Login or Register ಅತ್ಯುತ್ತಮ CarDekho experience ಗೆ
Login

ದೊಡ್ಡ ಬ್ಯಾಟರಿ ಪ್ಯಾಕ್ ಹೊಂದಿರುವ Mahindra BE 6ನ ಪ್ಯಾಕ್ ತ್ರೀ ಬೆಲೆ 26.9 ಲಕ್ಷ ರೂ.ನಿಂದ ಪ್ರಾರಂಭ

ಮಹೀಂದ್ರ be 6 ಗಾಗಿ rohit ಮೂಲಕ ಜನವರಿ 09, 2025 10:39 pm ರಂದು ಪ್ರಕಟಿಸಲಾಗಿದೆ

ಈ ಎಲೆಕ್ಟ್ರಿಕ್ ಎಸ್‌ಯುವಿಯು ಪ್ಯಾಕ್ ಒನ್, ಪ್ಯಾಕ್ ಟು ಮತ್ತು ಪ್ಯಾಕ್ ತ್ರೀ ಎಂಬ ಮೂರು ವಿಶಾಲ ವೇರಿಯೆಂಟ್‌ಗಳಲ್ಲಿ ಲಭ್ಯವಿರುತ್ತದೆ

  • ಹೊಸ ಇವಿಗಳಿಗಾಗಿ ಅಭಿವೃದ್ಧಿಪಡಿಸಲಾದ ಮಹೀಂದ್ರಾದ ಹೊಸ 'BE' ಸಬ್‌-ಬ್ರಾಂಡ್ ಅಡಿಯಲ್ಲಿ BE 6 ಮೊದಲ ಮೊಡೆಲ್‌ ಆಗಿದೆ.

  • ಇದರ ಬಾಹ್ಯ ಹೈಲೈಟ್‌ಗಳಲ್ಲಿ ಸಿ-ಆಕಾರದ ಎಲ್ಇಡಿ ಡಿಆರ್‌ಎಲ್‌ಗಳು, ಫ್ಲಶ್-ಟೈಪ್ ಡೋರ್ ಹ್ಯಾಂಡಲ್‌ಗಳು ಮತ್ತು 20-ಇಂಚಿನ ಅಲಾಯ್ ವೀಲ್‌ಗಳು ಸೇರಿವೆ.

  • ಇದರ ಫೈಟರ್ ಜೆಟ್ ತರಹದ ಕ್ಯಾಬಿನ್ ಬೂದು ಬಣ್ಣದ ಕವರ್‌, ಡ್ಯುಯಲ್ ಡಿಜಿಟಲ್ ಡಿಸ್‌ಪ್ಲೇಗಳು ಮತ್ತು 2-ಸ್ಪೋಕ್ ಸ್ಟೀರಿಂಗ್ ವೀಲ್ ಅನ್ನು ಒಳಗೊಂಡಿದೆ.

  • ಬೋರ್ಡ್‌ನಲ್ಲಿರುವ ಸೌಕರ್ಯಗಳಲ್ಲಿ ಬಹು-ವಲಯ ಎಸಿ, ವೈರ್‌ಲೆಸ್ ಫೋನ್ ಚಾರ್ಜರ್‌ಗಳು, ಲೈಟಿಂಗ್‌ ಪ್ಯಾಟರ್ನ್‌ಗಳೊಂದಿಗೆ ಪನೋರಮಿಕ್ ಗ್ಲಾಸ್‌ ರೂಫ್‌ ಮತ್ತು ADAS ಸೇರಿವೆ.

  • BE 6 ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ಹೊಂದಿದ್ದು, MIDC (P1+P2) ಪ್ರಕಾರ 682 ಕಿ.ಮೀ. ವರೆಗೆ ಚಲಿಸುವ ಸಾಮರ್ಥ್ಯ ಹೊಂದಿದೆ.

  • ಬೆಲೆಗಳು 18.9 ಲಕ್ಷ ರೂ.ನಿಂದ (ಎಕ್ಸ್ ಶೋರೂಂ, ಪ್ಯಾನ್-ಇಂಡಿಯಾ) ಪ್ರಾರಂಭವಾಗುತ್ತವೆ.

2024ರ ನವೆಂಬರ್‌ನಲ್ಲಿ ಮಹೀಂದ್ರಾ BE 6 ಮೊದಲ ಬಾರಿಗೆ ಕಾಣಿಸಿಕೊಂಡಾಗ, ಭಾರತೀಯ ಬ್ರ್ಯಾಂಡ್ ತನ್ನ ಆರಂಭಿಕ ಬೆಲೆಯನ್ನು ಮಾತ್ರ ಘೋಷಿಸಿತ್ತು. ಈಗ, ಮಹೀಂದ್ರಾವು ಎಲೆಕ್ಟ್ರಿಕ್ ಎಸ್‌ಯುವಿಯ 79 ಕಿ.ವ್ಯಾಟ್‌ ಬ್ಯಾಟರಿ ಪ್ಯಾಕ್‌ನೊಂದಿಗೆ ಬರುವ ಟಾಪ್-ಸ್ಪೆಕ್ ಪ್ಯಾಕ್ ತ್ರೀ ಟ್ರಿಮ್‌ನ ಬೆಲೆಯನ್ನು ಬಹಿರಂಗಪಡಿಸಿದೆ. BE 6 ಪ್ಯಾಕ್ ಒನ್, ಪ್ಯಾಕ್ ಟು ಮತ್ತು ಪ್ಯಾಕ್ ತ್ರೀ ಎಂಬ ಮೂರು ವಿಶಾಲ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಮಾಹಿತಿಗಾಗಿ, BE 6 ನ ಆರಂಭಿಕ ಬೆಲೆ 18.9 ಲಕ್ಷ ರೂ.ನಿಂದ (ಎಕ್ಸ್ ಶೋರೂಂ) ಪ್ರಾರಂಭವಾಗಲಿದೆ.

ವೇರಿಯಂಟ್-ವಾರು ಆರಂಭಿಕ ಬೆಲೆಗಳು

ವೇರಿಯೆಂಟ್‌

ಬೆಲೆ

ಪ್ಯಾಕ್ ಒನ್ (59 ಕಿ.ವ್ಯಾಟ್‌ ಬ್ಯಾಟರಿ ಪ್ಯಾಕ್‌ನೊಂದಿಗೆ)

18.9 ಲಕ್ಷ ರೂ.

ಪ್ಯಾಕ್ ಟು

ಘೋಷಿಸಬೇಕಷ್ಟೇ

ಪ್ಯಾಕ್ ತ್ರೀ (79 ಕಿ.ವ್ಯಾಟ್‌ ಬ್ಯಾಟರಿ ಪ್ಯಾಕ್‌ನೊಂದಿಗೆ)

26.9 ಲಕ್ಷ ರೂ. (ಹೋಮ್ ಚಾರ್ಜರ್ ವೆಚ್ಚವನ್ನು ಹೊರತುಪಡಿಸಿ)

ಮಹೀಂದ್ರಾ ಬಿಇ6 ವಿನ್ಯಾಸ

BE 6 ಸಂಪೂರ್ಣವಾಗಿ ಎಲ್‌ಇಡಿ ಲೈಟಿಂಗ್‌ ಅನ್ನು ಹೊಂದಿದೆ, ಇದರಲ್ಲಿ ಅಡ್ಡಲಾಗಿ ಇರಿಸಲಾದ ಹೆಡ್‌ಲೈಟ್‌ಗಳು ಮತ್ತು ಸಿ-ಆಕಾರದ ಎಲ್‌ಇಡಿ ಡಿಆರ್‌ಎಲ್‌ಗಳು ಸೇರಿವೆ. ಇದು 19-ಇಂಚಿನ ಏರೋಡೈನಾಮಿಕ್‌ ಆಗಿ ವಿನ್ಯಾಸಗೊಳಿಸಲಾದ ಅಲಾಯ್ ವೀಲ್‌ಗಳನ್ನು ಪಡೆಯುತ್ತದೆ, 20-ಇಂಚಿನ ಅಲಾಯ್‌ ವೀಲ್‌ಗಳನ್ನು ಸಹ ಆಯ್ಕೆ ಮಾಡುವ ಆಯ್ಕೆಯನ್ನು ಹೊಂದಿದೆ. ಇತರ ವಿನ್ಯಾಸ ಅಂಶಗಳಲ್ಲಿ ಫ್ಲಶ್-ಟೈಪ್ ಡೋರ್ ಹ್ಯಾಂಡಲ್‌ಗಳು, ಏರೋ ಸ್ಕೂಪ್‌ಗಳೊಂದಿಗೆ ಉನ್ನತ ಸ್ಥಾನದಲ್ಲಿರುವ ಬೂಟ್‌ಲಿಡ್ ಮತ್ತು ದೊಡ್ಡ ಸಿ-ಆಕಾರದ ಎಲ್‌ಇಡಿ ಟೈಲ್ ಲೈಟ್‌ಗಳು ಸೇರಿವೆ.

ಮಹೀಂದ್ರಾ ಬಿಇ 6 ಕ್ಯಾಬಿನ್ ಮತ್ತು ಫೀಚರ್‌ಗಳು

ಒಳಭಾಗದಲ್ಲಿ, ಇದು 2-ಸ್ಪೋಕ್ ಸ್ಟೀರಿಂಗ್ ವೀಲ್ ಅನ್ನು ಹೊಂದಿದ್ದು, ಮಧ್ಯದಲ್ಲಿ ಪ್ರಕಾಶಿತ 'BE' ಲೋಗೋವನ್ನು ಹೊಂದಿದೆ. ಮಹೀಂದ್ರಾ ಇದಕ್ಕೆ ಬೂದು ಬಣ್ಣದ ಸೀಟ್ ಕವರ್‌ ಮತ್ತು ಫೈಟರ್ ಜೆಟ್‌ನ ಥ್ರಸ್ಟ್ ಲಿವರ್ ಅನ್ನು ಹೋಲುವ ಸ್ಪೋರ್ಟಿಯರ್-ಲುಕಿಂಗ್ ಡ್ರೈವ್ ಮೋಡ್ ಶಿಫ್ಟರ್ ಅನ್ನು ಒದಗಿಸಿದೆ.

ಇದರ ಫೀಚರ್‌ಗಳ ಪಟ್ಟಿಯಲ್ಲಿ ಡ್ಯುಯಲ್ ಡಿಜಿಟಲ್ ಡಿಸ್‌ಪ್ಲೇಗಳು (ಡ್ರೈವರ್ ಡಿಸ್‌ಪ್ಲೇ ಮತ್ತು ಇನ್ಫೋಟೈನ್‌ಮೆಂಟ್‌ಗಾಗಿ ತಲಾ 10.25-ಇಂಚಿನ ಸ್ಕ್ರೀನ್‌), ಮಲ್ಟಿ ಝೋನ್‌ ಎಸಿ, ವೈರ್‌ಲೆಸ್ ಫೋನ್ ಚಾರ್ಜರ್‌ಗಳು, ಆಂಬಿಯೆಂಟ್‌ ಲೈಟಿಂಗ್‌ ಪ್ಯಾಟರ್ನ್‌ನೊಂದಿಗೆ ಪನೋರಮಿಕ್ ಗ್ಲಾಸ್‌ ರೂಫ್‌ ಮತ್ತು ವರ್ಧಿತ ರಿಯಾಲಿಟಿ-ಆಧಾರಿತ ಹೆಡ್ಸ್-ಅಪ್ ಡಿಸ್‌ಪ್ಲೇ ಸೇರಿವೆ.

ಮಹೀಂದ್ರಾ ತನ್ನ ಸುರಕ್ಷತಾ ಸೂಟ್ ಅನ್ನು ಏಳು ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್ ಆಗಿ), ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಪಾರ್ಕ್ ಅಸಿಸ್ಟ್ ಮತ್ತು 360-ಡಿಗ್ರಿ ಕ್ಯಾಮೆರಾದೊಂದಿಗೆ ಪ್ಯಾಕ್ ಮಾಡಿದೆ. ಇದು ಆಟೋನಮಸ್ ಎಮೆರ್ಜೆನ್ಸಿ ಬ್ರೇಕಿಂಗ್, ಫಾರ್ವರ್ಡ್ ಡಿಕ್ಕಿ ಎಚ್ಚರಿಕೆ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಸೇರಿದಂತೆ ಲೆವೆಲ್-2 ಸುಧಾರಿತ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್‌ಗಳನ್ನು (ADAS) ಪಡೆಯುತ್ತದೆ.

ಇದನ್ನೂ ಓದಿ: 2024ರಲ್ಲಿ ನೀವು ಹೆಚ್ಚು ವೀಕ್ಷಿಸಿದ CarDekho ಇನ್‌ಸ್ಟಾಗ್ರಾಮ್‌ನ ಟಾಪ್ 10 ರೀಲ್‌ಗಳು ಇವು..

ಮಹೀಂದ್ರಾ ಬಿಇ 6 ಬ್ಯಾಟರಿ ಪ್ಯಾಕ್ ಮತ್ತು ರೇಂಜ್

ವಿಶೇಷಣಗಳು

ಬಿಇ 6

ಬ್ಯಾಟರಿ ಪ್ಯಾಕ್‌

59 ಕಿ.ವ್ಯಾಟ್‌/ 79 ಕಿ.ವ್ಯಾಟ್‌

ಎಲೆಕ್ಟ್ರಿಕ್ ಮೋಟಾರುಗಳ ಸಂಖ್ಯೆ

1

ಕ್ಲೈಮ್ ಮಾಡಲಾದ ರೇಂಜ್‌ (MIDC P1+P2)

535 ಕಿ.ಮೀ./ 682 ಕಿ.ಮೀ.

ಪವರ್‌

231 ಪಿಎಸ್‌/ 286 ಪಿಎಸ್‌

ಟಾರ್ಕ್‌

380 ಎನ್‌ಎಮ್‌

ಡ್ರೈವ್‌ಟ್ರೈನ್‌

RWD*

*RWD - ರಿಯರ್‌ ವೀಲ್‌ ಡ್ರೈವ್‌

BE 6 ರಿಯರ್‌ ವೀಲ್‌ ಡ್ರೈವ್‌ (RWD) ಸೆಟಪ್ ಅನ್ನು ಮಾತ್ರ ಪಡೆದರೂ, ಇದು ಆಧರಿಸಿರುವ INGLO ಪ್ಲಾಟ್‌ಫಾರ್ಮ್ ಆಲ್-ವೀಲ್‌ ಡ್ರೈವ್‌ (AWD) ಆಯ್ಕೆಯನ್ನು ಸಹ ಬೆಂಬಲಿಸುತ್ತದೆ. ಇದರಲ್ಲಿ ರೇಂಜ್, ಎವ್ರಿಡೇ ಮತ್ತು ರೇಸ್ ಎಂಬ ಮೂರು ಡ್ರೈವ್ ಮೋಡ್‌ಗಳಿವೆ.

ಮಹೀಂದ್ರಾ ಇವಿ 175 ಕಿ.ವ್ಯಾಟ್ ಡಿಸಿ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ, ಇದು ಕೇವಲ 20 ನಿಮಿಷಗಳಲ್ಲಿ ಬ್ಯಾಟರಿ ಪ್ಯಾಕ್‌ಗಳನ್ನು ಶೇಕಡಾ 20 ರಿಂದ 80 ರಷ್ಟು ಚಾರ್ಜ್ ಮಾಡಬಹುದು.

ಮಹೀಂದ್ರಾ BE 6 ಪ್ರತಿಸ್ಪರ್ಧಿಗಳು

ಮಹೀಂದ್ರಾ ಬಿಇ6 ಕಾರು ಮಾರುಕಟ್ಟೆಯಲ್ಲಿ ಟಾಟಾ ಕರ್ವ್ ಇವಿ ಮತ್ತು ಎಂಜಿ ಝಡ್ಎಸ್ ಇವಿ ಹಾಗೂ ಮುಂಬರುವ ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಮತ್ತು ಮಾರುತಿ ಇ ವಿಟಾರಾ ಕಾರುಗಳಿಗೆ ಪೈಪೋಟಿ ನೀಡುತ್ತದೆ.

ಕಾರುಗಳ ಲೋಕದ ನಿರಂತರ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ

Share via

Write your Comment on Mahindra be 6

V
vijay
Jan 8, 2025, 9:34:35 AM

Now it feels expensive :(

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ