ಮಹೀಂದ್ರಾ XUV.e8 (XUV700 ಇಲೆಕ್ಟ್ರಿಕ್) ಪರೀಕ್ಷೆ ವೇಳೆ ಮತ್ತೊಮ್ಮೆ ಪ್ರತ್ಯಕ್ಷ, ಹೊಸ ವಿವರಗಳು ಬಹಿರಂಗ
ಮಹೀಂದ್ರ xev ಈ8 ಗಾಗಿ rohit ಮೂಲಕ ನವೆಂಬರ್ 22, 2023 07:09 am ರಂದು ಪ್ರಕಟಿಸಲಾಗಿದೆ
- 48 Views
- ಕಾಮೆಂಟ್ ಅನ್ನು ಬರೆಯಿರಿ
ಸ್ಪೈ ಮಾಡಲಾದ ಮಾಡೆಲ್ ಆಗಸ್ಟ್ 2022 ರಲ್ಲಿ ಪ್ರದರ್ಶಿಸಲಾದ ತನ್ನ ಪರಿಕಲ್ಪನಾ ಆವೃತ್ತಿಯಂತೆಯೇ ಉದ್ದನೆಯ LED DRL ಸ್ಟ್ರಿಪ್ ಮತ್ತು ಲಂಬವಾಗಿ ಜೋಡಿಸಿದ LED ಹೆಡ್‌ಲೈಟ್‌ಗಳನ್ನು ಹೊಂದಿತ್ತು.
- 2024 ರ ಅಂತ್ಯದಲ್ಲಿ XUV.e8 ಮಾರಾಟಕ್ಕೆ ಬರುವ ನಿರೀಕ್ಷೆ ಇದೆ.
- ಇದು ಮಹೀಂದ್ರಾದ INGLO ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದ್ದು ಯೋಜಿಸಲಾದ ಹೊಸ ಶ್ರೇಣಿಯ ಇವಿಗಳಲ್ಲಿ ಮೊದಲನೆಯದಾಗಲಿದೆ.
- ಇದರ ಇತ್ತೀಚಿನ ಸ್ಪೈ ಶಾಟ್‌ಗಳು ಹೊಸ ವ್ಹೀಲ್‌ಗಳನ್ನು ತೋರಿಸಿವೆ ಆದರೆ ಹಿಂದಿನವುಗಳು ಬಹುತೇಕ ಬದಲಾಗಿಲ್ಲ.
- ಕ್ಯಾಬಿನ್‌ನಲ್ಲಿ ಹೊಸ 2-ಸ್ಪೋಕ್ ಸ್ಟೀರಿಂಗ್ ವ್ಹೀಲ್ ಮತ್ತು ವಿಭಿನ್ನ ಗೇರ್ ಶಿಫ್ಟರ್ ಇರುವುದು ಕಂಡುಬಂದಿದೆ.
- 60 kWh ಮತ್ತು 80 kWh ಬ್ಯಾಟರಿ ಆಯ್ಕೆಗಳೊಂದಿಗೆ 450 km ಕ್ಲೈಮ್ ಮಾಡಲಾದ ರೇಂಜ್ ಹೊಂದಿರಬಹುದು ಎಂದು ಅಂದಾಜಿಸಲಾಗಿದೆ.
- ಬೆಲೆಗಳು ರೂ 35 ಲಕ್ಷ (ಎಕ್ಸ್-ಶೋರೂಂ) ನಿಂದ ಪ್ರಾರಂಭವಾಗುವ ನಿರೀಕ್ಷೆ ಇದೆ.
ಈ ಸಂಪೂರ್ಣ ಇಲೆಕ್ಟ್ರಿಕ್ ಮಹೀಂದ್ರಾ XUV700 ನ( Mahindra XUV.e8 ಎಂದು ಕರೆಯಲಾಗುವ) ಮೊದಲ ನೋಟ ಆಗಸ್ಟ್ 2022 ರಲ್ಲಿ ನಮಗೆ ಪರಿಕಲ್ಪನೆಯ ರೂಪದಲ್ಲಿ ದೊರೆಯಿತು. ಒಂದು ವರ್ಷದ ನಂತರ, ಈಗ ಈ ಇಲೆಕ್ಟ್ರಿಕ್ SUVಯ ಪರೀಕ್ಷಾರ್ಥ ಕಾರುಗಳು ನಮ್ಮ ರಸ್ತೆಗಳಲ್ಲಿ ಕಾಣಲಾರಂಭಿಸಿವೆ. ಅಂತಹ ಒಂದು ಮಾಡೆಲ್ ಅನ್ನು ಇತ್ತೇಚೆಗೆ ಸ್ಪೈ ಮಾಡಲಾಗಿದ್ದು, ಇದು ಉತ್ಪಾದನಾ ಆವೃತ್ತಿಯನ್ನೇ ಹೋಲುತ್ತದೆ. ಅಲ್ಲದೇ ಈ XUV.e8 ಹೊಸ XUV700 ಅನ್ನು ಹೋಲುತ್ತಿದ್ದು, EV ಬಿಡುಗಡೆಯ ನಂತರ ನಾವು ಇದರ ಆಗಮನವನ್ನು ನಿರೀಕ್ಷಿಸಬಹುದಾಗಿದೆ.
ಗಮನಿಸಲಾದ ಅಂಶಗಳು
ಈ ಸಂಪೂರ್ಣ ಇಲೆಕ್ಟ್ರಿಕ್ XUV700 ಇದರ ಪರಿಕಲ್ಪನೆಯಲ್ಲಿ ಗಮನಿಸಿದಂತೆ ಪರಿಷ್ಕೃತ ಫೇಶಿಯಾ ಹೊಂದಿರುವುದು ಕಂಡುಬಂದಿದೆ. ಬೋನೆಟ್ ಉದ್ದಕ್ಕೂ LED DRL ಸ್ಟ್ರಿಪ್ ಇರುವುದಲ್ಲದೇ ನವೀಕೃತ ಲಂಬವಾಗಿ ಜೋಡಿಸಲಾದ ಸ್ಪ್ಲಿಟ್- LED ಹೆಡ್‌ಲೈಟ್‌ಗಳನ್ನು ಹೊಂದಿದೆ. ಪರೀಕ್ಷಾರ್ಥ ಕಾರು ವಿಭಿನ್ನ ಅಲಾಯ್ ವ್ಹೀಲ್‌ಗಳನ್ನು ಹೊಂದಿದ್ದು, ಇನ್ನಷ್ಟು ಏರೋಡೈನಾಮಿಕ್ ವಿನ್ಯಾಸಕ್ಕಾಗಿ ಅಂತಿಮ ಉತ್ಪಾದನಾ ಮಾಡೆಲ್‌ನಲ್ಲಿ ಬದಲಾವಣೆ ತರುವ ನಿರೀಕ್ಷೆ ಇದೆ.
ಆದಾಗ್ಯೂ, ಸಾಮಾನ್ಯ XUV700ಗೆ ಹೋಲಿಸಿದರೆ, ಹಿಂಭಾಗದಲ್ಲಿ ಬಂಪರ್‌ನಲ್ಲಿನ ಸಂಭಾವ್ಯ ವ್ಯತ್ಯಾಸ ಹೊರತುಪಡಿಸಿ ಉಳಿದಂತೆ ಯಾವುದೇ ಬದಲಾವಣೆ ಇರುವುದಿಲ್ಲ.
ಕ್ಯಾಬಿನ್ ವಿವರಗಳು
ಕ್ಯಾಬಿನ್‍ನಲ್ಲಿ ಗಮನಿಸಲಾದ ಒಂದು ಪ್ರಮುಖ ಬದಲಾವಣೆಯೆಂದರೆ, ಇತ್ತೀಚಿನ ಟಾಟಾ SUVಗಳಾದ ಹೊಸ ಹ್ಯಾರಿಯರ್ ಮತ್ತು ಸಫಾರಿಯಲ್ಲಿ ಇರುವಂತೆ 2-ಸ್ಪೋಕ್ ಸ್ಟೀರಿಂಗ್ ವ್ಹೀಲ್. ಪರಿಕಲ್ಪನೆಯಲ್ಲಿ ಕಾಣುವ ಹೊಸ ಡ್ರೈವ್ ಸಿಲೆಕ್ಟರ್ ಅನ್ನು ಅಳವಡಿಸಿರುವುದು ಇದರ ಇನ್ನೊಂದು ನವೀಕರಣ. ಈ ಇಲೆಕ್ಟ್ರಿಕ್ XUV700 ಪರಿಕಲ್ಪನೆಯಲ್ಲಿ ತೋರಿಸಿದಂತೆ 3-ಸ್ಕ್ರೀನ್ ಸೆಟಪ್ ಅನ್ನೂ ಹೊಂದಿರುವುದು ಮರೆಮಾಚಿದ ಪರೀಕ್ಷಾರ್ಥ ಕಾರಿನಲ್ಲಿ ಇರಬಹುದೆಂಬ ನಿರೀಕ್ಷೆ ಇದೆ.
ಬ್ಯಾಟರಿ ಪ್ಯಾಕ್, ಇಲೆಕ್ಟ್ರಿಕ್ ಮೋಟರ್‌ಗಳು ಮತ್ತು ರೇಂಜ್
ಮಹೀಂದ್ರಾ ಈ XUV.e8 ಅನ್ನು ತನ್ನ ಹೊಸ INGLO ಮಾಡ್ಯುಲಾರ್ ಪ್ಲಾಟ್‌ಫಾರ್ಮ್ ಆಧರಿಸಿ ನಿರ್ಮಿಸಲಿದ್ದು, 60 kWh ಮತ್ತು 80 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಗಳು ಮತ್ತು 175 kW ತನಕ ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿರಲಿದೆ. ದೊಡ್ಡ ಬ್ಯಾಟರಿಯು 450 km ತನಕದ WLTP -ಪ್ರಮಾಣೀಕೃತ ರೇಂಜ್ ಅನ್ನು ಕ್ಲೈಮ್ ಮಾಡುತ್ತದೆ.
ಈ ಹೊಸ ಪ್ಲಾಟ್‌ಫಾರ್ಮ್ ರಿಯರ್-ವ್ಹೀಲ್ ಡ್ರೈವ್ (RWD) ಮತ್ತು ಆಲ್-ವ್ಹೀಲ್ ಡ್ರೈವ್ (AWD) ಎರಡರಲ್ಲೂ ಲಭ್ಯವಿದ್ದು, ಇಲೆಕ್ಟ್ರಿಕ್ ಪವರ್‌ಟ್ರೇನ್‌ಗಳು RWD ಮಾಡೆಲ್‌ಗಳಿಗೆ 285 PS ತನಕ ಮತ್ತು AWD ಮಾಡೆಲ್‌ಗಳಿಗೆ 394 PS ತನಕ ನೀಡುತ್ತವೆ.
ಇದನ್ನೂ ಓದಿ: EVಗಳನ್ನೂ ತಯಾರಿಸುವ ಉತ್ಸಾಹದಲ್ಲಿ ಈ 7 ಸ್ಮಾರ್ಟ್ ಫೋನ್ ದೈತ್ಯರು: ಆ್ಯಪಲ್, ಸೋನಿ, ಶಿಯೋಮಿ ಮತ್ತು ಇನ್ನಷ್ಟು
ನಿರೀಕ್ಷಿತ ಬಿಡುಗಡೆ ಮತ್ತು ಬೆಲೆ
ಮಹೀಂದ್ರಾ XUV.e8 2024ರಲ್ಲಿ ರೂ 35 ಲಕ್ಷ (ಎಕ್ಸ್-ಶೋರೂಂ) ಆರಂಭಿಕ ಬೆಲೆಯೊಂದಿಗೆ ಮಾರಾಟಕ್ಕೆ ಬರುವ ನಿರೀಕ್ಷೆ ಇದೆ. BYD ಒಟ್ಟೋ 3 ಇದರ ನೇರ ಪ್ರತಿಸ್ಪರ್ಧಿಯಾಗಿರಲಿದ್ದು ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಮತ್ತು MG ZS ಇವಿ ದುಬಾರಿ ಪರ್ಯಾಯವಾಗಲಿದೆ.
ಇನ್ನಷ್ಟು ಓದಿ: XUV700 ಆನ್‌ರೋಡ್ ಬೆಲೆ