• English
    • Login / Register

    ಫಿಲಿಪೈನ್ಸ್‌ನಲ್ಲಿ ಮೈಲ್ಡ್‌ ಹೈಬ್ರಿಡ್ ಪವರ್‌ಟ್ರೇನ್ ಮತ್ತು ಸಿವಿಟಿ ಗೇರ್‌ಬಾಕ್ಸ್‌ನೊಂದಿಗೆ Maruti Suzuki Dzire ಬಿಡುಗಡೆ

    ಏಪ್ರಿಲ್ 16, 2025 09:46 pm ರಂದು dipan ಮೂಲಕ ಪ್ರಕಟಿಸಲಾಗಿದೆ

    36 Views
    • ಕಾಮೆಂಟ್‌ ಅನ್ನು ಬರೆಯಿರಿ

    ಇದು ಹೆಚ್ಚು ಉತ್ತಮವಾದ ಪವರ್‌ಟ್ರೇನ್ ಅನ್ನು ಪಡೆದರೂ, ಫಿಲಿಪೈನ್-ಸ್ಪೆಕ್ ಮೊಡೆಲ್‌ 360-ಡಿಗ್ರಿ ಕ್ಯಾಮೆರಾ, ಸಿಂಗಲ್-ಪೇನ್ ಸನ್‌ರೂಫ್ ಮತ್ತು ವೈರ್‌ಲೆಸ್ ಫೋನ್ ಚಾರ್ಜರ್‌ನಂತಹ ಕೆಲವು ಉತ್ತಮ ಫೀಚರ್‌ಗಳನ್ನು ಕಳೆದುಕೊಳ್ಳುತ್ತದೆ

    Maruti Suzuki Dzire launched in Philippines

    • ಫಿಲಿಪೈನ್-ಸ್ಪೆಕ್ ಡಿಜೈರ್ ಬೆಲೆ PHP 920,000 ಮತ್ತು PHP 998,000 (13.87 ಲಕ್ಷ ರೂ.ನಿಂದ 15.04 ಲಕ್ಷ ರೂ.: ಫಿಲಿಪೈನ್ ಪೆಸೊದಿಂದ ಅಂದಾಜು ಪರಿವರ್ತನೆ) ನಡುವೆ ಇದೆ.

    • ಇದು 1.2-ಲೀಟರ್ ಮೂರು-ಸಿಲಿಂಡರ್ ಪೆಟ್ರೋಲ್ ಎಂಜಿನ್ (82 ಪಿಎಸ್‌/112 ಎನ್‌ಎಮ್‌) ಅನ್ನು ಮೈಲ್ಡ್‌-ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಪಡೆಯುತ್ತದೆ, ಇದನ್ನು CVT ಆಯ್ಕೆಯೊಂದಿಗೆ ಜೋಡಿಸಲಾಗಿದೆ.

    • ಇದರ ಎಕ್ಸ್‌ಟೀರಿಯರ್‌ ವಿನ್ಯಾಸವು ಟೈಲ್‌ಗೇಟ್‌ನಲ್ಲಿರುವ 'ಹೈಬ್ರಿಡ್' ಬ್ಯಾಡ್ಜ್ ಅನ್ನು ಹೊರತುಪಡಿಸಿ ಭಾರತ-ಸ್ಪೆಕ್ ಡಿಜೈರ್‌ಗೆ ಹೋಲುತ್ತದೆ.

    • LHD ದೃಷ್ಟಿಕೋನವನ್ನು ಹೊರತುಪಡಿಸಿ, ಇಂಟೀರಿಯರ್‌ ವಿನ್ಯಾಸವು ಡ್ಯುಯಲ್-ಟೋನ್ ಕಪ್ಪು ಮತ್ತು ಬೀಜ್ ಥೀಮ್ ಮತ್ತು  ಫ್ಲೋಟಿಂಗ್‌ ಟಚ್‌ಸ್ಕ್ರೀನ್‌ನೊಂದಿಗೆ ಒಂದೇ ಆಗಿರುತ್ತದೆ.

    • ಫೀಚರ್‌ಗಳಲ್ಲಿ 9-ಇಂಚಿನ ಟಚ್‌ಸ್ಕ್ರೀನ್, 6 ಸ್ಪೀಕರ್‌ಗಳು ಮತ್ತು ಪುಶ್-ಬಟನ್ ಸ್ಟಾರ್ಟ್/ಸ್ಟಾಪ್ ಸೇರಿವೆ.

    • ಸುರಕ್ಷತಾ ಸೂಟ್‌ನಲ್ಲಿ 6 ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್ ಆಗಿ), ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ಸೇರಿವೆ.

     ಮಾರುತಿ ಡಿಜೈರ್ ಅನ್ನು ಭಾರತದಲ್ಲಿ 2024ರ ನವೆಂಬರ್‌ನಲ್ಲಿ ಆಪ್‌ಡೇಟ್‌ ಮಾಡಲಾಯಿತು, ಇದು ಹೊಸ 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಮತ್ತು ಅದರ ಮೂಲ ಕಾರು ಮಾರುತಿ ಸ್ವಿಫ್ಟ್‌ಗಿಂತ ವಿಭಿನ್ನವಾಗಿ ಕಾಣುವ ವಿನ್ಯಾಸವನ್ನು ಒಳಗೊಂಡಿತ್ತು. ಈಗ, ಈ ಆಪ್‌ಡೇಟ್‌ ಮಾಡಲಾದ ಸಬ್-4ಎಮ್‌ ಸೆಡಾನ್ ಅನ್ನು ಫಿಲಿಪೈನ್ಸ್‌ನಲ್ಲಿ ಮೈಲ್ಡ್‌-ಹೈಬ್ರಿಡ್ ಪೆಟ್ರೋಲ್ ಎಂಜಿನ್‌ನೊಂದಿಗೆ ಹೆಚ್ಚು ಅತ್ಯಾಧುನಿಕ ಸಿವಿಟಿ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಬಿಡುಗಡೆ ಮಾಡಲಾಗಿದೆ. ಹಾಗೆಯೇ, ಇದು ಭಾರತ-ಸ್ಪೆಕ್ ಡಿಜೈರ್‌ನೊಂದಿಗೆ ನೀಡಲಾಗುವ ಕೆಲವು ಸೌಕರ್ಯ ಮತ್ತು ಅನುಕೂಲತೆ ಮತ್ತು ಸುರಕ್ಷತಾ ಫೀಚರ್‌ಗಳನ್ನು ಸಹ ಕಳೆದುಕೊಳ್ಳುತ್ತದೆ. ಬೆಲೆಗಳಿಂದ ಪ್ರಾರಂಭಿಸಿ, ಭಾರತ-ಸ್ಪೆಕ್ ಮತ್ತು ಫಿಲಿಪೈನ್-ಸ್ಪೆಕ್ ಡಿಜೈರ್ ಎರಡರಲ್ಲೂ ಹೋಲುವ ಮತ್ತು ವಿಭಿನ್ನವಾದ ಅಂಶಗಳನ್ನು ನೋಡೋಣ.

    ಬೆಲೆಗಳು

    Philippine-spec Suzuki Dzire Hybrid front

    ಫಿಲಿಪೈನ್-ಸ್ಪೆಕ್ ಸುಜುಕಿ ಡಿಜೈರ್

    (ಫಿಲಿಪೈನ್ ಪೆಸೊದಿಂದ ಅಂದಾಜು ಪರಿವರ್ತನೆ)

    ಇಂಡಿಯಾ-ಸ್ಪೆಕ್ ಮಾರುತಿ ಡಿಜೈರ್

    PHP 920,000 ರಿಂದ PHP 998,000

    (13.87 ಲಕ್ಷ ರೂ.ನಿಂದ 15.04 ಲಕ್ಷ ರೂ.)

    6.84 ಲಕ್ಷ ರೂ. ನಿಂದ 10.19 ಲಕ್ಷ ರೂ.

    ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಆಗಿದೆ

    ಫಿಲಿಪೈನ್-ಸ್ಪೆಕ್ ಸುಜುಕಿ ಡಿಜೈರ್‌ನ ಆರಂಭಿಕ ಬೆಲೆ ಭಾರತ-ಸ್ಪೆಕ್ ಮಾರುತಿ ಡಿಜೈರ್‌ಗಿಂತ 7 ಲಕ್ಷ ರೂ.ಗಳಷ್ಟು ಹೆಚ್ಚು ದುಬಾರಿಯಾಗಿದೆ ಎಂದು ಕೋಷ್ಟಕವು ಸೂಚಿಸುತ್ತದೆ. ಸಂಪೂರ್ಣವಾಗಿ ಲೋಡ್ ಮಾಡಲಾದ ವೇರಿಯೆಂಟ್‌ಗಳು 4.5 ಲಕ್ಷ ರೂ.ಗಳಿಗಿಂತ ಹೆಚ್ಚಿನ ಬೆಲೆ ವ್ಯತ್ಯಾಸವನ್ನು ಹೊಂದಿವೆ.

    ಇಂಡಿಯಾ-ಸ್ಪೆಕ್ ಡಿಜೈರ್‌ಗಿಂತ ಏನು ಭಿನ್ನವಾಗಿದೆ?

    Philippine-spec Suzuki Dzire Hybrid front

    ಭಾರತ-ಸ್ಪೆಕ್ ಮತ್ತು ಫಿಲಿಪೈನ್ಸ್-ಸ್ಪೆಕ್ ಡಿಜೈರ್ ನಡುವಿನ ದೊಡ್ಡ ವ್ಯತ್ಯಾಸವೆಂದರೆ, ಮೈಲ್ಡ್‌-ಹೈಬ್ರಿಡ್ ತಂತ್ರಜ್ಞಾನವನ್ನು ಹೊಂದಿದ್ದು, ಅದರ ಮೂರು-ಸಿಲಿಂಡರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಜೋಡಿಯಾಗಿದೆ. ನಾವು ಇಲ್ಲಿ ಪಡೆಯುವ AMT ಆಯ್ಕೆಗೆ ಹೋಲಿಸಿದರೆ ಇದು ಹೆಚ್ಚು ಅತ್ಯಾಧುನಿಕ CVT ಆಯ್ಕೆಯನ್ನು ಪಡೆಯುತ್ತದೆ. ಭಾರತ-ಸ್ಪೆಕ್ ಮಾದರಿಯ ವಿರುದ್ಧ ಇದು ಹೇಗೆ ಸ್ಪರ್ಧಿಸುತ್ತದೆ ಎಂಬುದು ಇಲ್ಲಿದೆ:

    ವಿಶೇಷಣಗಳು

    ಫಿಲಿಪೈನ್-ಸ್ಪೆಕ್ ಸುಜುಕಿ ಡಿಜೈರ್

    ಭಾರತ-ಸ್ಪೆಕ್ ಮಾರುತಿ ಡಿಜೈರ್

    ಎಂಜಿನ್‌

    1.2-ಲೀಟರ್ 3-ಸಿಲಿಂಡರ್ ಹೈಬ್ರಿಡ್ ಪೆಟ್ರೋಲ್ ಎಂಜಿನ್

    1.2-ಲೀಟರ್ 3-ಸಿಲಿಂಡರ್ ಪೆಟ್ರೋಲ್ ಎಂಜಿನ್

    1.2-ಲೀಟರ್ 3-ಸಿಲಿಂಡರ್ ಪೆಟ್ರೋಲ್+ಸಿಎನ್‌ಜಿ ಆಯ್ಕೆ

    ಪವರ್‌

    82 ಪಿಎಸ್‌

    82 ಪಿಎಸ್‌

    70 ಪಿಎಸ್‌

    ಟಾರ್ಕ್‌

    112 ಎನ್‌ಎಮ್‌

    112 ಎನ್‌ಎಮ್‌

    102 ಎನ್‌ಎಮ್‌ 

    ಟ್ರಾನ್ಸ್‌ಮಿಷನ್‌*

    CVT

    5-ಸ್ಪೀಡ್ ಮ್ಯಾನ್ಯುವಲ್‌ / 5-ಸ್ಪೀಡ್ AMT

    5-ಸ್ಪೀಡ್ ಮ್ಯಾನ್ಯುವಲ್‌

    ^CVT = ಕಂಟಿನ್ಯೂಸ್ಲಿ ವೇರಿಯೆಬಲ್‌ ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್‌;

     AMT = ಆಟೋಮೆಟೆಡ್‌ ಮ್ಯಾನ್ಯುವಲ್‌ ಟ್ರಾನ್ಸ್‌ಮಿಷನ್‌

     

    was this article helpful ?

    Write your Comment on Maruti ಡಿಜೈರ್

    Similar cars to compare & consider

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    ಟ್ರೆಂಡಿಂಗ್ ಸೆಡಾನ್‌ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience