25,000 ಕ್ಕೂ ಮಿಕ್ಕಿ ಬುಕಿಂಗ್ ಪಡೆದ ಮಾರುತಿ ಜಿಮ್ನಿ..!
ಮಾರುತಿ ಜಿಮ್ನಿ ಗಾಗಿ ansh ಮೂಲಕ ಮೇ 14, 2023 02:00 pm ರಂದು ಪ್ರಕಟಿಸಲಾಗಿದೆ
- 19 Views
- ಕಾಮೆಂಟ್ ಅನ್ನು ಬರೆಯಿರಿ
ಈ 5-ಡೋರ್ ಸಬ್‌ಕಾಂಪ್ಯಾಕ್ಟ್ ಆಫ್-ರೋಡರ್ ಅನ್ನು ಜೂನ್ ಪ್ರಾರಂಭದಲ್ಲಿ ಬಿಡುಗಡೆ ಮಾಡುವ ನಿರೀಕ್ಷೆ ಇದೆ
- 5-ಡೋರ್ ಜಿಮ್ನಿಗೆ ಜನವರಿ 2023ರ ಆಟೋ ಎಕ್ಸ್‌ಪೋದಲ್ಲಿ ಬುಕಿಂಗ್‌ಗಳು ತೆರೆದಿವೆ.
- ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಯೊಂದಿಗೆ 105PS, 1.5-ಲೀಟರ್ ಪೆಟ್ರೋಲ್ ಯೂನಿಟ್‌ನಿಂದ ಚಾಲಿತವಾಗಿದೆ.
- 4WD ಅನ್ನು ಸ್ಟಾಂಡರ್ಡ್ ಆಗಿ ಪಡೆದಿದ್ದು, ಎರಡು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ.
- ಮುಂಬರುವ ವಾರಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದ್ದು, ಶೋರೂಂಗಳಲ್ಲಿ ಈಗಾಗಲೇ ಡಿಸ್‌ಪ್ಲೇ ಮಾಡಲಾಗಿದೆ.
- ಮಾರುತಿ ಇದನ್ನು ರೂ 10 ಲಕ್ಷದಿಂದ (ಎಕ್ಸ್-ಶೋರೂಂ) ಬೆಲೆ ನಿಗದಿಪಡಿಸಬಹುದು.
ಭಾರತದಲ್ಲಿ ಮಾರುತಿ ಜಿಮ್ನಿಯ ಆಗಮನಕ್ಕಾಗಿ ನಾವು ಬಹಳ ಸಮಯದಿಂದ ಕಾಯುತ್ತಿದ್ದು ಈ ಆಫ್‌ರೋಡರ್ ತನ್ನ 5-ಡೋರ್ ಅವತಾರದಲ್ಲಿ ಕಡೆಗೂ ಈ ವರ್ಷಾರಂಭದಲ್ಲಿ ನಮ್ಮಲ್ಲಿಗೆ ಬಂದಿಳಿದಿದೆ. ಆಟೋ ಎಕ್ಸ್‌ಪೋ 2023ರಲ್ಲಿ ಜಾಗತಿಕವಾಗಿ ಅನಾವರಣಗೊಳಿಸಿ, 5-ಡೋರ್ ಜಿಮ್ನಿಗೆ ಮಾರುತಿ ಬುಕಿಂಗ್‌ಗಳನ್ನು ತೆರೆದಿದ್ದು ಅಂದಿನಿಂದ ಈ ಆಫ್-ರೋಡರ್ ಸುಮಾರು 24,500ಕ್ಕೂ ಹೆಚ್ಚಿನ ಬುಕಿಂಗ್‌ಗಳನ್ನು ಪಡೆದಿದೆ.
ಪವರ್‌ಟ್ರೇನ್
ಜಿಮ್ನಿಯು 105PS ಮತ್ತು 134Nm ಉತ್ಪಾದಿಸುವ ಆದೇ 1.5-ಲೀಟರ್ ಪೆಟ್ರೋಲ್ ಇಂಜಿನ್ ಅನ್ನು ಪಡೆದಿದೆ. ಇದರ ಪ್ರಮುಖ ಪ್ರತಿಸ್ಪರ್ಧಿಗಳಾದ ಮಹೀಂದ್ರಾ ಥಾರ್‌ಗಿಂತ ಭಿನ್ನವಾಗಿ ಈ ಇಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಅಥವಾ 4-ಸ್ಪೀಡ್ ಆಟೋಮ್ಯಾಟಿಕ್‌ನೊಂದಿಗೆ ಜೋಡಿಸಲಾಗಿದ್ದು, ಜಿಮ್ನಿಯಲ್ಲಿ 4-ವ್ಹೀಲ್ ಡ್ರೈವ್‌ಟ್ರೇನ್ ಸ್ಟಾಂಡರ್ಡ್ ಆಗಿ ಬರುತ್ತದೆ.
ಫೀಚರ್‌ಗಳು ಮತ್ತು ಸುರಕ್ಷತೆ
ಆರಾಮದಾಯಕತೆ ಮತ್ತು ಅನುಕೂಲತೆಗಳ ವಿಷಯದಲ್ಲಿ ಜಿಮ್ನಿಯು ಉತ್ತಮವಾಗಿ ಸುಸಜ್ಜಿತಗೊಂಡಿದೆ. ಇದು ವೈರ್‌ಲೆಸ್ ಆ್ಯಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ ಹೊಂದಿರುವ 9-ಇಂಚು ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಮ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್ ಮತ್ತು ಮುಂಭಾಗದ ಹಾಗೂ ಹಿಂದಿನ ಎತ್ತರ ಹೊಂದಿಸಬಹುದಾದ ಹೆಡ್‍ರೆಸ್ಟ್‌ಗಳನ್ನು ಹೊಂದಿದೆ.
ಇದನ್ನೂ ಓದಿ: 6 ಚಿತ್ರಗಳಲ್ಲಿ ಮಾರುತಿ ಫ್ರಾಂಕ್ಸ್ ಡೆಲ್ಟಾ+ ವೇರಿಯೆಂಟ್ ವಿವರ
ಸುರಕ್ಷತೆಗಾಗಿ, ಇದು ಆರು ಏರ್‌ಬ್ಯಾಗ್‌ಗಳು, EBD ಜೊತೆಗಿನ ABS, ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ಹಿಲ್ ಹೋಲ್ಡ್ ಮತ್ತು ಡಿಸೆಂಟ್ ಕಂಟ್ರೋಲ್ ಮತ್ತು ರಿಯರ್‌ವ್ಯೂ ಕ್ಯಾಮರಾವನ್ನು ಸ್ಟಾಂಡರ್ಡ್ ಆಗಿ ಪಡೆದಿದೆ.
ಬೆಲೆ, ಬಿಡುಗಡೆ ಮತ್ತು ಪ್ರತಿಸ್ಪರ್ಧಿಗಳು
ಮಾರುತಿಯು ಭಾರತದಲ್ಲಿ 5-ಡೋರ್ ಜಿಮ್ನಿಯನ್ನು ಜೂನ್ ಪ್ರಾರಂಭದಲ್ಲಿ ಬಿಡುಗಡೆ ಮಾಡಬಹುದು ಮತ್ತು ಇದರ ಆರಂಭಿಕ ಬೆಲೆ 10 ಲಕ್ಷ (ಎಕ್ಸ್-ಶೋರೂಂ) ಇರಬಹುದೆಂಬ ನಿರೀಕ್ಷೆ ಇದೆ. ಇದು ಮಹೀಂದ್ರಾ ಥಾರ್ ಮತ್ತು ಫೋರ್ಸ್ ಗುರ್ಖಾಗೆ ಪೈಪೋಟಿ ನೀಡಲಿದೆ.
0 out of 0 found this helpful