ಹೊಸ Land Rover Defender Octa ಬಿಡುಗಡೆ, ಬೆಲೆಗಳು 2.65 ಕೋಟಿ ರೂ.ನಿಂದ ಪ್ರಾರಂಭ
ಆಕ್ಟಾ ಇಲ್ಲಿಯವರೆಗೆ ಬಂದಿರುವ ಅತ್ಯಂತ ಶಕ್ತಿಶಾಲಿ ಪ್ರೊಡಕ್ಷನ್-ಸ್ಪೆಕ್ ಡಿಫೆಂಡರ್ ಮಾಡೆಲ್ ಆಗಿದ್ದು, ಇದು 635 ಪಿಎಸ್‌ನಷ್ಟು ಪವರ್ ಅನ್ನು ಉತ್ಪಾದಿಸುತ್ತದೆ
-
ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ಆಕ್ಟಾವನ್ನು ಡಿಫೆಂಡರ್ SUV ಸಿರೀಸ್ ನ ಟಾಪ್ ಮಾಡೆಲ್ ಆಗಿ ಪರಿಚಯಿಸಲಾಗಿದೆ.
-
ಇದು ಮೈಲ್ಡ್-ಹೈಬ್ರಿಡ್ ತಂತ್ರಜ್ಞಾನದೊಂದಿಗೆ 4.4-ಲೀಟರ್ ಟ್ವಿನ್-ಟರ್ಬೊ V8 ಎಂಜಿನ್ ಹೊಂದಿರುವ ಇದುವರೆಗಿನ ಅತ್ಯಂತ ಶಕ್ತಿಶಾಲಿ ಡಿಫೆಂಡರ್ ಆಗಿದೆ.
-
ಇಲ್ಲಿ ಸ್ಪೆಷಲ್ ಎಡಿಷನ್ ಒನ್ ಕೂಡ ಲಭ್ಯವಿದೆ, ಇದನ್ನು ಬಿಡುಗಡೆ ಮಾಡಿದ ನಂತರ ಕೇವಲ ಒಂದು ವರ್ಷದವರೆಗೆ ಮಾತ್ರ ಮಾರಾಟ ಮಾಡಲಾಗುತ್ತದೆ.
-
ಇದು ಡಿಫೆಂಡರ್ 110 ಅನ್ನು ಆಧರಿಸಿದೆ ಆದರೆ ಹೆಚ್ಚಿನ ಡೈನಾಮಿಕ್ ಮತ್ತು ಆಫ್-ರೋಡ್ ಸಾಮರ್ಥ್ಯಕ್ಕಾಗಿ ಅತ್ಯಧಿಕ ಬದಲಾವಣೆಯನ್ನು ಮಾಡಲಾಗಿದೆ.
-
ಇದು ಹೊಸ ಸಸ್ಪೆನ್ಷನ್ ಸೆಟಪ್ ಮತ್ತು ಹೊಸ ಪರ್ಫಾರ್ಮೆನ್ಸ್ ಆಫ್-ರೋಡ್ ಫೋಕಸ್ ಆಗಿರುವ ಡ್ರೈವಿಂಗ್ ಮೋಡ್ ಅನ್ನು ಕೂಡ ಪಡೆಯುತ್ತದೆ.
-
ಬೆಲೆಯು ಸುಮಾರು ರೂ.2.65 ಕೋಟಿಗಳಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗಲಿದೆ ಮತ್ತು ಬುಕಿಂಗ್ ಜುಲೈ ಎರಡನೇ ವಾರದಿಂದ ಶುರುವಾಗಲಿದೆ
ಅತ್ಯಂತ ಶಕ್ತಿಶಾಲಿ ಪ್ರೊಡಕ್ಷನ್ ಸ್ಪೆಕ್ ಡಿಫೆಂಡರ್ ಆಗಿರುವ ಲ್ಯಾಂಡ್ ರೋವರ್ ಡಿಫೆಂಡರ್ ಆಕ್ಟಾ, ವಿಶ್ವದಾದ್ಯಂತ ಅನಾವರಣಗೊಂಡಿದೆ. ಇದು ದೊಡ್ಡ ಡೈಮೆನ್ಷನ್ ಗಳು, ಉತ್ತಮ ಆಫ್-ರೋಡ್ ಪರ್ಫಾರ್ಮೆನ್ಸ್ ಗಾಗಿ ಡಿಸೈನ್ ಮಾಡಲಾಗಿರುವ ಎಕ್ಸ್ಟಿರಿಯರ್ ಅಂಶಗಳನ್ನು ಒಳಗೊಂಡಿದೆ ಮತ್ತು ಅದರ ಹಾರ್ಡ್‌ವೇರ್‌ಗೆ ಗಮನಾರ್ಹ ಬದಲಾವಣೆಗಳನ್ನು ಕೂಡ ಮಾಡಲಾಗಿದೆ. ಭಾರತದಲ್ಲಿ ಡಿಫೆಂಡರ್ ಆಕ್ಟಾದ ಅಂದಾಜು ಬೆಲೆಯು ಈ ಕೆಳಗಿನಂತಿವೆ:
ಮಾಡೆಲ್ |
ಲ್ಯಾಂಡ್ ರೋವರ್ ಡಿಫೆಂಡರ್ ಆಕ್ಟಾ |
ಲ್ಯಾಂಡ್ ರೋವರ್ ಡಿಫೆಂಡರ್ ಆಕ್ಟಾ ಎಡಿಷನ್ ಒನ್ |
ಬೆಲೆಗಳು |
ರೂ. 2.65 ಕೋಟಿ |
ರೂ. 2.85 ಕೋಟಿ |
ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಬೆಲೆಯಾಗಿದೆ
ಈ ಫ್ಲ್ಯಾಗ್‌ಶಿಪ್ ಡಿಫೆಂಡರ್ ಮಾಡೆಲ್ ನಲ್ಲಿ ಏನೆಂದು ವಿಶೇಷತೆಗಳಿವೆ ಎಂದು ನೋಡೋಣ:
ಹೆಚ್ಚು ಶಕ್ತಿಶಾಲಿ ಎಂಜಿನ್
ಲ್ಯಾಂಡ್ ರೋವರ್ ಡಿಫೆಂಡರ್ ಈಗಾಗಲೇ ಸೂಪರ್ ಚಾರ್ಜ್ ಆಗಿರುವ V8 ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಪಡೆದುಕೊಂಡಿದೆ, ಆದರೆ ಹೊಸ ಡಿಫೆಂಡರ್ ಆಕ್ಟಾ ಮೈಲ್ಡ್-ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಟ್ವಿನ್-ಟರ್ಬೊ V8 ಪೆಟ್ರೋಲ್ ಎಂಜಿನ್ ಅನ್ನು ಪಡೆಯುತ್ತದೆ. ಈ ಎರಡೂ ವರ್ಷನ್ ಗಳ ವಿವರವಾದ ಸ್ಪೆಸಿಫಿಕೇಷನ್ ಗಳು ಈ ಕೆಳಗಿನಂತಿವೆ:
ಎಂಜಿನ್ ಸ್ಪೆಸಿಫಿಕೇಷನ್ಸ್ |
ಲ್ಯಾಂಡ್ ರೋವರ್ ಡಿಫೆಂಡರ್ ಆಕ್ಟಾ |
ಲ್ಯಾಂಡ್ ರೋವರ್ ಡಿಫೆಂಡರ್ V8 |
ಇಂಜಿನ್ |
ಮೈಲ್ಡ್-ಹೈಬ್ರಿಡ್ ತಂತ್ರಜ್ಞಾನದೊಂದಿಗೆ 4.4-ಲೀಟರ್ ಟ್ವಿನ್-ಟರ್ಬೊ V8 ಪೆಟ್ರೋಲ್ ಎಂಜಿನ್ |
5-ಲೀಟರ್ ಸೂಪರ್ಚಾರ್ಜ್ ಆಗಿರುವ V8 ಪೆಟ್ರೋಲ್ ಎಂಜಿನ್ |
ಪವರ್ |
635 PS |
525 PS |
ಟಾರ್ಕ್ |
750 Nm* |
625 Nm |
ಟ್ರಾನ್ಸ್‌ಮಿಷನ್ |
8-ಸ್ಪೀಡ್ AT |
8-ಸ್ಪೀಡ್ AT |
ಡ್ರೈವ್ ಟ್ರೈನ್ |
4WD |
4WD |
0-100 ಕಿ.ಮೀ ಪ್ರತಿ ಗಂಟೆಗೆ |
4 ಸೆಕೆಂಡುಗಳು |
5.1 ಸೆಕೆಂಡುಗಳು |
*ಲಾಂಚ್ ಕಂಟ್ರೋಲ್ ನೊಂದಿಗೆ ಇದರ ಟಾರ್ಕ್ ಉತ್ಪಾದನೆಯು 800 Nm ಗೆ ಏರುತ್ತದೆ.
ಇನ್ನಷ್ಟು ಟಫ್ ಆಗಿ ಕಾಣುವ ಎಕ್ಸ್ಟಿರಿಯರ್
ಈಗಾಗಲೇ ಇರುವ ಡಿಫೆಂಡರ್ ಆಕಾರವನ್ನು ಉಳಿಸಿಕೊಂಡು ಹೊರಭಾಗದ ಫೀಚರ್ ಗಳನ್ನು ರಿವೈಸ್ ಮಾಡಲಾಗಿದೆ. ಲ್ಯಾಂಡ್ ರೋವರ್ ತನ್ನ ಎತ್ತರವನ್ನು 28 ಮೀ.ಮೀ ಹೆಚ್ಚಿಸಿದೆ, ಟ್ರ್ಯಾಕ್ ಅನ್ನು 68 ಮೀ.ಮೀ ಯಷ್ಟು ವಿಸ್ತರಿಸಲಾಗಿದೆ ಮತ್ತು ದೊಡ್ಡ 33-ಇಂಚಿನ ವೀಲ್ ಗಳನ್ನು ಫಿಟ್ ಮಾಡಲು ವೀಲ್ ಆರ್ಕ್ ಗಳನ್ನು ಕೂಡ ವಿಸ್ತರಿಸಲಾಗಿದೆ. ಬ್ರೇಕ್-ಓವರ್ ಆಂಗಲ್ ನಲ್ಲಿ ಯಾವುದೇ ಬದಲಾವಣೆ ಮಾಡದಿದ್ದರೂ ಕೂಡ, ವಾಹನದ ಅಪ್ರೋಚ್ ಮತ್ತು ಡಿಪಾರ್ಚರ್ ಆಂಗಲ್ ಅನ್ನು ಹೆಚ್ಚಿಸಲು ಬಂಪರ್‌ಗಳನ್ನು ಮರುವಿನ್ಯಾಸಗೊಳಿಸಲಾಗಿದೆ. ಎಲ್ಲಾ LED ಹೆಡ್‌ಲೈಟ್‌ಗಳು, ಟೈಲ್ ಲೈಟ್‌ಗಳು ಮತ್ತು ಅಲ್ಯೂಮಿನಿಯಂ ಅಲೊಯ್ ಅಂಡರ್ ಬಾಡಿ ಪ್ರೊಟೆಕ್ಷನ್ ಇತರ ಡಿಫೆಂಡರ್‌ಗಳಂತೆಯೇ ಇದೆ ಆದರೆ ಉತ್ತಮ ಏರ್ ಫ್ಲೋ ಗಾಗಿ ಗ್ರಿಲ್ ಅನ್ನು ರಿವೈಸ್ ಮಾಡಲಾಗಿದೆ ಮತ್ತು ಸ್ಪೋರ್ಟಿ ಆಗಿರುವ ಕ್ವಾಡ್-ಎಕ್ಸಿಟ್ ಎಕ್ಸಾಸ್ಟ್ ಸೆಟಪ್ ಅನ್ನು ಕೂಡ ನೀಡಲಾಗಿದೆ.
ಡಿಫೆಂಡರ್ ಆಕ್ಟಾ ನಾಲ್ಕು ಪೇಂಟ್ ಸ್ಕೀಮ್‌ಗಳನ್ನು ಪಡೆಯುತ್ತದೆ, ಇದರಲ್ಲಿ ಎರಡು ವಿಶೇಷವಾದ ಹೊಸ ಪ್ರೀಮಿಯಂ ಮೆಟಾಲಿಕ್ ಫಿನಿಶ್‌ಗಳು ಸೇರಿವೆ: ಪೆಟ್ರಾ ಕಾಪರ್ ಮತ್ತು ಫಾರೋ ಗ್ರೀನ್ ಜೊತೆಗೆ ಕಾರ್ಪಾಥಿಯನ್ ಗ್ರೇ ಮತ್ತು ಚಾರೆಂಟೆ ಗ್ರೇ. ಫರೋ ಗ್ರೀನ್ ಕಲರ್ ಲಿಮಿಟೆಡ್ ಎಡಿಷನ್ ಡಿಫೆಂಡರ್ ಆಕ್ಟಾ ಎಡಿಷನ್ ಒನ್ ಮಾಡೆಲ್ ನಲ್ಲಿ ಮಾತ್ರ ಲಭ್ಯವಿರುತ್ತದೆ, ಮತ್ತು ಇದು ಬಿಡುಗಡೆಯಾದ ನಂತರ ಕೇವಲ ಒಂದು ವರ್ಷದವರೆಗೆ ಮಾತ್ರ ಮಾರುಕಟ್ಟೆಯಲ್ಲಿ ಸಿಗಲಿದೆ. ಎಲ್ಲಾ ಆಕ್ಟಾ ಮಾಡೆಲ್ ಗಳು ಗ್ಲೋಸ್ ನಾರ್ವಿಕ್ ಬ್ಲ್ಯಾಕ್‌ನಲ್ಲಿ ಕಾಂಟ್ರಾಸ್ಟ್ ರೂಫ್ ಮತ್ತು ಟೈಲ್‌ಗೇಟ್ ಅನ್ನು ಒಳಗೊಂಡಿವೆ.
ಆಕ್ಟಾ ವೇರಿಯಂಟ್ ಗಳಲ್ಲಿ ಮಾತ್ರ ಕಂಡುಬರುವ ಮತ್ತೊಂದು ವಿಶಿಷ್ಟವಾದ ಎಲಿಮೆಂಟ್ ಎಂದರೆ ಸಣ್ಣ ಡೈಮಂಡ್ ಗ್ರಾಫಿಕ್, ಇದು ಹಿಂಭಾಗದ ವಿಂಡೋ ಹಿಂದಿನ ಪ್ಯಾನೆಲ್ ನಲ್ಲಿ ಟೈಟಾನಿಯಂ ಡಿಸ್ಕ್ ನ ಒಳಗೆ ಬ್ಲಾಕ್ ಡೈಮಂಡ್ ಅನ್ನು ತೋರಿಸುತ್ತದೆ.
ಆಫ್-ರೋಡ್ ಗಾಗಿ ನೀಡಲಾದ ಹಾರ್ಡ್‌ವೇರ್ ಮತ್ತು ಟೆಕ್
ಹಾರ್ಡ್‌ವೇರ್ ವಿಷಯದಲ್ಲಿ, ಈ ಟಾಪ್-ಸ್ಪೆಕ್ ಡಿಫೆಂಡರ್ ಹೈಡ್ರಾಲಿಕ್ ಲಿಂಕ್ ಆಗಿರುವ 6D ಡೈನಾಮಿಕ್ಸ್ ಸಸ್ಪೆನ್ಷನ್ ತಂತ್ರಜ್ಞಾನವನ್ನು ಹೊಂದಿದೆ. ಈ ಸುಧಾರಿತ ಸಸ್ಪೆನ್ಷನ್ ಪ್ರತಿ ವೀಲ್ ಗೆ ಸ್ವತಂತ್ರವಾಗಿ ಸ್ಟಿಫ್ನೆಸ್ಸ್ ಮತ್ತು ಡ್ಯಾಂಪಿಂಗ್ ಅನ್ನು ಸೆಟ್ ಮಾಡುತ್ತದೆ, ಅ ಮೂಲಕ ಒರಟು ಮತ್ತು ಉತ್ತಮ ರಸ್ತೆ ಎರಡರಲ್ಲೂ ಡ್ರೈವಿಂಗ್ ಅನ್ನು ಸುಗಮಗೊಳಿಸುತ್ತದೆ. ಹೆಚ್ಚುವರಿ ಸ್ಟಿಫ್ನೆಸ್ಸ್ ಗಾಗಿ ಚಾಸಿಸ್ ಅನ್ನು ಸುಧಾರಿಸಲಾಗಿದೆ ಎಂದು ಲ್ಯಾಂಡ್ ರೋವರ್ ತಿಳಿಸಿದೆ.
ಡಿಫೆಂಡರ್ ಆಕ್ಟಾ ಮೂರು ಡ್ರೈವಿಂಗ್ ಮೋಡ್‌ಗಳನ್ನು ಪಡೆಯುತ್ತದೆ - ಕಂಫರ್ಟ್ ಮೋಡ್, ರೋಡ್-ಫೋಕಸ್ ಆಗಿರುವ ಡೈನಾಮಿಕ್ ಮೋಡ್ ಮತ್ತು ಪರ್ಫಾರ್ಮೆನ್ಸ್-ಆಧಾರಿತ ಆಫ್-ರೋಡಿಂಗ್ ಅನ್ನು ಆಕ್ಟಿವೇಟ್ ಮಾಡುವ ಹೊಸ 'ಆಕ್ಟಾ' ಮೋಡ್. ಆಕ್ಟಾ ಮೋಡ್ ಇಳಿಜಾರಿನ ರಸ್ತೆಗಳಲ್ಲಿ ಗರಿಷ್ಠ ಆಕ್ಸಿಲರೇಷನ್ ಅನ್ನು ಪಡೆಯಲು ಆಫ್-ರೋಡ್ ಲಾಂಚ್ ಮೋಡ್ ಅನ್ನು ಒಳಗೊಂಡಿದೆ. ಕನಿಷ್ಠ ಟ್ರಾಕ್ಷನ್ ಕಂಟ್ರೋಲ್ ಸೆಟ್ಟಿಂಗ್‌ಗಳೊಂದಿಗೆ ಬಳಸಿದಾಗ, ಇದು ಇಳಿಜಾರಿನ ರಸ್ತೆಗಳಲ್ಲಿ ಉತ್ತಮ ಬ್ರೇಕಿಂಗ್ ಪರ್ಫಾರ್ಮೆನ್ಸ್ ಗಾಗಿ ವಿಶೇಷ ಆಫ್-ರೋಡ್ ABS ಸೆಟಪ್ ಅನ್ನು ಕೂಡ ಆಕ್ಟಿವೇಟ್ ಮಾಡುತ್ತದೆ.
ಇಲ್ಲಿ ಪ್ರತ್ಯೇಕ ಟೆರೈನ್ ಮೋಡ್ ಗಳನ್ನು ಕೂಡ ನೀಡಲಾಗಿದೆ - ಸ್ಯಾಂಡ್, ಮಡ್ ಮತ್ತು ರಟ್ಸ್, ಗ್ರಾಸ್ ಗ್ರಾವೆಲ್ ಸ್ನೋ, ಮತ್ತು ರಾಕ್ ಕ್ರಾಲ್.
ಚಿರಪರಿಚಿತ ಇಂಟೀರಿಯರ್
ಡಿಫೆಂಡರ್ ಆಕ್ಟಾದ ಒಳಭಾಗವು ಡ್ಯುಯಲ್-ಟೋನ್ ಥೀಮ್ ಅನ್ನು ಹೊಂದಿದೆ ಮತ್ತು ನಿಮಗೆ ಬರ್ನ್ಟ್ ಸಿಯೆನ್ನಾ ಮತ್ತು ಎಬೊನಿ ಅಥವಾ ಲೈಟ್ ಕ್ಲೌಡ್ ಮತ್ತು ಲೂನಾರ್ ನಡುವೆ ಆಯ್ಕೆ ಮಾಡುವ ಅವಕಾಶವಿದೆ. ಆಕ್ಟಾ ಎಡಿಷನ್ ಒನ್ ಕೇವಲ ಖಾಕಿ ಮತ್ತು ಎಬೊನಿ ಇಂಟೀರಿಯರ್ ಅನ್ನು ಮಾತ್ರ ಹೊಂದಿದೆ. ಮುಂಭಾಗದ ಸೀಟ್ ಗಳು ಈಗ ಸುಧಾರಿತ ಬೋಲ್ಸ್ಟರ್ ಸಪೋರ್ಟ್ ಮತ್ತು ಇಂಟಿಗ್ರೇಟ್ ಆಗಿರುವ ಹೆಡ್‌ರೆಸ್ಟ್‌ಗಳನ್ನು ಪಡೆಯುತ್ತವೆ. ಡ್ಯಾಶ್‌ಬೋರ್ಡ್ ಮತ್ತು ಕಂಟ್ರೋಲ್ ಲೇಔಟ್ ರೆಗ್ಯುಲರ್ ಡಿಫೆಂಡರ್‌ಗೆ ಹೋಲುತ್ತದೆ, ಮತ್ತು ಇದು ಮುಂಭಾಗದಲ್ಲಿ ದೊಡ್ಡದಾದ ಸೆಂಟ್ರಲ್ ಕನ್ಸೋಲ್ ಅನ್ನು ಪಡೆಯುತ್ತದೆ.
ಫೀಚರ್ ಗಳು ಮತ್ತು ಸುರಕ್ಷತೆ
ಡಿಫೆಂಡರ್ ಆಕ್ಟಾ ವೇರಿಯಂಟ್ ಗಳ ಸಂಪೂರ್ಣ ಫೀಚರ್ ಲಿಸ್ಟ್ ಇನ್ನೂ ಹೊರಬಿದ್ದಿಲ್ಲ, ಆದರೆ ಇದು ಇತರ ಟಾಪ್-ಸ್ಪೆಕ್ ಡಿಫೆಂಡರ್‌ಗಳಲ್ಲಿ ಇರುವ ಫೀಚರ್ ಗಳನ್ನು ಪಡೆಯುವ ನಿರೀಕ್ಷೆಯಿದೆ. ಇದು ನ್ಯಾವಿಗೇಶನ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಜೊತೆಗೆ 11.4-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು 12.3-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಪಡೆಯಬಹುದು. ಇತರ ಡಿಫೆಂಡರ್ ಮಾಡೆಲ್ ಗಳು 6-ಸ್ಪೀಕರ್ ಸೌಂಡ್ ಸಿಸ್ಟಂ ಸೆಟಪ್ ಅನ್ನು ಪಡೆದರೆ, ಆಕ್ಟಾ ಹೆಚ್ಚುವರಿ ಸ್ಪೀಕರ್‌ಗಳೊಂದಿಗೆ ಹೆಚ್ಚು ಐಷಾರಾಮಿ ಸೆಟಪ್ ಅನ್ನು ಹೊಂದಿರಬಹುದು, ವಿಶೇಷವಾಗಿ ಇದು ಉತ್ಕೃಷ್ಟ, ಹೆಚ್ಚು ಅದ್ಭುತ ಸೌಂಡ್ ಅನುಭವಕ್ಕಾಗಿ ಬಾಡಿ ಮತ್ತು ಸೋಲ್ ಸೀಟ್ ಆಡಿಯೊ ತಂತ್ರಜ್ಞಾನವನ್ನು ಪಡೆಯಬಹುದು.
ಸುರಕ್ಷತೆಯ ವಿಷಯದಲ್ಲಿ, ಇದು ಹಲವಾರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಟ್ರಾಕ್ಷನ್ ಕಂಟ್ರೋಲ್, ಕಾರ್ನರ್ ಬ್ರೇಕಿಂಗ್ ಕಂಟ್ರೋಲ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಮತ್ತು ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್ ಅನ್ನು ಪಡೆಯುವ ಸಾಧ್ಯತೆಯಿದೆ. ಡಿಫೆಂಡರ್ ಆಕ್ಟಾ ಕೆಲವು ಸುಧಾರಿತ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್‌ಗಳೊಂದಿಗೆ ಕೂಡ ಬರಬಹುದು
ಬೆಲೆ ಮತ್ತು ಬುಕಿಂಗ್
ಲ್ಯಾಂಡ್ ರೋವರ್ ಡಿಫೆಂಡರ್ ಆಕ್ಟಾದ ಬೆಲೆಯು ಅಂದಾಜು ರೂ 2.65 ಕೋಟಿಯಿಂದ ಪ್ರಾರಂಭವಾಗುವ ಸಾಧ್ಯತೆಯಿದೆ, ಹಾಗೆಯೇ ಆಕ್ಟಾ ಎಡಿಷನ್ ಒನ್ ಬೆಲೆಯು ರೂ 2.85 ಕೋಟಿ (ಎಕ್ಸ್ ಶೋ ರೂಂ) ಇರಬಹುದು. ಜುಲೈನಲ್ಲಿ ನಡೆಯಲಿರುವ ಗುಡ್‌ವುಡ್ ಫೆಸ್ಟಿವಲ್ ಆಫ್ ಸ್ಪೀಡ್‌ನಲ್ಲಿ SUV ಅನ್ನು ಮೊದಲ ಬಾರಿಗೆ ಪ್ರದರ್ಶಿಸಲಾಗುವುದು ಎಂದು ಲ್ಯಾಂಡ್ ರೋವರ್ ಘೋಷಿಸಿದೆ. ಈ ಇವೆಂಟ್ ನ ನಂತರ, ಅದರ ಅಧಿಕೃತ ಬುಕಿಂಗ್ ಅನ್ನು ಪ್ರಾರಂಭಿಸಲಾಗುತ್ತದೆ.
ಆಟೋಮೋಟಿವ್ ಪ್ರಪಂಚದ ನಿರಂತರ ಅಪ್ಡೇಟ್ ಗಳನ್ನು ಪಡೆಯಲು ಬಯಸುತ್ತೀರಾ? ಕಾರ್ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ.
ಇನ್ನಷ್ಟು ಓದಿ: ಡಿಫೆಂಡರ್ ಆಟೋಮ್ಯಾಟಿಕ್