ಮಾರುತಿ ಆಲ್ಟೊ ಕೈಗೆಟುಕುವ ಬೆಳೆಯ ಕಾರ್ ಬಗದಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರೆಸಿದೆ.
published on ಮಾರ್ಚ್ 28, 2019 02:02 pm by akash ಮಾರುತಿ ಆಲ್ಟೊ ಕೆ10 ಗೆ
- 19 ವೀಕ್ಷಣಿಗಳು
- ಕಾಮೆಂಟ್ ಅನ್ನು ಬರೆಯಿರಿ
ಮಾರುತಿ ಸುಜುಕಿ ಆಲ್ಟೊ ವನ್ನು ೨೦೦೦ ಇಸವಿಯಲ್ಲಿ ಪರಿಚಯಿಸಲಾಯಿತು, ಸುಮಾರು ೧೭ ವರ್ಷಗಳ ನಂತರವೂ ಇದು ಎಂಟ್ರಿ ಲೆವೆಲ್ ಕಾರ್ ಸೆಗ್ಮೆಂಟ್ ನಲ್ಲಿ ತನ್ನ ಪ್ರಾಬಲ್ಯವನ್ನು ತೋರಿಸುತ್ತಿದೆ. ಬಹಳಷ್ಟು ವೇರಿಯೆಂಟ್ ಗಳು ಹಾಗು ಫೇಸ್ ಲಿಫ್ಟ್ ಆವೃತ್ತಿ ಯ ಆಲ್ಟೊವನ್ನು ಇಲ್ಲಿಯವರೆಗೂ ಪರಿಚಯಿಸಲಾಗಿದೆ. ಮತ್ತು ಇದು ಮಾರಾಟದ ಅಂಕಿ ಅಂಶಗಳ ಪಟ್ಟಿಯಲ್ಲಿ ಮೇಲ್ಬಾಗದಲ್ಲಿ ಇದ್ದು , ದೇಶದಲ್ಲಿ ಹೆಚ್ಚಾಗಿ ಮಾರಾಟವಾಗುತ್ತಿರುವ ಕಾರುಗಳಲ್ಲಿ ಒಂದಾಗಿದೆ.
ಮಾರುತಿ ಸುಜುಕಿ ೧. ೦೭ ಲಕ್ಷ ಯೂನಿಟ್ ಆಲ್ಟೊ ವನ್ನು ೨೦೧೭ ವರ್ಷದ ಮೊದಲ ಐದು ತಿಂಗಳಲ್ಲಿ ಮಾರಾಟ ಮಾಡಿದೆ. ಫೋರ್ಡ್ ೮೬,೪೯೦ ಯೂನಿಟ್ ಕಾರ್ ಗಳನ್ನೂ ೨೦೧೬ ನಲ್ಲಿ ಮಾರಾಟ ಮಾಡಿದೆ. ವೋಕ್ಸ್ವ್ಯಾಗನ್ ೪೭,೩೨೩ ಯೂನಿಟ್ ಮಾರಾಟ ಮಾಡಿದೆ. ಆಲ್ಟೊ ದ ಐದು ತಿಂಗಳ ಮಾರಾಟ ಇತರ ಆಟೋ ಮೇಕರ್ ಗಳ ಒಟ್ಟಾರೆ ಸಂಖ್ಯೆ ಗಿಂತ ಹೆಚ್ಚಾಗಿದೆ. ಅದಲ್ಲದೆ, ಮಾರುತಿ ಸುಜುಕಿ ಪ್ರಕಾರ ಸುಮಾರು ಶೇಖಡಾ ೨೫ ಆಟೋ ಕಸ್ಟಮರ್ ಗಳು ೩೦ ವರ್ಷಗಳ ವಯಸ್ಸಿನ ಒಳಗಡೆ ಇದ್ದಾರೆ, ಮತ್ತು ಇದು ಶೇಖಡಾ ೪ ರಷ್ಟು ಹೆಚ್ಚಾಗಿದೆ. ಮತ್ತು ಇದು ಇಂದಿನ ಜನರೇಶನ್ ಕೂಡ ಆಲ್ಟೊ ದಲ್ಲಿ ವಿಶ್ವಾಸ ಹೊಂದಿದೆ ಎಂದು ಸೂಚಿಸುತ್ತದೆ.
ಆಲ್ಟೊ ನ ಪ್ರಖ್ಯಾತಿ ಅದರ ವಿಶ್ವಾಸಾರ್ಹತೆಯ ಮೇಲೆ, ಕಡಿಮೆ ಮೈಂಟೆನನ್ಸ್ ಖರ್ಚು, ಮತ್ತು ದೇಶದಾದ್ಯಂತ ಇರುವ ಸರ್ವಿಸ್ ನೆಟ್ವರ್ಕ್ ಮೇಲೆ ನಿಂತಿದೆ. ಆಲ್ಟೊ ಮೊದಲ ಮತ್ತು ಎರೆಡನೆ ದರ್ಜೆಯ ನಗರಗಳಲ್ಲದೆ ದೂರದ ಬೆಟ್ಟದ ಪ್ರದೇಶಗಳಲ್ಲಿ, ಸ್ಪೇರ್ ಪಾರ್ಟ್ಸ್ ಸಿಗಲು ಕಷ್ಟವಾಗಿರುವ ಜಾಗದಲ್ಲೂ ಸಹ ಆದ್ಯತೆ ಪಡೆದಿದೆ.
ನಿಮಗೆ ಬಹಳಷ್ಟು ಆಯ್ಕೆಗಳೂ ಸಹ ಇವೆ. ಇದು ಎರೆಡು ಎಂಜಿನ್ ಆಯ್ಕೆ ಗಳಲ್ಲಿ ಬರುತ್ತದೆ. ಒಂದು 0.8-ಲೀಟರ್ ಪೆಟ್ರೋಲ್ ಎಂಜಿನ್ ಹಾಗು ಎರೆಡನೆಯದು 1.0-ಪೆಟ್ರೋಲ್ ಎಂಜಿನ್. ಇದಲ್ಲದೆ , ನಿಮಗೆ CNG ಇಂಧನ ಆಯ್ಕೆ ಮತ್ತು ಆಟೋಮ್ಯಾಟಿಕ್ ವೇರಿಯೆಂಟ್ ಆಯ್ಕೆ ಸಹ ಇದೆ.
ಆಲ್ಟೊ K10 ಒಂದು ಡ್ರೈವ್ ಮಾಡಲು ಇಷ್ಟವಾಗುವ ಕಾರ್, ಪವರ್ ಮತ್ತು ಭಾರದ ಅನುಪಾತ ಚೆನ್ನಾಗಿದೆ. ಮತ್ತು ಆಟೋಮ್ಯಾಟಿಕ್ ವೇರಿಯೆಂಟ್ ಆಲ್ಟೊ K10 ಹೆಚ್ಚು ಕೈಗೆಟುಕುವ ಆಟೋಮ್ಯಾಟಿಕ್ ಕಾರ್ ,ಈ ಸೆಗ್ಮೆಂಟ್ ನಲ್ಲಿ, ಮತ್ತು ಇದು ಹೆಚ್ಚು ಟ್ರಾಫಿಕ್ ಇರುವ ರಸ್ತೆಯಲ್ಲಿ ಓಡಿಸಲೂ ಸಹ ಮೈಲೇಜ್ ನಲ್ಲಿ ರಾಜಿ ಮಾಡಿಕೊಳ್ಳದೆ ಉಪಯೋಗಿಸಬಹುದಾಗಿದೆ.
ಆಲ್ಟೊ ಒಂದು ಬಲಿಷ್ಠ ಮಾರಾಟವಾಗುವ ಕಾರ್ ಆಗಿದ್ದರೂ, ಇದರಲ್ಲಿ ಸುರಕ್ಷತೆಗಳು ಕಡಿಮೆ ಇದೆ, ಡುಯಲ್ ಏರ್ಬ್ಯಾಗ್ ಮತ್ತು ABS ಇದ್ದರೂ , ಅವುಗಳನ್ನು ಕೆಲವು ವೇರಿಯೆಂಟ್ ಗಳಲ್ಲಿ ಮಾತ್ರ ಕೊಡಲಾಗಿದೆ.
ಆದರೂ, ಆರಂಭಿಕ ಹಂತದ ಸೆಗ್ಮೆಂಟ್ ನಲ್ಲಿ ಪ್ರತಿ ವರ್ಷವೂ ಸರಿದೆ ಹೆಚ್ಚುತ್ತಲೇ ಇದೆ, ಮತ್ತು ಸ್ಪರ್ದಿಗಳಾದ ರೆನಾಲ್ಟ್ ಮತ್ತು ಡಾಟ್ ಸನ್ ಹೆಚ್ಹು ಫೀಚರ್ ಹಾಗು ವಿಶಾಲವಾದ ಆಂತರಿಕ ಹೊಂದಿರುವ ಕಾರುಗಳನ್ನು ಅದೇ ಬೆಲೆಗೆ ಕೊಡುತ್ತಿದೆ. ಮಾರುತಿ ಹೇಗೆ ತನ್ನ ಆಲ್ಟೊ ಪರಂಪರೆಯನ್ನು ಮುಂದಿನ ವರ್ಷಗಳಲ್ಲಿ ನಿಭಾಯಿಸುತ್ತದೆ ಎಂದು ಕಾದು ನೋಡಬೇಕಿದೆ.
Also read: Renault Steps Up The Game, Rolls Out More Offers On Kwid
Read More on : Alto K10 AMT
- Renew Maruti Alto K10 Car Insurance - Save Upto 75%* with Best Insurance Plans - (InsuranceDekho.com)
0 out of 0 found this helpful