Windsor EV ಹೆಸರಿನಲ್ಲಿ ಭಾರತಕ್ಕೆ ಬರಲಿದೆ MG Cloud EV, 2024 ರ ಹಬ್ಬದ ಸೀಸನ್‌ನಲ್ಲಿ ಭಾರತಕ್ಕೆ ಆಗಮನ
ಎಂಜಿ ವಿಂಡ್ಸರ್ ಇವಿ ಗಾಗಿ rohit ಮೂಲಕ ಆಗಸ್ಟ್ 02, 2024 05:35 pm ರಂದು ಪ್ರಕಟಿಸಲಾಗಿದೆ
- 41 Views
- ಕಾಮೆಂಟ್ ಅನ್ನು ಬರೆಯಿರಿ
EV ಯ ಹೆಸರು ಅದ್ಭುತವಾದ ವಿನ್ಯಾಸ ಮತ್ತು ರಾಜಮನೆತನದ ಪರಂಪರೆಯ ಪ್ರತೀಕವಾದ ವಿಂಡ್ಸರ್ ಕ್ಯಾಸಲ್‌ನಿಂದ ಪ್ರೇರಿತವಾಗಿದೆ ಎಂದು MG ತಿಳಿಸಿದೆ
-
ZS EV ಮತ್ತು ಕಾಮೆಟ್ EV ನಂತರ ಭಾರತದಲ್ಲಿ ವಿಂಡ್ಸರ್ EV ಕಾರು ತಯಾರಕರ ಮೂರನೇ EV ಕೊಡುಗೆಯಾಗಿದೆ.
-
ವಿಂಡ್ಸರ್ EV ಅನ್ನು ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ವುಲಿಂಗ್ ಕ್ಲೌಡ್ EV ಹೆಸರಿನಲ್ಲಿ ಮಾರಾಟ ಮಾಡಲಾಗುತ್ತಿದೆ.
-
ಇದು ಕ್ಲೌಡ್ EV ಯಲ್ಲಿ ನೀಡಲಾಗಿರುವ ಅದೇ 50.6 kWh ಬ್ಯಾಟರಿ ಪ್ಯಾಕ್ ಅನ್ನು ಪಡೆಯಬಹುದು ಆದರೆ ರೇಂಜ್ ನಲ್ಲಿ ಬದಲಾವಣೆಯಿರಬಹುದು.
-
ಇದು 15.6-ಇಂಚಿನ ಟಚ್‌ಸ್ಕ್ರೀನ್, ಪವರ್ಡ್ ಫ್ರಂಟ್ ಸೀಟ್ ಗಳು ಮತ್ತು ADAS ಅನ್ನು ಪಡೆಯುವ ಸಾಧ್ಯತೆಯಿದೆ.
-
ವಿಂಡ್ಸರ್ EV ಬೆಲೆಯು ರೂ. 20 ಲಕ್ಷದಿಂದ ಪ್ರಾರಂಭವಾಗಬಹುದು (ಎಕ್ಸ್ ಶೋ ರೂಂ).
MG ಸ್ವಲ್ಪ ಸಮಯದ ಹಿಂದೆ ಭಾರತಕ್ಕೆ ಹೊಸ ಎಲೆಕ್ಟ್ರಿಕ್ ಕ್ರಾಸ್ಒವರ್ (ರಿಬ್ಯಾಡ್ಜ್ ಮಾಡಿದ ಕ್ಲೌಡ್ EV) ಅನ್ನು ತರುವುದಾಗಿ ತಿಳಿಸಿತ್ತು. ಈಗ, ಭಾರತದ ಮಾರುಕಟ್ಟೆಗೆ ಅದರ ಹೆಸರನ್ನು ಘೋಷಿಸಲಾಗಿದೆ. ಇತರ ದೇಶಗಳಲ್ಲಿ ವುಲಿಂಗ್ ಬ್ರಾಂಡ್ ಕಾರ್ ಆಗಿ ಮಾರಾಟ ಮಾಡಲಾಗುತ್ತಿರುವ ಇದನ್ನು ಕ್ಲೌಡ್ EV ಹೆಸರಿನ ಬದಲಿಗೆ MG ವಿಂಡ್ಸರ್ EV ಎಂದು ಕರೆಯಲಾಗುವುದು. ಹಬ್ಬದ ಸಮಯದಲ್ಲಿ ಈ ಎಲೆಕ್ಟ್ರಿಕ್ ಕ್ರಾಸ್ಒವರ್ ಮಾರುಕಟ್ಟೆಗೆ ಬರಲಿದೆ ಎಂದು ಕಾರು ತಯಾರಕರು ಘೋಷಿಸಿದ್ದಾರೆ.
ವಿಂಡ್ಸರ್ ಎಂಬ ಹೆಸರು ಏಕೆ ಇಡಲಾಗಿದೆ?
MG ಪ್ರಕಾರ, ಅವರ ಹೊಸ ಎಲೆಕ್ಟ್ರಿಕ್ ಕ್ರಾಸ್‌ಒವರ್ ರಾಜಮನೆತನದ ಪರಂಪರೆ ಮತ್ತು ಸಾಂಪ್ರದಾಯಿಕ ವಿನ್ಯಾಸದ ಸಂಕೇತವಾಗಿರುವ ಪ್ರಸಿದ್ಧ ವಿಂಡ್ಸರ್ ಕ್ಯಾಸಲ್‌ನಿಂದ ಪ್ರೇರಿತವಾಗಿದೆ. ಇದು ವಿಂಡ್ಸರ್ EV ಯೊಂದಿಗೆ ಸೆಡಾನ್‌ನ ಸೌಕರ್ಯ ಮತ್ತು SUV ಯ ಕ್ಯಾಬಿನ್ ಸ್ಪೇಸ್ ಅನ್ನು ನೀಡುವ MGಯ ಭರವಸೆಗೆ ಅನುಗುಣವಾಗಿದೆ. ಕುತೂಹಲಕಾರಿ ಸಂಗತಿಯೆಂದರೆ, MG ಈಗಾಗಲೇ ಭಾರತದಲ್ಲಿ ವಿಂಡ್ಸರ್ ಹೆಸರನ್ನು ಕೆಲವು ಸಮಯದ ಹಿಂದೆ ನೋಂದಾಯಿಸಿದೆ.
MG ವಿಂಡ್ಸರ್ ಬಗ್ಗೆ ಇನ್ನಷ್ಟು ವಿವರಗಳು
MG ZS EV ಮತ್ತು MG ಕಾಮೆಟ್ EV ನಂತರ ವಿಂಡ್ಸರ್ ಭಾರತದಲ್ಲಿ MG ಯ ಮೂರನೇ ಎಲೆಕ್ಟ್ರಿಕ್ ವಾಹನವಾಗಿದೆ. ಇದು ಕಾಮೆಟ್ EV ಗಿಂತ ದೊಡ್ಡದಾಗಿದೆ ಮತ್ತು ಹೆಚ್ಚು ದುಬಾರಿಯಾಗಿದೆ ಆದರೆ ZS EV ಗಿಂತ ಚಿಕ್ಕದಾಗಿದೆ ಮತ್ತು ಅಗ್ಗವಾಗಿದೆ. ತಾಂತ್ರಿಕ ವಿವರಗಳು ಇನ್ನೂ ಲಭ್ಯವಿಲ್ಲ,ಆದರೆ MG ಇಂಡೋನೇಷ್ಯಾದಲ್ಲಿ ಮಾರಾಟವಾಗುತ್ತಿರುವ ಮಾಡೆಲ್ ನಲ್ಲಿರುವ ಎಲೆಕ್ಟ್ರಿಕ್ ಪವರ್‌ಟ್ರೇನ್ ಅನ್ನು ಬಳಸಬಹುದು.
ಇದು ಇಂಡೋನೇಷಿಯದ ಮಾರುಕಟ್ಟೆಯಲ್ಲಿ 50.6 kWh ಬ್ಯಾಟರಿ ಪ್ಯಾಕ್‌ನೊಂದಿಗೆ ಲಭ್ಯವಿದೆ. ಇದು 136 PS/200 Nm ಇರುವ ಒಂದೇ ಎಲೆಕ್ಟ್ರಿಕ್ ಮೋಟಾರ್ ಅನ್ನು ಪಡೆಯುತ್ತದೆ ಮತ್ತು ಚೀನಾ ಲೈಟ್ ಡ್ಯೂಟಿ ವೆಹಿಕಲ್ ಟೆಸ್ಟ್ ಸೈಕಲ್ (CLTC) ಕ್ಲೇಮ್ ಮಾಡಿರುವ 460 ಕಿಮೀ ರೇಂಜ್ ಅನ್ನು ನೀಡುತ್ತದೆ. ಆದರೆ, ಭಾರತದಲ್ಲಿ ಹೆಚ್ಚಿನ EV ಗಳನ್ನು ARAI ಪರೀಕ್ಷಿಸುವುದರಿಂದ ಇದು ಬದಲಾಗಬಹುದು.
ನಿರೀಕ್ಷಿಸಲಾಗಿರುವ ಫೀಚರ್ ಗಳು ಮತ್ತು ಸುರಕ್ಷತೆ
MG ಇದನ್ನು 15.6-ಇಂಚಿನ ಟಚ್‌ಸ್ಕ್ರೀನ್, 8.8-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ವೈರ್‌ಲೆಸ್ ಫೋನ್ ಚಾರ್ಜಿಂಗ್ ಮತ್ತು ಪವರ್-ಅಡ್ಜಸ್ಟ್ ಮಾಡಬಹುದಾದ ಮುಂಭಾಗದ ಸೀಟುಗಳಂತಹ ಫೀಚರ್ ಗಳೊಂದಿಗೆ ನೀಡುವ ನಿರೀಕ್ಷೆಯಿದೆ. ಸುರಕ್ಷತೆಯ ವಿಷಯದಲ್ಲಿ ಇದು ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಪಡೆಯುವ ಸಾಧ್ಯತೆಯಿದೆ. MG ಇದನ್ನು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಡಿಪಾರ್ಚರ್ ವಾರ್ನಿಂಗ್ ಮತ್ತು ಆಟೊನೊಮಸ್ ಎಮರ್ಜೆನ್ಸಿ ಬ್ರೇಕಿಂಗ್‌ನಂತಹ ಕೆಲವು ಅಡ್ವಾನ್ಸ್ಡ್ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್ ಗಳೊಂದಿಗೆ (ADAS) ಸಜ್ಜುಗೊಳಿಸಬಹುದು.
ಇದನ್ನು ಕೂಡ ಓದಿ: ಜುಲೈ 2024 ರಲ್ಲಿ ಭಾರತದಲ್ಲಿ ಬಿಡುಗಡೆಯಾಗಿರುವ ಎಲ್ಲಾ ಹೊಸ ಕಾರುಗಳ ವಿವರ
ಇದರ ಬೆಲೆ ಎಷ್ಟಿರಬಹುದು?
MG ವಿಂಡ್ಸರ್ EV ಬೆಲೆಯು ರೂ. 20 ಲಕ್ಷದಿಂದ (ಎಕ್ಸ್ ಶೋರೂಂ) ಶುರುವಾಗುವ ನಿರೀಕ್ಷೆಯಿದೆ. ಇದು ಟಾಟಾ ನೆಕ್ಸಾನ್ EV ಮತ್ತು ಮಹೀಂದ್ರಾ XUV400 ಗೆ ಹೋಲಿಸಿದರೆ ಪ್ರೀಮಿಯಂ ಬೆಲೆಯ ಪರ್ಯಾಯ ಆಯ್ಕೆಯಾಗಲಿದೆ, ಮತ್ತು MG ZS EV ಗಿಂತ ಕಡಿಮೆ ಬೆಲೆಗೆ ಸಿಗಲಿದೆ.
ನಿರಂತರ ಆಟೋಮೋಟಿವ್ ಅಪ್‌ಡೇಟ್‌ಗಳಿಗಾಗಿ ಕಾರ್ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ.