• English
  • Login / Register

Mahindra XUV 3XO ವರ್ಸಸ್‌ Tata Nexon: ಎರಡು ಲೀಡಿಂಗ್‌ ಎಸ್‌ಯುವಿಗಳ ಹೋಲಿಕೆ

ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ ಗಾಗಿ sonny ಮೂಲಕ ಮೇ 06, 2024 05:39 pm ರಂದು ಪ್ರಕಟಿಸಲಾಗಿದೆ

  • 25 Views
  • ಕಾಮೆಂಟ್‌ ಅನ್ನು ಬರೆಯಿರಿ

ಮಹೀಂದ್ರಾವು ತನ್ನ ಎಕ್ಸ್‌ಯುವಿ300 ಗೆ ಹೊಸ ಹೆಸರು ಮತ್ತು ಕೆಲವು ಪ್ರಮುಖ ಆಪ್‌ಡೇಟ್‌ಗಳನ್ನು ನೀಡಿದೆ, ಆದರೆ ಇದು ಈ ಸೆಗ್ಮೆಂಟ್‌ನ ಲೀಡಿಂಗ್‌ ಎಸ್‌ಯುವಿಗೆ ಟಕ್ಕರ್‌ ಕೊಡಬಹುದೇ?

XUV 3XO vs Nexon Specification Comparison

ಮಹೀಂದ್ರಾ ಎಕ್ಸ್‌ಯುವಿ300ನ ಹೆಸರನ್ನು ಬದಲಾಯಿಸಲಾಗಿದೆ ಮತ್ತು ಇದನ್ನು ಈಗ Mahindra XUV 3XO ಎಂದು ಕರೆಯಲಾಗುತ್ತದೆ. ಈ ಹೊಸ ಮತ್ತು ಸುಧಾರಿತ (ಫೇಸ್‌ಲಿಫ್ಟೆಡ್) ಕೊಡುಗೆಯೊಂದಿಗೆ, ಮಹೀಂದ್ರಾವು ಈಗ ಸಬ್‌-4ಮೀ ಎಸ್‌ಯುವಿ ಸೆಗ್ಮೆಂಟ್‌ನ ಟಾಪ್‌ ಸ್ಥಾನಕ್ಕೆ ಏರಲು ತನ್ನ ದೃಷ್ಟಿಯನ್ನು ಕೇಂದ್ರಿಕರಿಸಿದೆ. ಇದರ ಪ್ರಮುಖ ಪ್ರತಿಸ್ಪರ್ಧಿ ಎಂದರೆ ಅದು Tata Nexon, ಆದ್ದರಿಂದ ಈ ಎರಡು ಎಸ್‌ಯುವಿಗಳು ಬ್ರೋಷರ್‌ನಲ್ಲಿ ತಿಳಿಸಿರುವ ಮಾಹಿತಿಯನ್ನು ಇಟ್ಟುಕೊಂಡು ಎಲ್ಲಾ ವಿಭಾಗದಲ್ಲು ಪರಸ್ಪರ ಹೇಗೆ ಸ್ಪರ್ಧೆ ಒಡ್ಡುತ್ತದೆ ಎಂಬುದನ್ನು ನೋಡೋಣ. ಮೊದಲಿಗೆ ಗಾತ್ರದಿಂದ ಪ್ರಾರಂಭಿಸೋಣ:

ಗಾತ್ರ

ಮೊಡೆಲ್‌

ಮಹೀಂದ್ರಾ 3ಎಕ್ಸ್‌ಒ

ಟಾಟಾ ನೆಕ್ಸಾನ್‌

ಉದ್ದ

3990 ಮಿ.ಮೀ

3995 ಮಿ.ಮೀ

ಅಗಲ

1821 ಮಿ.ಮೀ

1804 ಮಿ.ಮೀ

ಎತ್ತರ

1647 ಮಿ.ಮೀ

1620 ಮಿ.ಮೀ

ವ್ಹೀಲ್‌ಬೇಸ್

2600 ಮಿ.ಮೀ

2498 ಮಿ.ಮೀ

ಬೂಟ್ ಸ್ಪೇಸ್

364 ಲೀಟರ್‌

382 ಲೀಟರ್‌

ಗ್ರೌಂಡ್‌ ಕ್ಲೀಯರೆನ್ಸ್‌

201 ಮಿ.ಮೀ

208 ಮಿ.ಮೀ

Mahindra XUV 3XO AX5 Side

  • ನೆಕ್ಸಾನ್ ಉದ್ದವೊಂದು ಬಿಟ್ಟರೆ ಉಳಿದ ಹೆಚ್ಚಿನ ಗಾತ್ರಗಳಲ್ಲಿ ಎಕ್ಸ್‌ಯುವಿ 3ಎಕ್ಸ್‌ಒವು ದೊಡ್ಡದಾಗಿದೆ.

  • ಆದರೆ, ಟಾಟಾವು ಮಹೀಂದ್ರಾಕ್ಕಿಂತ ಹೆಚ್ಚಿನ ಬೂಟ್ ಸಾಮರ್ಥ್ಯ ಮತ್ತು ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಅನ್ನು ನೀಡುತ್ತದೆ.

ಎಂಜಿನ್‌ ಮತ್ತು ಮೈಲೇಜ್‌

 

ಮಹೀಂದ್ರಾ 3ಎಕ್ಸ್‌ಒ

 

ಟಾಟಾ ನೆಕ್ಸಾನ್‌

 

ಎಂಜಿನ್‌

1.2-ಲೀಟರ್ ಟರ್ಬೊ-ಪೆಟ್ರೋಲ್/ 1.2-ಲೀಟರ್ TGDi ಟರ್ಬೊ-ಪೆಟ್ರೋಲ್

1.5-ಲೀಟರ್ ಡೀಸೆಲ್

1.2-ಲೀಟರ್ ಟರ್ಬೋ-ಪೆಟ್ರೋಲ್

1.5-ಲೀಟರ್ ಡೀಸೆಲ್

ಪವರ್‌

112 ಪಿಎಸ್/ 130 ಪಿಎಸ್

117 ಪಿಎಸ್

120 ಪಿಎಸ್

115 ಪಿಎಸ್

ಟಾರ್ಕ್‌

200 ಎನ್‌ಎಮ್‌/ 250 ಎನ್‌ಎಮ್‌ ವರೆಗೆ

300 ಎನ್ಎಂ

170 ಎನ್ಎಂ

260 ಎನ್ಎಂ

ಗೇರ್‌ಬಾಕ್ಸ್‌

6 ಮ್ಯಾನುಯಲ್‌, 6 ಆಟೋಮ್ಯಾಟಿಕ್‌

6 ಮ್ಯಾನುಯಲ್‌, 6 ಆಟೋಮ್ಯಾಟಿಕ್‌

5ಮ್ಯಾನುಯಲ್‌, 6ಮ್ಯಾನುಯಲ್‌, 6 ಎಎಮ್‌ಟಿ, 6ಡಿಸಿಟಿ

6ಮ್ಯಾನುಯಲ್‌, 6 ಎಎಮ್‌ಟಿ

ಕ್ಲೈಮ್ ಮಾಡಲಾದ ಮೈಲೇಜ್‌

ಪ್ರತಿ ಲೀ.ಗೆ 18.89 ಕಿ.ಮೀ, ಪ್ರತಿ ಲೀ.ಗೆ 17.96 ಕಿ.ಮೀ/ ಪ್ರತಿ ಲೀ.ಗೆ 20.1 ಕಿ.ಮೀ, ಪ್ರತಿ ಲೀ.ಗೆ 18.2 ಕಿ.ಮೀ

ಪ್ರತಿ ಲೀ.ಗೆ 20.6 ಕಿ.ಮೀ, ಪ್ರತಿ ಲೀ.ಗೆ 21.2 ಕಿ.ಮೀ

ಪ್ರತಿ ಲೀ.ಗೆ 17.44 ಕಿ.ಮೀ, ಪ್ರತಿ ಲೀ.ಗೆ 17.18 ಕಿ.ಮೀ, ಪ್ರತಿ ಲೀ.ಗೆ 17.01 ಕಿ.ಮೀ

ಪ್ರತಿ ಲೀ.ಗೆ  23.23 ಕಿ.ಮೀ, ಪ್ರತಿ ಲೀ.ಗೆ  24.08 ಕಿ.ಮೀ

Tata Nexon 2023

  • ಮಹೀಂದ್ರಾ 3XO ಮತ್ತು ಟಾಟಾ ನೆಕ್ಸಾನ್ ಎರಡೂ 1.2-ಲೀಟರ್ ಟರ್ಬೊ-ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್‌ಗಳ ಆಯ್ಕೆಯನ್ನು ನೀಡುತ್ತವೆ. ಆದರೆ, ಮಹೀಂದ್ರಾ ಟರ್ಬೊ-ಪೆಟ್ರೋಲ್ ಎಂಜಿನ್‌ನ ಎರಡು ಆವೃತ್ತಿಗಳನ್ನು ಆಫರ್‌ನಲ್ಲಿ ಹೊಂದಿದೆ, ಎರಡನೆಯದು ಹೆಚ್ಚಿನ ಪರ್ಫಾರ್ಮೆನ್ಸ್‌ಗಾಗಿ ನೇರ ಇಂಜೆಕ್ಷನ್ ಅನ್ನು ಒಳಗೊಂಡಿದೆ.

  • ಮಹೀಂದ್ರಾ XUV300 ನಂತೆ 3XOನ ಎಂಜಿನ್ ಯಾವುದೇ ಆಗಿರಲಿ, ಹೆಚ್ಚಿನ ಟಾರ್ಕ್ ಅನ್ನು ಹೊಂದಿದೆ, ಹಾಗೆಯೇ ಹೆಚ್ಚು ಶಕ್ತಿಶಾಲಿ ಟರ್ಬೊ-ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳ ಆಯ್ಕೆಯನ್ನು ಸಹ ಹೊಂದಿದೆ.

  • ನೆಕ್ಸಾನ್ ತನ್ನ ಟರ್ಬೊ-ಪೆಟ್ರೋಲ್ ಎಂಜಿನ್‌ನೊಂದಿಗೆ ಎಎಮ್‌ಟಿ ಮತ್ತು ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ಸ್ ಎರಡನ್ನೂ ಒಳಗೊಂಡಂತೆ ನಾಲ್ಕು ಟ್ರಾನ್ಸ್‌ಮಿಷನ್ ಆಯ್ಕೆಗಳನ್ನು ನೀಡುತ್ತದೆ, ಹಾಗೆಯೇ ಎಕ್ಸ್‌ಯುವಿ 3ಎಕ್ಸ್‌ಒ ಒಂದು ಮ್ಯಾನುವಲ್ ಆಯ್ಕೆ ಮತ್ತು ಹೊಸ ಟಾರ್ಕ್ ಕನ್ವರ್ಟರ್‌ ಆಟೋಮ್ಯಾಟಿಕ್‌ ಅನ್ನು ಪಡೆಯುತ್ತದೆ. ಎರಡೂ ಎಸ್‌ಯುವಿಗಳು ತಮ್ಮ ಡೀಸೆಲ್ ಎಂಜಿನ್‌ಗಳೊಂದಿಗೆ ಮ್ಯಾನ್ಯುವಲ್ ಮತ್ತು ಎಎಮ್‌ಟಿ ಆಯ್ಕೆಗಳನ್ನು ನೀಡುತ್ತವೆ.

  • ತಿಳಿಸಲಾದ ಇಂಧನ ದಕ್ಷತೆಯ ಅಂಕಿಅಂಶಗಳಿಗೆ ಬಂದಾಗ, ಮಹೀಂದ್ರಾ 3XO ನ ಟರ್ಬೊ-ಪೆಟ್ರೋಲ್ ಎಂಜಿನ್‌ಗಳು ನೆಕ್ಸನ್‌ನ ಟರ್ಬೊ-ಪೆಟ್ರೋಲ್ ಎಂಜಿನ್‌ಗಿಂತ ಮುಂದಿವೆ. ಹಾಗೆಯೇ, ಟಾಟಾ ಎಸ್‌ಯುವಿಯ ಡೀಸೆಲ್ ಎಂಜಿನ್ ಮಹೀಂದ್ರಾಕ್ಕಿಂತ ಲೀಟರ್‌ಗೆ ಹೆಚ್ಚಿನ ಕಿಲೋಮೀಟರ್‌ಗಳ ಭರವಸೆಯನ್ನು ನೀಡುತ್ತದೆ.

ವೈಶಿಷ್ಟ್ಯದ ಮುಖ್ಯಾಂಶಗಳು

ವೈಶಿಷ್ಟ್ಯಗಳು

ಮಹೀಂದ್ರಾ ಎಕ್ಸ್‌ಯುವಿ3 ಎಕ್ಸ್‌ಒ

ಟಾಟಾ ನೆಕ್ಸಾನ್‌

ಇಂಫೋಟೈನ್‌ಮೆಂಟ್‌

10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್

ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ

10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ

7-ಸ್ಪೀಕರ್ ಹರ್ಮನ್ ಕಾರ್ಡನ್ ಆಡಿಯೊ ಸಿಸ್ಟಮ್

10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್

ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ

10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ

9-ಸ್ಪೀಕರ್ ಜೆಬಿಎಲ್‌ ಸೌಂಡ್‌ ಸಿಸ್ಟಮ್‌

ಹೊರಭಾಗ

ಬೈ-ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು

ಕನೆಕ್ಟೆಡ್‌ ಎಲ್ಇಡಿ ಟೈಲ್ ಲೈಟ್‌ಗಳು

ಬೈ-ಫಂಕ್ಷನಲ್‌ ಎಲ್‌ಇಡಿ ಡಿಆರ್‌ಎಲ್‌ಗಳು

ಎಲ್ಇಡಿ ಫಾಗ್ ಲ್ಯಾಂಪ್ಸ್

17 ಇಂಚಿನ ಅಲಾಯ್ ಚಕ್ರಗಳು

ಪನೋರಮಿಕ್ ಸನ್‌ರೂಫ್

ಬೈ-ಫಂಕ್ಷನಲ್‌ ಎಲ್‌ಇಡಿ ಹೆಡ್‌ಲೈಟ್‌ಗಳು

ಕನೆಕ್ಟೆಡ್‌ ಎಲ್ಇಡಿ ಟೈಲ್ ಲೈಟ್‌ಗಳು

ಸಿಕ್ಯೂನ್ಶಲ್‌ ಎಲ್‌ಇಡಿ ಡಿಆರ್‌ಎಲ್‌ಗಳು

16-ಇಂಚಿನ ಅಲಾಯ್ ವೀಲ್‌ಗಳು

ವಾಯ್ಸ್‌ ಆಸಿಸ್ಟೆಡ್‌ ಎಲೆಕ್ಟ್ರಿಕ್‌ ಸನ್‌ರೂಫ್‌

ಇಂಟೀರಿಯರ್ 

ಡ್ಯುಯಲ್ ಟೋನ್ ಕ್ಯಾಬಿನ್

ಲೆಥೆರೆಟ್ ಅಪ್ಹೋಲ್ಸ್‌ಟೆರಿ

60:40 ಸ್ಪ್ಲಿಟ್ ಫೋಲ್ಡಿಂಗ್ ಹಿಂದಿನ ಸೀಟುಗಳು

ಎಲ್ಲಾ 5 ಆಸನಗಳಿಗೆ ಹೊಂದಿಸಬಹುದಾದ ಹೆಡ್‌ರೆಸ್ಟ್‌ಗಳು

ಕಪ್ ಹೋಲ್ಡರ್‌ಗಳೊಂದಿಗೆ ಮಡಚಬಹುದಾದ ಹಿಂಭಾಗದ ಆರ್ಮ್‌ರೆಸ್ಟ್

ಸ್ಟೋರೆಜ್‌ನೊಂದಿಗೆ ಮುಂಭಾಗದ ಸೆಂಟರ್‌ ಆರ್ಮ್‌ರೆಸ್ಟ್

ಆವೃತ್ತಿಗಳ ಆಧಾರದ ಮೇಲೆ ವಿವಿಧ ರೀತಿಯ ಡ್ಯುಯಲ್-ಟೋನ್ ಕ್ಯಾಬಿನ್

ಪ್ರಕಾಶಿತ ಟಾಟಾ ಲೋಗೋದೊಂದಿಗೆ 2-ಸ್ಪೋಕ್ ಸ್ಟೀರಿಂಗ್ ವೀಲ್

ಲೆಥೆರೆಟ್ ಅಪ್ಹೋಲ್ಸ್‌ಟೆರಿ

ಎತ್ತರ-ಹೊಂದಾಣಿಕೆ ಮಾಡಬಹುದಾದ ಮುಂಭಾಗದ ಸೀಟ್‌ಗಳು

ಆಂಬಿಯೆಂಟ್ ಲೈಟಿಂಗ್

60:40 ಸ್ಪ್ಲಿಟ್-ಫೋಲ್ಡಿಂಗ್ ಹಿಂದಿನ ಸೀಟುಗಳು

ಸೌಕರ್ಯ ಮತ್ತು ಸೌಲಭ್ಯ

ಹಿಂಭಾಗದ ಎಸಿ ವೆಂಟ್‌ಗಳೊಂದಿಗೆ ಡ್ಯುಯಲ್-ಝೋನ್ ಹವಾಮಾನ ನಿಯಂತ್ರಣ

ಆಟೋ-ಡಿಮ್ಮಿಂಗ್ ಐಆರ್‌ವಿಎಮ್‌

ಕ್ರೂಸ್ ಕಂಟ್ರೋಲ್

ವೈರ್‌ಲೆಸ್ ಫೋನ್ ಚಾರ್ಜರ್

ಆಟೋ ಹೆಡ್‌ಲ್ಯಾಂಪ್‌ಗಳು ಮತ್ತು ಮುಂಭಾಗದ ವೈಪರ್‌ಗಳು

ಪವರ್ ಫೋಲ್ಡಿಂಗ್ ಮತ್ತು ಹೊಂದಾಣಿಕೆ ಮಾಡಬಹುದಾದ ಒಆರ್‌ವಿಎಮ್‌ಗಳು

ಟಚ್‌ ಕಂಟ್ರೋಲ್‌ಗಳೊಂದಿಗೆ ಆಟೋಮ್ಯಾಟಿಕ್‌ ಕ್ಲೈಮೇಟ್‌ ಕಂಟ್ರೋಲ್‌

ಹಿಂದಿನ ಎಸಿ ವೆಂಟ್‌ಗಳು

ವೈರ್‌ಲೆಸ್ ಫೋನ್ ಚಾರ್ಜರ್

ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು

ಕ್ರೂಸ್ ಕಂಟ್ರೋಲ್

ಆಟೋ ಹೆಡ್‌ಲ್ಯಾಂಪ್‌ಗಳು ಮತ್ತು ರೈನ್ ಸೆನ್ಸಿಂಗ್ ವೈಪರ್‌ಗಳು

ಪ್ಯಾಡಲ್ ಶಿಫ್ಟರ್‌ಗಳು (AMT & DCT)

ಆಟೋ-ಡಿಮ್ಮಿಂಗ್ ಐಆರ್‌ವಿಎಮ್‌

ಆಟೋ-ಫೋಲ್ಡಿಂಗ್ ಒಆರ್‌ವಿಎಮ್‌ ಗಳು

ಸುರಕ್ಷತೆ

6ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್‌ ಆಗಿ)

ಎಲ್ಲಾ ಚಕ್ರದಲ್ಲಿ ಡಿಸ್ಕ್ ಬ್ರೇಕ್

EBD ಜೊತೆಗೆ ABS

ESC (ಎಲೆಕ್ಟ್ರಾನಿಕ್ ಸ್ಟೇಬಿಲಿಟಿ ಕಂಟ್ರೋಲ್‌)

ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಮ್

ಬ್ಲೈಂಡ್ ವ್ಯೂ ಮಾನಿಟರ್‌ನೊಂದಿಗೆ 360-ಡಿಗ್ರಿ ವ್ಯೂ ಕ್ಯಾಮೆರಾ

ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸರ್‌ಗಳು

ISOFIX ಚೈಲ್ಡ್ ಸೀಟ್ ಆಂಕರ್‌ಗಳು

ಸ್ವಯಂ ಹೋಲ್ಡ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್

ADAS (ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಅಸಿಸ್ಟ್, ಆಟೋ ಎಮರ್ಜೆನ್ಸಿ ಬ್ರೇಕಿಂಗ್ ಮತ್ತು ಹೈ ಬೀಮ್ ಅಸಿಸ್ಟ್)

6 ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್‌ ಆಗಿ)

EBD ಜೊತೆಗೆ ABS

(ಎಲೆಕ್ಟ್ರಾನಿಕ್ ಸ್ಟೇಬಿಲಿಟಿ ಕಂಟ್ರೋಲ್‌)(ESC)

ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS)

ISOFIX ಚೈಲ್ಡ್ ಸೀಟ್ ಆಂಕರ್‌ಗಳು

ಹಿಲ್ ಹೋಲ್ಡ್ ಅಸಿಸ್ಟ್

ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸರ್‌ಗಳು

360 ಡಿಗ್ರಿ ಕ್ಯಾಮೆರಾ

ಬ್ಲೈಂಡ್ ವ್ಯೂ ಮಾನಿಟರ್

Mahindra XUV 3XO AX7 Panoramic Sunroof
Mahindra XUV 3XO AX5L Level 2 ADAS

  • ಹೈಲೈಟ್ ವೈಶಿಷ್ಟ್ಯಗಳ ವಿಷಯದಲ್ಲಿ, ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒವು ಟಾಟಾ ನೆಕ್ಸಾನ್‌ಗಿಂತ ಒಂದು ಹೆಜ್ಜೆ ಮುಂದೆ ಹೋಗುವಲ್ಲಿ ಯಶಸ್ವಿಯಾಗಿದೆ. ಇದರಲ್ಲಿ ಮುಖ್ಯವಾಗಿ ಪನೋರಮಿಕ್ ಸನ್‌ರೂಫ್, ADAS ಸೂಟ್ ಮತ್ತು ಡ್ಯುಯಲ್-ಝೋನ್ ಕ್ಲೈಮೇಟ್‌ ಕಂಟ್ರೋಲ್‌ ಮಹತ್ವದ ಪಾತ್ರ ವಹಿಸಿದೆ.

  • ಹಾಗೆಯೇ, 3XOಗಿಂತ ನೆಕ್ಸಾನ್ ಕೆಲವು ಹೆಚ್ಚಿನ ಪ್ರಯೋಜನಗಳನ್ನು ಹೊಂದಿದೆ, ಅವುಗಳೆಂದರೆ, ಒಳಗೆ ಮತ್ತು ಹೊರಗೆ ಹೆಚ್ಚು ಫ್ಯೂಚರಿಸ್ಟಿಕ್ ಆದ ಎಲ್‌ಇಡಿ ಲೈಟಿಂಗ್ ಸೆಟಪ್, ವೆಂಟಿಲೇಟೆಡ್‌ ಫ್ರಂಟ್‌ ಸೀಟ್‌ಗಳು ಮತ್ತು ಹೆಚ್ಚು ಪ್ರೀಮಿಯಂ ಆದ ಆಡಿಯೊ ಸಿಸ್ಟಮ್ ಆಗಿದೆ. 

  • ಈ ಎರಡೂ ಉಪ-4 ಮೀಟರ್ ಎಸ್‌ಯುವಿಗಳು ಇನ್ಫೋಟೈನ್‌ಮೆಂಟ್ ಯೂನಿಟ್, ಡಿಜಿಟಲ್ ಡ್ರೈವರ್‌ಸ್ ಡಿಸ್‌ಪ್ಲೇ, ಏರ್‌ಬ್ಯಾಗ್‌ಗಳು ಮತ್ತು 360-ಡಿಗ್ರಿ ಕ್ಯಾಮೆರಾಕ್ಕೆ ಸಂಬಂಧಿಸಿದ ಪ್ರದೇಶಗಳಲ್ಲಿ (ಬ್ರೋಷರ್‌ನಲ್ಲಿ) ಸಮವಾಗಿ ಹೊಂದಾಣಿಕೆಯಾಗುತ್ತವೆ.

Mahindra XUV 3XO AX5 Interior
Tata Nexon dashboard

  • 3XO ಗಾಗಿ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಕಾರ್ಯವನ್ನು ನೀಡುವುದಾಗಿ ಮಹೀಂದ್ರಾ ಹೇಳಿಕೆ ನೀಡಿದೆ, ಆದರೆ ಇದು ಈಗಿನಿಂದಲೇ ಲಭ್ಯವಾಗುವುದಿಲ್ಲ ಮತ್ತು ನಂತರ ಸಾಫ್ಟ್‌ವೇರ್ ಅಪ್‌ಡೇಟ್ ಮೂಲಕ ಪರಿಚಯಿಸಲಾಗುವುದು.

  • ಟಾಟಾ ನೆಕ್ಸಾನ್‌ನ ವಿಶ್ವಾಸಾರ್ಹತೆಯ ಸಮಸ್ಯೆಗಳು ಮತ್ತು ಮಾರಾಟದ ನಂತರದ ಸೇವೆಯ ಕಳಪೆ ಗುಣಮಟ್ಟದ ಬಗ್ಗೆ ಹಲವಾರು ವರದಿಗಳು ಈಗಾಗಲೇ ಬಂದಿವೆ ಎಂಬುವುದನ್ನು ನಿಮ್ಮ ಮುಂದೆ ಇಡಲು ನಾವು ಬಯಸುತ್ತೇವೆ. ಮಹೀಂದ್ರಾದ ಹೊಸ 3XOವು ಈ ಸಮಸ್ಯೆಗಳನ್ನು ತಪ್ಪಿಸಬಹುದಾದರೆ, ಈ ಎರಡು ಕಾರುಗಳ ನಡುವೆ ಆಯ್ಕೆ ಮಾಡುವುದು ತುಂಬಾ ಸುಲಭವಾಗುತ್ತದೆ.

ಬೆಲೆಗಳು

ಮಹೀಂದ್ರಾ ಎಕ್ಸ್‌ಯುವಿ3 ಎಕ್ಸ್‌ಒ

ಟಾಟಾ ನೆಕ್ಸಾನ್‌

7.49 ಲಕ್ಷ ರೂ.ನಿಂದ 15.49 ಲಕ್ಷ ರೂ. (ಪರಿಚಯಾತ್ಮಕ)

8.15 ಲಕ್ಷ ರೂ.ನಿಂದ 15.80 ಲಕ್ಷ ರೂ.

ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಬೆಲೆಗಳು

Mahindra XUV 3XO Rear

  • ಮಹೀಂದ್ರಾ ಎಕ್ಸ್‌ಯುವಿ 3XOವು ಟಾಟಾ ನೆಕ್ಸಾನ್‌ಗಿಂತ ಎಂಟ್ರಿ ಲೆವೆಲ್‌ನಲ್ಲಿ (76,000 ರೂ.) ಮತ್ತು ಟಾಪ್-ಎಂಡ್ ಆವೃತ್ತಿಗಳಲ್ಲಿ ಹೆಚ್ಚು ಕೈಗೆಟುಕುವಂತಿದೆ.

ಇದನ್ನೂ ಓದಿ: ಮಹೀಂದ್ರಾ ಎಕ್ಸ್‌ಯುವಿ 3XO Vs ಪ್ರಮುಖ ಪ್ರತಿಸ್ಪರ್ಧಿಗಳು: ಬೆಲೆಗಳ ಹೋಲಿಕೆ

  • 3XO ಅನ್ನು 9 ಆವೃತ್ತಿಗಳಲ್ಲಿ ನೀಡಲಾಗಿದ್ದರೂ, ನೆಕ್ಸಾನ್‌ನ ಪಟ್ಟಿಯು ಹೆಚ್ಚುವರಿ ಡಾರ್ಕ್ ಎಡಿಷನ್‌ಗಳೊಂದಿಗೆ 12 ವಿಶಾಲವಾದ ವೇರಿಯೆಂಟ್‌ಗಳನ್ನು ಹೊಂದಿದೆ. 

  • ಈ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಗಳ ಇತರ ಪ್ರತಿಸ್ಪರ್ಧಿಗಳೆಂದರೆ ಮಾರುತಿ ಬ್ರೆಝಾ, ಹುಂಡೈ ವೆನ್ಯೂ ಮತ್ತು ಕಿಯಾ ಸೋನೆಟ್.

ಇನ್ನಷ್ಟು ಓದಿ : ಎಕ್ಸ್‌ಯುವಿ 3ಎಕ್ಸ್‌ಒ ಆನ್‌ರೋಡ್‌ ಬೆಲೆ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Mahindra ಎಕ್ಸ್ ಯುವಿ 3ಎಕ್ಸ್ ಒ

Read Full News

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience