• English
  • Login / Register

Skoda ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಯ ಹೆಸರು ಬಹಿರಂಗ, ಸ್ಕೋಡಾ Kylaq ಎಂದು ನಾಮಕರಣ

ಸ್ಕೋಡಾ kylaq ಗಾಗಿ ansh ಮೂಲಕ ಆಗಸ್ಟ್‌ 21, 2024 05:48 pm ರಂದು ಪ್ರಕಟಿಸಲಾಗಿದೆ

  • 48 Views
  • ಕಾಮೆಂಟ್‌ ಅನ್ನು ಬರೆಯಿರಿ

ಕೈಲಾಕ್ ಹೆಸರು "ಕ್ರಿಸ್ಟಲ್" ಎಂಬ ಪದದ ಸಂಸ್ಕೃತ ಪದವಾಗಿದೆ

Skoda Kylaq Name Revealed

ಸ್ಕೋಡಾದ ಮುಂಬರುವ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಗೆ ನಾಮಕರಣ ಮಾಡಲಾಗಿದೆ ಮತ್ತು ಇದನ್ನು ಸ್ಕೋಡಾ ಕೈಲಾಕ್ ಎಂದು ಕರೆಯಲಾಗುತ್ತದೆ. ಕಾರು ತಯಾರಕರ ಈ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಯು 2025ರ ಆರಂಭದಲ್ಲಿ ಆಗಮಿಸಲಿದೆ. ಟಾಟಾ ನೆಕ್ಸಾನ್ ಮತ್ತು ಮಹೀಂದ್ರಾ ಎಕ್ಸ್‌ಯುವಿ 3XO ನಂತಹ ಕಾರುಗಳನ್ನು ಹೊಂದಿರುವ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ಮುಂಬರುವ ಕೈಲಾಕ್ ತನ್ನ ಸ್ಪರ್ಧೆಯನ್ನು ಒಡ್ಡಲಿದೆ. ನಾವು ನಿರೀಕ್ಷಿತ ಪವರ್‌ಟ್ರೇನ್ ಮತ್ತು ಕೈಲಾಕ್‌ನ ಫೀಚರ್‌ಗಳನ್ನು ತಿಳಿಯುವ ಮೊದಲು, ಹೆಸರು ಏನನ್ನು ಸೂಚಿಸುತ್ತದೆ ಎಂಬುದನ್ನು ನೋಡೋಣ.  

ಕೈಲಾಕ್ ಪದದ ಅರ್ಥ

Skoda Kylaq

"ಕೈಲಾಕ್" ಎಂಬ ಹೆಸರನ್ನು "ಸ್ಫಟಿಕ(ಕ್ರಿಸ್ಟಲ್‌)" ಪದದ ಅರ್ಥ ಹೊಂದಿರುವ ಸಂಸ್ಕೃತ ಪದದಿಂದ ಪಡೆಯಲಾಗಿದೆ. ಸ್ಕೋಡಾ "ನೇಮ್ ಯುವರ್ ಸ್ಕೋಡಾ" ಎಂಬ ಅಭಿಯಾನವನ್ನು ನಡೆಸಿತ್ತು, ಅದರಲ್ಲಿ ಕಾರು ತಯಾರಕರು ತಮ್ಮ ಮುಂಬರುವ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಗಾಗಿ ಸೂಕ್ತವಾದ ಹೆಸರುಗಳನ್ನು ನೀಡಲು ಜನರಿಗೆ ಅವಕಾಶವನ್ನು ನೀಡಿತ್ತು. ಈ ಅಭಿಯಾನದಲ್ಲಿ, ಹೆಸರು "K" ನಿಂದ ಪ್ರಾರಂಭವಾಗಬೇಕು ಮತ್ತು "Q" ನೊಂದಿಗೆ ಕೊನೆಗೊಳ್ಳಬೇಕು ಮತ್ತು ಎರಡಕ್ಕಿಂತ ಹೆಚ್ಚು ಉಚ್ಚಾರಾಂಶಗಳನ್ನು ಹೊಂದಿರಬಾರದು ಎಂಬ ಮಾನದಂಡವಾಗಿತ್ತು. ಇದರಲ್ಲಿ ಬಂದಿದ್ದ  2 ಲಕ್ಷಕ್ಕೂ ಹೆಚ್ಚು ಹೆಸರುಗಳಲ್ಲಿ, ಸುಮಾರು 24,000 ಕ್ಕೂ ಹೆಚ್ಚು ಯುನಿಕ್‌ ಆದ ಹೆಸರುಗಳನ್ನು ನೀಡಿದ್ದರು. ಹಾಗೆಯೇ ಇದರಲ್ಲಿ "ಕೈಲಾಕ್" ಎಂಬ ಹೆಸರು ಹೆಚ್ಚು ಮತಗಳನ್ನು ಪಡೆಯಿತು.

ಪವರ್‌ಟ್ರೈನ್‌

Skoda sub-4m SUV spied

ಕೈಲಾಕ್ ಸ್ಕೋಡಾದ 1-ಲೀಟರ್ ಟಿಎಸ್‌ಐ ಟರ್ಬೊ-ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗುವ ನಿರೀಕ್ಷೆಯಿದೆ, ಇದು ಸ್ಕೋಡಾ ಸ್ಲಾವಿಯಾ ಮತ್ತು ಕುಶಾಕ್‌ನ ಲೋವರ್‌ ಮತ್ತು ಮಿಡ್‌-ಸ್ಪೆಕ್ ಆವೃತ್ತಿಗಳಿಗೆ ಶಕ್ತಿ ನೀಡುತ್ತದೆ. ಈ ಎಂಜಿನ್ 115 ಪಿಎಸ್‌ ಮತ್ತು 178 ಎನ್‌ಎಮ್‌ನಷ್ಟು ಔಟ್‌ಪುಟ್‌ ಅನ್ನು ಉತ್ಪಾದಿಸುತ್ತದೆ ಮತ್ತು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಯಾಗಲಿದೆ.

ಫೀಚರ್‌ಗಳು ಮತ್ತು ಸುರಕ್ಷತೆ

Skoda Kushaq's 10-inch touchscreen

ಫೀಚರ್‌ಗಳ ವಿಷಯದಲ್ಲಿ, ಸ್ಕೋಡಾ ಇದನ್ನು 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಸನ್‌ರೂಫ್‌ನೊಂದಿಗೆ ನೀಡಬಹುದು.

ಇದನ್ನೂ ಸಹ ಓದಿ: Citroen Basalt ವೇರಿಯಂಟ್-ವಾರು ಬೆಲೆಗಳು ಬಹಿರಂಗ, ಡೆಲಿವೆರಿಗಳು ಶೀಘ್ರದಲ್ಲೇ ಪ್ರಾರಂಭ

ಪ್ರಯಾಣಿಕರ ಸುರಕ್ಷತೆಗಾಗಿ, ಇದು 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (ಟಿಪಿಎಮ್‌ಎಸ್‌), ISOFIX ಚೈಲ್ಡ್ ಸೀಟ್ ಮೌಂಟ್‌ಗಳು ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಪಡೆಯುವ ಸಾಧ್ಯತೆಯಿದೆ.

ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು

Skoda sub-4m SUV rear spied

 ಸ್ಕೋಡಾ ಕೈಲಾಕ್‌ನ ಬೆಲೆಗಳು 8.5 ಲಕ್ಷ ರೂ.ನಿಂದ(ಎಕ್ಸ್ ಶೋರೂಂ) ಪ್ರಾರಂಭವಾಗುವ ನಿರೀಕ್ಷೆಯಿದೆ ಮತ್ತು ಇದು ಟಾಟಾ ನೆಕ್ಸಾನ್, ಕಿಯಾ ಸೋನೆಟ್, ಹ್ಯುಂಡೈ ವೆನ್ಯೂ, ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒ, ಮಾರುತಿ ಬ್ರೆಝಾ, ರೆನಾಲ್ಟ್ ಕಿಗರ್ ಮತ್ತು ನಿಸ್ಸಾನ್ ಮ್ಯಾಗ್ನೈಟ್‌ನಂತಹ ಇತರ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ. ಮಾರುತಿ ಫ್ರಾಂಕ್ಸ್ ಮತ್ತು ಟೊಯೋಟಾ ಅರ್ಬನ್ ಕ್ರೂಸರ್ ಟೈಸರ್‌ನಂತಹ ಸಬ್-4 ಮೀ ಕ್ರಾಸ್‌ಒವರ್‌ಗಳ ವಿರುದ್ಧವೂ ಸ್ಕೋಡಾದ ಈ ಎಸ್‌ಯುವಿ ಸ್ಪರ್ಧೆಯನ್ನು ಒಡ್ಡುತ್ತದೆ. 

ಆಟೋಮೋಟಿವ್ ಜಗತ್ತಿನ ನಿರಂತರ ಅಪ್ಡೇಟ್ ಗಳನ್ನು ಪಡೆಯಲು ಕಾರ್‌ದೇಖೋ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ.

was this article helpful ?

Write your Comment on Skoda kylaq

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
  • ಟಾಟಾ ಸಿಯೆರಾ
    ಟಾಟಾ ಸಿಯೆರಾ
    Rs.10.50 ಲಕ್ಷಅಂದಾಜು ದಾರ
    ಸೆಪಟೆಂಬರ್, 2025: ನಿರೀಕ್ಷಿತ ಲಾಂಚ್‌
  • ಕಿಯಾ syros
    ಕಿಯಾ syros
    Rs.9.70 - 16.50 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • ಬಿವೈಡಿ sealion 7
    ಬಿವೈಡಿ sealion 7
    Rs.45 - 49 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಎಂಜಿ majestor
    ಎಂಜಿ majestor
    Rs.46 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • ಟಾಟಾ ಹ್ಯಾರಿಯರ್ ಇವಿ
    ಟಾಟಾ ಹ್ಯಾರಿಯರ್ ಇವಿ
    Rs.30 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
×
We need your ನಗರ to customize your experience