MG ZS EV ಇಂಡಿಯಾ ಸ್ಪೆಕ್ 5 ಅನಾವರಣಗೊಳ್ಳಲಿದೆ
ಎಂಜಿ ಜೆಡ್‌ಎಸ್ ಇವಿ 2020-2022 ಗಾಗಿ sonny ಮೂಲಕ ನವೆಂಬರ್ 13, 2019 10:06 am ರಂದು ಪ್ರಕಟಿಸಲಾಗಿದೆ
- 26 Views
- ಕಾಮೆಂಟ್ ಅನ್ನು ಬರೆಯಿರಿ
ಮುಂದಿನ ದೂರದ ವ್ಯಾಪ್ತಿಯ EV ಭಾರತದಲ್ಲಿ ಜನವರಿ 2020 ಗೆ ಬರಲಿದೆ
- MG ZS EV ನಲ್ಲಿ ARAI ನಿಂದ ಪ್ರಮಾಣೀಕರಿಸಿದ ವ್ಯಾಪ್ತಿ 400km ಗಿಂತಲೂ ಪಡೆಯಬಹುದಾದ ನಿರೀಕ್ಷೆ ಇದೆ
- ಅದರ 44.5kWh ಲಿತಿಯಮ್ ಅಯಾನ್ ಬ್ಯಾಟರಿ ಶೇಕಡಾ 0 ಇಂದ 80 ವರೆಗೆ 40 ನಿಮಿಷದಲ್ಲಿ ಪಡೆಯಬಹುದಾಗಿದೆ DC ಫಾಸ್ಟ್ ಚಾರ್ಜರ್ ನೊಂದಿಗೆ.
- ನಿರೀಕ್ಷಿಸಬಹುದಾದ ಫೀಚರ್ ಗಳಲ್ಲಿ ಪನರಾಮಿಕ್ ಸನ್ ರೂಫ್ 8-ಇಂಚು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಮತ್ತು ಆಂತರಿಕವಾಗಿ ಅಳವಡಿಸಲಾದ ಏರ್ ಪ್ಯೂರಿಫೈಎರ್ ಸೇರಿದೆ.
- ZS EV ಬೆಲೆ ಪಟ್ಟಿ ಸುಮಾರು ರೂ 20-ಲಕ್ಷ ವರೆಗೂ ಇರಬಹುದು ಭಿನ್ನವಾದ ವೇರಿಯೆಂಟ್ ಗಳಿಗೆ
- ಇದರ ನೇರ ಪ್ರತಿಸ್ಪರ್ಧೆ ಹುಂಡೈ ಕೋನ ಎಲೆಕ್ಟ್ರಿಕ್, ಅದರ ಬೆಲೆ ಪಟ್ಟಿ ರೂ 23.7 ಲಕ್ಷ (ಎಕ್ಸ್ ಶೋ ರೂಮ್ )
MG ಅನಾವರಣಗೊಳಿಸಿದೆ ZS EV ಎಲೆಕ್ಟ್ರಿಕ್ SUV ಯನ್ನು ಆಯ್ದ ಅಂತರ್ರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಚೀನಾ, ಜಪಾನ್, ಮತ್ತು UK ಈ ವರ್ಷದ ಪ್ರಾರಂಭದಲ್ಲಿ. ಈಗ, ಇಂಡಿಯಾ ಸ್ಪೆಕ್ ಆವೃತ್ತಿಯ ZS EV ಯನ್ನು ಡಿಸೆಂಬರ್ 5 ಅನಾವರಣಗೊಳಿಸಲಾಗುವುದು ಮತ್ತು ಅದರ ಬಿಡುಗಡೆ ಜನವರಿ 2020.
ಅಂತರ್ರಾಷ್ಟ್ರೀಯ ಸ್ಪೆಕ್ ZS EV ಯು 44.5kWh ಲಿತಿಯಮ್ ಅಯಾನ್ ಬ್ಯಾಟರಿ ಒಂದಿಗೆ ಪವರ್ ಪಡೆಯುತ್ತದೆ ಅದು ಎಲೆಕ್ಟ್ರಿಕ್ ಮೋಟಾರ್ ಡ್ರೈವ್ ಮಾಡುತ್ತದೆ, ಹಾಗು 150PS ಪವರ್ ಮತ್ತು 350Nm ಟಾರ್ಕ್ ಕೊಡುತ್ತದೆ. ಇದು ಎಲೆಕ್ಟ್ರಿಕ್ ಪವರ್ ಟ್ರೈನ್ ಹೊಂದಿದೆ ಹಾಗಾಗಿ, ಸಾಮಾನ್ಯ ಗೇರ್ ಬಾಕ್ಸ್ ಇರುವುದಿಲ್ಲ, ಅದರಿಂದಾಗಿ ಬಳಸಲು ಸುಲಭವಾಗಿದೆ. ಬ್ಯಾಟರಿ ಯ ವ್ಯಾಪ್ತಿ 400km ಒಂದು ಬಾರಿ ಪೂರ್ಣವಾಗಿ ಚಾರ್ಜ್ ಮಾಡಿದರೆ, ಅದು ARAI ಪರೀಕ್ಷೆಯಂತೆ.
MG ಹೇಳುವಂತೆ ಬ್ಯಾಟರಿ ಯನ್ನು ಶೇಕಡಾ 0 ಇಂದ 80 ವರೆಗೆ 40 ನಿಮಿಷಗಳಲ್ಲಿ 50kW DC ಚಾರ್ಜರ್ ಒಂದಿಗೆ ಪಡೆಯಬಹುದಾಗಿದೆ. ಮನೆಯಲ್ಲಿ ಅಳವಡಿಸಬಹುದಾದ ಚಾರ್ಜರ್ 6 ಘಂಟೆ ಅಥವಾ ಅದಕ್ಕಿಂತ ಹೆಚ್ಚು ಪಡೆಯಬಹುದು ಪೂರ್ಣವಾಗಿ ಚಾರ್ಜ್ ಆಗಲು. ಹುಂಡೈ ಕೋನ ಎಲೆಕ್ಟ್ರಿಕ್ SUV ಯಂತೆ, ZS EV ನಲ್ಲಿಯೂ ಸಹ ಸ್ಟ್ಯಾಂಡರ್ಡ್ ಮೂರು ಪಿನ್ ಪ್ಲಗ್ ಕೊಡಲಾಗಿದೆ ತುರ್ತು ಪರಿಸ್ಥಿತಿಗೆ ಸಹಕಾರಿಯಾಗುವಂತೆ EV ಚಾರ್ಜಿನ್ಗ್ ಸ್ಟೇಷನ್ ಲಭ್ಯವಿಲ್ಲದಿರುವಾಗ. ಚಾರ್ಜಿನ್ಗ್ ಪೋರ್ಟ್ ಕಾರ್ ನ ಮುಂಭಾಗದಲ್ಲಿ ಫ್ಯಾಕ್ಸ್ ಗ್ರಿಲ್ ಹಿಂಬದಿಯಲ್ಲಿ ಅಳವಡಿಸಲಾಗಿದೆ.
ನಿರೀಕ್ಷೆಯಂತೆ MG ಯವರು ZS EV ಭಾರತದಲ್ಲಿನ ಆವೃತ್ತಿಗಾಗಿ ಹೆಚ್ಚಿನ ಫೀಚರ್ ಗಳನ್ನು ಕೊಡುವ ಸಾಧ್ಯತೆ ಇದೆ. ಅದರ ಜಾಗತಿಕ ಆವೃತ್ತಿಯಲ್ಲಿ 8-ಇಂಚು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಪನರಾಮಿಕ್ ಸನ್ ರೂಫ್, ಮತ್ತು ಕ್ಲೈಮೇಟ್ ಕಂಟ್ರೋಲ್ ಒಂದಿಗೆ ಸಂಯೋಜಿಸಲಾದ ಏರ್ ಪ್ಯೂರಿಫೈಎರ್ ಕೊಡಲಾಗಿದೆ. ಬೂಟ್ ನ ವಿಶಾಲತೆ 448 ಲೀಟರ್ ಗಳಷ್ಟು ಇದೆ.
ಭಾರತದಲ್ಲಿ, ಇಲ್ಲೇ ಜೋಡಿಸಲಾದ ZS EV ನಿರೀಕ್ಷಿತ ಬೆಲೆ ಸುಮಾರು Rs 20-ಲಕ್ಷ ಇರುತ್ತದೆ. ಬಿಡುಗಡೆ ಸಮಯದಲ್ಲಿ ಲಭ್ಯವಿರುವ ಪ್ರತಿಸ್ಪರ್ದಿ ಎಂದರೆ ಹುಂಡೈ ಕೋನ ಎಲೆಕ್ಟ್ರಿಕ್, ಅದರ ಆರಂಭಿಕ ಬೆಲೆ ರೂ 23.7 ಲಕ್ಷ. ಟಾಟಾ ನೆಕ್ಸಾನ್ EV ಒಂದು ಸಬ್ -4m ಎಲೆಕ್ಟ್ರಿಕ್ SUV ಆಗಿದೆ, ಆದರೆ ಅದರ ಗರಿಷ್ಟ ಕ್ರಮಿಸಬಹುದಾದ ವ್ಯಾಪ್ತಿ 300km ಗೆ ಸೀಮಿತವಾಗಿದೆ.
0 out of 0 found this helpful