ಮಾರುತಿ ಸುಜುಕಿ S-ಕ್ರಾಸ್ ಫೇಸ್ ಲಿಫ್ಟ್ ಅನ್ನು ಬಿಡುಗಡೆ ಮಾಡಿದೆ, ಬೆಲೆ ಶ್ರೇಣಿ Rs 8.49 ಲಕ್ಷ
ಮಾರುತಿ ಎಸ್.ಕ್ರಾಸ್ 2017-2020 ಗಾಗಿ jagdev ಮೂಲಕ ಏಪ್ರಿಲ್ 22, 2019 12:14 pm ರಂದು ಪ ್ರಕಟಿಸಲಾಗಿದೆ
- 13 Views
- 2 ಕಾಮೆಂಟ್ಗಳು
- ಕಾಮೆಂಟ್ ಅನ್ನು ಬರೆಯಿರಿ
ಮಾರುತಿ ಸುಜುಕಿ S- ಕ್ರಾಸ್ ಫೇಸ್ ಲಿಫ್ಟ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ, ಇದರ ಬೆಲೆ ರೊ 8.49 lakh ದಿಂದ ಪ್ರಾರಂಭವಾಗುತ್ತದೆ. ಬೇಸ್ ವೇರಿಯೆಂಟ್ ನ ಬೆಲೆಯು Rs 43,000 ನಷ್ಟು ಹೆಚ್ಚಿದೆ, ಇದಕ್ಕೆ mild-hybrid (SHVS) tech ಅನ್ನು 1.3-litre ಡೀಸೆಲ್ ಎಂಜಿನ್ ನಲ್ಲಿ ಅಳವಡಿಸಿದ್ದು ಕಾರಣವಾಗಿದೆ. ಎಂಜಿನ್ ನ ಸ್ಪೆಕ್ ಹಿಂದಿನದಂತೆಯೇ ಇದೆ ಆದರೆ ಅಧಿಕೃತ ಮೈಲೇಜ್ ( ಫ್ಯುಯೆಲ್ ಎಫಿಸೈನ್ಸಿ ಎಂದು ಹೇಳಬಹುದು ) 23.65kmpl ರಿಂದ 25.1kmpl ಗೆ ಹೆಚ್ಚಿದೆ. ಒಟ್ಟು ಭಾರವು 35kg ಹೆಚ್ಚಿದರೂ ಸಹ ಮೈಲೇಜ್ ನ ಹೆಚ್ಚಳವು ಒಂದು ಉತ್ತಮ ಬೆಳವಣಿಗೆ.
Specifications
Displacement |
1248cc |
Maximum power |
90PS@4000rpm |
Maximum torque |
200Nm@1750rpm |
Fuel efficiency |
25.1kmpl (up from 23.65 kmpl) |
Transmission |
5-speed manual |
Kerb Weight |
1240kg |
S-ಕ್ರಾಸ್ ನಾಲ್ಕು ವೇರಿಯೆಂಟ್ ಗಳಲ್ಲಿ ಲಭ್ಯವಿದೆ ಸಿಗ್ಮ, ಡೆಲ್ಟಾ, ಝೀಟಾ ಮತ್ತು ಅಲ್ಫಾ . S-ಕ್ರಾಸ್ ಫೇಸ್ ಲಿಫ್ಟ್ ನ ಬೆಲೆಯು ಕೆಳಗಿನ ಪಟ್ಟಿಯಲ್ಲಿ ಕೊಡಲಾಗಿದೆ
Variants |
S-Cross facelift price |
Old price |
Difference (new vs old) |
Sigma |
Rs 8.49 lakh |
Rs 8.06 lakh |
Rs 43,000 |
Delta |
Rs 9.39 lakh |
Rs 8.83 lakh |
Rs 56,000 |
Zeta |
Rs 9.98 lakh |
Rs 9.96 lakh |
Rs 2,000 |
Alpha |
Rs 11.29 lakh |
Rs 10.70 lakh |
Rs 59,000 |
ಝೀಟಾ ದ ವೇರಿಯೆಂಟ್ ನ ಬೆಳೆಯ ಹೆಚ್ಚಳ ಕೇವಲ Rs 2,000 ಆಗಿದ್ದು ಆಶ್ಚರ್ಯಕರವಾಗಿದೆಯಲ್ಲವೇ? ಮಾರುತಿ ಸುಜುಕಿ ಒಟ್ಟು ಬೆಲೆಯು Rs 10 lakh ನ ಒಳಗೆ ಉಳಿಯುವಂತೆ ಮಾಡಲು ಹೀಗೆ ಮಾಡಿದೆ. ಕೆಲವು ಪ್ರದೇಶಗಳಲ್ಲಿ ದೆಹಲಿ ಮತ್ತು ಹರ್ಯಾಣ ದಂತಹ ಪ್ರದೇಶ ಗಳಲ್ಲಿ Rs 10 lakh ಹೆಚ್ಚಿನ ಬೆಲೆಯುಳ್ಳ ವಾಹನಗಳಿಗೆ ರಿಜಿಸ್ಟ್ರೇಷನ್ ಚಾರ್ಜ್ ಗಳೂ ಕೂಡ ಹೆಚ್ಚಿರುತ್ತವೆ .
ನವೀಕರಣಗೊಂಡ S -ಕ್ರಾಸ್ ಐದು ಬಣ್ಣಗಳ ಆಯ್ಕೆಗಳಲ್ಲಿ ಬರುತ್ತದೆ- ನೆಕ್ಸಾ ಬ್ಲೂ, ಪರ್ಲ್ ಆರ್ಕ್ಟಿಕ್ ವೈಟ್, ಕೆಫೀನ್ ಬ್ರೌನ್, ಪ್ರೀಮಿಯಂ ಸಿಲ್ವರ್ ಮತ್ತು ಗ್ರಾನೈಟ್ ಗ್ರೇ. ನೆಕ್ಸಾ ಬ್ಲೂ ಅರ್ಬನ್ ಬ್ಲೂ ವನ್ನು ಬದಲಾಯಿಸಿದೆ.
ಬಾಹ್ಯಗಳಲ್ಲಿ ವಿಶೇಷವಾಗಿ ಮುಂದಿನ ಭಾಗದಲ್ಲಿ , ಬಹಳಷ್ಟು ಬದಲಾವಣೆಯನ್ನು ಮಾಡಲಾಗಿದೆ. S -ಕ್ರಾಸ್ ಫೇಸ್ ಲಿಫ್ಟ್ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ ಅದರಲ್ಲೂ ಅಗಲವಾದ ಕ್ರೋಮ್ ಫ್ರಂಟ್ ಗ್ರಿಲ್. ಮತ್ತು ಬದಲಾಯಿಸಲಾದ ಸ್ಟೈಲ್ ಉಳ್ಳ ಹೆಡ್ ಲ್ಯಾಂಪ್ ಗಳು. ಟಾಪ್ ವೇರಿಯೆಂಟ್ ನಲ್ಲಿ LED ಗಳು ಇದ್ದು (ಇದು ಹೊಸ ಅಳವಡಿಕೆ ) ಕೆಳಗಿನ ವೇರಿಯೆಂಟ್ ಹಾಲಲ್ಲಿ ಹ್ಯಾಲೊಜೆನ್ ಪ್ರೊಜೆಕ್ಟರ್ ಗಳನ್ನೂ ಮುಂದುವರೆಸಲಾಗಿದೆ. ಟೈಲ್ ಲ್ಯಾಂಪ್ ಗಳ ಸ್ಟೈಲ್ ಅನ್ನು ಸಹ ಬದಲಿಸಲಾಗಿದೆ.
S-ಕ್ರಾಸ್ ಫೇಸ್ ಲಿಫ್ಟ್ 20mm ಹೆಚ್ಚು ಅಗಲವಾಗಿದೆ ( ಪ್ರಿ ಫೇಸ್ ಲಿಫ್ಟ್ S -ಕ್ರಾಸ್ ಗಿಂತ ) ಇದು ಹೊಸ ಬಾಹ್ಯ ವಿನ್ಯಾಸದಿಂದ ಉಂಟಾಗಿದೆ. ಒಟ್ಟಾರೆ ಎತ್ತರ ಕೂಡ 5mm ಹೆಚ್ಚಿದೆ ಮತ್ತು ಮಾರುತಿ ಸುಜುಕಿ ಹೇಳುವಂತೆ ಇದಕ್ಕೆ ಹೊಸ ಮತ್ತು ದೊಡ್ಡದಾದ ವೀಲ್ ಗಳು ಕಾರಣವಾಗಿದೆ, ಇದರ ರೇಟಿಂಗ್ 205/60 R16 ನಿಂದ 215/60 R16, ಹೆಚ್ಚಿಸಲಾಗಿದೆ. ಈಗ ಗ್ರೌಂಡ್ ಕ್ಲಿಯರೆನ್ಸ್ ಕೂಡ 137mm ಅಳತೆ ಉಳ್ಳದ್ದಾಗಿದೆ. ಮಾರುತಿ ಸುಜುಕಿ ಯು SmartPlay infotainment system ಅನ್ನು ಕೂಡ S-ಕ್ರಾಸ್ ನವೀಕರಣ ಮಾಡಿದೆ., ಮತ್ತು ಇದು Android Auto ಕನೆಕ್ಟಿವಿಟಿ ಕೂಡ ಪಡೆದಿದೆ.
ಇದರ ಆಂತರಿಯಾಗಳಲ್ಲಿ ಹೆಚ್ಚು ಬದಲಾವಣೆಗಳನ್ನು ಮಾಡಲಾಗಿಲ್ಲ, ಮೃದುವಾದ ಡ್ಯಾಶ್ ಬೋರ್ಡ್ ಪ್ಲಾಸ್ಟಿಕ್ ಹೊರತಾಗಿ, ಮತ್ತು ಇದು ಹಿಂದಿನದಕ್ಕಿಂತಲೂ ಮೃದುವಾಗಿದೆ.
S-ಕ್ರಾಸ್ ಎಲ್ಲ ಬ್ಲಾಕ್ ಕ್ಯಾಬಿನ್ ಅನ್ನು ಮುಂದುವರೆಸಿದೆ ಮತ್ತು 60:40 ಸ್ಪ್ಲಿಟ್ ರೇರ್ ಸೀಟ್ ಕೂಡ. ಬೂಟ್ ಸ್ಪೇಸ್ ಈಗ 353 ಲೀಟರ್ ನಷ್ಟಿದೆ, ಹಿಂದಿನದರಂತೆಯೇ .
ಫೇಸ್ ಲಿಫ್ಟ್ ನೊಂದಿಗೆ ಮಾರುತಿ ಸುಜುಕಿ S-ಕ್ರಾಸ್ ಹೆಚ್ಚು ಬೆಲೆಯುಳ್ಳ ಭಾರತದ ಮಾರುತಿ ಸುಜುಕಿ ಕಾರ್ ಆಗಿ ಉಳಿದಿಲ್ಲ. ಸಿಯಾಜ್ S (ಡೀಸೆಲ್) ನ ಬೆಲೆ Rs 11.55 lak (ಎಕ್ಸ್ ಶೋ ರೂಮ್ ದೆಹಲಿ ). ಬೆಲೆಗಳನ್ನು ಹೋಲಿಸಿದಾಗ ಮಾರುತಿ ಸುಜುಕಿ ಪ್ಲಾಗ್ಶಿಪ್ ಕಾರ್ ಆಗಿದ್ದು ಮಾರಾಟದಲ್ಲಿ ಮುಂಚೂಣಿಯಲ್ಲಿದೆ . S -ಕ್ರಾಸ್ ಕ್ರಾಸ್ ಓವರ್ ಆಗಿದ್ದರೂ , ಇದನ್ನು ಆಗಾಗ್ಗೆ ಕಾಂಪ್ಯಾಕ್ಟ್ SUV ಗಳಾದ ರೆನಾಲ್ಟ್ ಡಸ್ಟರ್ ಹಾಗು ಹುಂಡೈ ಕ್ರೆಟಾ ಗಳಿಗೆ ಪ್ರತಿಸ್ಪರ್ದಿ ಎಂದು ಪರಿಗಣಿಸಲಾಗುತ್ತದೆ.