MG Windsor EVಯ ಇನ್ನೊಂದು ಟೀಸರ್ ಔಟ್: ಪನೋರಮಿಕ್ ಗ್ಲಾಸ್ ರೂಫ್ ಇರೋದು ಪಕ್ಕಾ
ಎಮ್‌ಜಿ ವಿಂಡ್ಸರ್ ಇವಿಯು ಸೆಪ್ಟೆಂಬರ್ 11 ರಂದು ಲಾಂಚ್ ಆಗಲಿದೆ
- MG ವಿಂಡ್ಸರ್ EV ಭಾರತದಲ್ಲಿ ಈ ಕಾರ್ ತಯಾರಕರ ಮೂರನೇ EV ಆಗಲಿದೆ.
- ಇದು ವುಲಿಂಗ್ ಕ್ಲೌಡ್ EV ಮೇಲೆ ಆಧರಿಸಿದೆ, ಆದರೆ ಅದರಲ್ಲಿ ಪನರೋಮಿಕ್ ಗ್ಲಾಸ್ ರೂಫ್ ಲಭ್ಯವಿಲ್ಲ
- ಹಿಂದಿನ ಟೀಸರ್‌ಗಳು 135-ಡಿಗ್ರಿ ರಿಕ್ಲೈನಿಂಗ್ ಹಿಂಬದಿ ಸೀಟ್, ಆಂಬಿಯೆಂಟ್ ಲೈಟಿಂಗ್ ಮತ್ತು ಹಿಂಭಾಗದ AC ವೆಂಟ್ ಇರುವುದನ್ನು ದೃಢಪಡಿಸಿವೆ.
- ಇತರ ಫೀಚರ್ ಗಳಲ್ಲಿ 15.6-ಇಂಚಿನ ಟಚ್‌ಸ್ಕ್ರೀನ್, ವೈರ್‌ಲೆಸ್ ಫೋನ್ ಚಾರ್ಜರ್, 6 ಏರ್‌ಬ್ಯಾಗ್‌ಗಳು ಮತ್ತು ADAS ಅನ್ನು ಒಳಗೊಂಡಿರಬಹುದು.
- ಇದು ಬಹುಶಃ ಕ್ಲೌಡ್ EV ಯ ಹಾಗೆಯೆ 50.6 kWh ಬ್ಯಾಟರಿಯನ್ನು ಹೊಂದಿರುತ್ತದೆ, ಆದರೆ ಹೊಸ ARAI-ರೇಟೆಡ್ ರೇಂಜ್ ನೊಂದಿಗೆ ಬರಬಹುದು.
- ಆರಂಭಿಕ ಬೆಲೆಯು ರೂ. 20 ಲಕ್ಷದಿಂದ (ಎಕ್ಸ್ ಶೋರೂಂ) ಶುರುವಾಗಬಹುದು.
MG ವಿಂಡ್ಸರ್ EV ಭಾರತದಲ್ಲಿ MG ಯ ಮೂರನೇ EV ಆಗಲಿದೆ ಮತ್ತು ಕಂಪನಿಯು ಕಳೆದ ಕೆಲವು ಸಮಯದಿಂದ ಅದರ ಟೀಸರ್‌ಗಳನ್ನು ತೋರಿಸುತ್ತಿದೆ. ಇತ್ತೀಚಿನ ಟೀಸರ್‌ನಲ್ಲಿ, ಕಾರು ತಯಾರಕರು ಹೊಸ ಫೀಚರ್ ಆಗಿರುವ ಪನರೋಮಿಕ್ ಗ್ಲಾಸ್ ರೂಫ್ ಅನ್ನು ಟೀಸರ್ ನಲ್ಲಿ ತೋರಿಸಿದ್ದಾರೆ. ಬನ್ನಿ, ಈ ಫೀಚರ್ ನ ಬಗ್ಗೆ ಇನ್ನಷ್ಟು ವಿವರಗಳನ್ನು ತಿಳಿಯೋಣ:
ಟೀಸರ್ ನಲ್ಲಿ ಏನನ್ನು ತೋರಿಸಲಾಗಿದೆ?
ತಯಾರಕರು ಶೇರ್ ಮಾಡಿರುವ ಇತ್ತೀಚಿನ ಟೀಸರ್ ನಲ್ಲಿ ಒಂದು ಫಿಕ್ಸೆಡ್ ಪನರೋಮಿಕ್ ಗ್ಲಾಸ್ ರೂಫ್ ಅನ್ನು ತೋರಿಸಲಾಗಿದೆ. ಈ ಗ್ಲಾಸ್ ರೂಫ್ ಹೆಚ್ಚು ಬೆಳಕನ್ನು ನೀಡುವ ಮೂಲಕ ಕ್ಯಾಬಿನ್ ಗೆ ಹೆಚ್ಚು ಪ್ರೀಮಿಯಂ ಅನುಭವವನ್ನು ನೀಡುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಈ ರೂಫ್ ಒಂದು ಫಿಕ್ಸೆಡ್ ಯೂನಿಟ್ ಆಗಿರುತ್ತದೆ ಮತ್ತು ಇತರ ಮಾಸ್-ಮಾರುಕಟ್ಟೆ ಸನ್‌ರೂಫ್ ಗಳಂತೆ ತೆರೆಯಲು ಸಾಧ್ಯವಿಲ್ಲ. ಇದೇ ರೀತಿಯ ಗ್ಲಾಸ್ ರೂಫ್ ಅನ್ನು ಹೆಚ್ಚು ಪ್ರೀಮಿಯಂ ಮತ್ತು ದುಬಾರಿ ಕಾರಾಗಿರುವ ಹ್ಯುಂಡೈ ಐಯೋನಿಕ್ 5 EV ಯಲ್ಲಿ ಕೂಡ ನೀಡಲಾಗಿತ್ತು. ಮತ್ತೊಂದು ಪ್ರಮುಖ ಅಂಶವೆಂದರೆ MG ವಿಂಡ್ಸರ್ EV ಆಧಾರಿತ ವುಲಿಂಗ್ ಕ್ಲೌಡ್ EV ಈ ಫೀಚರ್ ಅನ್ನು ಹೊಂದಿಲ್ಲ.
ಇದನ್ನು ಕೂಡ ಓದಿ: ಮೊದಲ ಬಾರಿಗೆ MG ವಿಂಡ್ಸರ್ EV ಇಂಟೀರಿಯರ್: ಇಲ್ಲಿದೆ ಹೊಸ ಟೀಸರ್
ವಿಂಡ್ಸರ್ ಇವಿ - ಏನೇನು ನಿರೀಕ್ಷಿಸಬಹುದು
ವಿಂಡ್ಸರ್ EV ಗೆ ಆಲ್ LED ಲೈಟ್ ಗಳೊಂದಿಗೆ ಕ್ರಾಸ್ಒವರ್ ಬಾಡಿ ಶೈಲಿಯನ್ನು ನೀಡಲಾಗಿದೆ ಮತ್ತು ಸೈಡ್ ಗಳಲ್ಲಿ ಮತ್ತು ಹಿಂಭಾಗದಲ್ಲಿ ಸರಳವಾದ, ಕ್ಲೀನ್ ಡಿಸೈನ್ ಅನ್ನು ಹೊಂದಿದೆ.
ಒಳಭಾಗದಲ್ಲಿ, ಇದು ಬ್ಲಾಕ್ ಮತ್ತು ಬೀಜ್ ಕಲರ್ ಥೀಮ್‌ನೊಂದಿಗೆ ವುಲಿಂಗ್ ಕ್ಲೌಡ್ EV ಯಲ್ಲಿರುವ ಅದೇ ಕ್ಯಾಬಿನ್ ಅನ್ನು ಪಡೆಯುತ್ತದೆ. ಇದು 15.6-ಇಂಚಿನ ಟಚ್‌ಸ್ಕ್ರೀನ್, 8.8-ಇಂಚಿನ ಡಿಜಿಟಲ್ ಡ್ರೈವರ್ಸ್ ಡಿಸ್ಪ್ಲೇ, ವೈರ್‌ಲೆಸ್ ಫೋನ್ ಚಾರ್ಜಿಂಗ್, ಎಲೆಕ್ಟ್ರಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ಮುಂಭಾಗದ ಸೀಟುಗಳು ಮತ್ತು ಎಲೆಕ್ಟ್ರಿಕ್ ಟೈಲ್‌ಗೇಟ್ ನಂತಹ ಫೀಚರ್ ಗಳನ್ನು ಪಡೆಯುವ ಸಾಧ್ಯತೆಯಿದೆ.
ಸುರಕ್ಷತೆಯ ವಿಷಯದಲ್ಲಿ ಆರು ಏರ್‌ಬ್ಯಾಗ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿರಬಹುದು. ಇದು ಅಡ್ವಾನ್ಸ್ಡ್ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್ ಫೀಚರ್ ಗಳನ್ನು (ADAS) ಕೂಡ ಪಡೆಯಬಹುದು.
MG ವಿಂಡ್ಸರ್ 136 PS ಮತ್ತು 200 Nm ಅನ್ನು ಉತ್ಪಾದಿಸುವ ಫ್ರಂಟ್-ವೀಲ್-ಡ್ರೈವ್ ಮೋಟಾರ್‌ನೊಂದಿಗೆ 50.6 kWh ಬ್ಯಾಟರಿಯನ್ನು ಪಡೆಯುವ ಸಾಧ್ಯತೆಯಿದೆ. ಇಂಡೋನೇಷ್ಯಾದ ವರ್ಷನ್ 460 ಕಿಮೀ ರೇಂಜ್ ಅನ್ನು ಕ್ಲೇಮ್ ಮಾಡುತ್ತದೆ, ಆದರೆ ಭಾರತೀಯ ಮಾಡೆಲ್ ದೀರ್ಘ ರೇಂಜ್ ಅನ್ನು ನೀಡಬಹುದು. ಇದನ್ನು ARAI ಮೂಲಕ ಭಾರತದಲ್ಲಿ ಮತ್ತೊಮ್ಮೆ ಪರೀಕ್ಷಿಸಲಾಗುವುದು ಮತ್ತು ರೇಂಜ್ ಗಮನಾರ್ಹವಾಗಿ ಹೆಚ್ಚಾಗಬಹುದು.
ಲಾಂಚ್ ಮತ್ತು ಪ್ರತಿಸ್ಪರ್ಧಿಗಳು
ವಿಂಡ್ಸರ್ EV ಸೆಪ್ಟೆಂಬರ್ 11 ರಂದು ಲಾಂಚ್ ಆಗಲಿದೆ ಎಂದು MG ಘೋಷಿಸಿದೆ. ಬೆಲೆಯು ರೂ. 20 ಲಕ್ಷದಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುವ ನಿರೀಕ್ಷೆಯಿದೆ. ಇದು MG ZS EV ಗೆ ಹೋಲಿಸಿದರೆ ಹೆಚ್ಚು ಕೈಗೆಟುಕುವ ಬೆಲೆಯ ಆಯ್ಕೆಯಾಗಿದೆ, ಮತ್ತು ಟಾಟಾ ನೆಕ್ಸಾನ್ EV ಮತ್ತು ಮಹೀಂದ್ರಾ XUV400 EV ಗಿಂತ ಹೆಚ್ಚು ಪ್ರೀಮಿಯಂ ಆಯ್ಕೆಯಾಗಿದೆ.
ಆಟೋಮೋಟಿವ್ ಜಗತ್ತಿನ ನಿರಂತರ ಅಪ್ಡೇಟ್ ಗಳನ್ನು ಪಡೆಯಲು ಕಾರ್ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ.