ಆಟೊ ಎಕ್ಸ್‌ಪೊ 2023 ನಲ್ಲಿ ಮಾರುತಿ ಬಿಡುಗಡೆಗೊಳಿಸಿದೆ 550 ಕಿಮೀ ಕ್ರಮಿಸುವ ಇವಿಎಕ್ಸ್ ಎಲೆಕ್ಟ್ರಿಕ್ ಕಾನ್ಸೆಪ್ಟ್
ಹೊಸ ಇವಿ-ನಿರ್ದಿಷ್ಟ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದೆ ಮತ್ತು 2025ರ ರ ವೇಳೆಗೆ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ
ಸಂಚಲನ ಮೂಡಿಸುವ ಎಲೆಕ್ಟ್ರಿಕ್ ಎಸ್‌ಯುವಿ ಇವಿಎಕ್ಸ್ ಕಾನ್ಸೆಪ್ಟ್‌ನ ಅನಾವರಣದೊಂದಿಗೆ ಮಾರುತಿಯು ಆಟೊ ಎಕ್ಸ್‌ಪೊ 2023 ಗೆ ಚಾಲನೆ ನೀಡಿದೆ. ಸುಝುಕಿಯೊಂದಿಗಿನ ಸಹಭಾಗಿತ್ವದ ಮೂಲಕ ಹೊಚ್ಚಹೊಸ ಪ್ಲಾಟ್‌ಫಾರ್ಮ್‌ನಲ್ಲಿ ಇದನ್ನು ನಿರ್ಮಿಸಲಾಗಿದೆ. ಈ ಪ್ಲಾಟ್‌ಫಾರ್ಮ್ ಮಾರುತಿಯ ಸಂಪೂರ್ಣ ಇವಿ ಶ್ರೇಣಿಯನ್ನು ಹೊರತರಲಿದೆ.
ವಿವಿಎಕ್ಸ್ ಕಾನ್ಸೆಪ್ಟ್ 60kWh ಬ್ಯಾಟರಿ ಪ್ಯಾಕ್ ಹೊಂದಿದ್ದು, ಒಂದು ಚಾರ್ಜ್‌ಗೆ 550 ಕಿಮೀ ತನಕ ಕ್ರಮಿಸುವ ಭರವಸೆ ನೀಡುತ್ತದೆ. ಇದು ಕಾಂಪಾಕ್ಟ್ ಎಲೆಕ್ಟ್ರಿಕ್ ಎಸ್‌ಯುವಿ ಆಗಿದ್ದು ದೃಢವಾದ ಮತ್ತು ಬಾಕ್ಸಿ ಡಿಸೈನ್ ಅನ್ನು ಹೊಂದಿದ್ದು, ಹೊಸ ಗ್ರ್ಯಾಂಡ್ ವಿಟಾರಾವನ್ನು ಹೋಲುತ್ತದೆ. ಪಾರ್ಶ್ವದಿಂದ, ಇವಿಎಕ್ಸ್‌ನ ಏರೋಡೈನಾಮಿಕ್ ದಕ್ಷತೆಯನ್ನು ನಾವು ನೋಡಬಹುದು. ಫ್ಲಶ್ ಡೋರ್ ಹ್ಯಾಂಡಲ್‌ಗಳೊಂದಿಗಿನ ನಯವಾದ ಪಾರ್ಶ್ವನೋಟವು ಏರೋ ಆಪ್ಟಿಮೈಸ್ಡ್ ವ್ಹೀಲ್‌ಗಳಿಂದ ವರ್ಧಿತಗೊಂಡಿದೆ. ಆಲ್-ಎಲೆಕ್ಟ್ರಿಕ್ ಪ್ಲಾಟ್‌ಫಾರ್ಮ್ ಉದ್ದನೆಯ ವ್ಹೀಲ್‌ಬೇಸ್ ಮತ್ತು ಗರಿಷ್ಠ ಕ್ಯಾಬಿನ್ ಸ್ಪೇಸ್‌ಗಾಗಿ ಕಿರಿದಾದ ಓವರ್‌ಹ್ಯಾಂಗ್‌ಗಳನ್ನು ಅನುಮತಿಸುತ್ತದೆ.
ಸುಝುಕಿಯು ಇವಿಎಕ್ಸ್‌ನ ಕಾರ್ಯನಿರ್ವಹಣೆಯ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗಪಡಿಸಿಲ್ಲ, ಆದರೆ 4x4 ಡ್ರೈವ್‌ಟ್ರೈನ್‌ಗಾಗಿ ಅವಳಿ ಮೋಟಾರ್ ಸೆಟಪ್ ಅನ್ನು ಹೊಂದಿರುತ್ತದೆ ಎಂದು ಖಚಿತಪಡಿಸಿದೆ. ಇವಿಎಕ್ಸ್ ಕಾನ್ಸೆಪ್ಟ್‌ನ ಇಂಟೀರಿಯರ್ ಸದ್ಯಕ್ಕೆ ನಿಗೂಢವಾಗಿಯೇ ಇದೆ, ಆದರೆ ತಂತ್ರಜ್ಞಾನದೊಂದಿಗೆ ಕನೆಕ್ಟ್ ಆಗಿರಲಿದೆ ಮತ್ತು ಅನೇಕ ದೊಡ್ಡ ಡಿಸ್‍ಪ್ಲೇಗಳಿರುವ ಸಾಧ್ಯತೆಯಿದೆ.
ಎಲೆಕ್ಟ್ರಿಕ್ ಎಸ್‌ಯುವಿ ಆಗಿ ಬಿಂಬಿತಗೊಂಡಿರುವ ಇವಿಎಕ್ಸ್ ಕಾನ್ಸೆಪ್ಟ್ 2025ರ ವೇಳೆಗೆ ಮಾರುಕಟ್ಟೆಗೆ ಲಗ್ಗೆಯಿಡಲಿದೆ. ಸುಝುಕಿ ಮೋಟಾರ್ ಕಾರ್ಪೊರೇಶನ್ ಭಾರತದಲ್ಲಿ ಬ್ಯಾಟರಿಗಳು ಮತ್ತು ಇವಿಗಳ ಉತ್ಪಾದನೆಗಾಗಿ ರೂ. 100 ಬಿಲಿಯನ್ ಹೂಡಿಕೆಗೆ ನಿಶ್ಚಯಿಸಿದೆ. ಇವಿಎಕ್ಸ್ ಅನ್ನು ಸ್ಥಳೀಯವಾಗಿಯೇ ಉತ್ಪಾದಿಸುವ ಸಾಧ್ಯತೆಯಿದೆ ಮತ್ತು ಕೈಗೆಟಕುವ ಕಾಂಪಾಕ್ಟ್ ಎಲೆಕ್ಟ್ರಿಕ್ ಎಸ್‌ಯುವಿ ಬೆಲೆ ರೂ.25 ಲಕ್ಷ ಇರುವ ಸಾಧ್ಯತೆಯಿದೆ ಎಂಬ ಸುಳಿವನ್ನು ಸುಝುಕಿ ನೀಡಿದೆ.
ಇದು ಟಾಟಾ ನೆಕ್ಸಾನ್ ಇವಿ ರೀತಿಯ ಎಸ್‌ಯುವಿಗಳಿಗೆ ಪ್ರೀಮಿಯಂ ಪರ್ಯಾಯವಾಗಲಿದೆ. ಹುಂಡೈ ಕೋನಾ ಎಲೆಕ್ಟ್ರಿಕ್ ಮತ್ತು ಎಂಜಿ ಝೆಡ್‌ಎಸ್ ಇವಿಗೆ ಪ್ರತಿಸ್ಪರ್ಧಿಯಾಗಲಿದೆ.