• English
  • Login / Register

ಭಾರತದಲ್ಲಿ ಲಾಂಚ್‌ ಆಗಲಿದೆ MG Cloud EV: ಇಲ್ಲಿದೆ ನೀವು ತಿಳಿದುಕೊಳ್ಳಬೇಕಾದ ಪ್ರಮುಖ 5 ವಿಷಯಗಳು

ಎಂಜಿ ವಿಂಡ್ಸರ್‌ ಇವಿ ಗಾಗಿ samarth ಮೂಲಕ ಆಗಸ್ಟ್‌ 01, 2024 04:14 pm ರಂದು ಪ್ರಕಟಿಸಲಾಗಿದೆ

  • 58 Views
  • ಕಾಮೆಂಟ್‌ ಅನ್ನು ಬರೆಯಿರಿ

ಅಂತಾರಾಷ್ಟ್ರೀಯವಾಗಿ ಲಭ್ಯವಿರುವ ಮಾಡೆಲ್ ನಲ್ಲಿ ದೊಡ್ಡ ಇನ್ಫೋಟೈನ್‌ಮೆಂಟ್ ಸ್ಕ್ರೀನ್, ಫ್ಲಶ್ ಡೋರ್ ಹ್ಯಾಂಡಲ್‌ಗಳು ಮತ್ತು ಪ್ರಯಾಣಿಕರಿಗೆ ಹೆಚ್ಚು ಆರಾಮದಾಯಕ ಅನುಭವ ನೀಡಲು ಸೋಫಾ ಮೋಡ್ ಅನ್ನು ನೀಡಲಾಗಿದೆ

Top 5 Things To Know About MG Cloud EV

MG ಕ್ಲೌಡ್ EVಯು ಭಾರತದಲ್ಲಿ MG ಯ ಎಲೆಕ್ಟ್ರಿಕ್ ವಾಹನ ಶ್ರೇಣಿಗೆ ಹೊಸ ಸೇರ್ಪಡೆಯಾಗಲಿದೆ. ಇತ್ತೀಚೆಗೆ MG ಅದರ ಕ್ಲೌಡ್ EV ಯ ಕೆಲವು ಫೀಚರ್ ಗಳು ಮತ್ತು ಡಿಸೈನ್ ನ ಬಗ್ಗೆ ಕೆಲವು ಸುಳಿವು ನೀಡಿತು. ಈ ಕ್ರಾಸ್ಒವರ್ ಈಗಾಗಲೇ ವುಲಿಂಗ್ ಬ್ರಾಂಡ್ ಹೆಸರಿನ ಅಡಿಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಲಭ್ಯವಿದೆ. ಮುಂಬರುವ ಇಂಡಿಯಾ-ಸ್ಪೆಕ್ ಕ್ಲೌಡ್ EV ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಐದು ವಿಷಯಗಳು ಇಲ್ಲಿವೆ:

 ಡಿಸೈನ್

MG Cloud EV Front

 ಕ್ಲೌಡ್ EV ಅಂತರಾಷ್ಟ್ರೀಯ ಮಾಡೆಲ್ ನಲ್ಲಿರುವ ಡಿಸೈನ್ ಅನ್ನು ಪಡೆಯುವ ನಿರೀಕ್ಷೆಯಿದೆ. ಗ್ಲೋಬಲ್ ಸ್ಪೆಕ್ ಕ್ಲೌಡ್ EV ಕನೆಕ್ಟೆಡ್ LED DRL ಗಳು ಮತ್ತು ಕ್ಲೋಸ್ಡ್ ಆಫ್ ಗ್ರಿಲ್‌ನೊಂದಿಗೆ ಸ್ಲೀಕ್ ಆಗಿರುವ ಡಿಸೈನ್ ಅನ್ನು ಹೊಂದಿದೆ, ಇದು ಈ ಕಾರಿಗೆ ಸ್ಟೈಲಿಶ್ ಲುಕ್ ಅನ್ನು ನೀಡುತ್ತದೆ. ಹೆಡ್‌ಲೈಟ್‌ಗಳನ್ನು DRLಗಳ ಕೆಳಗೆ ಪ್ರತ್ಯೇಕ ಹೌಸಿಂಗ್ ನಲ್ಲಿ ಇರಿಸಲಾಗಿದೆ.

MG Cloud EV Rear

 ಕೆಲವು ಕ್ರೀಸ್‌ಗಳು ಮತ್ತು ಏರೋಡೈನಾಮಿಕ್ ಆಗಿ ಡಿಸೈನ್ ಮಾಡಿರುವ 18-ಇಂಚಿನ ಅಲೊಯ್ ವೀಲ್ ಗಳೊಂದಿಗೆ ಸೈಡ್ ಮತ್ತು ಹಿಂಭಾಗದ ಡಿಸೈನ್ ಸರಳ ಮತ್ತು ಶಾಂತವಾಗಿ ಕಾಣುತ್ತದೆ. ಇದು ಫ್ಲಶ್-ಫಿಟ್ಟಿಂಗ್ ಡೋರ್ ಹ್ಯಾಂಡಲ್‌ಗಳನ್ನು ಕೂಡ ಹೊಂದಿದೆ. ಈ ಕ್ರಾಸ್ಒವರ್ EV ಯಲ್ಲಿ ಮುಂಭಾಗದ ಲೆಫ್ಟ್ ಫೆಂಡರ್ ನಲ್ಲಿ ಚಾರ್ಜಿಂಗ್ ಪೋರ್ಟ್ ಇರುವುದನ್ನು ಕೂಡ ನೀವು ಇಲ್ಲಿ ಗಮನಿಸಬಹುದು. ಹಿಂಭಾಗದಲ್ಲಿ, ಇದು ಸ್ಲೋಪ್ ಆಗಿರುವ ವಿಂಡ್‌ಶೀಲ್ಡ್ ಮತ್ತು ಕನೆಕ್ಟೆಡ್ LED ಟೈಲ್ ಲೈಟ್‌ಗಳನ್ನು ಹೊಂದಿದೆ, ಇದು ಇದಕ್ಕೆ ಸರಳವಾದ ಲುಕ್ ಅನ್ನು ನೀಡುತ್ತದೆ.

 ಒಳಭಾಗ

MG Cloud EV Cabin

 ಒಳಗಡೆ, ಕ್ಲೌಡ್ EV ಡ್ಯಾಶ್‌ಬೋರ್ಡ್‌ನಲ್ಲಿ ವುಡನ್ ಮತ್ತು ಬ್ರೊನ್ಜ್ ಅಂಶಗಳೊಂದಿಗೆ ಸಂಪೂರ್ಣ ಆಲ್ ಬ್ಲಾಕ್ ಕ್ಯಾಬಿನ್ ಥೀಮ್ ಅನ್ನು ಹೊಂದಿದೆ. ಇದು ಕಾಂಟ್ರಾಸ್ಟ್‌ಗಾಗಿ ಬ್ರೊನ್ಜ್ ಸ್ವಿಚಿಂಗ್ ನೊಂದಿಗೆ ಆಲ್ ಬ್ಲಾಕ್ ಲೆದರ್ ಸೀಟ್ ಗಳನ್ನು ಹೊಂದಿದೆ. ಅಂತರಾಷ್ಟ್ರೀಯ ಮಾಡೆಲ್ ನಲ್ಲಿ ಸೋಫಾ ಮೋಡ್ ಅನ್ನು ಕೂಡ ನೀಡಲಾಗಿದೆ, ಇದು ಪ್ರಯಾಣಿಸುವವರಿಗೆ ಹೆಚ್ಚುವರಿ ಆರಾಮವನ್ನು ಒದಗಿಸಲು 135 ಡಿಗ್ರಿಗಳವರೆಗೆ ಹಿಂಬದಿಯ ಸೀಟ್ ಅನ್ನು ಒರಗಿಸುವ ಆಯ್ಕೆಯನ್ನು ನೀಡುತ್ತದೆ.

 ಫೀಚರ್ ಗಳು

MG Cloud EV Touchscreen

 ಜಾಗತಿಕವಾಗಿ ಲಭ್ಯವಿರುವ ಮಾಡೆಲ್ ನಲ್ಲಿ 15.6-ಇಂಚಿನ ಫ್ರೀ-ಫ್ಲೋಟಿಂಗ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 8.8-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಮತ್ತು ಮಲ್ಟಿ-ಕಲರ್ ಆಂಬಿಯೆಂಟ್ ಲೈಟಿಂಗ್ ನಂತಹ ಫೀಚರ್ ಗಳನ್ನು ನೀಡಲಾಗಿದೆ. ಇತರ ಫೀಚರ್ ಗಳಲ್ಲಿ 6-ವೇ ಪವರ್-ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್ ಮತ್ತು 4-ವೇ ಪವರ್ಡ್ ಫ್ರಂಟ್ ಕೊ-ಪ್ಯಾಸೆಂಜರ್ ಸೀಟ್, ಹಿಂಭಾಗದ ವೆಂಟ್ ಗಳೊಂದಿಗೆ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಮತ್ತು ವೈರ್‌ಲೆಸ್ ಫೋನ್ ಚಾರ್ಜರ್ ಅನ್ನು ಒಳಗೊಂಡಿವೆ.

 ಇದನ್ನು ಕೂಡ ಓದಿ: ಮೊಟ್ಟ ಮೊದಲ ಬಾರಿಗೆ ಹೊರಬಿದ್ದಿದೆ MG ಕ್ಲೌಡ್ EV ಟೀಸರ್, ಶೀಘ್ರದಲ್ಲೇ ಲಾಂಚ್ ಆಗುವ ಸೂಚನೆ!

 ಬ್ಯಾಟರಿ ಪ್ಯಾಕ್ ಮತ್ತು ರೇಂಜ್

MG Cloud EV Battery Pack

 ಕ್ಲೌಡ್ EV ಇಂಡೋನೇಷಿಯನ್ ಮಾರುಕಟ್ಟೆಯಲ್ಲಿ ಈ ಕೆಳಗಿನ ಪವರ್‌ಟ್ರೇನ್ ಸ್ಪೆಸಿಫಿಕೇಷನ್ ಗಳೊಂದಿಗೆ ಲಭ್ಯವಿದೆ:

 ಬ್ಯಾಟರಿ ಸಾಮರ್ಥ್ಯ

50.6 kWh

 ಮೋಟಾರು ಸಂಖ್ಯೆ

1

 ಪವರ್

136 PS

 ಟಾರ್ಕ್

200 Nm

 ಕ್ಲೇಮ್ ಮಾಡಿರುವ ರೇಂಜ್ (CLTC)

460 km

460 ಕಿ.ಮೀ

 ಡ್ರೈವ್ ಟ್ರೈನ್

Front-wheel-drive (FWD)

ಫ್ರಂಟ್-ವೀಲ್-ಡ್ರೈವ್ (FWD)

 CLTC: ಚೀನಾ ಲೈಟ್ ಡ್ಯೂಟಿ ವೆಹಿಕಲ್ ಟೆಸ್ಟ್ ಸೈಕಲ್

 ಭಾರತೀಯ ವರ್ಷನ್ ಅನ್ನು ARAI ಮಾನದಂಡಗಳ ಪ್ರಕಾರ ಪರೀಕ್ಷಿಸಲಾಗುವ ಕಾರಣ ಇದು ವಿಭಿನ್ನ ರೇಂಜ್ ಅನ್ನು ಪಡೆಯುವ ಸಾಧ್ಯತೆಯಿದೆ. MG ಮೋಟಾರ್‌ನ ಹೊಸ ಕ್ರಾಸ್‌ಒವರ್-SUV ಅನ್ನು DC ಫಾಸ್ಟ್ ಚಾರ್ಜರ್‌ನೊಂದಿಗೆ ಸುಮಾರು 30 ನಿಮಿಷಗಳಲ್ಲಿ 30% ರಿಂದ 100% ವರೆಗೆ ಚಾರ್ಜ್ ಮಾಡಬಹುದು. ಹೋಮ್ AC ಚಾರ್ಜರ್ ಅನ್ನು ಬಳಸಿ ಬ್ಯಾಟರಿಯನ್ನು 20% ರಿಂದ 100% ವರೆಗೆ ಸುಮಾರು 7 ಗಂಟೆಗಳಲ್ಲಿ ಚಾರ್ಜ್ ಮಾಡಬಹುದು.

 ನಿರೀಕ್ಷಿಸಲಾಗಿರುವ ಬೆಲೆ ಮತ್ತು ಲಾಂಚ್

 MG ಕ್ಲೌಡ್ EV ಬೆಲೆಯು ರೂ 20 ಲಕ್ಷದಿಂದ ಪ್ರಾರಂಭವಾಗುವ ಸಾಧ್ಯತೆಯಿದೆ (ಎಕ್ಸ್ ಶೋರೂಂ). MG ಇದರ ಅಧಿಕೃತ ಲಾಂಚ್ ದಿನಾಂಕವನ್ನು ಪ್ರಕಟಿಸಿಲ್ಲ, ಆದರೆ ಕ್ಲೌಡ್ EV ಆಗಸ್ಟ್ 2024 ರಲ್ಲಿ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ. ಇದು ಟಾಟಾ ನೆಕ್ಸಾನ್ EV ಮತ್ತು ಮಹೀಂದ್ರಾ XUV400 ಗೆ ಹೋಲಿಸಿದರೆ ಪ್ರೀಮಿಯಂ ಬೆಲೆಯ ಪರ್ಯಾಯ ಆಯ್ಕೆಯಾಗಲಿದೆ, ಮತ್ತು MG ZS EV ಗೆ ಕೈಗೆಟುಕುವ ಬೆಲೆಯ ಪರ್ಯಾಯ ಆಯ್ಕೆಯಾಗಲಿದೆ.

 ಇತ್ತೀಚಿನ ನಿರಂತರ ಆಟೋಮೋಟಿವ್ ಅಪ್ಡೇಟ್ ಗಳಿಗಾಗಿ ಕಾರ್ದೇಖೋ ಅವರ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ

ಅವರಿಂದ ಪ್ರಕಟಿಸಲಾಗಿದೆ
was this article helpful ?

Write your Comment on M ಜಿ ವಿಂಡ್ಸರ್‌ ಇವಿ

Read Full News

explore ಇನ್ನಷ್ಟು on ಎಂಜಿ ವಿಂಡ್ಸರ್‌ ಇವಿ

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
×
We need your ನಗರ to customize your experience