• English
    • Login / Register

    XUV300 2024ರ ಜನವರಿ ಸೇಲ್ಸ್ ಪ್ರಕಾರ Mahindraದ ಅತಿ ಹೆಚ್ಚು ಬೇಡಿಕೆಯಲ್ಲಿರುವ ಪೆಟ್ರೋಲ್ SUV

    ಮಹೀಂದ್ರ ಎಕ್ಸ್‌ಯುವಿ300 ಗಾಗಿ rohit ಮೂಲಕ ಫೆಬ್ರವಾರಿ 16, 2024 04:50 pm ರಂದು ಮಾರ್ಪಡಿಸಲಾಗಿದೆ

    • 23 Views
    • ಕಾಮೆಂಟ್‌ ಅನ್ನು ಬರೆಯಿರಿ

    XUV300 ಪೆಟ್ರೋಲ್ ಮಾರಾಟವು ಜನವರಿ 2024 ರಲ್ಲಿ SUVಯ ಒಟ್ಟು ಮಾರಾಟದ ಶೇಕಡಾ 44.5 ರಷ್ಟು ಆಗಿತ್ತು.

    Mahindra XUV300

    ಇಂದು ಹೊಸ ಕಾರು ಖರೀದಿಸುವವರು ಥಾರ್ ಮತ್ತು XUV700 ನಂತಹ ಮಹೀಂದ್ರಾ SUV ಅನ್ನು ಖರೀದಿಸಲು ಪ್ಲಾನ್ ಮಾಡಿದಾಗ, ಮಾರಾಟದ ಅಂಕಿಅಂಶಗಳ ಪ್ರಕಾರ ಅವರು ಡೀಸೆಲ್ ಎಂಜಿನ್ ಆಯ್ಕೆಗೆ ಸ್ಪಷ್ಟ ಆದ್ಯತೆಯನ್ನು ನೀಡುತ್ತಾರೆ ಎಂಬುದು ಬಹಿರಂಗವಾಗಿದೆ. ಆದರೆ ಮಹೀಂದ್ರಾ XUV300 ಆಯ್ಕೆಗೆ ಬಂದಾಗ ಇದು ಬದಲಾಗುತ್ತಿದೆ. ಈ ಸಬ್-4m SUV ಸ್ವಲ್ಪ ಹಳೆಯದಾಗಿದೆ ಮತ್ತು ಶೀಘ್ರದಲ್ಲೇ ರಿಫ್ರೆಶ್ ಆಗುವ ಸಾಧ್ಯತೆಗಳಿದ್ದರೂ ಕೂಡ, ಅದರ ಜನವರಿ 2024ರ ಮಾರಾಟದ ಸಂಖ್ಯೆಗಳು ವಿವಿಧ ಇಂಧನ ಪ್ರಕಾರಗಳ ಮಾರಾಟದಲ್ಲಿ ಆಶ್ಚರ್ಯಕರ ವಿಷಯವನ್ನು ಬಹಿರಂಗಪಡಿಸುತ್ತವೆ.

    XUV300 ಪೆಟ್ರೋಲ್ ಹೆಚ್ಚಿನ ಬೇಡಿಕೆಯಲ್ಲಿದೆ

    ಪವರ್‌ಟ್ರೇನ್‌

    ಜನವರಿ 2023

     ಜನವರಿ 2024

     ಜನವರಿ 2024 ರ ಮಾರಾಟದ %

     ಪೆಟ್ರೋಲ್

    2,533

    2,453

    44.49 %

     ಡೀಸೆಲ್ ಮತ್ತು ಎಲೆಕ್ಟ್ರಿಕ್*

    2,732

    3,061

    55.51 %

    *ಈ ಸಂಖ್ಯೆಗಳು ಎಲೆಕ್ಟ್ರಿಕ್ XUV400 ಅನ್ನು ಕೂಡ ಒಳಗೊಂಡಿವೆ

     XUV300 ಪೆಟ್ರೋಲ್ ತನ್ನ ವರ್ಷದಿಂದ ವರ್ಷದ (YoY) ಅಂಕಿಅಂಶದಲ್ಲಿ ಸ್ವಲ್ಪ ಕುಸಿತವನ್ನು ಕಂಡಿದೆಯಾದರೂ ಕೂಡ, ಒಟ್ಟು ಮಾರಾಟವು ಜನವರಿ 2024 ರಲ್ಲಿ 2,000-ಯೂನಿಟ್ ಅನ್ನು ದಾಟಿದೆ. XUV300 ಪೆಟ್ರೋಲ್ ಮತ್ತು ಡೀಸೆಲ್‌ನ ಒಟ್ಟು ಮಾರಾಟದ ನಡುವಿನ ಅಂತರವು ಜನವರಿ 2024 ರಲ್ಲಿ ಇನ್ನಷ್ಟು ಹೆಚ್ಚಾಯಿತು ಏಕೆಂದರೆ ಇದು XUV400 EV ಸಂಖ್ಯೆಗಳನ್ನು ಸಹ ಒಳಗೊಂಡಿದೆ, ಇದು 3,000 ಯುನಿಟ್‌ಗಳ ಸಂಖ್ಯೆಯಲ್ಲಿ ಸುಮಾರು 20 ಪ್ರತಿಶತವನ್ನು ಹೊಂದಿದೆ.

     XUV300 ಪೆಟ್ರೋಲ್ ಏಕೆ ಬೇಡಿಕೆಯಲ್ಲಿದೆ?

     ಇತರ ಮಹೀಂದ್ರಾ SUVಗಳ ಇಂಧನ ಮಾದರಿಗೆ ಹೋಲಿಸಿದರೆ XUV300ನ ಪೆಟ್ರೋಲ್ ವೇರಿಯಂಟ್ ಗಳಿಗೆ ಹೆಚ್ಚಿನ ಆದ್ಯತೆಗೆ ಒಂದು ಕಾರಣವೆಂದರೆ ಬೆಲೆ ವ್ಯತ್ಯಾಸ.

     XUV 300 ಪೆಟ್ರೋಲ್ ಬೆಲೆಗಳು

     XUV300 ಡೀಸೆಲ್ ಬೆಲೆಗಳು

     ರೂ. 7.99 ಲಕ್ಷದಿಂದ ರೂ. 13.46 ಲಕ್ಷ

     ರೂ. 10.21 ಲಕ್ಷದಿಂದ ರೂ. 14.76 ಲಕ್ಷ

     XUV300 ನ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳು ಮ್ಯಾನ್ಯುವಲ್ ಮತ್ತು AMT (ಆಟೋಮ್ಯಾಟಿಕ್) ಟ್ರಾನ್ಸ್‌ಮಿಷನ್‌ಗಳ ಆಯ್ಕೆಯನ್ನು ಪಡೆಯುತ್ತವೆ. ಆದರೆ ಪ್ರತಿ ವೇರಿಯಂಟ್ ನಲ್ಲಿ ಹೋಲಿಸಿದಾಗ, ಟರ್ಬೊ-ಪೆಟ್ರೋಲ್ ಆಯ್ಕೆಯು ಸುಮಾರು ರೂ. 1.5 ಲಕ್ಷದಷ್ಟು ಕಡಿಮೆ ಬೆಲೆಯನ್ನು ಹೊಂದಿದೆ. ಇದು XUV300 ಯಷ್ಟೇ ಅಲ್ಲ, ಸ್ಕಾರ್ಪಿಯೋ N ಮತ್ತು XUV700 ನಂತಹ ದೊಡ್ಡ ಮಹೀಂದ್ರ ಮಾಡೆಲ್ ಗಳ ಬದಲು ಸಣ್ಣ SUV ಅನ್ನು ಖರೀದಿಸುವವರಿಗೆ ಇದು ತುಂಬಾ ಮುಖ್ಯವಾಗಿದೆ.

    Mahindra XUV300 TGDI badge

     ಇದು ಎರಡು ಟರ್ಬೊ-ಪೆಟ್ರೋಲ್ ಪವರ್‌ಟ್ರೇನ್‌ಗಳ ಆಯ್ಕೆಯನ್ನು ಪಡೆಯುವ ಏಕೈಕ ಸಬ್-4m SUV ಆಗಿದೆ. ಎರಡೂ ಕೂಡ 1.2-ಲೀಟರ್ ಟರ್ಬೊ ಯೂನಿಟ್ ಗಳಾಗಿದ್ದು, ಒಂದು 110 PS/200 Nm ಅನ್ನು ನೀಡುತ್ತದೆ ಮತ್ತು ಇನ್ನೊಂದು 130 PS ಮತ್ತು 250 Nm ವರೆಗೆ ಉತ್ಪಾದಿಸುತ್ತದೆ.

     ಇದನ್ನು ಕೂಡ ಓದಿ: 2024ರ ಜನವರಿಯಲ್ಲಿ 90 ಪ್ರತಿಶತಕ್ಕಿಂತ ಹೆಚ್ಚಿನ Mahindra Scorpio ಖರೀದಿದಾರರಿಂದ ಡೀಸೆಲ್ ಪವರ್‌ಟ್ರೇನ್‌ಗೆ ಆದ್ಯತೆ

     ಪ್ರತಿಸ್ಪರ್ಧಿಗಳು ಮತ್ತು ಫೇಸ್ ಲಿಫ್ಟ್

    2024 Mahindra XUV300

     ಮಹೀಂದ್ರಾ XUV300 ಹ್ಯುಂಡೈ ವೆನ್ಯೂ, ಮಾರುತಿ ಬ್ರೆಝಾ, ಕಿಯಾ ಸೋನೆಟ್, ಟಾಟಾ ನೆಕ್ಸನ್, ರೆನಾಲ್ಟ್ ಕಿಗರ್, ನಿಸ್ಸಾನ್ ಮ್ಯಾಗ್ನೈಟ್ ಮತ್ತು ಮಾರುತಿ ಫ್ರಾಂಕ್ಸ್ ಸಬ್-4m ಕ್ರಾಸ್‌ಒವರ್‌ಗಳಿಗೆ ಪ್ರತಿಸ್ಪರ್ಧಿಯಾಗಿದೆ. ಇದು ಶೀಘ್ರದಲ್ಲೇ ರಿಫ್ರೆಶ್ ಆಗಿರುವ ಅವತಾರದಲ್ಲಿ ಮಾರುಕಟ್ಟೆಗೆ ಬರಲು ಸಿದ್ದವಾಗಿದ್ದು, ಇದರಲ್ಲಿ ದೊಡ್ಡ ಟಚ್‌ಸ್ಕ್ರೀನ್ ಸೇರಿದಂತೆ ಇನ್ನೂ ಕೆಲವು ಪ್ರೀಮಿಯಂ ಫೀಚರ್ ಗಳನ್ನು ನೀಡುವ ಮೂಲಕ ಒಳಗೆ ಮತ್ತು ಹೊರಗೆ ತಾಜಾ ಲುಕ್ ಅನ್ನು ನೀಡುತ್ತದೆ.

    ಇನ್ನಷ್ಟು ಓದಿ: ಮಹೀಂದ್ರ XUV300 AMT

    was this article helpful ?

    Write your Comment on Mahindra ಎಕ್ಸ್‌ಯುವಿ300

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಎಸ್‌ಯುವಿ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience