• English
  • Login / Register

Maruti Nexa ಜುಲೈ 2024 ಆಫರ್‌ಗಳು ಭಾಗ 1- ರೂ. 2.5 ಲಕ್ಷದವರೆಗಿನ ರಿಯಾಯಿತಿಗಳನ್ನು ಪಡೆಯುವ ಅವಕಾಶ

ಮಾರುತಿ ಜಿಮ್ನಿ ಗಾಗಿ samarth ಮೂಲಕ ಜುಲೈ 09, 2024 08:07 pm ರಂದು ಮಾರ್ಪಡಿಸಲಾಗಿದೆ

  • 49 Views
  • ಕಾಮೆಂಟ್‌ ಅನ್ನು ಬರೆಯಿರಿ

ನೀವು ಜಿಮ್ನಿಯಲ್ಲಿ ದೊಡ್ಡ ಉಳಿತಾಯವನ್ನು ಮಾಡಬಹುದು ಮತ್ತು ಗ್ರ್ಯಾಂಡ್ ವಿಟಾರಾ ಹೆಚ್ಚಿನ ಉಳಿತಾಯ ನೀಡುವಲ್ಲಿ ಎರಡನೇ ಸ್ಥಾನದಲ್ಲಿದೆ

Maruti Nexa July 2024 Offers

  •  ಮಾರುತಿಯ ಫೈನಾನ್ಸಿಂಗ್ ಆಯ್ಕೆಯ ಮೂಲಕ ಮಾರುತಿ ಜಿಮ್ನಿ ಗರಿಷ್ಠ 2.5 ಲಕ್ಷದವರೆಗಿನ ರಿಯಾಯಿತಿಯನ್ನು ನೀಡುತ್ತದೆ.

  •  ಗ್ರ್ಯಾಂಡ್ ವಿಟಾರಾ 1.03 ಲಕ್ಷದವರೆಗಿನ ರಿಯಾಯಿತಿಯನ್ನು ಪಡೆಯುತ್ತದೆ.

  •  ಬಲೆನೊ ಮತ್ತು ಫ್ರಾಂಕ್ಸ್ ಕ್ರಮವಾಗಿ ರೂ 40,000 ಮತ್ತು ರೂ 35,000 ನಗದು ರಿಯಾಯಿತಿಯೊಂದಿಗೆ ಲಭ್ಯವಿದೆ.

  •  XL6 ಮತ್ತು ಸಿಯಾಜ್ ಎರಡರಲ್ಲೂ 20,000 ರೂಪಾಯಿಗಳ ನಗದು ರಿಯಾಯಿತಿ ಲಭ್ಯವಿದೆ.

  •  ಮಾರುತಿ ಇನ್ವಿಕ್ಟೋ ಯಾವುದೇ ರಿಯಾಯಿತಿಯನ್ನು ಪಡೆಯುವುದಿಲ್ಲ.

  •  ಈ ಕೊಡುಗೆಗಳು ಜುಲೈ 15, 2024 ರವರೆಗೆ ಮಾನ್ಯವಾಗಿರುತ್ತವೆ.

 ಮಾರುತಿ ನೆಕ್ಸಾ ಕಾರು ಖರೀದಿಸಲು ನೋಡುತ್ತಿದ್ದೀರಾ? ವಾಹನ ತಯಾರಕರು ಜುಲೈ 2024 ಕ್ಕೆ ಹೊಸ ಕೊಡುಗೆಗಳನ್ನು ನೀಡುತ್ತಿದ್ದಾರೆ. ಇನ್ವಿಕ್ಟೊ MPV ಹೊರತುಪಡಿಸಿ ಜಿಮ್ನಿ, ಗ್ರ್ಯಾಂಡ್ ವಿಟಾರಾ ಮತ್ತು ಫ್ರಾಂಕ್ಸ್‌ನಂತಹ ಹಲವಾರು ನೆಕ್ಸಾ ಮಾಡೆಲ್ ಗಳಲ್ಲಿ ನೀವು ಗಮನಾರ್ಹ ಉಳಿತಾಯವನ್ನು ಪಡೆಯಬಹುದು. ಈ ಡೀಲ್‌ಗಳು ಜುಲೈ 1 ರಿಂದ ಜುಲೈ 15 ರವರೆಗೆ ಮಾತ್ರ ಲಭ್ಯವಿರುತ್ತವೆ ಮತ್ತು ಅದರ ನಂತರ ಬದಲಾಗಬಹುದು. ಮಾದರಿ-ವಾರು ಆಫರ್ ವಿವರಗಳು ಇಲ್ಲಿವೆ:

ಬಲೆನೊ

Maruti Baleno Front

 ಆಫರ್

 ಮೊತ್ತ

 ನಗದು ರಿಯಾಯಿತಿ

 ರೂ. 40,000 ವರೆಗೆ

 ವಿನಿಮಯ ಬೋನಸ್

 ರೂ. 15,000

 ಕಾರ್ಪೊರೇಟ್ ರಿಯಾಯಿತಿ

 ರೂ. 2100

ಒಟ್ಟು ಪ್ರಯೋಜನಗಳು

 ರೂ. 57100

  •  ಮಾರುತಿ ಬಲೆನೊ AMT ಮಾಡೆಲ್ ಗಳ ಮೇಲೆ ರೂ. 40,000 ನಗದು ರಿಯಾಯಿತಿಯೊಂದಿಗೆ ಅತಿ ದೊಡ್ಡ ರಿಯಾಯಿತಿಯನ್ನು ನೀಡುತ್ತಿದೆ, ಆದರೆ ಈ ರಿಯಾಯತಿ ಮ್ಯಾನುವಲ್ ಟ್ರಾನ್ಸ್ಮಿಷನ್ ಮಾಡೆಲ್ ಗಳಿಗೆ ರೂ. 5,000 ಕಡಿಮೆಯಾಗುತ್ತದೆ.

  •  15,000 ರೂಪಾಯಿಗಳ ವಿನಿಮಯ ಬೋನಸ್ ಬದಲಿಗೆ 20,000 ರೂಪಾಯಿಗಳ ಸ್ಕ್ರ್ಯಾಪೇಜ್ ಬೋನಸ್ ಅನ್ನು ಕೂಡ ಆಯ್ಕೆ ಮಾಡಬಹುದು.

  •  ನೀವು CNG ಆಯ್ಕೆಯಲ್ಲಿ ಬಲೆನೊ ಖರೀದಿಸಲು ನೋಡುತ್ತಿದ್ದರೆ, ರೂ 25,000 ನಗದು ರಿಯಾಯಿತಿಯನ್ನು ಪಡೆಯಬಹುದು, ಆದರೆ ಎಲ್ಲಾ ಇತರ ಪ್ರಯೋಜನಗಳಲ್ಲಿ ಯಾವುದೇ ಬದಲಾವಣೆ ಇಲ್ಲ.

  •  ಬಲೆನೊ ಬೆಲೆಯು ರೂ.6.66 ಲಕ್ಷ ಮತ್ತು ರೂ. 9.83 ಲಕ್ಷದ ನಡುವೆ ಇದೆ

 ಫ್ರಾಂಕ್ಸ್

Maruti Fronx Front

 ಆಫರ್

 ಮೊತ್ತ

 ನಗದು ರಿಯಾಯಿತಿ

 ರೂ. 35,000 ವರೆಗೆ

 ವಿನಿಮಯ ಬೋನಸ್

 ರೂ. 10000

 ಒಟ್ಟು ಪ್ರಯೋಜನಗಳು

 ರೂ. 45000

  •  ನೀವು ಮಾರುತಿ ಫ್ರಾಂಕ್ಸ್‌ನ ಟರ್ಬೊ ವೇರಿಯಂಟ್ ಗಳನ್ನು ಖರೀದಿಸಲು ನೋಡುತ್ತಿದ್ದರೆ, ಅದು ರೂ 35,000 ನಗದು ರಿಯಾಯಿತಿ ಮತ್ತು ರೂ 43,000 ಮೌಲ್ಯದ ವೆಲಾಸಿಟಿ ಎಡಿಷನ್ ಆಕ್ಸೆಸರಿ ಕಿಟ್‌ನೊಂದಿಗೆ ಬರುತ್ತದೆ.

  •  ನೀವು 1.2-ಲೀಟರ್ ಪೆಟ್ರೋಲ್ ಎಂಜಿನ್ ಇರುವ ಫ್ರಾಂಕ್ಸ್ ಅನ್ನು ಆಯ್ಕೆ ಮಾಡಿಕೊಂಡರೆ, ರೂ 22,500 ನಗದು ರಿಯಾಯಿತಿಯನ್ನು ಪಡೆಯಬಹುದು. AMT ವೇರಿಯಂಟ್ ಗಳು ಹೆಚ್ಚುವರಿ ರೂ. 5,000 ನಗದು ರಿಯಾಯಿತಿಯನ್ನು ಪಡೆಯುತ್ತವೆ.

  •  ಹಾಗೆಯೇ, ಸಿಗ್ಮಾ ವೇರಿಯಂಟ್ ನಲ್ಲಿ ನೀವು ರೂ 3,060 ಮೌಲ್ಯದ ಕಾಂಪ್ಲಿಮೆಂಟರಿ ವೆಲಾಸಿಟಿ ಎಡಿಷನ್ ಕಿಟ್ ಅನ್ನು ಪಡೆಯಬಹುದು.

  •  ನೀವು ಎಕ್ಸ್‌ಚೇಂಜ್ ಬೋನಸ್ ಬದಲಿಗೆ 15,000 ರೂಪಾಯಿಗಳ ಸ್ಕ್ರ್ಯಾಪೇಜ್ ಬೋನಸ್ ಅನ್ನು ಕೂಡ ಆಯ್ಕೆ ಮಾಡಿಕೊಳ್ಳಬಹುದು.

  •  ಮಾರುತಿಯು ತನ್ನ CNG ವೇರಿಯಂಟ್ ಗಳಿಗೆ ಯಾವುದೇ ನಗದು ಪ್ರಯೋಜನವನ್ನು ನೀಡುತ್ತಿಲ್ಲ, ಆದರೆ, ನೀವು 10,000 ರೂಪಾಯಿಗಳ ವಿನಿಮಯ ಬೋನಸ್ ಅಥವಾ 15,000 ರೂಪಾಯಿಗಳ ಸ್ಕ್ರ್ಯಾಪೇಜ್ ಬೋನಸ್ ನಡುವೆ ಆಯ್ಕೆ ಮಾಡಬಹುದು.

  •  ಫ್ರಾಂಕ್ಸ್‌ನ ಬೆಲೆಯು ರೂ 7.52 ಲಕ್ಷ ಮತ್ತು ರೂ 12.88 ಲಕ್ಷದ ನಡುವೆ ಇದೆ.

 ಗಮನಿಸಿ: ವೆಲಾಸಿಟಿ ಎಡಿಷನ್ ಕಿಟ್ ನ ನಿಜವಾದ ಬೆಲೆಯು 17,300, ಆದರೆ ಈ ಅವಧಿಯಲ್ಲಿ ಡೆಲ್ಟಾ/ಡೆಲ್ಟಾ+ ಗಾಗಿ 12,700 ರೂಪಾಯಿಗಳ ರಿಯಾಯಿತಿ ದರದಲ್ಲಿ ಇದನ್ನು ಖರೀದಿಸಬಹುದು

 ಗ್ರ್ಯಾಂಡ್ ವಿಟಾರಾ

Maruti Grand Vitara Review

 ಆಫರ್

ಮೊತ್ತ

 ನಗದು ರಿಯಾಯಿತಿ

 ರೂ. 50,000 ವರೆಗೆ

 ವಿನಿಮಯ ಬೋನಸ್

 ರೂ. 50000

 ಕಾರ್ಪೊರೇಟ್ ರಿಯಾಯಿತಿ

 ರೂ. 3100

 ಒಟ್ಟು ಪ್ರಯೋಜನಗಳು

 ರೂ. 1.03 ಲಕ್ಷ

  •  ಮೇಲೆ ತಿಳಿಸಿದ ಉಳಿತಾಯವು ಮಾರುತಿ ಗ್ರ್ಯಾಂಡ್ ವಿಟಾರಾದ ಸ್ಟ್ರಾಂಗ್-ಹೈಬ್ರಿಡ್ ವೇರಿಯಂಟ್ ಗಳಿಗೆ ಮಾತ್ರ ಅನ್ವಯಿಸುತ್ತದೆ, ಮತ್ತು ಇದು 5 ವರ್ಷಗಳ ವಾರಂಟಿಯೊಂದಿಗೆ ಬರುತ್ತದೆ.

  •  ನೀವು ಸ್ಟ್ರಾಂಗ್ ಹೈಬ್ರಿಡ್ ವೇರಿಯಂಟ್ ಗಳಲ್ಲಿ ರೂ 50,000 ಎಕ್ಸ್ಚೇಂಜ್ ಬೋನಸ್ ಬದಲಿಗೆ ರೂ 55,000 ಸ್ಕ್ರ್ಯಾಪೇಜ್ ಬೋನಸ್ ಅನ್ನು ಕೂಡ ಪಡೆಯಬಹುದು.

  • ಮಾರುತಿಯು SUVಯ ಬೇಸ್-ಸ್ಪೆಕ್ ಸಿಗ್ಮಾ ವೇರಿಯಂಟ್ ನಲ್ಲಿ ರೂ. 30,000 ನಗದು ರಿಯಾಯಿತಿ, ರೂ. 20,000 ವಿನಿಮಯ ಬೋನಸ್, ಎಕ್ಸ್‌ಚೇಂಜ್ ಬೋನಸ್ ಬದಲಿಗೆ ರೂ. 25,000 ಆಪ್ಷನಲ್ ಸ್ಕ್ರ್ಯಾಪೇಜ್ ಬೋನಸ್ ಮತ್ತು ರೂ. 3,100 ರ ಕಾರ್ಪೊರೇಟ್ ರಿಯಾಯಿತಿಯನ್ನು ನೀಡುತ್ತಿದೆ.

  • SUV ಯ CNG ವೇರಿಯಂಟ್ ಗಳಲ್ಲಿ ಖರೀದಿದಾರರು 10,000 ರೂಪಾಯಿಗಳ ನಗದು ರಿಯಾಯಿತಿಯನ್ನು ಪಡೆಯಬಹುದು. ವಿನಿಮಯ ಬೋನಸ್, ಸ್ಕ್ರ್ಯಾಪೇಜ್ ಬೋನಸ್ ಮತ್ತು ಕಾರ್ಪೊರೇಟ್ ರಿಯಾಯಿತಿಯು ಯಾವುದೇ ಬದಲಾವಣೆ ಇಲ್ಲದೆ ಮೇಲಿನಂತೆಯೇ ಇರುತ್ತದೆ.

  • ಗ್ರಾಂಡ್ ವಿಟಾರಾದ ಡೆಲ್ಟಾ, ಝೀಟಾ ಮತ್ತು ಆಲ್ಫಾ ವೇರಿಯಂಟ್ ಗಳು ರೂ 30,000 ನಗದು ರಿಯಾಯಿತಿ ಮತ್ತು ವಿನಿಮಯ ಬೋನಸ್ ಅನ್ನು ಪಡೆಯುತ್ತದೆ. ಈ ವೇರಿಯಂಟ್ ಗಳಿಗೆ ಸ್ಕ್ರ್ಯಾಪೇಜ್ ಬೋನಸ್ ರೂ.10,000 ಗಳಷ್ಟು ಹೆಚ್ಚಾಗುತ್ತದೆ, ಆದರೆ ಕಾರ್ಪೊರೇಟ್ ರಿಯಾಯಿತಿಯಲ್ಲಿ ಯಾವುದೇ ಬದಲಾವಣೆಗಳಿಲ್ಲ.

  •  ಗ್ರ್ಯಾಂಡ್ ವಿಟಾರಾ ಬೆಲೆಯು 11 ಲಕ್ಷದಿಂದ 19.93 ಲಕ್ಷದವರೆಗೆ ಇದೆ.

 ಜಿಮ್ನಿ

Maruti Jimny

 ಆಫರ್

 ಮೊತ್ತ

 ನಗದು ರಿಯಾಯಿತಿ

 ರೂ. 2.5 ಲಕ್ಷದವರೆಗೆ

 ಒಟ್ಟು ಪ್ರಯೋಜನಗಳು

 ರೂ. 2.5 ಲಕ್ಷ

  •  ಮಾರುತಿ ಸುಜುಕಿ ಸ್ಮಾರ್ಟ್ ಫೈನಾನ್ಸ್ (MSSF) ಆಯ್ಕೆಯನ್ನು ಉಪಯೋಗಿಸದಿದ್ದರೆ ಮಾರುತಿ ಜಿಮ್ನಿಯ ಎಲ್ಲಾ ವೇರಿಯಂಟ್ ಗಳಲ್ಲಿ ರೂ 1 ಲಕ್ಷದವರೆಗಿನ ಪ್ರಯೋಜನಗಳನ್ನು ನೀಡಲಾಗುತ್ತಿದೆ.
  •  ಗ್ರಾಹಕರು ತಮ್ಮ SUV ಗೆ MSSF ಅನ್ನು ಆಯ್ಕೆ ಮಾಡಿಕೊಂಡರೆ, ಝೀಟಾ ವೇರಿಯಂಟ್ ಮೇಲೆ ಮೇಲೆ ರೂ. 2 ಲಕ್ಷ ರಿಯಾಯಿತಿ ಮತ್ತು ಆಲ್ಫಾ ವೇರಿಯಂಟ್ ಮೇಲೆ ರೂ. 2.5 ಲಕ್ಷದವರೆಗೆ ರಿಯಾಯಿತಿ ಪಡೆಯಬಹುದು.
  •  ಮಾರುತಿ ಇಲ್ಲಿ ಯಾವುದೇ ವಿನಿಮಯ ಬೋನಸ್, ಕಾರ್ಪೊರೇಟ್ ರಿಯಾಯಿತಿ ಅಥವಾ ಸ್ಕ್ರ್ಯಾಪೇಜ್ ಬೋನಸ್‌ ಅನ್ನು ನೀಡುತ್ತಿಲ್ಲ
  •  ಜಿಮ್ನಿಯ ಬೆಲೆಯು ರೂ.12.74 ಲಕ್ಷದಿಂದ ರೂ.14.79 ಲಕ್ಷದ ನಡುವೆ ಇದೆ.

 XL6

 ಆಫರ್

 ಮೊತ್ತ

 ನಗದು ರಿಯಾಯಿತಿ

 ರೂ. 20,000 ವರೆಗೆ

 ವಿನಿಮಯ ಬೋನಸ್

 ರೂ. 20,000 ವರೆಗೆ

 ಒಟ್ಟು ಪ್ರಯೋಜನಗಳು

 ರೂ. 40000

  •  ಮಾರುತಿ XL6 ಪೆಟ್ರೋಲ್ ವೇರಿಯಂಟ್ ಗಳು ಮೇಲೆ ತಿಳಿಸಿದ ರಿಯಾಯಿತಿಗಳೊಂದಿಗೆ ಲಭ್ಯವಿದೆ, ಜೊತೆಗೆ ನೀವು ವಿನಿಮಯ ಬೋನಸ್ ಬದಲಿಗೆ ಸ್ಕ್ರ್ಯಾಪೇಜ್ ಪ್ರಯೋಜನವನ್ನು ಆಯ್ಕೆ ಮಾಡಿಕೊಂಡರೆ ರೂ 25,000 ಬೋನಸ್ ಅನ್ನು ಕೂಡ ಪಡೆಯಬಹುದು.

  •  CNG ವೇರಿಯಂಟ್ ರೂ 15,000 ನಗದು ರಿಯಾಯಿತಿಯನ್ನು ಪಡೆಯುತ್ತದೆ. ವಿನಿಮಯ ಮತ್ತು ಸ್ಕ್ರ್ಯಾಪೇಜ್ ಬೋನಸ್ ಕ್ರಮವಾಗಿ ರೂ 10,000 ಮತ್ತು 15,000 ರಷ್ಟು ಕಡಿಮೆಯಾಗುತ್ತದೆ (ನೀವು ಎರಡು ಬೋನಸ್‌ಗಳಲ್ಲಿ ಒಂದನ್ನು ಮಾತ್ರ ಆಯ್ಕೆ ಮಾಡಬಹುದು).

  •  ಮಾರುತಿ XL6 ಬೆಲೆಯು 11.61 ಲಕ್ಷ ಮತ್ತು 14.61 ಲಕ್ಷದ ನಡುವೆ ಇದೆ

 ಸಿಯಾಜ್

 ಆಫರ್

 ಮೊತ್ತ

 ನಗದು ರಿಯಾಯಿತಿ

 ರೂ. 20,000 ವರೆಗೆ

 ವಿನಿಮಯ ಬೋನಸ್

 ರೂ. 25000

 ಕಾರ್ಪೊರೇಟ್ ರಿಯಾಯಿತಿ

 ರೂ. 3000

 ಒಟ್ಟು ಪ್ರಯೋಜನಗಳು

 ರೂ. 48000

  •  ನೀವು ಮಾರುತಿ ಸಿಯಾಜ್‌ನ ಎಲ್ಲಾ ವೇರಿಯಂಟ್ ಗಳಲ್ಲಿ ಮೇಲೆ ತಿಳಿಸಿದ ಉಳಿತಾಯವನ್ನು ಪಡೆಯಬಹುದು.

  •  25,000 ರೂಪಾಯಿಗಳ ವಿನಿಮಯ ಬೋನಸ್ ಬದಲಿಗೆ 30,000 ರೂಪಾಯಿಗಳ ಸ್ಕ್ರ್ಯಾಪೇಜ್ ಬೋನಸ್ ಅನ್ನು ಆರಿಸಿಕೊಳ್ಳುವ ಆಯ್ಕೆಯನ್ನು ಕೂಡ ಖರೀದಿದಾರರು ಪಡೆಯುತ್ತಾರೆ.

  •  ಮಾರುತಿ ತನ್ನ ಕಾಂಪ್ಯಾಕ್ಟ್ ಸೆಡಾನ್ ಬೆಲೆಯನ್ನು 9.40 ಲಕ್ಷ ಮತ್ತು 12.29 ಲಕ್ಷಗಳ ನಡುವೆ ಇರಿಸಿದೆ.

 ಇಗ್ನಿಸ್

Maruti Ignis

 ಆಫರ್

 ಮೊತ್ತ

 ನಗದು ರಿಯಾಯಿತಿ

 ರೂ. 40,000 ವರೆಗೆ

 ವಿನಿಮಯ ಬೋನಸ್

 ರೂ. 15000

 ಒಟ್ಟು ಪ್ರಯೋಜನಗಳು

ರೂ. 55000

  •  ಮೇಲೆ ತಿಳಿಸಿದ ಆಫರ್‌ಗಳು ಮಾರುತಿ ಇಗ್ನಿಸ್‌ನ ಎಲ್ಲಾ AMT ವೇರಿಯಂಟ್ ಗಳಲ್ಲಿ ಲಭ್ಯವಿದೆ.

  •  ಮಾರುತಿ ಇಗ್ನಿಸ್‌ನ MT ವೇರಿಯಂಟ್ ಗಳು ರೂ 35,000 ನಗದು ರಿಯಾಯಿತಿಯನ್ನು ಪಡೆಯುತ್ತವೆ ಆದರೆ ಇತರ ರಿಯಾಯಿತಿಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ.

  •  ನೀವು 15,000 ರೂಪಾಯಿಗಳ ವಿನಿಮಯ ಬೋನಸ್ ಅಥವಾ 20,000 ರೂಪಾಯಿಗಳ ಸ್ಕ್ರ್ಯಾಪೇಜ್ ಬೋನಸ್‌ ನಡುವೆ ಆಯ್ಕೆ ಮಾಡಿಕೊಳ್ಳಬಹುದು.

  •  ಮಾರುತಿಯು ತನ್ನ ಇಗ್ನಿಸ್‌ನ ಬೆಲೆಯನ್ನು 5.84 ಲಕ್ಷ ಮತ್ತು 8.06 ಲಕ್ಷ ನಡುವೆ ಇರಿಸಿದೆ.

ಗಮನಿಸಿ:

  •  ಕಸ್ಟಮರ್ ಅರ್ಹತೆಯ ಆಧಾರದ ಮೇಲೆ ಕಾರ್ಪೊರೇಟ್ ಕೊಡುಗೆಗಳು ಬದಲಾಗಬಹುದು.

  •  ರಾಜ್ಯ ಮತ್ತು ನಗರವನ್ನು ಅವಲಂಬಿಸಿ ಪ್ರಯೋಜನಗಳು ಬದಲಾಗಬಹುದು, ಆದ್ದರಿಂದ ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಿಮ್ಮ ಹತ್ತಿರದ ಮಾರುತಿ ನೆಕ್ಸಾ ಡೀಲರ್‌ಶಿಪ್ ಅನ್ನು ಸಂಪರ್ಕಿಸಿ.

  •  ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ದೆಹಲಿ ಬೆಲೆಯಾಗಿದೆ.

 ಇತ್ತೀಚಿನ ಆಟೋಮೋಟಿವ್ ಅಪ್ಡೇಟ್ ಗಳಿಗಾಗಿ ಕಾರ್ದೇಖೋ ಅವರ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ

 ಇನ್ನಷ್ಟು ಓದಿ: ಮಾರುತಿ ಜಿಮ್ನಿ ಆನ್ ರೋಡ್ ಬೆಲೆ

was this article helpful ?

Write your Comment on Maruti ಜಿಮ್ನಿ

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
  • ಟಾಟಾ ಸಿಯೆರಾ
    ಟಾಟಾ ಸಿಯೆರಾ
    Rs.10.50 ಲಕ್ಷಅಂದಾಜು ದಾರ
    ಸೆಪಟೆಂಬರ್, 2025: ನಿರೀಕ್ಷಿತ ಲಾಂಚ್‌
  • ಕಿಯಾ syros
    ಕಿಯಾ syros
    Rs.9.70 - 16.50 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • ಬಿವೈಡಿ sealion 7
    ಬಿವೈಡಿ sealion 7
    Rs.45 - 49 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • M ಜಿ Majestor
    M ಜಿ Majestor
    Rs.46 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • ನಿಸ್ಸಾನ್ ಪ್ಯಾಟ್ರೋಲ್
    ನಿಸ್ಸಾನ್ ಪ್ಯಾಟ್ರೋಲ್
    Rs.2 ಸಿಆರ್ಅಂದಾಜು ದಾರ
    ಅಕ್ೋಬರ್, 2025: ನಿರೀಕ್ಷಿತ ಲಾಂಚ್‌
×
We need your ನಗರ to customize your experience