Login or Register ಅತ್ಯುತ್ತಮ CarDekho experience ಗೆ
Login

ಮಾರುತಿ ಇನ್ವಿಕ್ಟೊದಲ್ಲೀಗ ಹಿಂದಿನ ಸೀಟ್‌ಬೆಲ್ಟ್ ಹಾಕದಿದ್ರೆ ಅಲಾರಾಂ ಹೊಡೆಯುತ್ತೆ..!!

published on ಆಗಸ್ಟ್‌ 04, 2023 10:36 pm by rohit for ಮಾರುತಿ ಇನ್ವಿಕ್ಟೋ

ಮಾರುತಿ ಇನ್ವಿಕ್ಟೊ ಝೆಟಾ+ ಟ್ರಿಮ್ ಈಗ ರೂ. 3,000 ಪ್ರೀಮಿಯಂನಲ್ಲಿ ಹಿಂದಿನ ಸೀಟ್‌ಬೆಲ್ಟ್ ರಿಮೈಂಡರ್ ಅನ್ನು ಪಡೆಯುತ್ತಿದೆ.

  • ಮಾರುತಿ 2023 ರ ಜುಲೈನಲ್ಲಿ ಟೊಯೋಟಾ ಇನೊವಾ ಹೈಕ್ರಾಸ್ ಪ್ರೇರೇಪಿತ ಇನ್ವಿಕ್ಟೊವನ್ನು ಬಿಡುಗಡೆ ಮಾಡಿದೆ.

  • ಇದನ್ನು ಝೆಟಾ+ ಮತ್ತು ಆಲ್ಫಾ+ ಎಂಬ ಎರಡು ವಿಶಾಲ ವೇರಿಯೆಂಟ್‌ಗಳಲ್ಲಿ ಮಾರಾಟ ಮಾಡಲಾಗಿದೆ.

  • ಈ ಎಂಪಿವಿಯು ಆರಂಭವಾದಾಗಿನಿಂದ ಆಲ್ಫಾ+ ಈ ಸುರಕ್ಷತಾ ಫೀಚರ್ ಅನ್ನು ಹೊಂದಿದೆ.

  • ಝೆಟಾ+ ನ ಸುರಕ್ಷತಾ ಕಿಟ್‌ಗೆ ಬೇರೆ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.

  • ಈ ಎಂಪಿವಿಯ ಹೊಸ ಬೆಲೆಗಳು ರೂ. 24.82 ರಿಂದ ರೂ.28.42 ಲಕ್ಷಗಳವರೆಗಿನ ರೇಂಜ್‌ನಲ್ಲಿದೆ.

ಟೊಯೋಟಾ ಇನೊವಾ ಹೈಕ್ರಾಸ್ ಪ್ರೇರೇಪಿತ ಮಾರುತಿ ಇನ್ವಿಕ್ಟೊ ಅನ್ನು ಪರಿಚಯಿಸಿದ ಸ್ವಲ್ಪ ಸಮಯದ ನಂತರ, ಭಾರತದ ಅತಿ ದೊಡ್ಡ ಕಾರು ತಯಾರಿಕಾ ಕಂಪನಿಯು ಈಗ ಅದರ ಪ್ರವೇಶ ಮಟ್ಟದ ಝಿಟಾ+ ಟ್ರಿಮ್‌ನಲ್ಲಿಯೂ ಸಹ ಹಿಂಭಾಗದ ಸೀಟ್‌ಬೆಲ್ಟ್ ರಿಮೈಂಡರ್ ಅನ್ನು ಪರಿಚಯಿಸುವುದರೊಂದಿಗೆ ತನ್ನ ಅತ್ಯಂತ ಪ್ರೀಮಿಯಂ ಎಂಪಿವಿಯನ್ನು ಸಜ್ಜುಗೊಳಿಸಿದೆ. ಇನ್ವಿಕ್ಟೊವನ್ನು ಪ್ರಾರಂಭಿಸಿದಾಗಿನಿಂದ ಈ ಫೀಚರ್ ರೇಂಜ್-ಟಾಪಿಂಗ್‌ನಲ್ಲಿರುವ ಆಲ್ಫಾ + ವೇರಿಯೆಂಟ್‌ನಲ್ಲಿ ಈಗಾಗಲೇ ಲಭ್ಯವಿತ್ತು.

ಅನ್ವಯಿಸುವಿಕೆ ಮತ್ತು ಬೆಲೆ ಪರಿಷ್ಕರಣೆ

ಇತ್ತೀಚಿನ ಸುರಕ್ಷತಾ ತಂತ್ರಜ್ಞಾನ ಸೇರ್ಪಡೆಯು ಮಾರುತಿ ಎಂಪಿವಿಯ ಎರಡನೇ ಮತ್ತು ಮೂರನೇ ಸಾಲಿನ ಸೀಟುಗಳಿಗೆ ಅನ್ವಯಿಸುತ್ತದೆ. ಝೆಟಾ+ ವೇರಿಯೆಂಟ್‌ಗಳ ಬೆಲೆಗಳು (7- ಮತ್ತು 8-ಸೀಟರ್‌ಗಳಲ್ಲಿ ಲಭ್ಯವಿದೆ) ರೂ. 3,000 ದಷ್ಟು ಹೆಚ್ಚಾಗಿದೆ.

ಇತರ ಸುರಕ್ಷತಾ ಸಾಧನಗಳು

ಝೆಟಾ+ ಟ್ರಿಮ್‌ನ ಸುರಕ್ಷತಾ ಫೀಚರ್‌ಗೆ ಮಾರುತಿಯು ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಇದು ಆರು ಏರ್‌ಬ್ಯಾಗ್‌ಗಳು, ಎಲ್ಲಾ ಪ್ರಯಾಣಿಕರಿಗೂ 3-ಪಾಯಿಂಟ್ ಸೀಟ್‌ಬೆಲ್ಟ್‌ಗಳು, ಆಟೋ-ಹೋಲ್ಡ್‌ನೊಂದಿಗೆ ಎಲೆಕ್ಟ್ರಾನಿಕ್ ಬ್ರೇಕ್, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್-ಸ್ಟಾರ್ಟ್ ಅಸಿಸ್ಟ್, ಮತ್ತು ISOFIX ಚೈಲ್ಡ್ ಸೀಟ್ ಆ್ಯಂಕರೇಜ್‌ಗಳನ್ನು ಹೊಂದಿದೆ.

360-ಡಿಗ್ರಿ ಕ್ಯಾಮರಾ, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಮತ್ತು ಹಿಂಭಾಗದ ಡಿಫಾಗರ್ ಇನ್ನೂ ಆಲ್ಫಾ+ ವೇರಿಯೆಂಟ್‌ನಲ್ಲಿ ಲಭ್ಯವಿದೆ.

ಇದನ್ನೂ ಓದಿ: ಮಾರುತಿ ಇನ್ವಿಕ್ಟೊ ಝೆಟಾ ಪ್ಲಸ್ ವರ್ಸಸ್ ಟೊಯೊಟಾ ಇನೊವಾ ಹೈಕ್ರಾಸ್ VX: ಯಾವ ಹೈಬ್ರಿಡ್ ಎಂಪಿವಿ ನೀವು ಆಯ್ಕೆ ಮಾಡಿಕೊಳ್ಳಬೇಕು?

ಬೆಲೆಗಳು ಮತ್ತು ಪ್ರತಿಸ್ಪರ್ಧಿಗಳು

ಇನ್ವಿಕ್ಟೊ ಅದರ ಬೆಲೆಯನ್ನು ರೂ.24.82 ಲಕ್ಷದಿಂದ ರೂ. 28.42 ಲಕ್ಷಗಳ ನಡುವೆ ನಿಗದಿಪಡಿಸಿದೆ (ಎಕ್ಸ್-ಶೋರೂಮ್ ದೆಹಲಿ). ಇದು ಟೊಯೋಟಾ ಇನೋವಾ ಹೈಕ್ರಾಸ್‌ಗೆ ನೇರ ಪ್ರತಿಸ್ಪರ್ಧಿಯಾಗಿದ್ದರೆ, ಕಿಯಾ ಕಾರೆನ್ಸ್ ಮತ್ತು ಟೊಯೋಟಾ ಇನೋವಾ ಕ್ರೈಸ್ಟಾಗೆ ಸಹ ಸ್ಪರ್ಧೆಯನ್ನೊಡ್ಡುತ್ತದೆ.

ಇದನ್ನೂ ಓದಿ: ಕೂಲ್‌ನೆಸ್ ಕ್ವಾಲಿಯೆಂಟ್ ಅನ್ನು ಹೆಚ್ಚಿಸುವಿಕೆ: 30 ಲಕ್ಷಕ್ಕಿಂತ ಕಡಿಮೆ ಬೆಲೆಯ ಡ್ಯುಯಲ್ ಝೋನ್ ಕ್ಲೈಮೇಟ್ ಕಂಟ್ರೋಲ್ ಹೊಂದಿರುವ ಕಾರುಗಳು

ಇನ್ನಷ್ಟು ಇಲ್ಲಿ ಓದಿ : ಇನ್ವಿಕ್ಟೊ ಆಟೋಮ್ಯಾಟಿಕ್

r
ಅವರಿಂದ ಪ್ರಕಟಿಸಲಾಗಿದೆ

rohit

  • 30 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಮಾರುತಿ ಇನ್ವಿಕ್ಟೊ

Read Full News

trendingಎಮ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ