಗಿದ್ದು, 3 ವಾಹನಗಳು ಫೇಸ್‌ಲಿಫ್ಟ್‌ ಮೊಡೆಲ್‌ಗಳಾಗಿವೆ

Upcoming Hyundai Cars In India

ಹ್ಯುಂಡೈ ಸಂಸ್ಥೆಯು ಭಾರತೀಯ ಕಾರು ಉದ್ಯಮದಲ್ಲಿ  ಮಾರುತಿ ಸುಜುಕಿಯ ನಂತರ ಎರಡನೇ ಅತ್ಯಂತ ದೊಡ್ದ ಹೆಸರೆನಿಸಿದೆ. ಆರಂಭಿಕ ಹಂತದ ಹ್ಯಾಚ್‌ ಬ್ಯಾಕ್‌ ಗಳಿಂದ ಹಿಡಿದು ಅಗ್ರ ಶ್ರೇಣಿಯ ಎಲೆಕ್ಟ್ರಿಕ್‌ ಕಾರುಗಳ ತನಕ ಕೊರಿಯಾದ ಈ ಕಾರು ತಯಾರಕ ಸಂಸ್ಥೆಯು ಭಾರತದಲ್ಲಿ ಕಾರುಗಳ ಎಲ್ಲಾ ವಿಭಾಗದಲ್ಲಿ ನೆಲೆ ಕಂಡಿದೆ. ಆದರೆ ಹ್ಯುಂಡೈಯ ಕೆಲವು ಕಾರುಗಳು ಪರಿಷ್ಕರಣೆಯನ್ನು ಎದುರು ನೋಡುತ್ತಿದ್ದು, ಹೀಗಾಗಿಯೇ ಮುಂದಿನ ವರ್ಷದಲ್ಲಿ ಈ ಸಂಸ್ಥೆಯ ಹೊಸ ಕಾರುಗಳು ಇಲ್ಲಿ ರಸ್ತೆಗಿಳಿಯಲಿವೆ. 2024ರಲ್ಲಿ ಭಾರತಕ್ಕೆ ಬರಲಿರುವ ಹ್ಯುಂಡೈ ಸಂಸ್ಥೆಯ ಎಲ್ಲಾ ಕಾರುಗಳ ವಿವರ ಇಲ್ಲಿದೆ:

ಹ್ಯುಂಡೈ ಕ್ರೆಟಾ ಫೇಸ್‌ ಲಿಫ್ಟ್

Hyundai Creta facelift

 ನಿರೀಕ್ಷಿತ ಬಿಡುಗಡೆ: ಜನವರಿ 2024

ನಿರೀಕ್ಷಿತ ಬೆಲೆ: ರೂ 10.50 ಲಕ್ಷದಿಂದ (ಎಕ್ಸ್-ಶೋರೂಂ)

 ಹ್ಯುಂಡೈ ಕ್ರೆಟಾ ಕಾರು ಭಾರತದಲ್ಲಿ ಈ ಸಂಸ್ಥೆಯ ಅತ್ಯಂತ ಜನಪ್ರಿಯ ಕಾರುಗಳಲ್ಲಿ ಒಂದಾಗಿದ್ದು, ಇಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ಮಾರಾಟಗೊಳ್ಳುವ ಕಾರುಗಳ ಪೈಕಿಯೂ ಒಂದೆನಿಸಿದೆ. ಇದರ ಎರಡನೇ ತಲೆಮಾರಿನ ಮಾದರಿಯನ್ನು 2020ರಲ್ಲಿ ಬಿಡುಗಡೆ ಮಾಡಿದ ನಂತರ ಈ ಕಾಂಪ್ಯಾಕ್ಟ್‌ SUV ಯು ಯಾವುದೇ ಪ್ರಮುಖ ಪರಿಷ್ಕರಣೆಗೆ ಒಳಗಾಗಿಲ್ಲ. ಆದರೆ ಅಗತ್ಯವಿರುವ ಮಾರ್ಪಾಡುಗಳೊಂದಿಗೆ ಇದು ಮುಂದಿನ ವರ್ಷದಲ್ಲಿ ಭಾರತದ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ.  ಪರಿಷ್ಕೃತ ಕ್ರೆಟಾವು ಪರಿಷ್ಕೃತ ಕಿಯಾ ಸೆಲ್ಟೋಸ್‌ ನಲ್ಲಿರುವಂತೆ 1.5-ಲೀಟರ್‌ ಪೆಟ್ರೋಲ್‌ ಎಂಜಿನ್ (115 PS/144 Nm), 1.5-ಲೀಟರ್‌ ಡೀಸೆಲ್ (116 PS/250 Nm) ‌ ಮತ್ತು ಈ ವಿಭಾಗದ ಅತ್ಯಂತ ಶಕ್ತಿಯುತ 1.5-ಲೀಟರ್‌ ಟರ್ಬೊ ಪೆಟ್ರೋಲ್‌ ಎಂಜಿನ್‌ (160 PS/253 Nm) ಆಯ್ಕೆಗಳೊಂದಿಗೆ ಬರಲಿದೆ.

Hyundai Creta facelift

 ವೈಶಿಷ್ಟ್ಯಗಳ ಕುರಿತಂತೆ ಹೇಳುವುದಾದರೆ ಇದು ಈಗ ಇರುವ 10.25 ಇಂಚಿನ ಟಚ್‌ ಸ್ಕ್ರೀನ್‌ ಇನ್ಫೊಟೈನ್‌ ಮೆಂಟ್‌ ಸಿಸ್ಟಂ, ಪ್ಯಾನೊರಾಮಿಕ್‌ ಸನ್‌ ರೂಫ್‌ ಮತ್ತು ವೆಂಟಿಲೇಟೆಡ್‌ ಫ್ರಂಟ್‌ ಸೀಟುಗಳನ್ನು ಹೊಂದಿದೆ. ಇದರೊಂದಿಗೆ 10.25 ಇಂಚಿನ ಚಾಲಕನ ಡಿಜಿಟಲ್‌ ಡಿಸ್ಪ್ಲೇ, 360 ಡಿಗ್ರಿ ಕ್ಯಾಮರಾ ಮತ್ತು ಲೆವೆಲ್ 2 ADAS ವೈಶಿಷ್ಟ್ಯಗಳನ್ನು ಸಹ ಇದು ಹೊಂದಿರಲಿದೆ.

ಹ್ಯುಂಡೈ ಅಲ್ಕಜಾರ್ ಫೇಸ್‌ ಲಿಫ್ಟ್

Hyundai Alcazar

 ಪ್ರಸ್ತುತ ಹ್ಯುಂಡೈ ಅಲ್ಕಜಾರ್‌ ವಾಹನದ ಚಿತ್ರವು ಉಲ್ಲೇಖಕ್ಕಾಗಿ ಮಾತ್ರ

ನಿರೀಕ್ಷಿತ ಬಿಡುಗಡೆ: ಮಾರ್ಚ್‌ 2024

ನಿರೀಕ್ಷಿತ ಬೆಲೆ: ರೂ 16 ಲಕ್ಷದಿಂದ (ಎಕ್ಸ್-ಶೋರೂಂ)

ಪರಿಷ್ಕೃತ ಕ್ರೆಟಾದ ಜೊತೆಗೆ ಹ್ಯುಂಡೈ ಸಂಸ್ಥೆಯು  ಪರಿಷ್ಕೃತ ಅಲ್ಕಜಾರ್ ಅನ್ನು ಹೊರತರಲಿದೆ. ಕ್ರೆಟಾ ಆಧರಿತ ಮೂರು ಸಾಲುಗಳ SUV ಯನ್ನು 2021ರಲ್ಲಿ ಬಿಡುಗಡೆ ಮಾಡಲಾಗಿದ್ದು, ಇದರ ವಿನ್ಯಾಸದಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಲಾಗಿದೆ ಮಾತ್ರವಲ್ಲದೆ ಹೊಸ ಎಂಜಿನ್‌ ಆಯ್ಕೆಯನ್ನು ಸಹ ನೀಡಲಾಗಿದೆ. ಕೆಲವೇ ವರ್ಷಗಳ ಹಿಂದೆಯಷ್ಟೇ ಬಿಡುಗಡೆಯಾದ  ಅಲ್ಕಜಾರ್ ವಾಹನದ ಪರಿಷ್ಕರಣೆಯು ಬಾಕಿ ಇತ್ತು.

ಇದನ್ನು ಸಹ ಓದಿರಿ: ಮೊದಲ ಬಾರಿಗೆ ಕಾಣಿಸಿಕೊಂಡ ಪರಿಷ್ಕೃತ ಹ್ಯುಂಡೈ ಅಲ್ಕಜಾರ್

ಹ್ಯುಂಡೈಯ ಭಾರತದಲ್ಲಿರುವ ಮೂರು ಸಾಲಿನ ಈ ಏಕೈಕ SUVಯ ಪರಿಷ್ಕೃತ ಆವೃತ್ತಿಯು ಪ್ರಸ್ತುತ ಅಲ್ಕಜಾರ್‌ ನಲ್ಲಿರುವ ಎಂಜಿನ್‌ ಆಯ್ಕೆಗಳನ್ನೇ ಹೊಂದಿರಲಿದೆ:  1.5-ಲೀಟರ್‌ ಟರ್ಬೊ ಪೆಟ್ರೋಲ್ (160 PS/253 Nm) ಮತ್ತು 1.5-ಲೀಟರ್‌ ಡೀಸೆಲ್ (115 PS/250 Nm). ವೈಶಿಷ್ಟ್ಯಗಳ ವಿಚಾರದಲ್ಲಿ ಹೇಳುವುದಾದರೆ ಇದು 10.25 ಇಂಚಿನ ಎರಡು ಡಿಸ್ಪ್ಲೇಗಳು, ವೆಂಟಿಲೇಟೆಡ್‌ ಫ್ರಂಟ್‌ ಸೀಟುಗಳು, ಪ್ಯಾನೊರಾಮಿಕ್ ಸನ್‌ ರೂಫ್, 360‌ ಡಿಗ್ರಿ ಕ್ಯಾಮರಾ, ಮತ್ತು ಲೆವೆಲ್ 2 ADAS‌ ವೈಶಿಷ್ಟ್ಯಗಳನ್ನು ಹೊಂದಿದೆ.

 

ಹ್ಯುಂಡೈ ಟಕ್ಸನ್ ಫೇಸ್‌ ಲಿಫ್ಟ್

2024 Hyundai Tucson

 ನಿರೀಕ್ಷಿತ ಬಿಡುಗಡೆ: ಜೂನ್ 2024

ನಿರೀಕ್ಷಿತ ಬೆಲೆ: ರೂ 30 ಲಕ್ಷದಿಂದ (ಎಕ್ಸ್-ಶೋರೂಂ)

ಪರಿಷ್ಕೃತ ಹ್ಯುಂಡೈ ಟಕ್ಸನ್ ವಾಹನವನ್ನು ಜಾಗತಿಕವಾಗಿ ಇತ್ತೀಚೆಗೆ ಅನಾವರಣಗೊಳಿಸಲಾಗಿದ್ದು, ಯೂರೋಪ್‌ ನಲ್ಲಿ ಇದನ್ನು 2024ರ ಆರಂಭದಲ್ಲಿ ಬಿಡುಗಡೆ ಮಾಡಲಾಗುತ್ತದೆ. ಆದರೆ ಹ್ಯುಂಡೈ ಸಂಸ್ಥೆಯು ಈ ಪರಿಷ್ಕೃತ ಅಗ್ರಗಣ್ಯ SUV ಯು 2024ರ ಮಧ್ಯದಲ್ಲಿ ಅಥವಾ ಕೊನೆಯಲ್ಲಿ ಭಾರತೀಯ ರಸ್ತೆಗಳಲ್ಲಿ ಕಾಣಿಸಿಕೊಳ್ಳಲಿದೆ.

ಹೊಸ ಟಕ್ಸನ್ ಕಾರಿನ ಹೊರಾಂಗಣಕ್ಕೆ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿದ್ದು, ಒಳಾಂಗಣದಲ್ಲಿ ಪರಿಷ್ಕರಣೆ ಉಂಟಾಗಿದೆ. ಈ ಮೂಲಕ ಇದರ ಚಾಲನಾ ಅನುಭವದಲ್ಲಿ ಹೊಸತನವನ್ನು ತರಲಾಗಿದೆ. ಡ್ಯುವಲ್‌ ಇಂಟಗ್ರೇಟೆಡ್‌ ಟಚ್‌ ಸ್ಕ್ರೀನ್‌ ಸೆಟಪ್‌ ಮತ್ತು ಟಚ್‌ ಬೇಸ್ಡ್‌ ಕ್ಲೈಮೇಟ್‌ ಕಂಟ್ರೋಲ್‌ ಪ್ಯಾನೆಲ್‌ ಇತ್ಯಾದಿ ಹೊಸ ವೈಶಿಷ್ಟ್ಯಗಳು ಇದರಲ್ಲಿ ಕಾಣಿಸಿಕೊಳ್ಳಲಿವೆ. ಹ್ಯುಂಡೈ ಸಂಸ್ಥೆಯು ಇತರ ಯಾವುದೇ ವೈಶಿಷ್ಟ್ಯಗಳ ಕುರಿತು ಮಾಹಿತಿಯನ್ನು ನೀಡದೆ ಇದ್ದರೂ, ಇದರಲ್ಲಿ ಡ್ಯುವಲ್‌ ಜೋನ್‌ ಕ್ಲೈಮೇಟ್‌ ಕಂಟ್ರೋಲ್‌, ಪ್ಯಾನೊರಾಮಿಕ್‌ ಸನ್‌ ರೂಫ್‌, ವೆಂಟಿಲೇಟೆಡ್‌ ಸೀಟುಗಳು, 6 ಏರ್‌ ಬ್ಯಾಗ್‌ ಗಳು ಮತ್ತು ADAS ತಂತ್ರಜ್ಞಾನವನ್ನು ಪಡೆಯುವ ಸಾಧ್ಯತೆ ಇದೆ. ಭಾರತದಲ್ಲಿ ಪರಿಷ್ಕೃತ ಟಕ್ಸನ್‌ ವಾಹನವು 2-ಲೀಟರ್‌ ಡೀಸೆಲ್ (186 PS/416 Nm) ಮತ್ತು 2-ಲೀಟರ್‌ ಪೆಟ್ರೋಲ್ (156 PS/192 Nm)‌ ಎಂಜಿನ್‌ ಆಯ್ಕೆಗಳನ್ನು ಮುಂದುವರಿಸಲಿದೆ.

ಹೊಸ ಹ್ಯುಂಡೈ ಕೋನಾ ಎಲೆಕ್ಟ್ರಿಕ್

2024 Hyundai Kona Electric

 ನಿರೀಕ್ಷಿತ ಬಿಡುಗಡೆ: ಮೇ 2024

ನಿರೀಕ್ಷಿತ ಬೆಲೆ: ರೂ 25 ಲಕ್ಷದಿಂದ (ಎಕ್ಸ್-ಶೋರೂಂ)

ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಅನ್ನು ಭಾರತದಲ್ಲಿ 2019ರಲ್ಲಿಯೇ ಬಿಡುಗಡೆ ಮಾಡಲಾಗಿದ್ದು, ತದನಂತರ ಇದು ಇಲ್ಲಿ ಯಾವುದೇ ಪರಿಷ್ಕರಣೆಗೆ ಒಳಗಾಗಿಲ್ಲ. 2022ರ ಡಿಸೆಂಬರ್‌ ತಿಂಗಳಿನಲ್ಲಿ, ಹೊಸ ತಲೆಮಾರಿನ ಪರಿಷ್ಕೃತ ಕೋನಾ ಎಲೆಕ್ಟ್ರಿಕ್ ಅನ್ನು ಜಾಗತಿಕವಾಗಿ ಅನಾವರಣಗೊಳಿಸಲಾಗಿದ್ದು, ಇದು 2024ರಲ್ಲಿ ಭಾರತದ ರಸ್ತೆಗಳಲ್ಲಿ ಕಾಣಿಸಿಕೊಳ್ಳಲಿದೆ.

2024 Hyundai Kona Electric rear

ನವೀನ ಕೋನಾ ಕಾರಿನ ಒಳಗಡೆ ಮತ್ತು ಹೊರಗಡೆಯ ವಿನ್ಯಾಸದಲ್ಲಿ ಬದಲಾವಣೆ ಮಾಡಲಾಗಿದೆ. ಅಂತರಾಷ್ಟ್ರೀಯವಾಗಿ ಹೊಸ ಕೋನಾ ಎಲೆಕ್ಟ್ರಿಕ್‌ ಕಾರು ಎರಡು ಬ್ಯಾಟರಿ ಪ್ಯಾಕ್‌ ಆಯ್ಕೆಗಳೊಂದಿಗೆ ಬರುತ್ತದೆ – 48.4 kWh ಮತ್ತು 65.4 kWh, ಹಾಗೂ ಎಲೆಕ್ಟ್ರಿಕ್‌ ಮೋಟಾರ್‌ ಗಳು ಕ್ರಮವಾಗಿ 155 PS ಮತ್ತು 218 PS ಶಕ್ತಿಯನ್ನುಂಟು ಮಾಡುತ್ತವೆ. ಹ್ಯುಂಡೈ ಪ್ರಕಾರ ಪರಿಷ್ಕೃತ ಕೋನಾವು 490 km ನಷ್ಟು ಶ್ರೇಣಿಯನ್ನು ಹೊಂದಿದ್ದು ಇದು 41 ನಿಮಿಷಗಳಲ್ಲಿ 10-80 ಶೇಕಡಾದಷ್ಟು ಚಾರ್ಜ್‌ ಆಗುತ್ತದೆ. 

 ವೈಶಿಷ್ಟ್ಯಗಳ ವಿಚಾರದಲ್ಲಿ ಹೇಳುವುದಾದರೆ ಇದು 12.3 ಇಂಚಿನ ಎರಡು ಡಿಸ್ಪ್ಲೇಗಳು, 12 ಇಂಚಿನ ಹೆಡ್ಸ್‌ ಅಪ್‌ ಡಿಸ್ಪ್ಲೇ, 8 ಸ್ಪೀಕರ್‌ ಬೋಸ್‌ ಸೌಂಡ್‌ ಸಿಸ್ಟಂ, ವೆಹಿಕಲ್-2-ಲೋಡ್ (V2L)‌ ಕಂಪ್ಯಾಟಿಬಿಲಿಟಿ, 360 ಡಿಗ್ರಿ ಕ್ಯಾಮರಾ, ಮತ್ತು ADAS ಇತ್ಯಾದಿಗಳನ್ನು ಹೊಂದಿರಲಿದೆ.

ಹ್ಯುಂಡೈ ಅಯಾನಿಕ್ 6

Hyundai IONIQ 6

ನಿರೀಕ್ಷಿತ ಬಿಡುಗಡೆ: ಏಪ್ರಿಲ್ 2024

ನಿರೀಕ್ಷಿತ ಬೆಲೆ: ರೂ 65 ಲಕ್ಷದಿಂದ (ಎಕ್ಸ್-ಶೋರೂಂ)

ಅಂತಿಮವಾಗಿ ಹ್ಯುಂಡೈ ಸಂಸ್ಥೆಯು ಇದರ ಅಗ್ರಗಣ್ಯ EV ಸೆಡಾನ್‌ ಎನಿಸಿರುವ  ಅಯಾನಿಕ್‌ 6 ಅನ್ನು ಭಾರತಕ್ಕೆ ತರಲಿದೆ. ಅಂತರಾಷ್ಟ್ರೀಯವಾಗಿ ಇದು 77.4 kWh ಬ್ಯಾಟರಿ ಪ್ಯಾಕ್‌ ಜೊತೆಗೆ ಬರುತ್ತಿದ್ದು, ಇದರ ಏಕೈಕ ಮೋಟಾರ್ 228 PS ಮತ್ತು 350 Nm ಉಂಟು ಮಾಡುತ್ತದೆ.  ಹ್ಯುಂಡೈ ಅಯಾನಿಕ್‌ 5 ನ ಸೆಡಾನ್‌ ದಾಯಾದಿ ಎನಿಸಿರುವ ಇದು 610 km ಗಿಂತಲೂ ಹೆಚ್ಚಿನ ಶ್ರೇಣಿಯನ್ನು ಹೊಂದಿದೆ ಎಂದು WLTP ಹೇಳಿದೆ.

Hyundai IONIQ 6

 ಇದು 12.3 ಇಂಚಿನ ಎರಡು ಡಿಸ್ಪ್ಲೇಗಳು, ಹೆಡ್ಸ್‌ ಅಪ್‌ ಡಿಸ್ಪ್ಲೇ, 8 ಸ್ಪೀಕರ್‌ ಬೋಸ್‌ ಸೌಂಡ್‌ ಸಿಸ್ಟಂ, ವೈರ್‌ ಲೆಸ್‌ ಫೋನ್‌ ಚಾರ್ಜಿಂಗ್, ಮತ್ತು ವೆಹಿಕಲ್-2-ಲೋಡ್ (V2L) ಸಾಮರ್ಥ್ಯವನ್ನು ಹೊಂದಿದೆ. ಇದರ ಸುರಕ್ಷತಾ ಪಟ್ಟಿಯಲ್ಲಿ 7 ಏರ್‌ ಬ್ಯಾಗ್‌ ಗಳು, 360 ಡಿಗ್ರಿ ಕ್ಯಾಮರಾ, ADAS ನ ಸಂಪೂರ್ಣ ವೈಶಿಷ್ಟ್ಯಗಳನ್ನು ಒಳಗೊಳ್ಳಲಾಗಿದೆ.

ಇದನ್ನು ಸಹ ಓದಿರಿ: 2024ರಲ್ಲಿ ಭಾರತಕ್ಕೆ ಬರಲಿರುವ ಎಲ್ಲಾ EV ಗಳ ವಿವರ ಇಲ್ಲಿದೆ

ಈ ಎಲ್ಲಾ ಹ್ಯುಂಡೈ ಕಾರುಗಳು ಮುಂದಿನ ವರ್ಷದಲ್ಲಿ ಆಗಮಿಸಲಿದ್ದು, ಭಾರತದ ICE ಮತ್ತು EV ವಿಭಾಗಗಳ ಅಂಗವೆನಿಸಲಿವೆ. ನೀವು ಇವುಗಳಲ್ಲಿ ಯಾವ ಮಾದರಿಗಾಗಿ ಕಾಯುತ್ತಿದ್ದೀರಿ? ನಿಮ್ಮ ಪ್ರತಿಕ್ರಿಯೆಯನ್ನು ಕೆಳಗೆ ದಾಖಲಿಸಿರಿ.

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Hyundai ಕ್ರೆಟಾ

Read Full News

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
×
We need your ನಗರ to customize your experience