• English
 • Login / Register

Kia EV9: 2024ರ ವರ್ಲ್ಡ್ ಕಾರ್ ಆಫ್ ದಿ ಇಯರ್ ಪಟ್ಟವನ್ನು ಅಲಂಕರಿಸಿದ ಕಾರು

published on ಏಪ್ರಿಲ್ 01, 2024 08:09 pm by rohit for ಕಿಯಾ ಇವಿ9

 • 29 Views
 • ಕಾಮೆಂಟ್‌ ಅನ್ನು ಬರೆಯಿರಿ

ಕಿಯಾದ ಈ ಪ್ರಮುಖ ಇವಿಯು 2024ರ ದ್ವಿತೀಯಾರ್ಧದಲ್ಲಿ ಭಾರತೀಯ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ

Kia EV9 wins World Car Of The Year 2024

 • EV9 ಗೆ 2024 ರ ವರ್ಲ್ಡ್ ಎಲೆಕ್ಟ್ರಿಕ್ ವೆಹಿಕಲ್ ಪ್ರಶಸ್ತಿಯನ್ನು ಸಹ ನೀಡಲಾಗಿದೆ.
 • WCOTY 2024  ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದ ಇತರ ಕಾರುಗಳೆಂದರೆ BYD ಸೀಲ್ ಮತ್ತು ವೋಲ್ವೋ EX30.
 • EV9 ಕಿಯಾದ ಪ್ರಮುಖ 3-ಸಾಲಿನ ಎಲೆಕ್ಟ್ರಿಕ್ ಎಸ್‌ಯುವಿ ಕೊಡುಗೆಯಾಗಿದೆ.
 • ಜಾಗತಿಕವಾಗಿ RWD ಮತ್ತು AWD ಎರಡೂ ಆಯ್ಕೆಗಳೊಂದಿಗೆ ವಿವಿಧ ಎಲೆಕ್ಟ್ರಿಕ್ ಮೋಟಾರ್‌ಗಳು ಮತ್ತು ಬ್ಯಾಟರಿ ಪ್ಯಾಕ್ ಕಾನ್ಫಿಗರೇಶನ್‌ಗಳೊಂದಿಗೆ ಲಭ್ಯವಿದೆ.
 • ಸುಮಾರು 80 ಲಕ್ಷ ರೂ (ಎಕ್ಸ್ ಶೋ ರೂಂ) ಬೆಲೆಯೊಂದಿಗೆ CBU ಆವೃತ್ತಿಯ ಮೂಲಕ ಭಾರತಕ್ಕೆ ಬರಬಹುದೆಂದು ನಿರೀಕ್ಷಿಸಲಾಗಿದೆ.

ವರ್ಲ್ಡ್ ಕಾರ್ ಆಫ್ ದಿ ಇಯರ್ (WCOTY) ಪಟ್ಟಕ್ಕಾಗಿ ಅಗ್ರ ಮೂರು ಕಾರುಗಳು ಫೈನಲ್‌ಗೆ ಲಗ್ಗೆ ಇಟ್ಟಿದ್ದವು, ಆದರೆ ಈಗ, Kia EV9 ವಿಜೇತರಾಗಿ ಹೊರಹೊಮ್ಮಿದೆ ಎಂದು ಘೋಷಿಸಲಾಗಿದೆ. EV9 ಕೇವಲ WCOTY ಪ್ರಶಸ್ತಿಯನ್ನು ಗೆಲ್ಲುವುದು ಮಾತ್ರವಲ್ಲದೆ, ಇದು '2024 ವರ್ಲ್ಡ್‌ ಎಲೆಕ್ಟ್ರಿಕ್ ವೆಹಿಕಲ್' ಎಂಬ ಬಿರುದನ್ನು ಸಹ ಗಿಟ್ಟಿಸಿಕೊಂಡಿದೆ. 

ಪ್ರಶಸ್ತಿಗಾಗಿ ಹೋರಾಟ

BYD Seal

 ಈ ಸ್ಪರ್ಧೆಯ ಅಂತಿಮ ಹಣಾಹಣಿಗೆ ಆಯ್ಕೆಯಾಗಿದ್ದ ಇನ್ನುಳಿದ ಎರಡು ಪ್ರತಿ ಸ್ಪರ್ಧಿಗಳೆಂದರೆ - BYD ಸೀಲ್ (ಭಾರತದಲ್ಲಿಯೂ ಲಭ್ಯ) ಮತ್ತು ವೋಲ್ವೋ EX30 (ಭಾರತಕ್ಕೆ ಬರುವ ನಿರೀಕ್ಷೆಯಿದೆ). ಇವುಗಳೆಲ್ಲಾ ಎಲೆಕ್ಟ್ರಿಕ್ ಕಾರುಗಳಾಗಿರುವುದರಿಂದ ಉನ್ನತ ಪ್ರಶಸ್ತಿಗಾಗಿ ಎಲೆಕ್ಟ್ರಿಕ್‌ ಕಾರುಗಳ ಯುದ್ಧವಾಗಿತ್ತು. ವಿಶ್ವ ಕಾರು ಪ್ರಶಸ್ತಿಗಳನ್ನು ಗೆಲ್ಲಲು ಕಾರನ್ನು ಕನಿಷ್ಠ ಎರಡು ಖಂಡಗಳಲ್ಲಿ ಮಾರಾಟ ಮಾಡಿರಬೇಕು. ಈ ಸ್ಪರ್ಧೆಯ ತೀರ್ಪುಗಾರರಾಗಿದ್ದ 29 ದೇಶಗಳ 100 ಆಟೋಮೋಟಿವ್ ಪತ್ರಕರ್ತರ ಮೂಲಕ ವಿಜೇತರನ್ನು ಆಯ್ಕೆ ಮಾಡಲ್ಪಟ್ಟಿದೆ. ಕಿಯಾ EV9 ಅನ್ನು ಅದರ ವಿನ್ಯಾಸ, ಬೆಲೆ ಮತ್ತು 7-ಆಸನದ ಇಂಟಿರೀಯರ್‌ನ ಆಧಾರದ ಮೇಲೆ ʼವರ್ಲ್ಡ್ ಕಾರ್ ಅವಾರ್ಡ್ಸ್ʼನ  ವಿಜೇತ ಎಂದು ಘೋಷಿಸಲಾಯಿತು. 

ಇತರೆ WCOTY 2024 ವಿಜೇತರು

ವರ್ಲ್ಡ್ ಕಾರ್ ಅವಾರ್ಡ್ಸ್ 2024 ರಲ್ಲಿ Kia EV9 ಮಾತ್ರ ವಿಜೇತರಾಗಿರಲಿಲ್ಲ. ಇತರ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಪಡೆದ ಇತರ ಮೊಡೆಲ್‌ಗಳು ಈ ಕೆಳಗಿನಂತಿವೆ:

Hyundai Ioniq 5 N, Volvo EX30 and BMW i5

ಮೊಡೆಲ್‌

ಪ್ರಶಸ್ತಿಗಳ ವಿಭಾಗ

ಬಿಎಮ್‌ಡಬ್ಲ್ಯೂ 5 ಸಿರೀಸ್‌/ ಐ5

ಪ್ರಪಂಚದ ಲಕ್ಸುರಿ ಕಾರು

ಹುಂಡೈ ಅಯೋನಿಕ್ 5ಎನ್

ಪ್ರಪಂಚದ ಬೆಸ್ಟ್‌ ಪರ್ಫೊರ್ಮೆನ್ಸ್‌ ಕಾರ್‌ 

ಟೊಯೋಟಾ ಪ್ರಿಯಸ್

ವರ್ಷದ ಬೆಸ್ಟ್‌ ಕಾರ್‌ ವಿನ್ಯಾಸ

ಕಿಯಾ EV9 ನ ಹೆಚ್ಚಿನ ವಿವರಗಳು

ಕಿಯಾದ 3-ಸಾಲಿನ ಆಲ್-ಎಲೆಕ್ಟ್ರಿಕ್ ಎಸ್‌ಯುವಿ ಬ್ಯಾಟರಿ ಮತ್ತು ಎಲೆಕ್ಟ್ರಿಕ್ ಮೋಟಾರ್ ಆಯ್ಕೆಗಳ ದೀರ್ಘ ಪಟ್ಟಿಯನ್ನು ಪಡೆಯುತ್ತದೆ, ಜೊತೆಗೆ ರಿಯರ್‌-ವೀಲ್‌-ಡ್ರೈವ್ (RWD) ಮತ್ತು ಆಲ್-ವೀಲ್-ಡ್ರೈವ್ (AWD) ಸಂರಚನೆಗಳನ್ನು ಹೊಂದಿದೆ. EV9 ಫುಲ್‌ ಚಾರ್ಜ್‌ನಲ್ಲಿ 541 km ಗಿಂತಲೂ ಹೆಚ್ಚಿನ ದೂರವನ್ನು ಕ್ರಮಿಸಬಲ್ಲದು, ಇದು ವಿಶಿಷ್ಟವಾದ ಪೆಟ್ರೋಲ್ ಅಥವಾ ಡೀಸೆಲ್-ಚಾಲಿತ ಐಷಾರಾಮಿ ಎಸ್‌ಯುವಿಗೆ ಬಲವಾದ EV ಪರ್ಯಾಯವಾಗಿದೆ. ಇದು ಉತ್ತಮ ರೋಡ್‌ ಪ್ರೆಸೆನ್ಸ್‌ ಮತ್ತು ಅತ್ಯಾಧುನಿಕ ವಿನ್ಯಾಸ ಅಂಶಗಳನ್ನು ಹೊಂದಿರುವ ವಿಶಾಲವಾದ ಕ್ಯಾಬಿನ್ ಅನ್ನು ಸಹ ಹೊಂದಿದೆ.

ಇದನ್ನು ಸಹ ಓದಿ: ಭಾರತಕ್ಕಾಗಿ ಸಿದ್ಧವಾಗುತ್ತಿರುವ ಹೊಸ Renault ಮತ್ತು Nissan ಎಸ್‌ಯುವಿಗಳ ಟೀಸರ್‌ ಮೊದಲ ಬಾರಿಗೆ ಔಟ್‌, 2025 ರಲ್ಲಿ ಬಿಡುಗಡೆ ಆಗುವ ಸಾಧ್ಯತೆ

ಭಾರತದಲ್ಲಿ ಬಿಡುಗಡೆ ಮತ್ತು ಬೆಲೆ

Kia EV9 rear

 Kia EV9 ಸಂಪೂರ್ಣವಾಗಿ ನಿರ್ಮಿಸಲಾದ (CBU -completely built up) ಆಮದು ರೀತಿಯ ಮೂಲಕ ಈ ವರ್ಷದ ಕೊನೆಯಲ್ಲಿ ಭಾರತಕ್ಕೆ ಆಗಮಿಸುವ ನಿರೀಕ್ಷೆಯಿದೆ, ಬೆಲೆಗಳು 80 ಲಕ್ಷ ರೂ.ನಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುವ ಸಾಧ್ಯತೆಯಿದೆ. ಇದು BMW iX ಮತ್ತು Mercedes-Benz EQE SUV ಗಳಂತಹ ಐಷಾರಾಮಿ ಎಲೆಕ್ಟ್ರಿಕ್ ಎಸ್‌ಯುವಿಗಳಿಗೆ ಕೈಗೆಟುಕುವ ಪರ್ಯಾಯವೆಂದು ಪರಿಗಣಿಸಬಹುದು.

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಕಿಯಾ ಇವಿ9

Read Full News

explore ಇನ್ನಷ್ಟು on ಕಿಯಾ ಇವಿ9

space Image

ಕಾರು ಸುದ್ದಿ

 • ಟ್ರೆಂಡಿಂಗ್ ಸುದ್ದಿ
 • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

 • ಪಾಪ್ಯುಲರ್
 • ಉಪಕಮಿಂಗ್
×
We need your ನಗರ to customize your experience