• English
  • Login / Register

ದೊಡ್ಡದಾದ ಟಚ್‌ಸ್ಕ್ರೀನ್ ಸಿಸ್ಟಮ್‌ನೊಂದಿಗೆ ಬರಲಿದೆ MG Windsor EV !

ಎಂಜಿ ವಿಂಡ್ಸರ್‌ ಇವಿ ಗಾಗಿ dipan ಮೂಲಕ ಆಗಸ್ಟ್‌ 27, 2024 11:36 am ರಂದು ಮಾರ್ಪಡಿಸಲಾಗಿದೆ

  • 46 Views
  • ಕಾಮೆಂಟ್‌ ಅನ್ನು ಬರೆಯಿರಿ

ಎಂಜಿ ವಿಂಡ್ಸರ್ ಇವಿಯು ಮರಳು ಮತ್ತು ಕಪ್ಪು ಇಂಟೀರಿಯರ್‌ ಅನ್ನು ಒಳಗೊಂಡಿರುವ ಸಾಧ್ಯತೆಯಿದೆ, ಇದು ಅಂತಾರಾಷ್ಟ್ರೀಯ-ಸ್ಪೆಕ್ ವುಲಿಂಗ್ ಕ್ಲೌಡ್ ಇವಿ ಅನ್ನು ಆಧರಿಸಿದೆ 

MG Windsor EV spied with a Wuling Cloud EV-like touchscreen

  • ಎಮ್‌ಜಿ ವಿಂಡ್ಸರ್ ಇವಿಯು ಭಾರತದಲ್ಲಿ ಎಮ್‌ಜಿಯ ಮೂರನೇ ಇವಿ ಮೊಡೆಲ್‌ ಆಗಿರುತ್ತದೆ.
  • ಸ್ಪೈಡ್ ಮಾಡೆಲ್‌ನ ಟಚ್‌ಸ್ಕ್ರೀನ್ ವುಲಿಂಗ್ ಕ್ಲೌಡ್ ಇವಿಯಂತೆಯೇ ಅದೇ 15.6-ಇಂಚಿನ ಸ್ಕ್ರೀನ್‌ ಆಗಿರಬಹುದು. 
  • ಟೀಸರ್‌ಗಳು ಪನರೋಮಿಕ್‌ ಗ್ಲಾಸ್‌ ರೂಫ್‌, 135-ಡಿಗ್ರಿ ಒರಗಿರುವ ಹಿಂಬದಿ ಸೀಟ್ ಮತ್ತು ಹಿಂಭಾಗದ AC ವೆಂಟ್‌ಗಳು ಇರುವುದನ್ನು ದೃಢಪಡಿಸಿವೆ.
  • ಇತರ ನಿರೀಕ್ಷಿತ ಫೀಚರ್‌ಗಳಲ್ಲಿ ಡ್ರೈವರ್‌ಗಾಗಿ ಡಿಜಿಟಲ್‌ ಡಿಸ್‌ಪ್ಲೇ, ವೈರ್‌ಲೆಸ್ ಫೋನ್ ಚಾರ್ಜಿಂಗ್, 6 ಏರ್‌ಬ್ಯಾಗ್‌ಗಳು ಮತ್ತು ADAS ಸೇರಿವೆ.
  • ಪರಿಷ್ಕೃತ ARAI-ರೇಟೆಡ್ ರೇಂಜ್‌ನೊಂದಿಗೆ 50.6 ಕಿ.ವ್ಯಾಟ್‌ ಬ್ಯಾಟರಿಯನ್ನು ಹೊಂದಿರುವ ಸಾಧ್ಯತೆಯಿದೆ.
  • ಇದರ ಬೆಲೆ 20 ಲಕ್ಷ ರೂ.ನಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗಬಹುದೆಂದು ನಿರೀಕ್ಷಿಸಲಾಗಿದೆ.

ಎಮ್‌ಜಿ ವಿಂಡ್ಸರ್ ಇವಿಯನ್ನು ಸೆಪ್ಟೆಂಬರ್ 11 ರಂದು ಬಿಡುಗಡೆ ಮಾಡಲಾಗುವುದು ಮತ್ತು ಕಾರು ತಯಾರಕರು ಕೆಲವು ಸಮಯದಿಂದ ಇದರ ಟೀಸರ್‌ ಅನ್ನು ಬಿಡುಗಡೆ ಮಾಡುತ್ತಿದ್ದಾರೆ. ಆದರೆ, ಇತ್ತೀಚೆಗೆ ಈ ಕ್ರಾಸ್ಒವರ್ ಇವಿ ಮುಂಬೈನ ಬೀದಿಗಳಲ್ಲಿ ಸುತ್ತುತ್ತಿರುವುದನ್ನು ಗುರುತಿಸಲಾಯಿತು, ಇದು ನಮಗೆ ಇಂಟೀರಿಯರ್‌ನ ಫೀಚರ್‌ನ ಸಣ್ಣ ನೋಟವನ್ನು ನೀಡುತ್ತದೆ. ಎಮ್‌ಜಿ ವಿಂಡ್ಸರ್ ಇವಿಯಲ್ಲಿ ನಾವು ಗುರುತಿಸಬಹುದಾದ ಎಲ್ಲವನ್ನೂ ನಾವು ನೋಡೋಣ.

ನಾವು ಗಮನಿಸಿದ್ದು ಏನು ?

MG Windsor EV

ಸ್ಪೈ ಶಾಟ್‌ಗಳು ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಅನಾವರಣಗೊಳಿಸುತ್ತದೆ, ಇದು ವಿಂಡ್ಸರ್ ಇವಿ ಆಧಾರಿತ ಮೊಡೆಲ್‌ ಆದ ವುಲಿಂಗ್ ಕ್ಲೌಡ್ ಇವಿಯಲ್ಲಿನ ಲಂಬ ಘಟಕವನ್ನು ಹೋಲುತ್ತದೆ. ಕ್ಲೌಡ್ ಇವಿಯು ವೈರ್‌ಲೆಸ್ ಆಪಲ್‌ ಕಾರ್‌ಪ್ಲೇ ಮತ್ತು ಅಂಡ್ರಾಯ್ಡ್‌ ಆಟೋ ಜೊತೆಗೆ 15.6-ಇಂಚಿನ ಟಚ್‌ಸ್ಕ್ರೀನ್ ಅನ್ನು ಹೊಂದಿದೆ. ರಿಯರ್‌ವ್ಯೂ ಮಿರರ್ (IRVM) ಒಳಗೆ ಆಟೋ-ಡಿಮ್ಮಿಂಗ್‌ ಮತ್ತು ಸೀಟ್‌ಗಳ ಮೇಲೆ ಕಪ್ಪು ಕವರ್‌ ಕೂಡ ಗೋಚರಿಸುತ್ತದೆ.

MG Windsor EV

ವಿಂಡ್ಸರ್ ಇವಿಯ ಸ್ಪೈ ಶಾಟ್‌ಗಳು, ಅಧಿಕೃತ ಟೀಸರ್‌ಗಳಂತೆ, ಅದೇ ಕವರ್‌ನೊಂದಿಗೆ ಕಂಡುಬಂದಿದೆ. ಇದು ಟಾಟಾ ಕರ್ವ್‌ ಇವಿ ಮತ್ತು ಮಹೀಂದ್ರಾ ಎಕ್ಸ್‌ಯುವಿ700 ನಲ್ಲಿರುವಂತೆಯೇ ಫ್ಲಶ್-ಟೈಪ್ ಡೋರ್ ಹ್ಯಾಂಡಲ್‌ಗಳನ್ನು ಹೊಂದಿದೆ. ಚಾರ್ಜಿಂಗ್ ಫ್ಲಾಪ್ ಅನ್ನು ಮುಂಭಾಗದ ಫೆಂಡರ್‌ನಲ್ಲಿ ಇರಿಸಲಾಗುವುದು ಎಂದು ಸ್ಪೈ ಶಾಟ್‌ಗಳು ತೋರಿಸುತ್ತವೆ.

MG Windsor EV

ಇದನ್ನು ಸಹ ಓದಿ: Skoda ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಯ ಹೆಸರು ಬಹಿರಂಗ, ಸ್ಕೋಡಾ Kylaq ಎಂದು ನಾಮಕರಣ

ನಿರೀಕ್ಷಿತ ಫೀಚರ್‌ಗಳು

MG windsor EV will get a massive glass roof

ಎಮ್‌ಜಿಯು ಈ ಹಿಂದೆ ವಿಂಡ್ಸರ್ ಇವಿಯನ್ನು ಪನರೋಮಿಕ್‌ ಗ್ಲಾಸ್‌ ರೂಫ್‌ ಮತ್ತು 135-ಡಿಗ್ರಿ ರಿಕ್ಲೈನಿಂಗ್ ಹಿಂಬದಿಯ ಸೀಟುಗಳು ಹೊಂದಿರುವ ಟೀಸರ್‌ ಅನ್ನು ಬಿಡುಗಡೆ ಮಾಡಿತ್ತು. ಇದು 8.8-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ವೈರ್‌ಲೆಸ್ ಫೋನ್ ಚಾರ್ಜಿಂಗ್, ಎಲೆಕ್ಟ್ರಿಕ್ ಆಗಿ ಹೊಂದಾಣಿಕೆ ಮಾಡಬಹುದಾದ ಮುಂಭಾಗದ ಸೀಟುಗಳು ಮತ್ತು ಎಲೆಕ್ಟ್ರಿಕ್ ಟೈಲ್‌ಗೇಟ್ ಅನ್ನು ಪಡೆಯುವ ನಿರೀಕ್ಷೆಯಿದೆ.

MG Windsor EV gets 135-degree reclining rear seats

ಸುರಕ್ಷತೆಗಾಗಿ, ವಿಂಡ್ಸರ್ ಇವಿ ಆರು ಏರ್‌ಬ್ಯಾಗ್‌ಗಳನ್ನು (ಸ್ಟ್ಯಾಂಡರ್ಡ್‌ ಆಗಿ), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (ಟಿಪಿಎಂಎಸ್), ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, 360-ಡಿಗ್ರಿ ಕ್ಯಾಮೆರಾ ಮತ್ತು ಪ್ರಾಯಶಃ ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳನ್ನು (ಎಡಿಎಎಸ್) ಪಡೆಯಬಹುದು.

MG Windsor EV dashboard

ಇದನ್ನೂ ಸಹ ಓದಿ: ಭಾರತದಲ್ಲಿ ಲಾಂಚ್‌ ಆಗಲಿದೆ MG Cloud EV: ಇಲ್ಲಿದೆ ನೀವು ತಿಳಿದುಕೊಳ್ಳಬೇಕಾದ ಪ್ರಮುಖ 5 ವಿಷಯಗಳು

ನಿರೀಕ್ಷಿತ ಪವರ್‌ಟ್ರೇನ್

ಎಮ್‌ಜಿ ವಿಂಡ್ಸರ್ 136 ಪಿಎಸ್‌ ಮತ್ತು 200 ಎನ್‌ಎಮ್‌ ಅನ್ನು ಉತ್ಪಾದಿಸುವ ಫ್ರಂಟ್-ವೀಲ್-ಡ್ರೈವ್ ಮೋಟಾರ್‌ಗೆ ಶಕ್ತಿ ನೀಡುವ 50.6 ಕಿ.ವ್ಯಾಟ್‌ ಬ್ಯಾಟರಿಯೊಂದಿಗೆ ಬರುವ ನಿರೀಕ್ಷೆಯಿದೆ. ಇಂಡೋನೇಷ್ಯಾ-ಸ್ಪೆಕ್ ಆವೃತ್ತಿಯು 460 ಕಿಮೀ ರೇಂಜ್‌ ಅನ್ನು ಕ್ಲೈಮ್‌ ಮಾಡುತ್ತದೆ, ಆದರೆ ಭಾರತೀಯ ಮೊಡೆಲ್‌ನ ARAI ಪರೀಕ್ಷೆಯ ನಂತರ ಹೆಚ್ಚಿದ ರೇಂಜ್‌ ಅನ್ನು ನೋಡಬಹುದು.

ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು

MG Windsor EV in Ladakh

ಎಂಜಿಯು ತನ್ನ ವಿಂಡ್ಸರ್ ಇವಿ ಬೆಲೆಯನ್ನು 20 ಲಕ್ಷ ರೂಪಾಯಿಗಳಿಂದ (ಎಕ್ಸ್ ಶೋರೂಂ) ಪ್ರಾರಂಭವಾಗಬಹುದೆಂದು ನಿರೀಕ್ಷಿಸಲಾಗಿದೆ. ಇದು ಟಾಟಾ ನೆಕ್ಸಾನ್ ಇವಿ ಮತ್ತು ಮಹೀಂದ್ರಾ ಎಕ್ಸ್‌ಯುವಿ400 ಇವಿಗೆ ಹೋಲಿಸಿದರೆ ಹೆಚ್ಚು ಪ್ರೀಮಿಯಂ ಆಯ್ಕೆಯಾಗಿರುವ ಎಮ್‌ಜಿ ಜೆಡ್‌ಎಸ್‌ ಇವಿಗೆ ಹೆಚ್ಚು ಕೈಗೆಟುಕುವ ಪರ್ಯಾಯವಾಗಿದೆ.

ಫೋಟೋದ ಮೂಲ

ಆಟೋಮೋಟಿವ್ ಜಗತ್ತಿನ ನಿರಂತರ ಅಪ್ಡೇಟ್ ಗಳನ್ನು ಪಡೆಯಲು ಕಾರ್‌ದೇಖೋ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ.

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on M ಜಿ ವಿಂಡ್ಸರ್‌ ಇವಿ

Read Full News

explore ಇನ್ನಷ್ಟು on ಎಂಜಿ ವಿಂಡ್ಸರ್‌ ಇವಿ

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
×
We need your ನಗರ to customize your experience