• English
  • Login / Register

MG ವಿಂಡ್ಸರ್ ಇವಿಗಾಗಿ ಟೆಸ್ಟ್ ಡ್ರೈವ್‌ಗಳು ಶುರು, ಬುಕಿಂಗ್‌ಗಳು ಶೀಘ್ರದಲ್ಲೇ ಪ್ರಾರಂಭ

ಎಂಜಿ ವಿಂಡ್ಸರ್‌ ಇವಿ ಗಾಗಿ anonymous ಮೂಲಕ ಸೆಪ್ಟೆಂಬರ್ 26, 2024 05:52 pm ರಂದು ಪ್ರಕಟಿಸಲಾಗಿದೆ

  • 23 Views
  • ಕಾಮೆಂಟ್‌ ಅನ್ನು ಬರೆಯಿರಿ

MG ವಿಂಡ್ಸರ್ ಇವಿ ಎರಡು ಬೆಲೆ ಆಯ್ಕೆಗಳನ್ನು ಹೊಂದಿದೆ. ನೀವು ಪೂರ್ತಿ ಹಣವನ್ನು ಮುಂಗಡವಾಗಿ ಪಾವತಿಸಿದರೆ, ಬೇಸ್ ವರ್ಷನ್ ಅನ್ನು ರೂ. 13.50 ಲಕ್ಷ (ಭಾರತದಾದ್ಯಂತದ  ಎಕ್ಸ್ ಶೋರೂಂ) ಬೆಲೆಗೆ ಖರೀದಿಸಬಹುದು

MG Windsor EV Test Drives Begin

ಇತ್ತೀಚೆಗೆ, MG ವಿಂಡ್ಸರ್ ಇವಿಯ ಪೂರ್ತಿ ಬೆಲೆಯನ್ನು ಘೋಷಿಸಲಾಯಿತು, ಇದರಲ್ಲಿ ಪೂರ್ತಿ ಹಣವನ್ನು ಮುಂಗಡವಾಗಿ ಪಾವತಿ ಮಾಡಿ ಖರೀದಿಸುವ ಆಯ್ಕೆ ಕೂಡ ಒಳಗೊಂಡಿದೆ. ವಿಂಡ್ಸರ್ ಇವಿ ಲೈನ್ ಅಪ್ ಬೆಲೆಗಳು ರೂ 15.50 ಲಕ್ಷದವರೆಗೆ (ಎಕ್ಸ್-ಶೋರೂಮ್ ಪ್ಯಾನ್-ಇಂಡಿಯಾ) ಇದೆ. ಈಗ, ಕಾರು ತಯಾರಕರು ಇವಿಯ ಟೆಸ್ಟ್ ಡ್ರೈವ್‌ಗಳನ್ನು ಪ್ರಾರಂಭಿಸಿದ್ದಾರೆ, ಆದರೆ ಅದರ ಬುಕಿಂಗ್ ಮತ್ತು ಡೆಲಿವರಿಗಳು ಅಕ್ಟೋಬರ್‌ನಲ್ಲಿ ಶುರುವಾಗಲಿದೆ. ನೀವು ಅದರ ಟೆಸ್ಟ್ ಡ್ರೈವ್‌ ತೆಗೆದುಕೊಳ್ಳುವ ಮೊದಲು, ನೀವು ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ವಿಂಡ್ಸರ್ ಇವಿಯ ವಿವರಗಳು ಇಲ್ಲಿವೆ.

 ವಿಂಡ್ಸರ್ ಇವಿ ಫ್ಲಶ್-ಫಿಟ್ ಮಾಡಿದ ಡೋರ್ ಹ್ಯಾಂಡಲ್‌ಗಳಂತಹ ಪ್ರೀಮಿಯಂ ಅಂಶಗಳೊಂದಿಗೆ ವಿಶಿಷ್ಟವಾದ ಡಿಸೈನ್ ಅನ್ನು ಹೊಂದಿದೆ, ಆದರೆ ಇದರ ಟಾಪ್-ಸ್ಪೆಕ್ ವೇರಿಯಂಟ್‌ನಲ್ಲಿ ಕೂಡ ಇದು ಹಿಂಭಾಗದ ವೈಪರ್ ಮತ್ತು ವಾಷರ್‌ನಂತಹ ಕೆಲವು ಫೀಚರ್‌ಗಳನ್ನು ಪಡೆಯುವುದಿಲ್ಲ. ಕ್ಯಾಬಿನ್ ಇಲ್ಲಿ ದೊಡ್ಡದಾಗಿದೆ, ಮತ್ತು ಪ್ರಮುಖ ಕಂಟ್ರೋಲ್‌ಗಳು 15.6-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ಗೆ ಇಂಟಿಗ್ರೇಟ್ ಮಾಡಲಾಗಿದೆ, ಇದು ಡ್ರೈವಿಂಗ್ ಮಾಡುವಾಗ ಗಮನವನ್ನು ಸೆಳೆಯುತ್ತದೆ. ಡ್ರೈವಿಂಗ್ ಅನುಭವವು ಉತ್ತಮವಾಗಿದೆ, ಆದರೆ ಸೌಂಡ್ ಇನ್ಸುಲೇಷನ್ ಕಳಪೆಯಾಗಿದೆ.

 ವಿಂಡ್ಸರ್ ಇವಿಯ ವಿವರವಾದ ರಿವ್ಯೂಗಾಗಿ, ನೀವು ಇಲ್ಲಿ ಟ್ಯಾಪ್ ಮಾಡಬಹುದು. ಈಗ, ನೀವು ಟೆಸ್ಟ್ ಡ್ರೈವ್‌ ಮಾಡುವ ಮೊದಲು ವಿಂಡ್ಸರ್ ಇವಿಯಲ್ಲಿರುವ ಫೀಚರ್‌ಗಳನ್ನು ನೋಡೋಣ.

 MG ವಿಂಡ್ಸರ್ ಇವಿ ಡಿಸೈನ್

MG Windsor EV side

 MG ವಿಂಡ್ಸರ್ ಇವಿ ಕನೆಕ್ಟೆಡ್ ಎಲ್‌ಇಡಿ ಡಿಆರ್‌ಎಲ್‌ಗಳು, ಎಲ್‌ಇಡಿ ಹೆಡ್‌ಲೈಟ್‌ಗಳು ಮತ್ತು ಪ್ರೀಮಿಯಂ ಅನುಭವನ್ನು ನೀಡುವ ಇಲ್ಯೂಮಿನೇಟ್ ಆಗುವ ಎಮ್‌ಜಿ ಲೋಗೋದೊಂದಿಗೆ ಸ್ಲೀಕ್ ಆಗಿರುವ ಕ್ರಾಸ್‌ಒವರ್ ಡಿಸೈನ್ ಅನ್ನು ಹೊಂದಿದೆ. ಇದು ಹೆಚ್ಚು ಪ್ರೀಮಿಯಂ ಲುಕ್ ನೀಡಲು 18-ಇಂಚಿನ ಅಲೊಯ್ ವೀಲ್ಸ್ ಮತ್ತು ಫ್ಲಶ್ ಡೋರ್ ಹ್ಯಾಂಡಲ್‌ಗಳೊಂದಿಗೆ ಬರುತ್ತದೆ. ಹಿಂಭಾಗದಲ್ಲಿ, ಕನೆಕ್ಟೆಡ್ LED ಟೈಲ್ ಲೈಟ್‌ಗಳು ಎದ್ದು ಕಾಣುತ್ತವೆ ಮತ್ತು ರಸ್ತೆಯಲ್ಲಿ ಡ್ರೈವ್ ಮಾಡುವಾಗ ಕಾರಿಗೆ ವಿಶಿಷ್ಟ ಲುಕ್ ಅನ್ನು ನೀಡುತ್ತದೆ.

 ಇದನ್ನು ಕೂಡ ಓದಿ: MG ವಿಂಡ್ಸರ್ ಇವಿ ವರ್ಸಸ್ ಅದರ ಪ್ರತಿಸ್ಪರ್ಧಿಗಳು: ಬೆಲೆ ಹೋಲಿಕೆ

 MG ವಿಂಡ್ಸರ್ ಇವಿ ಇಂಟೀರಿಯರ್

MG Windsor EV  dashboard

 ಒಳಗೆ, MG ವಿಂಡ್ಸರ್ ಇವಿ ಬ್ರೊನ್ಜ್ ಮತ್ತು ಸಿಲ್ವರ್ ಹೈಲೈಟ್‌ಗಳೊಂದಿಗೆ ಆಲ್ ಬ್ಲಾಕ್ ಕ್ಯಾಬಿನ್ ಅನ್ನು ಹೊಂದಿದೆ. ಇದು ಡ್ಯಾಶ್‌ಬೋರ್ಡ್ ಮತ್ತು ಡೋರ್ ಪ್ಯಾನೆಲ್‌ಗಳಲ್ಲಿ ಲೆಥೆರೆಟ್ ಸೀಟ್ ಅಪ್ಹೋಲ್ಸ್ಟರಿ ಮತ್ತು ಸಾಫ್ಟ್-ಟಚ್ ಮೆಟಿರಿಯಲ್‌ಗಳೊಂದಿಗೆ ಬರುತ್ತದೆ. ಪನರೋಮಿಕ್ ಗ್ಲಾಸ್ ರೂಫ್ ಕ್ಯಾಬಿನ್‌ಗೆ ಹೆಚ್ಚಿನ ಬೆಳಕನ್ನು ಬರಲು ಅನುವು ಮಾಡಿಕೊಡುತ್ತದೆ, ಇದು ಅದರ ಒಟ್ಟಾರೆ ಲುಕ್ ಅನ್ನು ಹೆಚ್ಚಿಸುತ್ತದೆ.

 MG ವಿಂಡ್ಸರ್ ಇವಿ ಫೀಚರ್‌ಗಳು

MG Windsor EV gets a 15.6-inch touchscreen

 ವಿಂಡ್ಸರ್ ಇವಿಯು 15.6-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 8.8-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಮತ್ತು ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್‌ನಂತಹ ಫೀಚರ್‌ಗಳೊಂದಿಗೆ ಬರುತ್ತದೆ. ಇದು 9-ಸ್ಪೀಕರ್ ಇನ್ಫಿನಿಟಿ ಸೌಂಡ್ ಸಿಸ್ಟಮ್, 256-ಕಲರ್ ಆಂಬಿಯೆಂಟ್ ಲೈಟಿಂಗ್, ವೈರ್‌ಲೆಸ್ ಫೋನ್ ಚಾರ್ಜರ್, ಕ್ರೂಸ್ ಕಂಟ್ರೋಲ್, ಆಟೋ-ಫೋಲ್ಡ್ ORVM ಗಳು ಮತ್ತು ಕನೆಕ್ಟೆಡ್ ಕಾರ್ ಟೆಕ್ ಅನ್ನು ಕೂಡ ಪಡೆಯುತ್ತದೆ.

 ಸುರಕ್ಷತೆಯ ವಿಷಯದಲ್ಲಿ, ಇದು 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಆಟೋ ಹೋಲ್ಡ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಅನ್ನು ಪಡೆಯುತ್ತದೆ. MG ಇದರಲ್ಲಿ ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ISOFIX ಚೈಲ್ಡ್ ಸೀಟ್ ಮೌಂಟ್‌ಗಳು ಮತ್ತು 360-ಡಿಗ್ರಿ ಕ್ಯಾಮೆರಾ ಕೂಡ ನೀಡಿದೆ.

 MG ವಿಂಡ್ಸರ್ ಇವಿ ಪವರ್‌ಟ್ರೇನ್ ವಿವರಗಳು

 MG ಇಲ್ಲಿ 136 PS ಮತ್ತು 200 Nm ಉತ್ಪಾದಿಸುವ ಏಕೈಕ ಎಲೆಕ್ಟ್ರಿಕ್ ಮೋಟರ್‌ಗೆ ಜೋಡಿಸಲಾದ ಒಂದೇ 38 kWh ಬ್ಯಾಟರಿ ಪ್ಯಾಕ್‌ನೊಂದಿಗೆ ವಿಂಡ್ಸರ್ ಇವಿ ಅನ್ನು ನೀಡುತ್ತದೆ. ಇದು 331 ಕಿಮೀವರೆಗಿನ MIDC-ಕ್ಲೇಮ್ ಮಾಡಿರುವ ರೇಂಜ್ ಅನ್ನು ನೀಡುತ್ತದೆ. ವಿಂಡ್ಸರ್ ಇವಿ 45 kW ವರೆಗೆ DC ಫಾಸ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ, ಇದರ ಜೊತೆಗೆ 3.3 kW ಮತ್ತು 7.4 kW ಹೋಮ್ ಚಾರ್ಜಿಂಗ್ ಆಯ್ಕೆಗಳು ಕೂಡ ಲಭ್ಯವಿದೆ.

 ಇದನ್ನು ಕೂಡ ನೋಡಿ: MG ವಿಂಡ್ಸರ್ ಇವಿ  ಬೇಸ್ ವೇರಿಯಂಟ್ ವರ್ಸಸ್ ಟಾಪ್ ವೇರಿಯಂಟ್ - ಫೋಟೋಗಳ ಮೂಲಕ ಹೋಲಿಕೆ ಇಲ್ಲಿದೆ

 MG ವಿಂಡ್ಸರ್ ಇವಿ ಬೆಲೆ ಮತ್ತು ಪ್ರತಿಸ್ಪರ್ಧಿಗಳು

MG Windsor EV

MG ವಿಂಡ್ಸರ್ ಇವಿ ಬೆಲೆಯು ರೂ. 9.99 ಲಕ್ಷದಿಂದ ಪ್ರಾರಂಭವಾಗುತ್ತದೆ (ಭಾರತದಾದ್ಯಂತ ಆನ್-ರೋಡ್ ಬೆಲೆ), ಆದರೆ ಅದು ಬೇಸ್ ಮಾಡೆಲ್ ಬೆಲೆಯಾಗಿದೆ. ಈ ಬೆಲೆಯನ್ನು ಪಡೆಯಲು, ನೀವು ಡ್ರೈವ್ ಮಾಡುವ ಪ್ರತಿ ಕಿಲೋಮೀಟರ್‌ಗೆ ರೂ.3.5 ಬ್ಯಾಟರಿ ರೆಂಟಲ್ ಸರ್ವಿಸ್ ಪ್ಲಾನ್ ಅನ್ನು ಆರಿಸಬೇಕಾಗುತ್ತದೆ. ನೀವು ಸಂಪೂರ್ಣವಾಗಿ ಮುಂಗಡ ಪಾವತಿ ಮಾಡಿ ಕಾರನ್ನು ಖರೀದಿಸಲು ನೋಡುತ್ತಿದ್ದರೆ, ಬೆಲೆಯು ರೂ 13.50 ಲಕ್ಷದಿಂದ ಮತ್ತು ರೂ 15.50 ಲಕ್ಷದವರೆಗೆ (ಎಕ್ಸ್ ಶೋ ರೂಂ ಪ್ಯಾನ್-ಇಂಡಿಯಾ) ಇದೆ. ಇದಕ್ಕೆ ಯಾವುದೇ ನೇರ ಪ್ರತಿಸ್ಪರ್ಧಿಗಳಿಲ್ಲ, ಆದರೆ ಅದರ ಬೆಲೆಯನ್ನು ಹೋಲಿಸಿದರೆ ಇದು ಟಾಟಾ ನೆಕ್ಸಾನ್ ಇವಿ, ಮಹೀಂದ್ರಾ XUV400, ಮತ್ತು ಟಾಟಾ ಪಂಚ್ ಇವಿಯಂತಹ ಮಾಡೆಲ್‌ಗಳೊಂದಿಗೆ ಸ್ಪರ್ಧಿಸುತ್ತದೆ.

 ವಾಹನ ಜಗತ್ತಿನ ನಿರಂತರ ಅಪ್ಡೇಟ್‌ಗಳನ್ನು ಪಡೆಯಲು  ಕಾರ್‌ದೇಖೋ ವಾಟ್ಸ್ಆಪ್  ಚಾನಲ್ ಅನ್ನು ಫಾಲೋ ಮಾಡಿ.

 ಇನ್ನಷ್ಟು ಓದಿ: MG ವಿಂಡ್ಸರ್ ಇವಿ ಆಟೋಮ್ಯಾಟಿಕ್

ಅವರಿಂದ ಪ್ರಕಟಿಸಲಾಗಿದೆ
Anonymous
was this article helpful ?

0 out of 0 found this helpful

Write your Comment on M ಜಿ ವಿಂಡ್ಸರ್‌ ಇವಿ

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಮ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience