ಭಾರತಕ್ಕೆ ಬರಲಿರುವ Kia Carens EVಯಲ್ಲಿ ಹೊಸ ಅಲಾಯ್ ವೀಲ್‌ಗಳು ಮತ್ತು ADAS ಸೇರ್ಪಡೆ ಸಾಧ್ಯತೆ
ಕಿಯಾ ಕೆರೆನ್ಸ್ ಇವಿ ಗಾಗಿ kartik ಮೂಲಕ ಮಾರ್ಚ್ 21, 2025 10:25 pm ರಂದು ಮಾರ್ಪಡಿಸಲಾಗಿದೆ
- 10 Views
- ಕಾಮೆಂಟ್ ಅನ್ನು ಬರೆಯಿರಿ
ಫೇಸ್‌ಲಿಫ್ಟೆಡ್ ಕ್ಯಾರೆನ್ಸ್ ಜೊತೆಗೆ ಕ್ಯಾರೆನ್ಸ್ ಇವಿಯು 2025 ರ ಮಧ್ಯಭಾಗದಲ್ಲಿ ಬಿಡುಗಡೆಯಾಗಲಿದೆ
ಕಿಯಾ ಕಾರೆನ್ಸ್ ಇವಿಯನ್ನು ಮತ್ತೊಮ್ಮೆ ದಕ್ಷಿಣ ಕೊರಿಯಾದಲ್ಲಿ ಕ್ಯಾಮೆರಾ ಕಣ್ಣಿನಲ್ಲಿ ಸೆರೆಹಿಡಿಯಲಾಗಿದೆ. ಈ ಸಂಪೂರ್ಣ ವಿದ್ಯುತ್ ಚಾಲಿತ ಎಮ್‌ಪಿವಿಯು ಚಾರ್ಜ್ ಆಗುತ್ತಿರುವಾಗ ಅದರ ಚಿತ್ರಗಳನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಸಂಪೂರ್ಣವಾಗಿ ಮರೆಮಾಚಲ್ಪಟ್ಟಿದ್ದರೂ, ಈ ಎಲೆಕ್ಟ್ರಿಕ್ ವೆಹಿಕಲ್‌ನ ಕೆಲವು ವಿವರಗಳು ಇನ್ನೂ ಗೋಚರಿಸುತ್ತಿದ್ದವು. ಕಿಯಾ ಕ್ಯಾರೆನ್ಸ್ ಇವಿಯ ಸ್ಪೈ ಶಾಟ್‌ಗಳಿಂದ ಏನನ್ನು ತಿಳಿಯಬಹುದು ಎಂಬುದರ ಕುರಿತು ಒಂದು ತ್ವರಿತ ನೋಟ ಇಲ್ಲಿದೆ:
ಏನನ್ನು ಗಮನಿಸಿದ್ದೇವೆ ?
ಈ ಬಾರಿ ಮುಂಭಾಗವನ್ನು ಹೆಚ್ಚು ಮರೆಮಾಚಲಾಗಿತ್ತು, ಆದರೆ ಹಿಂದಿನ ಸ್ಪೈಶಾಟ್‌ಗಳು ಹೆಡ್‌ಲೈಟ್‌ಗಳ ವಿನ್ಯಾಸವು ತ್ರಿಕೋನ ಆಕಾರದಲ್ಲಿರುತ್ತದೆ ಮತ್ತು ಮುಂಭಾಗದಲ್ಲಿ ಕನೆಕ್ಟೆಡ್ ಎಲ್‌ಇಡಿ ಡಿಆರ್‌ಎಲ್ ಸ್ಟ್ರಿಪ್ ಅನ್ನು ಹೊಂದಿದೆ ಎಂದು ಈಗಾಗಲೇ ಬಹಿರಂಗಪಡಿಸಿವೆ. ಲೈಟಿಂಗ್ ಅಂಶಗಳ ವಿನ್ಯಾಸವು EV6 ನಂತೆಯೇ ಇದ್ದರೂ, ಚಾರ್ಜಿಂಗ್ ಪೋರ್ಟ್ ಸ್ಥಾನವು ವಿಭಿನ್ನವಾಗಿದೆ ಮತ್ತು ಇದು ನಾವು ಹುಂಡೈ ಕ್ರೆಟಾ ಎಲೆಕ್ಟ್ರಿಕ್‌ನಲ್ಲಿ ನೋಡಿದಂತೆಯೇ ಕಾಣುತ್ತದೆ.
ಇತ್ತೀಚಿನ ಸ್ಪೈ ಶಾಟ್‌ಗಳಲ್ಲಿ, ಕ್ಯಾರೆನ್ಸ್ ಇವಿಯಲ್ಲಿ ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳ (ADAS) ಲಭ್ಯತೆಯಂತಹ ಕೆಲವು ಪ್ರಮುಖ ಅಂಶಗಳನ್ನು ಗ್ರಹಿಸಬಹುದು, ಇದು ವಿಂಡ್‌ಶೀಲ್ಡ್‌ನಲ್ಲಿ ಕ್ಯಾಮೆರಾ ಇರುವಿಕೆಯಿಂದ ಸ್ಪಷ್ಟವಾಗುತ್ತದೆ. ನೀವು ಬಂಪರ್‌ನಲ್ಲಿ ಮುಂಭಾಗದ ಪಾರ್ಕಿಂಗ್ ಸೆನ್ಸರ್‌ಗಳನ್ನು ಸಹ ಗುರುತಿಸಬಹುದು, ಮತ್ತು ಇತ್ತೀಚೆಗೆ ಬಿಡುಗಡೆಯಾದ ಸಿರೋಸ್‌ನಂತೆ ಕಿಯಾ ಇದನ್ನು ಸೈಡ್ ಸೆನ್ಸರ್‌ಗಳೊಂದಿಗೆ ನೀಡುವ ಸಾಧ್ಯತೆಯಿದೆ.
ಇದನ್ನೂ ಸಹ ಓದಿ: ಮೊದಲ ಬಾರಿಗೆ ಪರೀಕ್ಷೆ ನಡೆಸುವ ವೇಳೆಗೆ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾದ Renault Triber ಫೇಸ್‌ಲಿಫ್ಟ್
ಹೆಚ್ಚಿನ ಸೈಡ್ ಪ್ರೊಫೈಲ್ ಇನ್ನೂ ಕವರ್‌ನ ಒಳಗೆಯಿದೆ, ಆದರೆ ಅಲಾಯ್ ವೀಲ್‌ಗಳು ಇರುವುದು ಗೋಚರಿಸುತ್ತವೆ, ಇದು ಪ್ರಸ್ತುತ ಇಂಧನ ಚಾಲಿತ ಎಂಜಿನ್ (ICE) ಕ್ಯಾರೆನ್ಸ್ ಪಡೆಯುವುದಕ್ಕಿಂತ ವಿಭಿನ್ನ ವಿನ್ಯಾಸವನ್ನು ಹೊಂದಿದೆ. ಪರೀಕ್ಷಾರ್ಥ ವಾಹನದಲ್ಲಿರುವ ಅಲಾಯ್ ವೀಲ್‌ಗಳು, ವಾಹನದ ಇವಿ ಸ್ವರೂಪಕ್ಕೆ ಸರಿಹೊಂದುವಂತೆ ಹೆಚ್ಚಾಗಿ ಏರೋಡೈನಾಮಿಕ್ ಆಗಿ ವಿನ್ಯಾಸಗೊಳಿಸಲ್ಪಟ್ಟಿವೆ.
ಫೇಸ್‌ಲಿಫ್ಟೆಡ್ ಕ್ಯಾರೆನ್ಸ್‌ನಂತೆ ಹಿಂಭಾಗವು ಪರಿಷ್ಕೃತ ಕನೆಕ್ಟೆಡ್ ಎಲ್‌ಇಡಿ ಟೈಲ್‌ಲ್ಯಾಂಪ್‌ಗಳನ್ನು ಒಳಗೊಂಡಿರುವ ನಿರೀಕ್ಷೆಯಿದೆ, ಇದು ನಮ್ಮ ಮಾರುಕಟ್ಟೆಯಲ್ಲಿ ಮಾರಾಟದಲ್ಲಿರುವ ಆಪ್‌ಡೇಟ್ ಮಾಡಲಾದ ಸೋನೆಟ್ ಮತ್ತು ಸೆಲ್ಟೋಸ್‌ಗಳಿಂದ ಸುಳಿವುಗಳನ್ನು ಪಡೆಯಬಹುದು.
ಕಿಯಾ ಕ್ಯಾರೆನ್ಸ್ ಇವಿಯ ನಿರೀಕ್ಷಿತ ಫೀಚರ್‌ಗಳು ಮತ್ತು ಸುರಕ್ಷತೆ
ಕ್ಯಾರೆನ್ಸ್ ಇವಿಯು 12.3-ಇಂಚಿನ ಡ್ಯುಯಲ್ ಡಿಜಿಟಲ್ ಡಿಸ್‌ಪ್ಲೇ ಸೆಟಪ್, ವೈರ್‌ಲೆಸ್ ಫೋನ್ ಚಾರ್ಜರ್, ಡ್ಯುಯಲ್-ಜೋನ್ ಆಟೋ ಎಸಿ ಮತ್ತು ಪನೋರಮಿಕ್ ಸನ್‌ರೂಫ್‌ನಂತಹ ಫೀಚರ್‌ಗಳನ್ನು ಹೊಂದಿರುವ ನಿರೀಕ್ಷೆಯಿದೆ. ಸುರಕ್ಷತೆಯ ವಿಷಯದಲ್ಲಿ, ಲೆವೆಲ್ 2 ADAS, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ಸಹ ಇರುತ್ತವೆ, ಜೊತೆಗೆ 6 ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್ ಆಗಿ), ಮತ್ತು 360-ಡಿಗ್ರಿ ಕ್ಯಾಮೆರಾ (ಸ್ಪೈ ಶಾಟ್‌ನಲ್ಲಿ ORVM-ಮೌಂಟೆಡ್ ಸೈಡ್ ಕ್ಯಾಮೆರಾದಿಂದ ಸುಳಿವು ನೀಡಿದಂತೆ).
ಕಿಯಾ ಕ್ಯಾರೆನ್ಸ್ ಇವಿ ಪವರ್‌ಟ್ರೇನ್
ಕಿಯಾ ಕಂಪನಿಯು ಈ ಪವರ್‌ಟ್ರೇನ್ ಬಗ್ಗೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ, ಆದರೆ ಇದು ಬಹು ಬ್ಯಾಟರಿ ಪ್ಯಾಕ್‌ಗಳೊಂದಿಗೆ 400 ಕಿ.ಮೀ ನಿಂದ 500 ಕಿ.ಮೀ. ವರೆಗೆ ಚಲಿಸುವ ಸಾಮರ್ಥ್ಯವನ್ನು ಹೊಂದಿರಬಹುದೆಂದು ಎಂದು ನಾವು ನಿರೀಕ್ಷಿಸುತ್ತೇವೆ.
ಕಿಯಾ ಕ್ಯಾರೆನ್ಸ್ ಇವಿಯ ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಕಿಯಾ ಕ್ಯಾರೆನ್ಸ್ ಇವಿ ಕಾರಿನ ಬೆಲೆ ಸುಮಾರು 16 ಲಕ್ಷ ರೂ.ಗಳಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ (ಎಕ್ಸ್ ಶೋ ರೂಂ). ಈ ಸಂಪೂರ್ಣ ಎಲೆಕ್ಟ್ರಿಕ್ ಎಮ್‌ಪಿವಿಯು, BYD eMAX 7 ಗಿಂತ ಹೆಚ್ಚು ಕೈಗೆಟುಕುವ ಆಯ್ಕೆಯಾಗಲಿದೆ.
ಆಟೋಮೋಟಿವ್ ಜಗತ್ತಿನ ನಿರಂತರ ಅಪ್ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ