- + 7ಬಣ್ಣಗಳು
- + 38ಚಿತ್ರಗಳು
- shorts
- ವೀಡಿಯೋಸ್
ಟಾಟಾ ನೆಕ್ಸಾನ್ ಇವಿ
ಟಾಟಾ ನೆಕ್ಸಾನ್ ಇವಿ ನ ಪ್ರಮುಖ ಸ್ಪೆಕ್ಸ್
ರೇಂಜ್ | 275 - 489 km |
ಪವರ್ | 127 - 148 ಬಿಹೆಚ್ ಪಿ |
ಬ್ಯಾಟರಿ ಸಾಮರ್ಥ್ಯ | 30 - 46.08 kwh |
ಚಾರ್ಜಿಂಗ್ time ಡಿಸಿ | 40min-(10-100%)-60kw |
ಚಾರ್ಜಿಂಗ್ time ಎಸಿ | 6h 36min-(10-100%)-7.2kw |
ಬೂಟ್‌ನ ಸಾಮರ್ಥ್ಯ | 350 Litres |
- ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್
- ಹಿಂಭಾಗದ ಕ್ಯಾಮೆರಾ
- ಕೀಲಿಕೈ ಇಲ್ಲದ ನಮೂದು
- ಸ್ಬಯಂಚಾಲಿತ ಹವಾಮಾನ ನಿಯಂತ್ರಣ
- ಏರ್ ಪ್ಯೂರಿಫೈಯರ್
- voice commands
- ಪಾರ್ಕಿಂಗ್ ಸೆನ್ಸಾರ್‌ಗಳು
- ಪವರ್ ವಿಂಡೋಸ್
- advanced internet ಫೆಅತುರ್ಸ್
- ರಿಯರ್ ಏಸಿ ವೆಂಟ್ಸ್
- wireless charger
- ಆಟೋ ಡಿಮ್ಮಿಂಗ್ ಐಆರ್‌ವಿಎಮ್
- ಕ್ರುಯಸ್ ಕಂಟ್ರೋಲ್
- ಸನ್ರೂಫ್
- ಪ್ರಮುಖ ವಿಶೇಷಣಗಳು
- ಪ್ರಮುಖ ಫೀಚರ್‌ಗಳು
ನೆಕ್ಸಾನ್ ಇವಿ ಇತ್ತೀಚಿನ ಅಪ್ಡೇಟ್
ಟಾಟಾ ನೆಕ್ಸಾನ್ ಇವಿ ಕುರಿತ ಇತ್ತೀಚಿನ ಅಪ್‌ಡೇಟ್ ಏನು?
ಟಾಟಾ ನೆಕ್ಸಾನ್ ಇವಿ ಇದೀಗ ದೊಡ್ಡ ಬ್ಯಾಟರಿ ಪ್ಯಾಕ್ ಮತ್ತು ಒಂದೆರಡು ಹೊಸ ಫೀಚರ್‌ಗಳನ್ನು ಪಡೆದುಕೊಂಡಿದೆ. ಟಾಟಾ ಈ ಸಂಪೂರ್ಣ-ಎಲೆಕ್ಟ್ರಿಕ್ ಸಬ್-4ಎಮ್ ಎಸ್‌ಯುವಿಯ ರೆಡ್ ಡಾರ್ಕ್ ಎಡಿಷನ್ ಅನ್ನು ಸಹ ಬಿಡುಗಡೆ ಮಾಡಿದೆ.
ಟಾಟಾ ನೆಕ್ಸಾನ್ ಇವಿಯ ಬೆಲೆ ಎಷ್ಟು?
ಟಾಟಾ ನೆಕ್ಸಾನ್‌ನ ಎಂಟ್ರಿ-ಲೆವೆಲ್ ಕ್ರಿಯೇಟಿವ್ ಪ್ಲಸ್ ಮೀಡಿಯಂ ರೇಂಜ್ (ಎಂಆರ್) ವೇರಿಯೆಂಟ್ 12.49 ಲಕ್ಷ ರೂ.ನಿಂದ(ಪರಿಚಯಾತ್ಮಕ ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ ಮತ್ತು ಇದರ ಟಾಪ್ ಮೊಡೆಲ್ ಆಗಿರುವ ಎಂಪವರ್ಡ್ ಪ್ಲಸ್ 45 ನ ಪರಿಚಯಾತ್ಮಕ ಎಕ್ಸ್-ಶೋರೂಂ ಬೆಲೆ 16.99 ಲಕ್ಷ ರೂ.ನಷ್ಟಿದೆ. ಟಾಟಾ ವಿಸ್ತೃತ ಬ್ಯಾಟರಿ ಪ್ಯಾಕ್‌ನೊಂದಿಗೆ (45 ಕಿ.ವ್ಯಾಟ್) ಎರಡು ಹೊಸ ವೇರಿಯೆಂಟ್‌ಗಳನ್ನು ಸೇರಿಸಿದೆ, ಅವುಗಳೆಂದರೆ ಎಂಪವರ್ಡ್ ಪ್ಲಸ್ 45 ರೆಡ್ ಡಾರ್ಕ್ ಮತ್ತು ಎಂಪವರ್ಡ್ ಪ್ಲಸ್ 45.
ಟಾಟಾ ನೆಕ್ಸಾನ್ ಇವಿಯಲ್ಲಿ ಎಷ್ಟು ವೇರಿಯೆಂಟ್‌ಗಳಿವೆ ?
ಟಾಟಾ ನೆಕ್ಸಾನ್ ಇವಿ ಒಟ್ಟು 12 ವೇರಿಯೆಂಟ್‌ಗಳಲ್ಲಿ ಬರುತ್ತದೆ. ವೇರಿಯೆಂಟ್‌ಗಳನ್ನು ಕ್ರೀಯೆಟಿವ್, ಫಿಯರ್‌ಲೆಸ್ ಮತ್ತು ಎಂಪವರ್ಡ್ ಎಂದು ವರ್ಗೀಕರಿಸಲಾಗಿದೆ. ಕೊನೆಯ ಎರಡು ವೇರಿಯೆಂಟ್‌ಗಳಾದ ಎಂಪವರ್ಡ್ ಪ್ಲಸ್ ಎಲ್ಆರ್ ಡಾರ್ಕ್ ಮತ್ತು ಎಂಪವರ್ಡ್ ಪ್ಲಸ್ 45 ಹೆಚ್ಚು ರೇಂಜ್ ಮತ್ತು ಫೀಚರ್‌ಗಳನ್ನು ಹೊಂದಿದೆ.
ಟಾಟಾ ನೆಕ್ಸಾನ್ ಇವಿ ಯಾವ ಫೀಚರ್‌ಗಳನ್ನು ಪಡೆಯುತ್ತದೆ?
ಫೀಚರ್ ಕುರಿತ ದೊಡ್ಡ ಅಪ್‌ಡೇಟ್ ಏನೆಂದರೆ, ನೆಕ್ಸಾನ್ ಇವಿ ಈಗ ಪನರೋಮಿಕ್ ಸನ್‌ರೂಫ್ ಅನ್ನು ಮತ್ತು ಟಾಟಾ ನೆಕ್ಸಾನ್ ಇವಿಯಲ್ಲಿ ಹೆಚ್ಚಿನ ಕಂಫರ್ಟ್ ಮತ್ತು ಅನುಕೂಲತೆಯ ಫೀಚರ್‌ಗಳಾದ 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಜೊತೆಗೆ ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಕನೆಕ್ಟೆಡ್ ಕಾರ್ ಟೆಕ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, 9-ಸ್ಪೀಕರ್ JBL ಸೌಂಡ್ ಸಿಸ್ಟಮ್, ಪುಶ್ ಬಟನ್ ಸ್ಟಾರ್ಟ್‌ನೊಂದಿಗೆ ಕೀಲೆಸ್ ಎಂಟ್ರಿ, ಕ್ರೂಸ್ ಕಂಟ್ರೋಲ್ ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ.
ಟಾಟಾ ನೆಕ್ಸಾನ್ ಇವಿ ಎಷ್ಟು ವಿಶಾಲವಾಗಿದೆ?
ಟಾಟಾ ನೆಕ್ಸಾನ್ ಇವಿಯಲ್ಲಿ ಐದು ಜನರಿರುವ ಸರಾಸರಿ ಗಾತ್ರದ ಕುಟುಂಬವು ಪ್ರಯಾಣಿಸಬಹುದು. ಹಿಂಬದಿ ಸೀಟಿನಲ್ಲಿ ಕುಳಿತವರಿಗೆ ಮೊಣಕಾಲು ಇಡುವಲ್ಲಿ ಸಾಕಷ್ಟು ಹೆಚ್ಚಿನ ಜಾಗ ಮತ್ತು ಸೀಟ್‌ನ ಕುಶನ್ ಸಹ ಸಮರ್ಪಕವಾಗಿದೆ. ಬ್ಯಾಟರಿ ಪ್ಯಾಕ್ ಅನ್ನು ಕಾರಿನ ಕೆಳಭಾಗದಲ್ಲಿ ಇರಿಸುವುದರಿಂದ ನೀವು ಮೊಣಕಾಲುಗಳ ಮೇಲೆ ಕುಳಿತುಕೊಂಡಂತೆ ಭಾಸವಾಗುವುದು ಇದರ ಅನಾನುಕೂಲತೆಗಳಲ್ಲಿ ಒಂದಾಗಿದೆ. ಇದು ವಿಶೇಷವಾಗಿ ಲಾಂಗ್ ರೇಂಜ್ (LR) ಆವೃತ್ತಿಯಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ.
ಟಾಟಾ ನೆಕ್ಸಾನ್ ಇವಿಯು ಉತ್ತಮ ಆಕಾರವನ್ನು ಹೊಂದಿರುವ 350-ಲೀಟರ್ ಬೂಟ್‌ನೊಂದಿಗೆ ಬರುತ್ತದೆ. ಇದು ಮುಂಭಾಗದಲ್ಲಿ ಫ್ರಂಕ್ ಅನ್ನು ಕೂಡ ಪಡೆಯುತ್ತದೆ. ನೀವು ಅದರಲ್ಲಿ ನಾಲ್ಕು ಕ್ಯಾಬಿನ್ ಗಾತ್ರದ ಟ್ರಾಲಿ ಬ್ಯಾಗ್‌ಗಳನ್ನು ಇಡಬಹುದು. ಇದಲ್ಲದೆ, ಹಿಂಭಾಗದ ಸೀಟುಗಳನ್ನು 60:40 ಅನುಪಾತದಲ್ಲಿ ಮಡಚಬಹುದು, ಹಿಗಾಗಿ ಹೆಚ್ಚಿನ ಬೂಟ್ ಜಾಗ ಬೇಕಾಗುವ ಸೀಟ್‌ಗಳನ್ನು ಮಡಚಬಹುದು.
ಟಾಟಾ ನೆಕ್ಸಾನ್ ಇವಿಯಲ್ಲಿ ಯಾವ ಎಂಜಿನ್ ಮತ್ತು ಟ್ರಾನ್ಸ್‌ಮಿಷನ್ ಆಯ್ಕೆಗಳು ಲಭ್ಯವಿದೆ?
ಟಾಟಾ ನೆಕ್ಸಾನ್ ಇವಿಯನ್ನು ಮಿಡಿಯಮ್ ರೇಂಜ್ ಮತ್ತು ಲಾಂಗ್ ರೇಂಜ್ ಎಂಬ ಎರಡು ಪವರ್‌ಟ್ರೇನ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ.
-
ಮಿಡಿಯಮ್ ರೇಂಜ್(MR): ಈ ಆವೃತ್ತಿಯು 129 ಪಿಎಸ್/215 ಎನ್‌ಎಮ್ ಇ-ಮೋಟಾರ್ ಅನ್ನು ಚಾಲನೆ ಮಾಡುವ 30 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್ ಅನ್ನು ಪ್ಯಾಕ್ ಮಾಡುತ್ತದೆ. ನೀವು ವೇಗವನ್ನು ಹೆಚ್ಚಿಸಲು ಬಯಸಿದಂತೆ, ಈ ಆವೃತ್ತಿಯು 0-100 kmph ಅನ್ನು 9.2 ಸೆಕೆಂಡುಗಳಲ್ಲಿ ಮಾಡುತ್ತದೆ.
-
ಲಾಂಗ್ ರೇಂಜ್ (ಎಲ್‌ಆರ್): ಎಲೆಕ್ಟ್ರಿಕ್ ಎಸ್‌ಯುವಿಯ ಈ ಮೊಡೆಲ್ ಈಗ ಎರಡು ಬ್ಯಾಟರಿ ಪ್ಯಾಕ್‌ಗಳನ್ನು ಹೊಂದಿದೆ, ಅವುಗಳೆಂದರೆ, 40.5 ಕಿ.ವ್ಯಾಟ್ ಮತ್ತು ಹೊಸ 45 ಕಿ.ವ್ಯಾಟ್. ಎರಡೂ ಬ್ಯಾಟರಿ ಪ್ಯಾಕ್‌ಗಳು 143 ಪಿಎಸ್/215 ಎನ್‌ಎಮ್ ಔಟ್‌ಪುಟ್‌ನೊಂದಿಗೆ ಫ್ರಂಟ್-ವೀಲ್ ಡ್ರೈವ್ ಇ-ಮೋಟರ್‌ನೊಂದಿಗೆ ಬರುತ್ತವೆ. ಹೆಚ್ಚುವರಿ ಶಕ್ತಿಯಿಂದಾಗಿ, ಈ ವೇರಿಯೆಂಟ್ MR ಆವೃತ್ತಿಗಿಂತ ಸ್ವಲ್ಪ ವೇಗವಾಗಿದ್ದು, ಕೇವಲ 8.9 ಸೆಕೆಂಡುಗಳಲ್ಲಿ 100 kmph ಅನ್ನು ಮುಟ್ಟುತ್ತದೆ.
ನೆಕ್ಸಾನ್ ಇವಿ ಎಲೆಕ್ಟ್ರಿಕ್ ಕಾರ್ ಆಗಿರುವುದರಿಂದ, ಎರಡೂ ಆವೃತ್ತಿಗಳು ಸಿಂಗಲ್-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅನ್ನು ಪಡೆಯುತ್ತವೆ.
ಒಮ್ಮೆ ಫುಲ್ ಚಾರ್ಜ್ ಮಾಡಿದಾಗ ಟಾಟಾ ನೆಕ್ಸಾನ್ ಇವಿಯ ರೇಂಜ್ ಎಷ್ಟು ?
ಟಾಟಾ ನೆಕ್ಸಾನ್‌ಗಾಗಿ 30 ಕಿ.ವ್ಯಾಟ್ ಬ್ಯಾಟರಿಯ ಕ್ಲೈಮ್ ಮಾಡಲಾದ ರೇಂಜ್ ಅನ್ನು ಮಿಡ್ ರೇಂಜ್‌ಗಾಗಿ 325 ಕಿಮೀ ಎಂದು ರೇಟ್ ಮಾಡಲಾಗಿದೆ. 40.5 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್‌ಗಾಗಿ, ಕ್ಲೈಮ್ ಮಾಡಲಾದ ರೇಂಜ್ 465 ಕಿಮೀ, ಮತ್ತು 45 ಕಿ.ವ್ಯಾಟ್ ಬ್ಯಾಟರಿಗೆ ಕ್ಲೈಮ್ ಮಾಡಲಾದ ರೇಂಜ್ 489 ಕಿಮೀ. ಆಗಿದೆ. ಭಾರತೀಯ ರಸ್ತೆಯಲ್ಲಿ, MR ಆವೃತ್ತಿಯು ಸುಮಾರು 200 ಕಿ.ಮೀ ನಿಂದ 220 ಕಿ.ಮೀ ವರೆಗೆ ಸಾಗುತ್ತದೆ ಎಂದು ನೀವು ನಿರೀಕ್ಷಿಸಬಹುದು, ಆದರೆ ನೆಕ್ಸಾನ್ ಇವಿ ಎಲ್‌ಆರ್ 350 ಕಿಮೀ ನಿಂದ 370 ಕಿಮೀ ದೂರದವರೆಗೆ ತಲುಪುತ್ತದೆ. ಚಾಲನಾ ಶೈಲಿ, ಸುತ್ತುವರಿದ ತಾಪಮಾನ ಮತ್ತು ಬ್ರೇಕ್ ಶಕ್ತಿಯ ಪುನರುತ್ಪಾದನೆಯ ಮಟ್ಟವನ್ನು ಆಧರಿಸಿ ನಿಜವಾದ ನೈಜ ಪ್ರಪಂಚದ ರೇಂಜ್ ಬದಲಾಗುತ್ತದೆ ಎಂಬುದನ್ನು ನೆನಪಿನಲ್ಲಿಡಬೇಕು.
ಟಾಟಾ ನೆಕ್ಸಾನ್ ಇವಿ ಎಷ್ಟು ಸುರಕ್ಷಿತವಾಗಿದೆ?
ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಫ್ರಂಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳು, ISOFIX ಚೈಲ್ಡ್-ಸೀಟ್ ಮೌಂಟ್‌ಗಳು, ಹಿಲ್ ಹೋಲ್ಡ್ ಕಂಟ್ರೋಲ್, ಹಿಲ್ ಡಿಸೆಂಟ್ ಕಂಟ್ರೋಲ್ ಮತ್ತು ಆಟೋ ಹೋಲ್ಡ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್‌ನಂತಹ ಸುರಕ್ಷತಾ ಪ್ಯಾಕೇಜ್‌ಗಳೊಂದಿಗೆ ಟಾಟಾ ನೆಕ್ಸಾನ್ ಇವಿ ಲೋಡ್ ಆಗುತ್ತದೆ.
ಭಾರತ್ ಎನ್‌ಸಿಎಪಿಯಿಂದ ಕ್ರ್ಯಾಶ್ ಟೆಸ್ಟ್ ಮಾಡಿದ ನಂತರ ಟಾಟಾ ನೆಕ್ಸಾನ್ ಇವಿ ಪೂರ್ಣ ಫೈವ್ ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿದೆ ಎಂದು ತಿಳಿಯುವುದು ಸಮಾಧಾನಕರವಾಗಿದೆ.
ಟಾಟಾ ನೆಕ್ಸಾನ್ ಇವಿಯಲ್ಲಿ ಎಷ್ಟು ಬಣ್ಣದ ಆಯ್ಕೆಗಳಿವೆ?
ಟಾಟಾ ನೆಕ್ಸಾನ್ ಇವಿ ಏಳು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ, ಅವುಗಳೆಂದರೆ, ಡೇಟೋನಾ ಗ್ರೇ, ಪ್ರಿಸ್ಟಿನ್ ವೈಟ್, ಫ್ಲೇಮ್ ರೆಡ್, ಕ್ರಿಯೇಟಿವ್ ಓಷನ್, ಫಿಯರ್‌ಲೆಸ್ ಪರ್ಪಲ್, ಎಂಪವರ್ಡ್ ಆಕ್ಸೈಡ್ ಮತ್ತು ಓನಿಕ್ಸ್ ಬ್ಲಾಕ್.
ಕ್ರಿಯೇಟಿವ್ ಓಷನ್, ಎಂಪವರ್ಡ್ ಆಕ್ಸೈಡ್ ಮತ್ತು ಫಿಯರ್‌ಲೆಸ್ ಪರ್ಪಲ್‌ನಂತಹ ಬಣ್ಣಗಳು ವೇರಿಯೆಂಟ್‌ಗಳಿಗೆ ನಿರ್ದಿಷ್ಟವಾಗಿವೆ ಎಂಬುದನ್ನು ಗಮನಿಸಿ. ಓನಿಕ್ಸ್ ಬ್ಲ್ಯಾಕ್ ಅನ್ನು #ಡಾರ್ಕ್ ವೇರಿಯೆಂಟ್ ಆಗಿ ಮಾರಾಟ ಮಾಡಲಾಗಿದೆ ಮತ್ತು ಇದು ಟಾಪ್-ಎಂಡ್ ವೇರಿಯೆಂಟ್‌ಗಳಿಗೆ ಸೀಮಿತವಾಗಿದೆ.
ನಾವು ವಿಶೇಷವಾಗಿ ಇಷ್ಟಪಟ್ಟದ್ದು:
ಎಂಪವರ್ಡ್ ಆಕ್ಸೈಡ್: ಈ ವರ್ಣವು ಆಫ್-ವೈಟ್ ಮತ್ತು ಗ್ರೇ ನಡುವಿನ ಮಧ್ಯದ ಬಣ್ಣವಾಗಿದೆ. ಅದರಲ್ಲಿರುವ ಮುತ್ತಿನ ಚುಕ್ಕೆಗಳು ಹೆಚ್ಚುವರಿ ಹೊಳಪನ್ನು ನೀಡುತ್ತದೆ.
ಓನಿಕ್ಸ್ ಬ್ಲ್ಯಾಕ್: ನಿಮಗೆ ಸ್ಟೆಲ್ತ್ ಜೊತೆಗೆ ಸ್ಪೋರ್ಟಿ ಏನಾದರೂ ಬೇಕಾದರೆ, ಇದನ್ನು ಆಯ್ಕೆ ಮಾಡಬಹುದು. ಈ ಬಣ್ಣವನ್ನು ಆರಿಸಿಕೊಂಡರೆ ನೀವು ಸಂಪೂರ್ಣವಾಗಿ ಕಪ್ಪು ಬಣ್ಣದ ಇಂಟಿರಿಯರ್ ಅನ್ನು ಪಡೆಯುತ್ತೀರಿ ಎಂದರ್ಥ! ಅದು ತುಂಬಾ ಸೊಗಸಾಗಿ ಕಾಣುತ್ತದೆ!
ನಾವು ಟಾಟಾ ನೆಕ್ಸಾನ್ ಇವಿಯನ್ನು ಖರೀದಿಸಬಹುದೇ ?
ಉತ್ತರ ಹೌದು! ನಿಮ್ಮ ದೈನಂದಿನ ಬಳಕೆಯ ಮಿತಿಯ ಬಗ್ಗೆ ಮೊದಲೇ ಪ್ಲ್ಯಾನ್ ಆಗಿದ್ದರೆ ಮತ್ತು ಮನೆಯಲ್ಲಿ ಚಾರ್ಜರ್ ಅನ್ನು ಫಿಕ್ಸ್ ಮಾಡುವ ಆಯ್ಕೆಯನ್ನು ಹೊಂದಿದ್ದರೆ ನೀವು ಟಾಟಾ ನೆಕ್ಸಾನ್ ಇವಿಯನ್ನು ಪರಿಗಣಿಸಬಹುದು. ಚಾಲನೆಯು ಇದರ ರಿಯಲ್ ಟೈಮ್ ರೇಂಜ್‌ನಷ್ಟು ಉತ್ತಮವಾಗಿದ್ದರೆ ಪ್ರತಿ ಕಿಲೋಮೀಟರ್ ಡ್ರೈವಿಂಗ್ ವೆಚ್ಚದ ಉಳಿತಾಯವನ್ನು ಬಹುಬೇಗನೇ ಮರುಪಡೆಯಬಹುದು. ಅಲ್ಲದೆ, ನೆಕ್ಸಾನ್ ಅದರ ಬೆಲೆಗೆ ಸಾಕಷ್ಟು ಫೀಚರ್‌ಗಳನ್ನು ಪ್ಯಾಕ್ ಮಾಡುತ್ತದೆ, ಐದು ಜನರಿಗೆ ಸಾಕಷ್ಟು ಸ್ಥಳಾವಕಾಶವನ್ನು ಹೊಂದಿದೆ ಮತ್ತು ಆರಾಮದಾಯಕವಾಗಿದೆ.
ಇದಕ್ಕೆ ಪ್ರತಿಸ್ಪರ್ಧಿಗಳು ಯಾರು ?
ಮಾರುಕಟ್ಟೆಯಲ್ಲಿ ಟಾಟಾ ನೆಕ್ಸಾನ್ ಇವಿಯ ಯ ಏಕೈಕ ನೇರ ಪ್ರತಿಸ್ಪರ್ಧಿ ಎಂದರೆ ಅದು ಮಹೀಂದ್ರಾ ಎಕ್ಸ್‌ಯುವಿ400 ಇವಿ ಆಗಿದೆ, ಇದು ದೊಡ್ಡದಾಗಿದೆ ಮತ್ತು ಉತ್ತಮ ಸ್ಥಳಾವಕಾಶ ಮತ್ತು ಬೂಟ್ ಸ್ಥಳವನ್ನು ನೀಡುತ್ತದೆ. ಆದರೆ, ಮಹೀಂದ್ರಾವು ಫೀಚರ್ ಅನ್ನು ಲೋಡ್ ಮಾಡಿಲ್ಲ ಮತ್ತು ಟಾಟಾದಂತೆ ಫ್ಯೂಚರಿಸ್ಟಿಕ್ ಆಗಿ ಕಾಣುತ್ತಿಲ್ಲ. ನಿಮ್ಮ ಬಜೆಟ್ ಅನ್ನು ನೀವು ವಿಸ್ತರಿಸಬಹುದಾದರೆ, ನೀವು ಎಮ್‌ಜಿ ಜೆಡ್‌ಎಸ್ ಇವಿಯನ್ನು ಸಹ ಪರಿಗಣಿಸಬಹುದು.
ಇದೇ ಬೆಲೆಗೆ, ನೀವು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಮಾರುತಿ ಸುಜುಕಿ ಗ್ರಾಂಡ್ ವಿಟಾರಾ, ಹೋಂಡಾ ಎಲಿವೇಟ್, ವೋಕ್ಸ್‌ವ್ಯಾಗನ್ ಟೈಗುನ್, ಸ್ಕೋಡಾ ಕುಶಾಕ್ ಮತ್ತು ಎಂಜಿ ಆಸ್ಟರ್‌ನಂತಹ ಕಾಂಪ್ಯಾಕ್ಟ್ ಎಸ್‌ಯುವಿಗಳ ICE ಆವೃತ್ತಿಗಳನ್ನು ಪರಿಗಣಿಸಬಹುದು.
ನೆಕ್ಸಾನ್ ಇವಿ ಕ್ರಿಯೆಟಿವ್ ಪ್ಲಸ್ ಎಮ್‌ಆರ್(ಬೇಸ್ ಮಾಡೆಲ್)30 kwh, 275 km, 127 ಬಿಹೆಚ್ ಪಿ2 ತಿಂಗಳು ವೈಟಿಂಗ್ | ₹12.49 ಲಕ್ಷ* | ||
ನೆಕ್ಸಾನ್ ಇವಿ ಫಿಯರ್‌ಲೆಸ್ ಎಮ್‌ಆರ್30 kwh, 275 km, 127 ಬಿಹೆಚ್ ಪಿ2 ತಿಂಗಳು ವೈಟಿಂಗ್ | ₹13.29 ಲಕ್ಷ* | ||
ನೆಕ್ಸಾನ್ ಇವಿ ಫಿಯರ್‌ಲೆಸ್ ಪ್ಲಸ್ ಎಮ್‌ಆರ್30 kwh, 275 km, 127 ಬಿಹೆಚ್ ಪಿ2 ತಿಂಗಳು ವೈಟಿಂಗ್ | ₹13.79 ಲಕ್ಷ* | ||
ನೆಕ್ಸಾನ್ ಇವಿ ಕ್ರಿಯೇಟಿವ್ 4546.08 kwh, 489 km, 148 ಬಿಹೆಚ್ ಪಿ2 ತಿಂಗಳು ವೈಟಿಂಗ್ | ₹13.99 ಲಕ್ಷ* | ||
ನೆಕ್ಸಾನ್ ಇವಿ ಫಿಯರ್‌ಲೆಸ್ ಪ್ಲಸ್ ಎಸ್ ಎಮ್‌ಆರ್30 kwh, 275 km, 127 ಬಿಹೆಚ್ ಪಿ2 ತಿಂಗಳು ವೈಟಿಂಗ್ | ₹14.29 ಲಕ್ಷ* | ||
ನೆಕ್ಸಾನ್ ಇವಿ ಎಂಪವರ್ಡ್ ಎಮ್‌ಆರ್30 kwh, 275 km, 127 ಬಿಹೆಚ್ ಪಿ2 ತಿಂಗಳು ವೈಟಿಂಗ್ | ₹14.79 ಲಕ್ಷ* | ||
ನೆಕ್ಸಾನ್ ಇವಿ ಫಿಯರ್‌ಲೆಸ್ 4546.08 kwh, 489 km, 148 ಬಿಹೆಚ್ ಪಿ2 ತಿಂಗಳು ವೈಟಿಂಗ್ | ₹14.99 ಲಕ್ಷ* | ||
ನೆಕ್ಸಾನ್ ಇವಿ ಎಂಪವರ್‌ಡ್ 4546.08 kwh, 489 km, 148 ಬಿಹೆಚ್ ಪಿ2 ತಿಂಗಳು ವೈಟಿಂಗ್ | ₹15.99 ಲಕ್ಷ* | ||
ನೆಕ್ಸಾನ್ ಇವಿ ಎಂಪವರ್‌ಡ್ ಪ್ಲಸ್ 4546.08 kwh, 489 km, 148 ಬಿಹೆಚ್ ಪಿ2 ತಿಂಗಳು ವೈಟಿಂಗ್ | ₹16.99 ಲಕ್ಷ* | ||
ನೆಕ್ಸಾನ್ ಇವಿ ಎಂಪವರ್‌ಡ್ ಪ್ಲಸ್ 45 ಕೆಂಪು ಡಾರ್ಕ್(ಟಾಪ್ ಮೊಡೆಲ್)46.08 kwh, 489 km, 148 ಬಿಹೆಚ್ ಪಿ2 ತಿಂಗಳು ವೈಟಿಂಗ್ | ₹17.19 ಲಕ್ಷ* |
ಟಾಟಾ ನೆಕ್ಸಾನ್ ಇವಿ ವಿಮರ್ಶೆ
Overview
ಟಾಟಾ ಮೋಟಾರ್ಸ್ ಕೆಲವು ಮ್ಯಾಜಿಕ್ ಪ್ರದಶನದಲ್ಲಿ ಎಡವಿದಂತೆ ತೋರುತ್ತಿದೆ. ಪೆಟ್ರೋಲ್/ಡೀಸೆಲ್-ಚಾಲಿತ ಟಾಟಾ ನೆಕ್ಸಾನ್ ನನ್ನು ಉದಾರವಾಗಿ ಬಳಸಿದ ನಂತರ, ಇದರ ಮತ್ತೊಂದು ಪ್ರಮುಖ ಆವೃತ್ತಿಯಾಗಿರುವ ಟಾಟಾ ನೆಕ್ಸಾನ್ EV ನ್ನು ಗಮನಿಸಿದಾಗ ಇದು ಆಶ್ಚರ್ಯವಾಗುವಂತೆ ಇದು ಇನ್ನು ಸ್ವಲ್ಪ ಹಿಂದೆನೇ ಉಳಿದಿದೆ. ICE-ಚಾಲಿತ ನೆಕ್ಸಾನ್ ನ ಅಪ್ಡೇಟ್ ಗಳು ಒಂದು ರೀತಿಯ ಟ್ರೈಲರ್ ಆಗಿದ್ದರೆ, ಇದು ಪೂರ್ಣ ಪ್ರಮಾಣದ ಚಲನಚಿತ್ರವಾಗಿದೆ. ಇದು ತನ್ನ ಕಾರಿನ ಅಪ್ಡೇಟ್ ಗಳೊಂದಿಗೆ ಟಾಟಾ ಮೋಟಾರ್ಸ್ ಏನನ್ನು ಸಾಧಿಸಬಹುದು ಎಂಬುದರ ಪ್ರದರ್ಶನ.
ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್‌ನ ಲುಕ್ ನ್ನು ನೀವು ಇಷ್ಟಪಟ್ಟಿದ್ದರೆ, EV ಇವಿ ಆವೃತ್ತಿ ಅದನ್ನು ಇನ್ನಷ್ಟು ಹೆಚ್ಚಸಿಸುತ್ತದೆ.
ಕ್ಯಾಬಿನ್ ಉತ್ತಮವಾಗಿ ಕಾಣುತ್ತದೆ ಮತ್ತು ಹೆಚ್ಚು ಪ್ರೀಮಿಯಂ ಎಂದು ನೀವು ಭಾವಿಸಿದರೆ, EV ಅದನ್ನು ಇನ್ನಷ್ಟು ಉತ್ತಮವಾಗಿ ಮಾಡುತ್ತದೆ. ವೈಶಿಷ್ಟ್ಯಗಳ ಪಟ್ಟಿಯು ವಿಸ್ತಾರವಾಗಿ ಕಂಡುಬಂದರೆ, EV ಉತ್ತಮವಾಗಿದೆ! ಹಣಕ್ಕೆ ಯಾವುದೇ ಅಡ್ಡಿ ಇಲ್ಲದಿದ್ದರೆ ನೀವು ಟಾಟಾ ನೆಕ್ಸಾನ್ ನ ಪಡೆಯಬಹುದು.
ಎಕ್ಸ್‌ಟೀರಿಯರ್
ಟಾಟಾ ನೆಕ್ಸಾನ್ EV ಫೇಸ್‌ಲಿಫ್ಟ್ ಅನ್ನು ಎಲೆಕ್ಟ್ರಿಕ್ ಆವೃತ್ತಿಯ ಆದ್ಯತೆಗೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದೆ ಎಂಬುದು ಮೊದಲ ಅನಿಸಿಕೆ. ಡೇಟೈಮ್ ರನ್ನಿಂಗ್ ಲ್ಯಾಂಪ್‌ಗಳು, 16-ಇಂಚಿನ ಅಲಾಯ್ ವೀಲ್ ನ ಮಾಡೆಲ್ ಮತ್ತು ಟೈಲ್ ಲ್ಯಾಂಪ್‌ಗಳಲ್ಲಿನ ಅನಿಮೇಷನ್‌ಗಳಂತಹ ಅಂಶಗಳು EV ಯ ಸೌಂದರ್ಯದೊಂದಿಗೆ ಉತ್ತಮವಾಗಿ ಹೊಂದಿಕೊಳ್ಳುತ್ತವೆ.
ಕಾಣುವಂತೆ, ಎರಡು ಪ್ರಮುಖ ಅಂಶಗಳಲ್ಲಿ ಬದಲಾವಣೆಯಾಗಿದೆ: DRL ಗಳನ್ನು ಸೇರುವ ಬೆಳಕಿನ ಪಟ್ಟಿಯಿದೆ. ಇದು ಸ್ವಾಗತ/ವಿದಾಯ ಅನಿಮೇಷನ್ ಅನ್ನು ಗಣನೀಯವಾಗಿ ತಂಪಾಗಿಸುತ್ತದೆ, ಆದರೆ ಇದು ಚಾರ್ಜ್ ಸ್ಥಿತಿ ಸೂಚಕವಾಗಿ ದ್ವಿಗುಣಗೊಳ್ಳುತ್ತದೆ. ಇತರ ಸ್ಪಷ್ಟ ವ್ಯತ್ಯಾಸವೆಂದರೆ ತೀಕ್ಷ್ಣವಾದ ಮುಂಭಾಗದ ಬಂಪರ್, ಇದು ಕ್ರೋಮ್‌ನಲ್ಲಿ ಫಿನಿಷ್ ಆಗಿರುವ ವರ್ಟಿಕಲ್ ಅಂಶಗಳನ್ನು ಒಳಗೊಂಡಿದೆ.
ಕುತೂಹಲಕಾರಿಯಾಗಿ, ಟಾಟಾ ಪೂರ್ವ ಫೇಸ್‌ಲಿಫ್ಟ್ ಟಾಟಾ ನೆಕ್ಸಾನ್ ನ ಟ್ರೇಡ್ ಮಾರ್ಕ್ ಆಗಿದ್ದ ನೀಲಿ ಕಲರ್ ನ್ನು ತೆಗೆದುಹಾಕಿದೆ. ಟಾಟಾ ಹೇಳುವಂತೆ ಇದು ಅವರ ಎಲೆಕ್ಟ್ರಿಕ್ ವಾಹನಗಳ 'ಮುಖ್ಯವಾಹಿನಿ'ಯನ್ನು ಸಂಕೇತಿಸುವ ಮಾರ್ಗವಾಗಿದೆ. ತನ್ನ ಬಾಡಿ ಪೈಂಟ್ ನ ಪಟ್ಟಿಯಿಂದ ನೀಲಿ ಬಣ್ಣವನ್ನು ತೆಗೆದ ಕಾರಣ, ಈಗ ವಿಶಾಲವಾದ ಬಣ್ಣದ ಆಯ್ಕೆಯನ್ನು ನೀಡಲು ಅವರಿಗೆ ಅನುವು ಮಾಡಿಕೊಡುತ್ತದೆ. ನೀವು EV ಯಲ್ಲಿ ಓಡಾಡುತ್ತಿದ್ದೀರಿ ಎಂದು ಜನರು ತಿಳಿದುಕೊಳ್ಳಬೇಕೆಂದು ನೀವು ಬಯಸಿದರೆ, ಎಂಪವರ್ಡ್ ಆಕ್ಸೈಡ್ (ಬಹುತೇಕ ಪರ್ಲ್‌ಸೆಂಟ್ ಬಿಳಿ), ಕ್ರಿಯೇಟಿವ್ ಓಷನ್ (ಟಾರ್ಕೊಯಿಸ್) ಅಥವಾ ಟೀಲ್ ಬಾಡಿ ಕಲರ್ ಅನ್ನು ಆಯ್ಕೆ ಮಾಡಲು ನಾವು ಶಿಫಾರಸು ಮಾಡುತ್ತೇವೆ.
ಮುಂಭಾಗದ ಬಾಗಿಲುಗಳಲ್ಲಿ ಸೂಕ್ಷ್ಮವಾದ '.ev' ಬ್ಯಾಡ್ಜ್‌ಗಳಿವೆ ಮತ್ತು ಕಾರು ಈಗ ಅದರ ಹೊಸ ಗುರುತಾದ Nexon.ev ಯನ್ನು ಹೆಮ್ಮೆಯಿಂದ ಟೈಲ್‌ಗೇಟ್‌ನಲ್ಲಿ (ಹಿಂಬದಿ ಡೋರ್) ನಮೂದಿಸಲಾಗಿದೆ. ಈ ಕಾರಿನಲ್ಲಿ ಸಾಕಷ್ಟು ಅಂಶಗಳನ್ನು ಕೊಡುಗೆಯಾಗಿ ನೀಡುತ್ತದೆ ಮತ್ತು ನಿಮ್ಮ ಪ್ರಯಾಣದಲ್ಲಿ ನೀವು ಕೇಂದ್ರಬಿಂದುವಾಗಿರುವುದನ್ನು ಆನಂದಿಸುವಿರಿ.
ಕಾಂಪ್ಯಾಕ್ಟ್ ಪ್ರೊಜೆಕ್ಟರ್ ಎಲ್ಇಡಿ ಹೆಡ್‌ಲೈಟ್‌ಗಳು, ಹೊಸ ಮಿರರ್ ಗಳು, ಕನೆಕ್ಟೆಡ್ ಎಲ್ಇಡಿ ಟೇಲ್‌ಲ್ಯಾಂಪ್‌ಗಳು, ವಿಸ್ತೃತ ಸ್ಪಾಯ್ಲರ್ ಮತ್ತು ಹಿಡನ್ ವೈಪರ್ ಸೇರಿದಂತೆ ಎಲ್ಲಾ ವಿನ್ಯಾಸ ಅಂಶಗಳನ್ನು ಪೆಟ್ರೋಲ್/ಡೀಸೆಲ್ ಆವೃತ್ತಿಯಿಂದ ಬದಲಾಗದೆ ಇದರಲ್ಲಿಯೂ ನೀಡಲಾಗಿದೆ.
ಇಂಟೀರಿಯರ್
ಟಾಟಾ ನೆಕ್ಸಾನ್ EV ಯ ಕ್ಯಾಬಿನ್ ನ ಒಳಗೆ ನೀವು ಹೋದಾಗ ಒಮ್ಮೆಲೇ ನೀವೆಲ್ಲೂ ಕಡಿಮೆ ಬೆಲೆಯ ರೇಂಜ್ ರೋವರ್ ನಲ್ಲಿ ಕೂತಿದ್ದೀರಾ ಎಂಬ ಅನುಭವವಾದರೆ ಆಶ್ಚರ್ಯಪಡಬೇಕಾಗಿಲ್ಲ. ನಿಮಗೆ ಇದು ಸ್ವಲ್ಪ ಉತ್ಪ್ರೇಕ್ಷೆ ಅನಿಸಬಹುದು. ಸರಳ ವಿನ್ಯಾಸ, ಹೊಸ ಟು-ಸ್ಪೋಕ್, ಫ್ಲಾಟ್-ಬಾಟಮ್ ಸ್ಟೀರಿಂಗ್ ವೀಲ್ ಮತ್ತು ಬಣ್ಣದ ಯೋಜನೆ ಇವೆಲ್ಲವೂ ಈ ಭಾವನೆಯನ್ನು ನಿಜ ಮಾಡುತ್ತದೆ.
ಟಾಟಾ ಇಲ್ಲಿ ಸಾಕಷ್ಟು ಸಾಹಸಮಯವಾಗಿದೆ, ಟಾಪ್-ಎಂಡ್ ಆವೃತ್ತಿಯಾಗಿರುವ ಎಂಪವರ್ಡ್+ ನಲ್ಲಿ ವೈಟ್-ಗ್ರೇ ಬಣ್ಣದ ಸಂಯೋಜನೆಯನ್ನು ಆರಿಸಿಕೊಂಡಿದೆ. ಆಸನಗಳ ಮೇಲೆ ಮತ್ತು ಕ್ರ್ಯಾಶ್ ಪ್ಯಾಡ್ ನಲ್ಲಿ ಟಾರ್ಕೊಯಿಸ್ ನ (ವೈಡೂರ್ಯ) ಹೊಲಿಗೆ ಕೂಡ ಇದೆ. ಖಚಿತವಾಗಿ, ಭಾರತೀಯ ಪರಿಸ್ಥಿತಿಗಳು ಮತ್ತು ಈ ಬಣ್ಣಗಳು ನಿಖರವಾಗಿ ಸ್ವರ್ಗದಲ್ಲಿ ಮಾಡಿದ ಹೊಂದಾಣಿಕೆಯಲ್ಲ. ಆದರೆ ನೀವು ಅದನ್ನು ಸ್ಪಿಕ್ ಮತ್ತು ಸ್ಪ್ಯಾನ್ ಆಗಿ ಇರಿಸಿಕೊಳ್ಳಲು ಬಯಸಿದರೆ, ಅದರೊಂದಿಗೆ ಅದು ತರುವ ಬೆಲೆಬಾಳುವ ಅನುಭವವನ್ನು ನೀವು ಆನಂದಿಸುವಿರಿ.
ICE-ಚಾಲಿತ ಆವೃತ್ತಿಗಳಂತೆ, ಗ್ರಹಿಸಿದ ಗುಣಮಟ್ಟದಲ್ಲಿನ ಸುಧಾರಣೆಯು ಕ್ಯಾಬಿನ್‌ನೊಳಗೆ ದೊಡ್ಡ ಹೈಲೈಟ್ ಆಗಿದೆ. ಡ್ಯಾಶ್‌ಬೋರ್ಡ್‌ನಲ್ಲಿ ಬಳಸಲಾದ ಪ್ಲಾಸ್ಟಿಕ್‌ಗಳು ಮತ್ತು ಲೆಥೆರೆಟ್ ಪ್ಯಾಡಿಂಗ್, ಅಪ್‌ಹೊಲ್‌ಸ್ಟೆರಿಯ ಗುಣಮಟ್ಟ ಮತ್ತು ಬಣ್ಣಗಳ ಬುದ್ಧಿವಂತ ಬಳಕೆಯು ಕ್ಯಾಬಿನ್‌ಗೆ ಪ್ರೀಮಿಯಂ ಅನುಭವವನ್ನು ನೀಡುತ್ತದೆ. ಇದು ಏನು ಮಾಡುತ್ತದೆ ಎಂದರೆ, ಕನಿಷ್ಠ ಜರ್ಮನ್ ಕಾರಿನಂತಹ ಡ್ಯಾಶ್‌ಬೋರ್ಡ್ ವಿನ್ಯಾಸವು ಬರೆಯುತ್ತಿರುವ ಚೆಕ್‌ಗಳನ್ನು ನಗದು ಮಾಡಲು ಸಹಾಯ ಮಾಡುವಂತಿದೆ. ಫಿಟ್-ಅಂಡ್-ಫಿನಿಶ್ ವಿಷಯದಲ್ಲಿ ಟಾಟಾ ತುಂಬಾನೇ ಸುಧಾರಿಸಿದೆ ಎಂದು ಎಂದು ನಾವು ಭಾವಿಸುತ್ತೇವೆ. ಈ ವಿಷಯದಲ್ಲಿ ನಮ್ಮ ಪರೀಕ್ಷಾ ಕಾರು ಯಾವುದೇ ಗಮನಾರ್ಹ ಸಮಸ್ಯೆಗಳನ್ನು ಹೊಂದಿಲ್ಲ.
ವಿನ್ಯಾಸದ ದೃಷ್ಟಿಕೋನದಿಂದ, ದೊಡ್ಡದಾದ 12.3" ಟಚ್‌ಸ್ಕ್ರೀನ್, ಯೂಸರ್ ಇಂಟರ್ಫೇಸ್‌ಗಾಗಿ ಅನನ್ಯ ಬಣ್ಣದ ಪ್ಯಾಲೆಟ್ ಮತ್ತು ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್ ಅನ್ನು ಒಳಗೊಂಡಿರುವ ಮರುವಿನ್ಯಾಸಗೊಳಿಸಲಾದ ಫ್ಲೋರ್ ಕನ್ಸೋಲ್ ಸೇರಿದಂತೆ ಕೆಲವು ವ್ಯತ್ಯಾಸ ಮಾಡಲಾಗಿದೆ.
ಪ್ರಾಯೋಗಿಕತೆಯು ICE ಆವೃತ್ತಿಯಂತೆಯೇ ಹೆಚ್ಚು ಕಡಿಮೆ ಇರುತ್ತದೆ. ನಾವು ಪರೀಕ್ಷೆಯಲ್ಲಿ ಹೊಂದಿದ್ದ ಲಾಂಗ್ ರೇಂಜ್ ಆವೃತ್ತಿಯನ್ನು ನೀವು ಆರಿಸುತ್ತಿದ್ದರೆ, ದೊಡ್ಡ ಬ್ಯಾಟರಿ ಪ್ಯಾಕ್ ನೆಲವನ್ನು ಮೇಲಕ್ಕೆ ತಳ್ಳುತ್ತದೆ ಎಂಬುದನ್ನು ಗಮನಿಸಿ. ಇದು ಮುಂಭಾಗದ ಆಸನಗಳಲ್ಲಿ ಸಮಸ್ಯೆಯಲ್ಲ, ಆದರೆ ಹಿಂಭಾಗದಲ್ಲಿ ತೊಡೆಯ ಕೆಳಭಾಗದ ಬೆಂಬಲವನ್ನು ಕಸಿದುಕೊಳ್ಳುತ್ತದೆ. ಅಲ್ಲದೆ, ಮೊಣಕಾಲು ಇರಿಸುವ ಜಾಗದಲ್ಲಿ ಕಡಿಮೆ ಸ್ಥಳಾವಕಾಶ, ಸೌಜನ್ಯಕ್ಕಾಗಿ ಮುಂಭಾಗದ ಸೀಟಿನಲ್ಲಿ ಉತ್ತಮ ಕುಷನ್, ದೊಡ್ಡ ಹಿಂಬದಿ ಸೀಟ್ ಸ್ಕ್ವಾಬ್ ಮತ್ತು ಸೀಟ್ ಬ್ಯಾಕ್ ಸ್ಕೂಪ್ ಕೊರತೆಯಂತಹ ಕೆಲವು ಸಮಸ್ಯೆಗಳನ್ನು ನೀವು ಎದುರಿಸುತ್ತೀರಿ.
ವೈಶಿಷ್ಟ್ಯಗಳು
ಟಾಟಾ ನೆಕ್ಸಾನ್ EV ಯ ಸೌಕರ್ಯಗಳ ಪಟ್ಟಿಗೆ ಟಾಟಾ ಮೋಟಾರ್ಸ್ ಕೆಲವು ನಿರ್ಣಾಯಕ ವೈಶಿಷ್ಟ್ಯಗಳನ್ನು ಸೇರಿಸಿದೆ ಮತ್ತು ಅವುಗಳು ಇದನ್ನು ಇನ್ನಷ್ಟು ಆಲ್-ರೌಂಡರ್ ಆಗಿ ಮಾಡಿದೆ. ICE ಆವೃತ್ತಿಯಿಂದ ಕೊಂಡೊಯ್ಯಲ್ಪಟ್ಟ ಬಹಳಷ್ಟು ವೈಶಿಷ್ಟ್ಯಗಳಿವೆ. ಅವುಗಳೆಂದರೆ:
ಕೀಲೆಸ್ಸ್ ಎಂಟ್ರಿ | ಮುಂಭಾಗದ ಆಸನಗಳಲ್ಲಿ ವೆಂಟಿಲೇಷನ್ |
ಪುಶ್-ಬಟನ್ ಸ್ಟಾರ್ಟ್ ಸ್ಟಾಪ್ | ಎಲೆಕ್ಟ್ರಿಕ್ ಸನ್ ರೂಫ್ |
ಆಟೋಮ್ಯಾಟಿಕ್ ಹೆಡ್ ಲೈಟ್ಸ್ | ವಯರ್ ಲೆಸ್ ಚಾರ್ಜಿಂಗ್ |
ಕ್ರ್ಯುಸ್ ಕಂಟ್ರೋಲ್ | 10.25-ಇಂಚ್ ಡಿಜಿಟಲ್ ಡ್ರೈವರ್ ಡಿಸ್ಪ್ಲೇ |
ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ | 9-ಸ್ಪೀಕರ್ ನ ಜೆಬಿಎಲ್ ಸೌಂಡ್ ಸಿಸ್ಟಮ್ |
ಹಿಂದಿನ ಎಸಿ ವೆಂಟ್ಸ್ | 360-ಡಿಗ್ರಿ ಕ್ಯಾಮೆರಾ |
ಮೊದಲ ದೊಡ್ಡ ಬದಲಾವಣೆಯೆಂದರೆ ಹೊಸ 12.3-ಇಂಚಿನ ಟಚ್‌ಸ್ಕ್ರೀನ್, ಇದನ್ನು ಸರಳವಾಗಿ ಹೇಳುವುದಾದರೆ, ಟಾಟಾ ಕಾರು ಇದುವರೆಗೆ ನೋಡಿದ ಅತ್ಯುತ್ತಮ ಬದಲಾವಣೆಯಾಗಿದೆ. ICE-ಚಾಲಿತ ಟಾಟಾ ನೆಕ್ಸಾನ್‌ನಲ್ಲಿ (ಮತ್ತು Nexon EV ಫಿಯರ್‌ಲೆಸ್ ವೇರಿಯೆಂಟ್) 10.25-ಇಂಚಿನ ಸಣ್ಣ ಪರದೆಯೊಂದಿಗೆ ನಾವು ಅಡಚಣೆಗಳು ಮತ್ತು ಫ್ರೀಜ್‌ಗಳನ್ನು ಎದುರಿಸುತ್ತಿರುವಾಗ, ದೊಡ್ಡ ಪರದೆಯು ಯಾವುದೇ ರೀತಿಯ ಕಿರಿಕಿರಿಯನ್ನು ಉಂಟುಮಾಡಲಿಲ್ಲ. ಚಿಕ್ಕ ಡಿಸ್‌ಪ್ಲೇಯಂತೆಯೇ, ಇದು ಕೂಡ ಗರಿಗರಿಯಾದ ಗ್ರಾಫಿಕ್ಸ್, ಉತ್ತಮ ಕಾಂಟ್ರಾಸ್ಟ್ ಮತ್ತು ಬಳಕೆದಾರ ಇಂಟರ್ಫೇಸ್ ಅನ್ನು ಹೊಂದಿದೆ, ಅದು ಬಳಸಲು ತುಂಬಾ ಸುಲಭವಾಗಿದೆ.
ಡಿಸ್ಪ್ಲೇಯು ಕ್ವಾಲ್ಕಾಮ್ ಪ್ರೊಸೆಸರ್ ನ ಬೆಂಬಲದಿಂದ ರನ್ ಆಗುತ್ತದೆ, ಇದು 64GB ಆನ್‌ಬೋರ್ಡ್ ಸಂಗ್ರಹಣೆ ಮತ್ತು 8GB RAM ಅನ್ನು ಪಡೆಯುತ್ತದೆ. OS ಆಂಡ್ರಾಯ್ಡ್ ಆಟೋಮೋಟಿವ್ ಅನ್ನು ಆಧರಿಸಿದೆ, ಇದು ಸಂಪೂರ್ಣ ಹೋಸ್ಟ್ ಅಪ್ಲಿಕೇಶನ್‌ಗಳನ್ನು ಅನ್‌ಲಾಕ್ ಮಾಡಲು ಟಾಟಾವನ್ನು ಸಕ್ರಿಯಗೊಳಿಸುತ್ತದೆ. ಟಾಟಾ ಇದನ್ನು ‘Arcade.EV’ ಎಂದು ಕರೆಯುತ್ತಿದೆ — ಇದು ಪ್ರೈಮ್ ವಿಡಿಯೋ, ಹಾಟ್‌ಸ್ಟಾರ್, ಯೂಟ್ಯೂಬ್ ಮತ್ತು ಗೇಮ್‌ಗಳಂತಹ ಮನರಂಜನಾ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಲು ನಿಮಗೆ ಅನುಮತಿಸುವ ಅಪ್ಲಿಕೇಶನ್ ಸ್ಟೋರ್ ಆಗಿದೆ. ನಿಮ್ಮ ಚಾರ್ಜಿಂಗ್ ಸ್ಟಾಪ್ ನ ಸಮಯದಲ್ಲಿ ನಿಮಗೆ ಹೆಚ್ಚು ಮನರಂಜನೆ ನೀಡುವುದು ಇದರ ಹಿಂದಿರುವ ಉದ್ದೇಶ. ವಾಹನವು ಚಾರ್ಜ್ ಆಗುತ್ತಿರುವಾಗ, ನಿಮ್ಮ ಮೆಚ್ಚಿನ ಕಾರ್ಯಕ್ರಮ ಗಳನ್ನು ನೀವು ನೋಡಬಹುದು ಅಥವಾ ಸಮಯವನ್ನು ಕಳೆಯಲು ನಿಮ್ಮ ಇಷ್ಟದ ಕೆಲವು ಆಟಗಳನ್ನು ಆಡಬಹುದು. ಇನ್ನೊಂದು ಸಂಭವನೀಯ ಬಳಕೆಯ ಸಂದರ್ಭವೆಂದರೆ ಡ್ರೈವಿಂಗ್ ನಡೆಸುತ್ತಿರುವಾಗ ಅಥವಾ ಬೇರೆ ಯಾವುದೇ ರೀತಿಯ ತುರ್ತು ಕೆಲಸದಲ್ಲಿದ್ದರೆ, ಮಕ್ಕಳಿಗೆ ಮತ್ತು ಸಹಪ್ರಯಾಣಿಕರಿಗೆ ಮನರಂಜನೆ ನೀಡುವುದು.
10.25-ಇಂಚಿನ ಡಿಜಿಟಲ್ ಡ್ರೈವರ್‌ನ ಡಿಸ್‌ಪ್ಲೇಯೊಂದಿಗೆ ನೀವು ನಿಮ್ಮ ಮೂಗಿನ ನೇರದಲ್ಲಿ ಮಾಹಿತಿಯ ಹೋಸ್ಟ್‌ಗೆ ಪ್ರವೇಶವನ್ನು ಪಡೆಯುತ್ತೀರಿ. EV-ನಿರ್ದಿಷ್ಟ ಗ್ರಾಫಿಕ್ಸ್ ಪ್ಯಾಕ್ ಕಡಿಮೆ ಮತ್ತು ಸಾಕಷ್ಟು ಹಸಿರು ಮತ್ತು ಹಳದಿ ವರ್ಣಗಳೊಂದಿಗೆ ಕ್ಲಾಸಿ ಆಗಿದೆ. ಇಲ್ಲಿ ಎದ್ದುಕಾಣುವ ಅಂಶವೆಂದರೆ ಈ ಪರದೆಯಲ್ಲಿ ಗೂಗಲ್/ಆಪಲ್ ಮ್ಯಾಪ್ ಗಳನ್ನು ಅನುಕರಿಸುವ ಪರದೆಯ ಸಾಮರ್ಥ್ಯ, ಇದು ನಿಮಗೆ ತಡೆರಹಿತ ನ್ಯಾವಿಗೇಷನ್ ಅನುಭವವನ್ನು ನೀಡುತ್ತದೆ. ಈ ಪರದೆಯಲ್ಲಿ ಐಫೋನ್ ಮೂಲಕ Google ನಕ್ಷೆಗಳನ್ನು ಚಲಾಯಿಸಲು ನಾವು ಆಶಿಸುತ್ತೇವೆ! (ಆಪಲ್ ನಲ್ಲಿ ಅದನ್ನು ಮಾಡಿ!)
ಸುರಕ್ಷತೆ
ಸುರಕ್ಷತಾ ಸೂಟ್‌ನಲ್ಲಿ 6 ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಅನ್ನು ಸ್ಟ್ಯಾಂಡರ್ಡ್ ಆಗಿ ಒಳಗೊಂಡಿದೆ. ಇತರ ಸುರಕ್ಷತಾ ವೈಶಿಷ್ಟ್ಯ ಗಳೆಂದರೆ ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ ಗಳು, 360-ಡಿಗ್ರಿ ಕ್ಯಾಮೆರಾ ಮತ್ತು ISOFIX ಚೈಲ್ಡ್ ಸೀಟ್ ಮೌಂಟ್ ಗಳು ಸೇರಿವೆ. ಹೊಸ ಟಾಟಾ ನೆಕ್ಸಾನ್ EV ಅನ್ನು ಇನ್ನೂ ಕ್ರ್ಯಾಶ್-ಟೆಸ್ಟ್ ಮಾಡಲಾಗಿಲ್ಲ, ಆದರೂ ಇದು ಸಾಕಷ್ಟು ಉತ್ತಮವಾಗಿರುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಅಡ್ಡ ಪರಿಣಾಮಗಳನ್ನು ಉತ್ತಮವಾಗಿ ತಡೆದುಕೊಳ್ಳಲು ಮಾಡಿದ ರಚನಾತ್ಮಕ ಬಲವರ್ಧನೆಗಳ ಬಗ್ಗೆ ಟಾಟಾ ನಮಗೆ ಭರವಸೆ ನೀಡಿದೆ ಮತ್ತು ಮುಂಭಾಗದ ಅಪಘಾತದ ಸಂದರ್ಭದಲ್ಲಿ ಸಮ್ಮಿತೀಯ ಕಾರ್ಯಕ್ಷಮತೆ (RHS ಮತ್ತು LHS ನಲ್ಲಿ ಸಮಾನವಾಗಿರುತ್ತದೆ).
ಬೂಟ್‌ನ ಸಾಮರ್ಥ್ಯ
ಈ ಹಿಂದಿನಂತೆ ಬೂಟ್ ಸ್ಪೇಸ್ 350 ಲೀಟರ್ ನಷ್ಟು ನೀಡಲಾಗಿದೆ ಮತ್ತು ನೀವು ಜನರಿಗಿಂತ ಹೆಚ್ಚು ಲಗೇಜ್ ಹೊಂದಿದ್ದರೆ ಹಿಂದಿನ ಸೀಟ್ ನ್ನು 60:40 ನಲ್ಲಿ ಬೆಂಡ್ ಮಾಡಿ ಈ ಜಾಗವನ್ನು ಬೂಟ್ ಸ್ಪೇಸ್ ಆಗಿ ಬಳಸಬಹುದು. ಅಲ್ಲದೆ, ಟಾಟಾ ನೆಕ್ಸಾನ್‌ನ ಕೆಲವು ಹಳೆಯ ಸಮಸ್ಯೆಗಳು ಉಳಿದಿವೆ - ಮುಂಭಾಗದಲ್ಲಿ ಬಳಸಬಹುದಾದ ಕಪ್‌ಹೋಲ್ಡರ್‌ಗಳ ಕೊರತೆ, ಹಿಂಭಾಗದಲ್ಲಿ ಆಳವಿಲ್ಲದ ಡೋರ್ ಪಾಕೆಟ್‌ಗಳು ಮತ್ತು ಇಕ್ಕಟ್ಟಾದ ಫುಟ್‌ವೆಲ್ ಅನ್ನು ಸಹ ಇದರಲ್ಲಿ ನೀಡಲಾಗಿದೆ.