• English
  • Login / Register

ಚಿತ್ರಗಳಲ್ಲಿ MG ZS EV

ಎಂಜಿ ಜೆಡ್‌ಎಸ್‌ ಇವಿ 2020-2022 ಗಾಗಿ dhruv ಮೂಲಕ ಡಿಸೆಂಬರ್ 11, 2019 02:45 pm ರಂದು ಪ್ರಕಟಿಸಲಾಗಿದೆ

  • 26 Views
  • ಕಾಮೆಂಟ್‌ ಅನ್ನು ಬರೆಯಿರಿ

MG ಇಂಡಿಯಾ - ಸ್ಪೆಕ್  ZS EV   ಅನ್ನು ಇತ್ತೀಚಿಗೆ ಬಹಿರಂಗಪಡಿಸಿದೆ ಮತ್ತು ಸ್ಪೆಸಿಫಿಕೇಷನ್ ಗಳು ಮತ್ತು ಫೀಚರ್ ಗಳ ಕೊಡುಗೆಗಳು

In Pics: MG ZS EV

MG’s ZS EV ಭಾರತದಲ್ಲಿ  ಒಂದು ಪ್ರಮುಖವಾದ ಕಾರ್ ಆಗಿದೆ. ಭಾರತದಲ್ಲಿ ಮಾರಾಟವಾಗಲ್ಪಡುವ ದೂರದ ವ್ಯಾಪ್ತಿಯ ಎಲೆಕ್ಟ್ರಿಕ್ ಕಾರ್ ಆಗಿರುವುದಲ್ಲದೆ, MG ಯು ಜನಗಳಿಗೆ ಎಲೆಕ್ಟ್ರಿಕ್ ಕಾರ್ ಗಳ ಉತ್ತಮ ಅಭಿಪ್ರಾಯ ಉಂಟಾಗುವಂತೆ ಮಾಡುವ ಗುರಿ ಹೊಂದಿದೆ. ಬ್ರಿಟಿಷ್ ಕಾರ್ ಮೇಕರ್ ಇಂಡಿಯಾ ಸ್ಪೆಕ್ ಆವೃತ್ತಿಯ ಪೂರ್ಣ ಎಲೆಕ್ಟ್ರಿಕ್ SUV ಯನ್ನು ಅನಾವರಣಮಾಡಿದ್ದಾರೆ, ಅದರ ಅರ್ಥ ಇದನ್ನು ಹೆಚ್ಚು ಗಮನಿಸಬೇಕಾಗಿದೆ ಎಂದು.

 ಮುಂಬದಿಯ ಭಾಗ 

In Pics: MG ZS EV

MG ZS EV ಉತ್ತಮ ನುಣುಪಾದ ಡಿಸೈನ್ ಹೊಂದಿದೆ ಮತ್ತು ಬಾಡಿ ವರ್ಕ್ ಮೇಲೆ ಮೊನಚಾದ ಭಾಗಗಳು ಇಲ್ಲ. ಗ್ರಿಲ್ ಮೇಲೆ MG ಹೆಕ್ಟರ್ ನಂತಹ ಮೆಶ್ ಅನ್ನು ಕೊಡಲಾಗಿದೆ. ಇದು ಆಯತಾಕಾರದ ಯೂನಿಟ್ ಗಿಂತಲೂ ಹೆಚ್ಚು ಕೋನ ಗಳನ್ನು ಹೊಂದಿದೆ. ಇದು  ZS EV ಗೆ  ದೂರದಿಂದ ಗಮನಿಸಬಹುದಾದ ಒಂದು ಉತ್ತಮ ನಿಲುವು ಕೊಡುತ್ತದೆ. ಜೊತೆಗೆ, ಬೇಸ್ ಸುತ್ತ ಇರುವ ಕ್ಲಾಡ್ಡಿಂಗ್ ZS EV ಗೆ ಕಠಿಣ ನಿಲುವನ್ನು ಸಹ ಕೊಡುತ್ತದೆ. ಆದರೆ ಕಾರ್ ನ ಇತರ ಭಾಗಗಳ  ನಯವಾದ ಕೋನಗಳು ಇದನ್ನು ಹೆಚ್ಚು ಹೈಲೈಟ್ ಆಗದಂತೆ ಮಾಡುತ್ತದೆ.

ಹಿಂಬದಿ ಭಾಗ 

In Pics: MG ZS EV

MG ಲೋಗೋ ಮಧ್ಯದಲ್ಲಿದ್ದು ಆಕರ್ಷಿಸುತ್ತದೆ. ಟೈಲ್ ಲೈಟ್ ಜೊತೆಗೆ LED ತುಣುಕುಗಳು ಹೆಚ್ಚು ಮುಂದುವರೆದಂತೆ ಕಾಣುವುದಿಲ್ಲ ಆದರೆ ಕಾರ್ ನ ಒಟ್ಟಾರೆ ನೋಟಕ್ಕೆ  ಚೆನ್ನಾಗಿ ಹೊಂದಿಕೊಳ್ಳುತ್ತದೆ 

 ಫೆಂಡರ್

In Pics: MG ZS EV

ಹೆಕ್ಟರ್ 'ಇಂಟರ್ನೆಟ್ ಇನ್ಸೈಡ್ ' ಬ್ಯಾಡ್ಜ್ ಅನ್ನು ಪಡೆಯುತ್ತದೆ ಮುಂಬದಿಯ ಫೆಂಡರ್ ಮೇಲೆ. ZS EV ‘ಎಲೆಕ್ಟ್ರಿಕ್ ’ ಬ್ಯಾಡ್ಜ್ ಅನ್ನು ಪಡೆಯುತ್ತದೆ ಮತ್ತು ಅದು ಈ  SUV ಯ ಒಂದು ಪ್ರಮುಖ ಹೈಲೈಟ್ ಆಗಿದೆ. 

ಚಾರ್ಜಿನ್ಗ್ ಪೋರ್ಟ್ 

In Pics: MG ZS EV

 ZS EV ಯ ಚಾರ್ಜಿನ್ಗ್ ಪೋರ್ಟ್ ಮುಂಬದಿ ಗ್ರಿಲ್ ಹಿಂದುಗಡೆ ಅಳವಡಿಸಲಾಗಿದೆ. ಸರಳವಾದ ತಳ್ಳುವಿಕೆ ಪ್ಲಾಪ್ ಅನ್ನು ಮೇಲಕ್ಕೆ ಬರುವಂತೆ ಮಾಡುತ್ತದೆ. DC ಫಾಸ್ಟ್ ಚಾರ್ಜಿನ್ಗ್  ಗೆ ಚಾರ್ಜಿನ್ಗ್ ಪೋರ್ಟ್ ಸಹಕರಿಸುತ್ತದೆ. ಅದರಿಂದಾಗಿ  ZS EV  ಯನ್ನು  ಶೇಕಡಾ  0-80  ವರೆಗೆ 50 ನಿಮಿಷದಲ್ಲಿ ಮಾಡಬಹುದು. MG  ಯವರು  ZS EV  ಯಲ್ಲಿ  7.4kW AC ವಾಲ್ ಬಾಕ್ಸ್ ಚಾರ್ಜರ್ ಕೊಡುತ್ತಾರೆ ಅದು ಕಾರ್ ಅನ್ನು  6 ರಿಂದ  8 ಘಂಟೆ ಒಳಗಡೆ ಚಾರ್ಜ್ ಮಾಡುತ್ತದೆ. ಗ್ರಿಲ್ ಮೇಲೆ ಇರುವ  MG ಲೋಗೋ ಸಹ ಬೆಳಗುತ್ತದೆ. 

ಮೋಟಾರ್ 

In Pics: MG ZS EV

ಇದು ಒಂದು ಸಾಂಪ್ರದಾಯಿಕ ಇಂಟರ್ನಲ್  ಕಂಬಶ್ಚಯನ್ ಎಂಜಿನ್ ಆಗಿಲ್ಲ, ಆದರೆ ಅದೇ ಡ್ರೈವ್ ಅನ್ನು ಡ್ರೈವ್ ಮಾಡುತ್ತದೆ. ಎಲೆಕ್ಟ್ರಿಕ್ ಮೋಟಾರ್ ಒಟ್ಟಾರೆ 143PS ಗರಿಷ್ಟ ಪವರ್ ಕೊಡುತ್ತದೆ ಮತ್ತು 353Nm ಗರಿಷ್ಟ ಟಾರ್ಕ್ ಕೊಡುತ್ತದೆ, ಹಾಗಾಗಿ ZS EV ಯು  0-100kmph ಅನ್ನು ಕೇವಲ 8.5 ಸೆಕೆಂಡ್ ಗಳಲ್ಲಿ ಪಡೆಯುತ್ತದೆ. 

ಟೈರ್ ಗಳು 

In Pics: MG ZS EV

 ZS EV ಯು 17-ಇಂಚು ಅಲಾಯ್ ವೀಲ್ ಜೊತೆಗೆ 215/50 R17  ಮಿಚೆಲಿನ್ ಟೈರ್ ಕೊಡಲಾಗಿದೆ. ಅಲಾಯ್ ಗಳು ಆಕರ್ಷಕವಾದ ಡಿಸೈನ್ ನಿಲುವನ್ನು ಹೊಂದುತ್ತದೆ. ನಮ್ಮ ಪ್ರಕಾರ ಅದು SUV ಯ ನಯವಾದ ಡಿಸೈನ್ ಗೆ ಹೊಂದುವುದಿಲ್ಲ.  ಆದರೆ ಅದು ವಿಭಿನ್ನವಾಗಿ ಕಾಣುತ್ತದೆ. 

ಹಾಗು ಓದಿರಿ: ಡಿಸೆಂಬರ್ 2019 ನಲ್ಲಿ ನಿರೀಕ್ಷಿಸಬಹುದಾದ 4  ಕಾರ್ ಗಳು

 ಬ್ಯಾಟರಿ ಪ್ಯಾಕ್ 

 In Pics: MG ZS EV

44.5kWh ಬ್ಯಾಟರಿ ಪ್ಯಾಕ್ ಅನ್ನು ಫ್ಲೋರ್ ಬೋರ್ಡ್ ಕೆಳಗೆ ಅಳವಡಿಸಲಾಗಿದೆ. ಅದು ಅಸುರಕ್ಷಿತವಾದ ಭಾಗದಲ್ಲಿದೆ ಎನಿಸಿದರೂ ಅದಕ್ಕೆ ಬಹಳಷ್ಟು ಸುರಕ್ಷತೆ ಕೊಡಲಾಗಿದೆ. ಹೆಚ್ಚಾಗಿ ಹೇಳಬೇಕೆಂದರೆ ಬ್ಯಾಟರಿ ಪ್ಯಾಕ್ IP67 ರೇಟ್ ಹೊಂದಿದೆ, ಅಂದರೆ ಅದು ವಾಟರ್ ಪ್ರೂಫ್ ಆಗಿದೆ ಎಂದು!

ಡ್ಯಾಶ್ ಬೋರ್ಡ್

In Pics: MG ZS EV

ಒಳಗಡೆ ಪ್ರವೇಶಿಸಿದರೆ ನಿಮಗೆ ಕಂಡುಬರುತ್ತದೆ MG ಯವರು ಕ್ಯಾಬಿನ್ ಅನ್ನು ಸರಳವಾಗಿರಿಸಲು ಪ್ರಯತ್ನಿಸಿದ್ದಾರೆ ಎಂದು. ಹೆಚ್ಚು  ಕಪ್ಪು ಬಣ್ಣ ಉಪಯೋಗಿಸಲಾಗಿದೆ ಮತ್ತು ಬಹಳಷ್ಟು ಸಿಲ್ವರ್ ಮತ್ತು ಪಿಯಾನೋ ಬ್ಲಾಕ್ ಟ್ರಿಮ್ ಸುತ್ತನ್ನು ಸಹ ಕೊಟ್ಟಿದ್ದಾರೆ. ಹೆಕ್ಟರ್ ಗೆ ತದ್ವಿರುದ್ಧವಾಗಿ ಸ್ಕ್ರೀನ್ ಅನ್ನು ಅಡ್ಡಲಾಗಿ ಕೊಡಲಾಗಿದೆ ಮತ್ತು ಅದು ಸಣ್ಣದಾಗಿದ್ದು 8-ಇಂಚು ಅಳತೆ ಹೊಂದಿದೆ. ಮುಂದುವರೆದು, ನಿಮಗೆ ಸಾಮಾನ್ಯ AC ಕಂಟ್ರೋಲ್ ಗಳನ್ನು ಕೊಡಲಾಗಿದೆ. 

ಕೆಳಹಂತದಲ್ಲಿರುವ ಸೆಂಟರ್ ಕನ್ಸೋಲ್ 

In Pics: MG ZS EV

ಗೇರ್ ಸೆಲೆಕ್ಟರ್ ನೋಡಲು ಪ್ರೀಮಿಯಂ ಆಗಿದೆ. ಅದರ ಮುಂದೆ  ಟಗಲ್ ಸ್ವಿಚ್ ಗಳನ್ನು ಕೊಡಲಾಗಿದೆ ಅದು ವಿವಿಧ ಡ್ರೈವ್ ಮೋಡ್, ರಿಜೆನೆರೇಟಿವ್ ಬ್ರೇಕಿಂಗ್ ಮತ್ತು ಬ್ಯಾಟರಿ ಪ್ಯಾಕ್  ಅನ್ನು ಕಂಟ್ರೋಲ್ ಮಾಡುತ್ತದೆ.

ಇನ್ಸ್ಟ್ರುಮೆಂಟ್ ಕ್ಲಸ್ಟರ್ 

In Pics: MG ZS EV

ಬಹಳಷ್ಟು ನವೀನ ಕಾರ್ ಗಳಿಗಿಂತಲೂ ಭಿನ್ನವಾಗಿ, ZS EV  ಯಲ್ಲಿ ಎರೆಡು ಅನಲಾಗ್ ಡಯಲ್ ಗಳನ್ನು ಸ್ಪೀಡೊ ಮೀಟರ್ ಮತ್ತು ಪವರ್ ಇಂಡಿಕೇಟರ್ ಗಳಿಗೆ ಕೊಡಲಾಗಿದೆ. ಅನಲಾಗ್ ಆಗಿರುವುದಲ್ಲದೆ, ಇನ್ಸ್ಟ್ರುಮೆಂಟ್ ಕ್ಲೆಸ್ಟರ್ ನೋಡಲು ಚೆನ್ನಾಗಿದೆ. ಮದ್ಯ ಭಾಗದಲ್ಲಿ ಚಿಕ್ಕ ಸ್ಕ್ರೀನ್ ಇದ್ದು ಅದರಲ್ಲಿ ಟ್ರಿಪ್ ವಿವರಗಳು ಮತ್ತು ಡ್ರೈವ್ ಮೋಡ್ ಗಳ ಬಗ್ಗೆ ವಿವರಗಳು ದೊರೆಯುತ್ತದೆ. 

ಮುಂಬದಿ ಸೀಟ್ ಗಳು

In Pics: MG ZS EV

ಸೀಟ್ ಗಳು ಎತ್ತರವಾಗಿದೆ ಮತ್ತು ಉತ್ತಮ ಬಾಸ್ಟರಿಂಗ್ ಅನ್ನು ಪಕ್ಕಗಳಲ್ಲಿ ಕೊಡಲಾಗಿದೆ ಸಹ. ನಾವು  ZS EV  ಯನ್ನು ರೋಡ್ ಟ್ರಿಪ್ ಗೆ ತೆಗೆದುಕೊಂಡು ಹೋಗಿ  ಈ ಚೇರ್ ಗಳು ಎಷ್ಟು ಆರಾಮದಾಯಕವಾಗಿದೆ ಎಂದು ತಿಳಿಯಲು ಕಾತುರರಾಗಿದ್ದೇವೆ!

 ಹಿಂಬದಿ ಸೀಟ್ ಗಳು 

In Pics: MG ZS EV

ಹಿಂಬದಿ ಸೀಟ್ ನ ಮಡಚಬಹುದಾದ ಕೋನ ಮತ್ತು ಬಹಳಷ್ಟು ಸೀಟ್ ಬೇಸ್ ಉತ್ತಮ ಹಿಂಬದಿ ಮತ್ತು ತೊಡೆಗಳಿಗೆ ಬೆಂಬಲ ಕೊಡುತ್ತದೆ. ಆದರೆ, ಸೀಟ್ ಮೇಲಿನ ಪದರಗಳು ಐದು ಮಾಡಿ ಕುಳಿತುಕೊಳ್ಳಲು ಸಮಸ್ಯೆ ಎನಿಸಬಹುದು . 

ಬೂಟ್ ಸ್ಪೇಸ್ 

In Pics: MG ZS EV

ಬೂಟ್ ನೋಡಲು ಸಾಮಾನ್ಯ ಅಳತೆ ಹೊಂದಿದೆ ಮತ್ತು ಅದು ನಾಲ್ಕು ಜನ ಪ್ಯಾಸೆಂಜರ್ ಗಳ ಬ್ಯಾಗ್ ಅನ್ನು ಇಡಲು ಸಾಕಷ್ಟು ಸ್ಥಳಾವಕಾಶ ಹೊಂದಿದೆ. ನಾವು ಒಮ್ಮೆ ನಮಗೆ ಪರೀಕ್ಷೆಗೆ ದೊರೆತಾಗ  ZS EV ಸೀಟ್ ನ ಆರಾಮದಾಯಕತೆಯನ್ನು ನಮ್ಮ ವಿವರವಾದ ವಿಮರ್ಶೆಯಲ್ಲಿ ತಿಳಿಸುತ್ತೇವೆ.

ಹಾಗು ಓದಿರಿ: ಇಂಡಿಯಾ -ಸ್ಪೆಕ್ MG ZS EV ಅನಾವರಣಗೊಂಡಿದೆ, ಬಿಡುಗಡೆ ಜನವರಿ 2020

 

ಅವರಿಂದ ಪ್ರಕಟಿಸಲಾಗಿದೆ
was this article helpful ?

Write your Comment on M ಜಿ ಜೆಡ್‌ಎಸ್‌ ಇವಿ 2020-2022

Read Full News

explore ಇನ್ನಷ್ಟು on ಎಂಜಿ ಜೆಡ್‌ಎಸ್‌ ಇವಿ 2020-2022

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience