Login or Register ಅತ್ಯುತ್ತಮ CarDekho experience ಗೆ
Login

ಭಾರತದಲ್ಲಿ Kia EV9 ಎಲೆಕ್ಟ್ರಿಕ್ ಎಸ್‌ಯುವಿಯ ರಹಸ್ಯ ಟೆಸ್ಟಿಂಗ್, 2024ರ ಕೊನೆಯಲ್ಲಿ ಬಿಡುಗಡೆ ಸಾಧ್ಯತೆ

published on ಫೆಬ್ರವಾರಿ 21, 2024 08:18 pm by shreyash for ಕಿಯಾ ಇವಿ9

Kia EV9 ಆಯ್ಕೆ ಮಾಡಲಾದ ಪವರ್‌ಟ್ರೇನ್‌ಗೆ ಅನುಗುಣವಾಗಿ 562 ಕಿಮೀ ವರೆಗೆ ಕ್ಲೈಮ್ ಮಾಡಲಾದ ಬ್ಯಾಟರಿ ರೇಂಜ್‌ ಅನ್ನು ನೀಡುವ ನಿರೀಕ್ಷೆಯಿದೆ.

  • ಕಿಯಾ ಇವಿ6 ನಂತೆಯೇ ಕಿಯಾ ಇವಿ9 E-GMP ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ.

  • ರಹಸ್ಯ ಫೋಟೊಗಳಲ್ಲಿ, ಇವಿ9 ಜಾಗತಿಕ-ಸ್ಪೆಕ್ ಮಾದರಿಯಂತೆಯೇ ಅದೇ ವಿನ್ಯಾಸವನ್ನು ಹೊಂದಿದೆ.

  • ಅಂತಾರಾಷ್ಟ್ರೀಯವಾಗಿ, ಕಿಯಾವು 99.8 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್‌ನೊಂದಿಗೆ ಇವಿ9 ಅನ್ನು ನೀಡುತ್ತದೆ.

  • ಜಾಗತಿಕವಾಗಿ, ಇದು ಹಿಂಬದಿ-ವೀಲ್‌ ಡ್ರೈವ್ ಮತ್ತು ಆಲ್-ವೀಲ್ ಡ್ರೈವ್ ಆಯ್ಕೆಗಳಲ್ಲಿ ಬರುತ್ತದೆ.

  • ಭಾರತದಲ್ಲಿ ಇದರ ಎಕ್ಸ್ ಶೋ ರೂಂ ಬೆಲೆ 80 ಲಕ್ಷ ರೂ.ನಿಂದ ಪ್ರಾರಂಭವಾಗಬಹುದೆಂದು ನಿರೀಕ್ಷಿಸಲಾಗಿದೆ.

ಕಿಯಾ ಇವಿ9 ಆಟೋ ಎಕ್ಸ್‌ಪೋ 2023ರಲ್ಲಿ ಕಾನ್ಸೆಪ್ಟ್‌ ಆಗಿ ಭಾರತದಲ್ಲಿ ತನ್ನ ಪಾದಾರ್ಪಣೆ ಮಾಡಿತು. ಎರಡು ತಿಂಗಳ ನಂತರ, ಕಿಯಾ ಜಾಗತಿಕವಾಗಿ ಇವಿ9 ಎಲೆಕ್ಟ್ರಿಕ್ ಎಸ್‌ಯುವಿಯ ಪ್ರೊಡಕ್ಷನ್-ಸ್ಪೆಕ್ ಆವೃತ್ತಿಯನ್ನು ಅನಾವರಣಗೊಳಿಸಿತು. ಇದು ಇ-ಜಿಎಮ್‌ಪಿ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ, ಇದು ಕಿಯಾ ಇವಿ6 ಅನ್ನು ಸಹ ಆಧಾರಗೊಳಿಸುತ್ತದೆ. ಇವಿ9 ಸಹ ಭಾರತಕ್ಕೆ ಆಗಮಿಸುವುದನ್ನು ದೃಢಪಡಿಸಲಾಗಿದೆ ಮತ್ತು ಕಿಯಾ ಇವಿ9 ಭಾರತದಲ್ಲಿ ಬಿಡುಗಡೆ ಮಾಡುವುದಕ್ಕಿಂತ ಮುಂಚೆಯೇ ನಾವು ಇತ್ತೀಚೆಗೆ ಅದರ ಪರೀಕ್ಷಾರ್ಥ ಆವೃತ್ತಿಯನ್ನು ಯಾವುದೇ ರೀತಿಯ ಕವರ್‌ ಇಲ್ಲದೆ ನೋಡಿದ್ದೇವೆ.

ರಹಸ್ಯ ಫೋಟೋಗಳಲ್ಲಿ ನಾವು ಏನು ನೋಡಿದ್ದೇವೆ?

ರಹಸ್ಯ ಫೋಟೊಗಳು ಕಿಯಾ ಇವಿ9 ನ ಮುಂಭಾಗ ಮತ್ತು ಹಿಂಭಾಗದ ತುದಿಗಳನ್ನು ಸ್ಪಷ್ಟವಾಗಿ ತೋರಿಸುತ್ತದೆ, ಇದು ಜಾಗತಿಕ-ಸ್ಪೆಕ್ ಮಾದರಿಯಂತೆಯೇ ಕಾಣುತ್ತದೆ. ಮುಂಭಾಗದಲ್ಲಿ, ಇದು ವರ್ಟಿಕಲ್ ಹೆಡ್‌ಲೈಟ್ ಸೆಟಪ್‌ನೊಂದಿಗೆ ಟೈಗರ್-ನೋಸ್ ಗ್ರಿಲ್ ಅನ್ನು ಹೊಂದಿದೆ, ಜೊತೆಗೆ ಸ್ಟಾರ್-ಮ್ಯಾಪ್ ಎಲ್‌-ಆಕಾರದ ಡಿಆರ್‌ಎಲ್‌ಗಳನ್ನು ಹೊಂದಿದೆ, ಆದರೆ ಮುಂಭಾಗದ ಬಂಪರ್ ಸ್ಪೋರ್ಟಿ ಲುಕ್‌ಗಾಗಿ ಏರ್ ಚಾನಲ್‌ಗಳನ್ನು ಸಂಯೋಜಿಸುತ್ತದೆ. ಅಂತರರಾಷ್ಟ್ರೀಯ ಮೊಡೆಲ್‌ ಗ್ರಿಲ್‌ನಲ್ಲಿ ಡಿಜಿಟಲ್ ಲೈಟಿಂಗ್ ಪೆಟರ್ನ್‌ ಅನ್ನು ಒಳಗೊಂಡಿದೆ, ಜೊತೆಗೆ ಡೈನಾಮಿಕ್ ವೆಲ್ಕಮ್ ಲೈಟ್ ವೈಶಿಷ್ಟ್ಯವನ್ನು ಹೊಂದಿದೆ.

ಬದಿಯಿಂದ ಗಮನಿಸುವಾಗ, ಜಾಗತಿಕ ಮೊಡೆಲ್‌ನಲ್ಲಿ ನೀಡಲಾದವುಗಳಿಗೆ ಹೋಲಿಸಿದರೆ ಇವಿ9 ವಿಭಿನ್ನವಾದ ಅಲಾಯ್‌ ವೀಲ್‌ಗಳೊಂದಿಗೆ ಗುರುತಿಸಲ್ಪಟ್ಟಿದೆ. ಇವಿ9 ನ ಹಿಂಭಾಗವು ಅದರ ಜಾಗತಿಕ ಪ್ರತಿರೂಪದಂತೆಯೇ ನಿಖರವಾದ ವಿನ್ಯಾಸವನ್ನು ಹೊಂದಿದೆ, ಲಂಬವಾದ ಎಲ್‌ಇಡಿ ಟೈಲ್‌ಲೈಟ್‌ಗಳು ಮತ್ತು ವಿಸ್ತೃತ ರೂಫ್ ಸ್ಪಾಯ್ಲರ್ ಅನ್ನು ಒಳಗೊಂಡಿದೆ. ಇದಲ್ಲದೆ, ಹಿಂಭಾಗದ ಬಂಪರ್ ಅನ್ನು ಸಿಲ್ವರ್ ಸ್ಕಿಡ್ ಪ್ಲೇಟ್‌ನೊಂದಿಗೆ ಸಹ ಕಾಣಬಹುದು.

ಇದನ್ನು ಸಹ ಓದಿ: ಭಾರತದಲ್ಲಿ Mustang Mach-e ಎಲೆಕ್ಟ್ರಿಕ್‌ ಎಸ್‌ಯುವಿಯ ಟ್ರೇಡ್‌ಮಾರ್ಕ್‌ ಮಾಡಿದ Ford. ಇದು ಅಂತಿಮವಾಗಿ ಬರುತ್ತಿದೆಯೇ?

ನಿರೀಕ್ಷಿತ ವೈಶಿಷ್ಟ್ಯಗಳು

ಇಲ್ಲಿ ಗುರುತಿಸಲಾದ ಇವಿ9 ನ ಪರೀಕ್ಷಾ ಆವೃತ್ತಿಯ ಒಳಗೆ ನಾವು ಇನ್ನೂ ಇಣುಕಿ ನೋಡದಿದ್ದರೂ, ಒಳಾಂಗಣವು ಜಾಗತಿಕ ಮೊಡೆಲ್‌ನಂತೆ ಇರುತ್ತದೆ. ಕಿಯಾ ಇದನ್ನು 5.3-ಇಂಚಿನ ಕ್ಲೈಮೇಟ್‌ ಕಂಟ್ರೋಲ್‌ ಡಿಸ್‌ಪ್ಲೇ ಮತ್ತು 708-ವ್ಯಾಟ್ 14-ಸ್ಪೀಕರ್ ಮೆರಿಡಿಯನ್ ಸೌಂಡ್ ಸಿಸ್ಟಮ್‌ನಿಂದ ಸಂಯೋಜಿಸಲಾದ ಎರಡು 12.3-ಇಂಚಿನ ಡಿಸ್‌ಪ್ಲೇಗಳೊಂದಿಗೆ ನೀಡುತ್ತದೆ. ಕಾರಿನ ಬ್ಯಾಟರಿಯನ್ನು ಬಳಸಿಕೊಂಡು ನಿಮ್ಮ ಇತರ ಡಿವೈಸ್‌ಗಳಿಗೆ ವಿದ್ಯುತ್‌ಅನ್ನು ತುಂಬಲು ಬಳಸಬಹುದಾದ ವೆಹಿಕಲ್‌ ಟು ಲೋಡ್‌ (V2L) ಕಾರ್ಯವನ್ನು ಇವಿ9 ಸಹ ಒಳಗೊಂಡಿರುತ್ತದೆ.

ಇದರ ಸುರಕ್ಷತಾ ಕಿಟ್‌ನಲ್ಲಿ ಒಂಬತ್ತು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, ಹಿಲ್ ಸ್ಟಾರ್ಟ್ ಅಸಿಸ್ಟ್ ಮತ್ತು ಫುಲ್ ಸೂಟ್ ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್‌ಗಳು (ADAS) ಫಾರ್ವರ್ಡ್ ಡಿಕ್ಕಿಯನ್ನು ತಪ್ಪಿಸುವ ಆಸಿಸ್ಟ್‌, ಲೇನ್ ಕೀಪ್ ಅಸಿಸ್ಟ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್‌ನಂತಹ ವೈಶಿಷ್ಟ್ಯಗಳನ್ನು ಒಳಗೊಂಡಿರುತ್ತದೆ.

ನಿರೀಕ್ಷಿತ ಪವರ್‌ಟ್ರೇನ್ ಮತ್ತು ರೇಂಜ್‌

ಅಂತರಾಷ್ಟ್ರೀಯವಾಗಿ, ಕಿಯಾ ಇವಿ9 99.8 ಕಿ.ವ್ಯಾಟ್‌ ಬ್ಯಾಟರಿ ಪ್ಯಾಕ್ ಅನ್ನು ಬಳಸುತ್ತದೆ ಮತ್ತು ಹಿಂಬದಿ-ಚಕ್ರ-ಡ್ರೈವ್ ಮತ್ತು ಆಲ್-ವೀಲ್-ಡ್ರೈವ್ ಪವರ್‌ಟ್ರೇನ್ ಆಯ್ಕೆಗಳಲ್ಲಿ ಲಭ್ಯವಿದೆ.

ಬ್ಯಾಟರಿ ಪ್ಯಾಕ್

99.8 ಕಿ.ವ್ಯಾ

99.8 ಕಿ.ವ್ಯಾ

ಡ್ರೈವ್ ಟೈಪ್‌

ಹಿಂದಿನ ಚಕ್ರ ಡ್ರೈವ್‌

ಆಲ್‌ ವೀಲ್‌ ಡ್ರೈವ್

ಪವರ್‌

203 ಪಿಎಸ್

383 ಪಿಎಸ್‌

ಟಾರ್ಕ್

350 ಎನ್ಎಂ

700 ಎನ್‌ಎಮ್‌

ಘೋಷಿಸಿರುವ ರೇಂಜ್‌ (WLTP ಸಂಯೋಜಿತ)

562 ಕಿ.ಮೀ

504 ಕಿ.ಮೀ

ವೇಗವರ್ಧನೆ 0-100 kmph

9.4 ಸೆಕೆಂಡುಗಳು

5.3 ಸೆಕೆಂಡ್‌ಗಳು

ಟಾಪ್‌ ಸ್ಪೀಡ್‌

ಗಂಟೆಗೆ 183 ಕಿ.ಮೀ

ಗಂಟೆಗೆ 200 ಕಿ.ಮೀ

ಗಮನಿಸಿ: ಬ್ಯಾಟರಿ ಪ್ಯಾಕ್ ಮತ್ತು ಎಲೆಕ್ಟ್ರಿಕ್ ಮೋಟರ್‌ನ ವಿಶೇಷಣಗಳು ಇಂಡಿಯಾ-ಸ್ಪೆಕ್ ಮೊಡೆಲ್‌ಗೆ ಬದಲಾಗಬಹುದು.

ನಿರೀಕ್ಷಿತ ಬಿಡುಗಡೆ ಮತ್ತು ಪ್ರತಿಸ್ಪರ್ಧಿಗಳು

ಕಿಯಾವು 2024ರ ದ್ವಿತೀಯಾರ್ಧದಲ್ಲಿ ಇವಿ9 ಎಲೆಕ್ಟ್ರಿಕ್ ಎಸ್‌ಯುವಿಯನ್ನು ಬಿಡುಗಡೆ ಮಾಡಬಹುದು. ಇದರ ಎಕ್ಸ್ ಶೋರೂಂ ಬೆಲೆಗಳು 80 ಲಕ್ಷ ರೂ.ನಿಂದ ಪ್ರಾರಂಭವಾಗಬಹುದು. ಭಾರತದಲ್ಲಿ, ಬಿಎಮ್‌ಡಬ್ಲ್ಯೂಐಎಕ್ಸ್‌ ಮತ್ತು ಮರ್ಸಿಡೀಸ್‌ ಬೆಂಜ್‌ ಇಕ್ಯೂಇ ಎಸ್‌ಯುವಿಯಂತಹ ಐಷಾರಾಮಿ ಎಲೆಕ್ಟ್ರಿಕ್ ಎಸ್‌ಯುವಿಗಳಿಗೆ ಕೈಗೆಟುಕುವ ಪರ್ಯಾಯವಾಗಿ ಇವಿ9 ಅನ್ನು ಕಾಣಬಹುದು.

ಫೋಟೋದ ಮೂಲ

s
ಅವರಿಂದ ಪ್ರಕಟಿಸಲಾಗಿದೆ

shreyash

  • 26 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಕಿಯಾ ಇವಿ9

Read Full News

explore ಇನ್ನಷ್ಟು on ಕಿಯಾ ಇವಿ9

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
Rs.10.99 - 15.49 ಲಕ್ಷ*
Rs.7.99 - 11.89 ಲಕ್ಷ*
Rs.6.99 - 9.24 ಲಕ್ಷ*
Rs.60.95 - 65.95 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ