• English
  • Login / Register

ಮಾರುತಿ ಇನ್ವಿಕ್ಟೋ Vs ಟೊಯೋಟಾ ಇನೋವಾ ಹೈಕ್ರಾಸ್ Vs ಕಿಯಾ ಕಾರೆನ್ಸ್: ಬೆಲೆ ಹೋಲಿಕೆ

ಮಾರುತಿ ಇನ್ವಿಕ್ಟೋ ಗಾಗಿ rohit ಮೂಲಕ ಜುಲೈ 07, 2023 11:44 pm ರಂದು ಪ್ರಕಟಿಸಲಾಗಿದೆ

  • 78 Views
  • ಕಾಮೆಂಟ್‌ ಅನ್ನು ಬರೆಯಿರಿ

ಕೇವಲ-ಹೈಬ್ರಿಡ್ ಮಾತ್ರವಾಗಿರುವ ಮಾರುತಿ ಇನ್ವಿಕ್ಟೋ ಎಂಪಿವಿ ಇನೋವಾ ಹೈಕ್ರಾಸ್‌ನ ಹೈಬ್ರಿಡ್ ವೇರಿಯೆಂಟ್‌ಗಳಿಗಿಂತ ಕಡಿಮೆ ಬೆಲೆಯನ್ನು ಹೊಂದಿದೆ, ಆದರೆ ಇದೊಂದು ಸ್ಥೂಲ ಚಿತ್ರಣವಾಗಿದೆ.

Maruti Invicto vs Toyota Innova Hycross vs Kia Carens

ಟೊಯೋಟಾ ಇನೋವಾ ಹೈಕ್ರಾಸ್ ಆಧಾರಿತ ಮಾರುತಿ ಇನ್ವಿಕ್ಟೋದ ಮಾರಾಟ ಪ್ರಾರಂಭವಾಗಿದೆ. ಇದು ಮಾರುತಿಯ ಹೊಸ ಪ್ರಮುಖ ಮಾಡೆಲ್ ಆಗಿದ್ದು, ಅದರ ಎಂಪಿವಿ ಲೈನ್‌ಅಪ್‌ನಲ್ಲಿ XL6 ಗಿಂತ ಮೇಲಿನ ಸ್ಥಾನದಲ್ಲಿದೆ ಹಾಗೂ ಕಾರು ತಯಾರಕರ ನೆಕ್ಸಾ ಲೈನ್ ಶೋರೂಮ್‌ಗಳ ಮೂಲಕ ಇದನ್ನು ನೀಡಲಾಗುತ್ತದೆ. ಮಾರುತಿಯು ಈ ಇನ್ವಿಕ್ಟೋ ಬೆಲೆಯನ್ನು ರೂ. 24.79 ಲಕ್ಷದಿಂದ (ಪ್ರಾಸ್ತಾವಿಕ ಎಕ್ಸ್-ಶೋರೂಮ್ ಪ್ಯಾನ್-ಇಂಡಿಯಾ) ಪ್ರಾರಂಭಿಸಿದೆ. 

 ಹಾಗಾದರೆ ಅದರ ಬೆಲೆಗಳನ್ನು ಅದರ ಎಂಪಿವಿ ಪ್ರತಿಸ್ಪರ್ಧಿಗಳು ಹಾಗೂ ಪರ್ಯಾಯಗಳಿಗೆ ಹೇಗೆ ಹೋಲಿಸಬಹುದು ಎಂಬುದನ್ನು ನೋಡೋಣ:

 ಪೆಟ್ರೋಲ್-ಆಟೋ

ಮಾರುತಿ ಇನ್ವಿಕ್ಟೋ

ಟೊಯೋಟಾ ಇನೋವಾ ಹೈಕ್ರಾಸ್

ಕಿಯಾ ಕಾರೆನ್ಸ್

 

G (7-ಸೀಟರ್)/ G (8- ಸೀಟರ್) - ರೂ 18.82 ಲಕ್ಷ/ ರೂ 18.87 ಲಕ್ಷ *

ಲಕ್ಸುರಿ ಪ್ಲಸ್ ಟರ್ಬೋ DCT (6-ಸೀಟರ್)/ ಲಕ್ಸುರಿ ಪ್ಲಸ್ ಟರ್ಬೋ DCT (7-ಸೀಟರ್)- ರೂ 18.40 ಲಕ್ಷ/ ರೂ 18.45 ಲಕ್ಷ

 

GX (7- ಸೀಟರ್)/ GX (8- ಸೀಟರ್) - ರೂ 19.67 ಲಕ್ಷ/ ರೂ 19.72 ಲಕ್ಷ

 

Zeta+ (7-ಸೀಟರ್)/ Zeta+ (8-ಸೀಟರ್) - ರೂ 24.79 ಲಕ್ಷ/ ರೂ 24.84 ಲಕ್ಷ

VX ಹೈಬ್ರಿಡ್ (7-ಸೀಟರ್)/ VX ಹೈಬ್ರಿಡ್ (8-ಸೀಟರ್) - ರೂ 25.30 ಲಕ್ಷ/ ರೂ 25.35 ಲಕ್ಷ

 
 

VX (O) ಹೈಬ್ರಿಡ್ (7-ಸೀಟರ್)/ VX (O) ಹೈಬ್ರಿಡ್ (8-ಸೀಟರ್) - ರೂ 27.27 ಲಕ್ಷ/ Rs 27.32 ಲಕ್ಷ

 

Alpha+ (7-ಸೀಟರ್) - ರೂ 28.42 ಲಕ್ಷ

   
 

ZX ಹೈಬ್ರಿಡ್ (7-ಸೀಟರ್) - ರೂ 29.62 ಲಕ್ಷ

 
 

ZX (O) ಹೈಬ್ರಿಡ್ (7-ಸೀಟರ್) - ರೂ 30.26 ಲಕ್ಷ

 

*ಈ G ವೇರಿಯೆಂಟ್‌ಗಳು ಫ್ಲೀಟ್ ವೇರಿಯೆಂಟ್‌ಗಳಿಗೆ ಮಾತ್ರ ಲಭ್ಯವಿದೆ

 

  • ಮಾರುತಿ ಇನ್ವಿಕ್ಟೋ ಅತ್ಯಧಿಕ ಪ್ರವೇಶ-ಪಾಯಿಂಟ್ ಬೆಲೆಯನ್ನು ಹೊಂದಿದ್ದು, ಅದು 2-ಲೀಟರ್ ಪೆಟ್ರೋಲ್ ಹೈಬ್ರಿಡ್ ಪವರ್‌ಟ್ರೇನ್‌ನೊಂದಿಗೆ ಮಾತ್ರ ಲಭ್ಯವಿರುತ್ತದೆ. ಏತನ್ಮಧ್ಯೆ ಅದರ ಡಾನರ್ ಮಾಡೆಲ್ ಆಗಿರುವ ಇನೋವಾ ಹೈಕ್ರಾಸ್ ಕೈಗೆಟಕುವ ಪ್ರವೇಶ ವೇರಿಯೆಂಟ್ ಅನ್ನು ರೂ. 5 ಲಕ್ಷ ಮಾರ್ಜಿನ್ ಬೆಲೆಯೊಂದಿಗೆ ಹೊಂದಿದೆ. ಅಂದರೆ ಇದು ಯಾವುದೇ ಎಲೆಕ್ಟ್ರಿಫಿಕೇಶನ್ ಮತ್ತು ಆಫರ್‌ಗಳಿಲ್ಲದೆ ಕಡಿಮೆ ಫೀಚರ್‌ಗಳನ್ನು ನೀಡುತ್ತದೆ.

Maruti Invicto

  •  ಅಲ್ಲದೇ, ಈ ಇನ್ವಿಕ್ಟೋವನ್ನು Zeta+ and Alpha+ ಎಂಬ ಎರಡು ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತಿದೆ. ಎರಡೂ ತಕ್ಕಮಟ್ಟಿಗೆ ಸುಸಜ್ಜಿತವಾಗಿವೆ ಮತ್ತು ಫೀಚರ್‌ಗಳ ವಿಷಯದಲ್ಲಿ ಕ್ರಮವಾಗಿ ಹೈಕ್ರಾಸ್‌ನ VX ಮತ್ತು ZX ಹೈಬ್ರಿಡ್ ವೇರಿಯೆಂಟ್‌ಗಳಿಗೆ ಹತ್ತಿರದಲ್ಲಿವೆ. ಇದಲ್ಲದೇ, ಎರಡಕ್ಕೂ ಹೋಲಿಸಿದರೆ ಮಾರುತಿ ಎಂಪಿವಿ ಹೆಚ್ಚು ಕೈಗೆಟಕುವ ಬೆಲೆಯನ್ನು ಹೊಂದಿದೆ.

  •  ಹೈಕ್ರಾಸ್ VX ಹೈಬ್ರಿಡ್‌ಗಿಂತ ಈ ಇನ್ವಿಕ್ಟೋ 49,000 ಕಡಿಮೆ ಬೆಲೆಯನ್ನು ಹೊಂದಿದ್ದರೆ ಇನ್ನೊಂದೆಡೆ, Alpha+ ವೇರಿಯೆಂಟ್ ZX ಹೈಬ್ರಿಡ್‌ಗಿಂತ ರೂ. 1.2 ಲಕ್ಷದಷ್ಟು ಕಡಿಮೆ ಬೆಲೆಯನ್ನು ಹೊಂದಿದೆ. ಮಾರುತಿ ಎಂಪಿವಿಯು ಆ ವೇರಿಯೆಂಟ್‌ಗಳಂತೆಯೇ ನಿಖರವಾದ ಫೀಚರ್‌ಗಳ ಪಟ್ಟಿಯನ್ನು ಪಡೆಯುವುದಿಲ್ಲ ಮತ್ತು ಯಾವುದೇ ಹೋಲಿಕೆಯಲ್ಲಿಯೂ ಸಹ ಕೆಲವು ಫೀಚರ್‌ಗಳು ಸೌಕರ್ಯಗಳನ್ನು ಇದು ಕಳೆದುಕೊಳ್ಳುವುದರಿಂದ ಬೆಲೆಯ ಈ ರೀತಿಯ ಅಂತರಕ್ಕೆ ಕಾರಣವಾಗಿದೆ.

Maruti Invicto hybrid powertrain

  •  ಇನ್ವಿಕ್ಟೋ ಮತ್ತು ಇನೋವಾ ಹೈಕ್ರಾಸ್‌ನ ವೇರಿಯೆಂಟ್‌ಗಳೆರಡೂ 186PS (ಸಂಯೋಜಿತ) 2-ಲೀಟರ್ ಶಕ್ತಿಶಾಲಿ-ಹೈಬ್ರಿಡ್ ಪವರ್‌ಟ್ರೇನ್ ಅನ್ನು e-CVT ಜೊತೆಗೆ ಜೋಡಿಸಲಾಗಿದೆ. ಇದು 23.34kmpl ಮೈಲೇಜ್ ಒದಗಿಸುತ್ತದೆ.

  •  ಇದರರ್ಥ, ಇನ್ವಿಕ್ಟೋ ಮತ್ತು ಇನೋವಾ ಹೈಕ್ರಾಸ್ ಗಾತ್ರ, ವಿನ್ಯಾಸ ಮತ್ತು ಕಾರ್ಯಕ್ಷಮತೆಯ ವಿಷಯದಲ್ಲಿ ಹೆಚ್ಚಿನ ವಿಭಾಗದಲ್ಲಿರುವುದರಿಂದ ಕಿಯಾ ಕಾರೆನ್ಸ್ ಈ ಪಟ್ಟಿಯಲ್ಲಿ ಅತ್ಯಂತ ಕೈಗೆಟಕುವ ಆಯ್ಕೆಯಾಗಿದೆ. ಹೊಸ 160PS ಟರ್ಬೋ-ಪೆಟ್ರೋಲ್ ಎಂಜಿನ್ ಅನ್ನು 7-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್‌ನೊಂದಿಗೆ ಜೋಡಿಸುವುದರೊಂದಿಗೆ ಅದರ ಸಂಪೂರ್ಣ ಲೋಡ್ ಮಾಡಲಾದ ವೇರಿಯೆಂಟ್‌ನಲ್ಲಿಯೂ ಸಹ ಕಿಯಾ ಎಂಪಿವಿ ಪ್ರವೇಶ ಮಟ್ಟದ ಇನ್ವಿಕ್ಟೋಗಿಂತ ರೂ. 6.3 ಲಕ್ಷ ಕಡಿಮೆ ಬೆಲೆಯನ್ನು ಹೊಂದಿದೆ.  

  •  ಈ ಪ್ರವೇಶ-ಮಟ್ಟದ ಟೊಯೋಟಾ ಇನೋವಾ ಹೈಕ್ರಾಸ್ ಅದರ ನೈಸರ್ಗಿಕ ಆ್ಯಸ್ಪಿರೇಟೆಡ್ 2-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಸಹ ರೂ. 1 ಲಕ್ಷಕ್ಕಿಂತ ಹೆಚ್ಚು ಬೆಲೆಯನ್ನು ಹೊಂದಿದೆ ಮತ್ತು ಕನಿಷ್ಠ ಫೀಚರ್ ಸೌಕರ್ಯಗಳನ್ನು ನೀಡುತ್ತದೆ. ಕೇವಲ ಹೈಕ್ರಾಸ್ G ವೇರಿಯೆಂಟ್ ಟಾಪ್-ಸ್ಪೆಕ್ ಕಾರೆನ್ಸ್‌ಗೆ ಹತ್ತಿರದಲ್ಲಿದೆ, ಆದರೆ ಟೊಯೋಟಾ ಅದನ್ನು ಫ್ಲೀಟ್ ಖರೀದಿದಾರರಿಗೆ ಮಾತ್ರ ಮಾರಾಟ ಮಾಡುತ್ತಿದೆ. 

  •  ಕಿಯಾ ಎಂಪಿವಿ ಎರಡು ಇತರ ಪವರ್‌ಟ್ರೇನ್ ಆಯ್ಕೆಗಳನ್ನು ಹೊಂದಿದೆ - 115PS 1.5 ಲೀಟರ್ ನೈಸರ್ಗಿಕ ಆ್ಯಸ್ಪಿರೇಟೆಡ್ ಪೆಟ್ರೋಲ್ ಯೂನಿಟ್ ಅತ್ಯಂತ ಕೈಗೆಟಕುವ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ ಮತ್ತು ಇನ್ನೊಂದು 115PS 1.5 ಲೀಟರ್ ಡಿಸೇಲ್ ಎಂಜಿನ್ ಆಗಿದೆ. ಕಾರೆನ್ಸ್‌ನಲ್ಲಿ ಲಭ್ಯವಿರುವ ಎಲ್ಲಾ ಎಂಜಿನ್‌ಗಳು ತಮ್ಮದೇ ಆದ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಅನ್ನು ಹೊಂದಿದೆ, ಆದರೆ ಟರ್ಬೋ-ಪೆಟ್ರೋಲ್ ಮತ್ತು ಡಿಸೇಲ್ ಎಂಜಿನ್‌ಗಳು 6-ಸ್ಪೀಡ್ iMT (ಕ್ಲಚ್ ಪೆಡಲ್ ಇಲ್ಲದ ಮ್ಯಾನ್ಯುವಲ್) ಯೊಂದಿಗೆ ಬರುತ್ತದೆ.

Toyota Innova Hycross ottoman functionality for the captain seats

  •  ಎರಡರ ಪ್ರೀಮಿಯಂ ಕೊಡುಗೆಯಾಗಿ ಇನೋವಾ ಹೈಕ್ರಾಸ್ ಮಾರುತಿಗಿಂತ ಕೆಲವು ಫೀಚರ್ ಪ್ರಯೋಜನಗಳನ್ನು ಹೊಂದಿದೆ, ಉದಾಹರಣೆಗೆ ಕ್ಯಾಪ್ಟನ್ ಸೀಟುಗಳಿಗೆ ಓಟೋಮನ್ ಕಾರ್ಯನಿರ್ವಹಣೆ, ಜೆಬಿಎಲ್ ಸೌಂಡ್ ಸಿಸ್ಟಮ್, 18-ಇಂಚಿನ ಅಲಾಯ್ ವ್ಹೀಲ್‌ಗಳು, ಮತ್ತು ಸುಧಾರಿತ ಚಾಲಕ ಸಹಾಯ ವ್ಯವಸ್ಥೆ (ADAS).

  •  ಆದಾಗ್ಯೂ, ನೀವು ಉತ್ತಮ ಹಳೆಯ ಡಿಸೇಲ್ ಎಂಪಿವಿಯ ಹುಡುಕಾಟದಲ್ಲಿದ್ದರೆ, ನೀವು ರೂ 19.38 ಲಕ್ಷದಿಂದ ರೂ 25.68 ಲಕ್ಷ (ಎಕ್ಸ್-ಶೋರೂಮ್) ಬೆಲೆಯನ್ನು ಹೊಂದಿರುವ ಟೊಯೋಟಾ ಇನೋವಾ ಕ್ರಿಸ್ಟಾವನ್ನು ಸಹ ನೋಡಬಹುದು. ಇದು ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಮಾತ್ರ ಲಭ್ಯವಿದೆ ಮತ್ತು ಇನ್ವಿಕ್ಟೋ ಹಾಗೂ ಇನೋವಾ ಹೈಕ್ರಾಸ್‌ನಲ್ಲಿ ಕಂಡುಬರುವ ಯಾವುದೇ ಪ್ರೀಮಿಯಂ ಸೌಕರ್ಯಗಳು ಇದರಲ್ಲಿ ಲಭ್ಯವಿಲ್ಲ ಎಂಬುದನ್ನು ನೆನಪಿನಲ್ಲಿಡಿ.

ಸಂಬಂಧಿತ: ಬಿಡುಗಡೆಗೆ ಮುಂಚಿತವಾಗಿ 6,000 ಬುಕ್ಕಿಂಗ್‌ಗಳನ್ನು ಕಂಡ ಮಾರುತಿ ಇನ್ವಿಕ್ಟೋ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Maruti ಇನ್ವಿಕ್ಟೊ

Read Full News

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಮ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience